For Quick Alerts
ALLOW NOTIFICATIONS  
For Daily Alerts

ದೇಹದ ಈ ಭಾಗಗಳನ್ನು ಉಗುರು-ಬೆರಳುಗಳಿಂದ ಮುಟ್ಟಲೇಬಾರದು!

ದೇಹದಲ್ಲಿ ಅಲ್ಲಲ್ಲಿ ಆಗುವ ತುರಿಕೆಗೆ ತಕ್ಷಣವೇ ಅರಿವಿಲ್ಲದೇ ನಾವು ಉಗುರಿನಿಂದ ತುರಿಸಿಕೊಳ್ಳುತ್ತೇವೆ. ಆದರೆ ನೈರ್ಮಲ್ಯ ಕಾಪಾಡಿಕೊಳ್ಳಲು ನಮ್ಮ ದೇಹದ ಕೆಲವು ಭಾಗಗಳನ್ನು ಬೆರಳು ಅಥವಾ ಉಗುರಿನಿಂದ ಮುಟ್ಟದಿರುವುದೇ ಒಳ್ಳೆಯದು

By Manu
|

ಮಂಗನಿಂದ ಮಾನವನಾದ ಎಂದು ಡಾರ್ವಿನ್ ಹೇಳಿರುವುದು ಕೆಲವರು ತಮ್ಮ ಮೈಯನ್ನು ಅರಿವಿಲ್ಲದೇ ತುರಿಸಿಕೊಳ್ಳುವುದನ್ನು ನೋಡಿದಾಗ ನಿಜ ಎಂದೇ ಅನ್ನಿಸುತ್ತದೆ. ಏಕೆಂದರೆ ನಮ್ಮ ದೇಹದಲ್ಲಿ ಅಲ್ಲಲ್ಲಿ ಆಗುವ ತುರಿಕೆಗೆ ತಕ್ಷಣವೇ ಅರಿವಿಲ್ಲದೇ ನಾವು ಉಗುರಿನಿಂದ ತುರಿಸಿಕೊಳ್ಳುತ್ತೇವೆ. ಆದರೆ ನೈರ್ಮಲ್ಯ ಕಾಪಾಡಿಕೊಳ್ಳಲು ನಮ್ಮ ದೇಹದ ಕೆಲವು ಭಾಗಗಳನ್ನು ಬೆರಳು ಅಥವಾ ಉಗುರಿನಿಂದ ಮುಟ್ಟದಿರುವುದೇ ಒಳ್ಳೆಯದು. ಕಿರಿಕಿರಿಯನ್ನು೦ಟು ಮಾಡುವ ತುರಿಕೆ ಸಮಸ್ಯೆಗೆ ಪರಿಹಾರವೇನು?

ತಜ್ಞರ ಪ್ರಕಾರ ಈ ಭಾಗಗಳನ್ನು ಉಗುರು ಅಥವಾ ಬೆರಳುಗಳಿಂದ ಮುಟ್ಟಲೇಬಾರದು. ಏಕೆಂದರೆ ಇವು ಸೂಕ್ಷ್ಮ ಸ್ಥಳಗಳಾಗಿದ್ದು ಈ ಭಾಗದ ಚರ್ಮ ತೆಳುವಾಗಿರುತ್ತದೆ. ಇದು ಚರ್ಮವನ್ನು ಸುಲಭವಾಗಿ ಹರಿಯುವಂತೆ ಮಾಡುತ್ತದೆ ಹಾಗೂ ಇಲ್ಲಿ ಸೋಂಕು ಉಂಟಾಗಲು ಸಾಧ್ಯವಾಗಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ....

ಕಿವಿಯ ಒಳಗೆ

ಕಿವಿಯ ಒಳಗೆ

ನಿಮ್ಮ ಬೆರಳುಗಳನ್ನು ಕಿವಿಯ ಒಳಗೆ ಸರ್ವಥಾ ತೂರಿಸಬಾರದು. ಏಕೆಂದರೆ ಕಿವಿಯೊಳಗಣ ಚರ್ಮ ತೆಳುವಾಗಿದ್ದು ಬೆರಳು ಅಥವಾ ಉಗುರಿನಿಂದ ಸುಲಭವಾಗಿ ಹರಿಯುತ್ತದೆ. ಕೆಲವೊಮ್ಮೆ ಈ ಒತ್ತಡ ಕಿವಿ ತಮಟೆಯನ್ನೂ ಬಾಧಿಸಬಹುದು. ಹರಿದ ಚರ್ಮದಲ್ಲಿ ಸುಲಭವಾಗಿ ಸೋಂಕು ಉಂಟಾಗಬಹುದು.

ಮುಖ

ಮುಖ

ಮುಖದ ಚರ್ಮದಲ್ಲಿ ಅತಿ ಹೆಚ್ಚಿನ ಸೂಕ್ಷ್ಮರಂಧ್ರಗಳಿರುತ್ತದೆ. ಈ ರಂಧ್ರಗಳು ಯಾವುದೋ ಕಾರಣಕ್ಕೆ ಮುಚ್ಚಿದರೆ ಒಳಭಾಗದಲ್ಲಿ ಮೊಡವೆಗಳುಂಟಾಗುತ್ತವೆ. ಅಲ್ಲದೇ ಚಿಕ್ಕ ಚಿಕ್ಕ ಗುಳ್ಳೆಗಳೂ ಮೂಡುತ್ತವೆ. ಈ ಗುಳ್ಳೆಗಳನ್ನು, ಮೊಡವೆಗಳನ್ನು ಒಡೆದು ತೆಗೆಯುವತ್ತ ಸದಾ ಚಿತ್ತ ಹರಿಯುತ್ತಿರುತ್ತದೆ.

ಮುಖ

ಮುಖ

ಈ ಪರಿಯಾಗಿ ಮೊಡವೆಗಳನ್ನು ಒಡೆಯುವಾಗ ನಮ್ಮ ಉಗುರುಗಳ ಸಂಧುಗಳಲ್ಲಿದ್ದ ಸೂಕ್ಷ್ಮಜೀವಿಗಳು ಚರ್ಮಕ್ಕೆ ಹತ್ತಿಕೊಳ್ಳುತ್ತವೆ. ಇವು ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಮೊಡವೆಗಳು ಇನ್ನಷ್ಟು ಬೆಳೆಯಲು ಕಾರಣವಾಗುತ್ತವೆ. ಒಡೆದ ಮೊಡವೆ ಶಾಶ್ವತ ಕಲೆಯನ್ನು ಉಳಿಸುತ್ತದೆ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ನಿತಂಬ

ನಿತಂಬ

ನಿತಂಬಗಳಲ್ಲಿಯೂ ಕೆಲವೊಮ್ಮೆ ಕೆರೆತಕ್ಕೆ ಅವಸರವಾಗುತ್ತದೆ. ಆದರೆ ಕೊಂಚ ಹೊತ್ತು ತಡೆದುಕೊಂಡರೆ ತನ್ನಿಂತಾನೇ ಕಡಿಮೆಯಾಗುತ್ತದೆ. ನವೆ ಕಳೆದುಕೊಳ್ಳಲು ಕೆರೆದುಕೊಂಡರೆ ಉಗುರುಗಳಲ್ಲಿದ್ದ ಸೂಕ್ಷ್ಮಜೀವಿಗಳು ಸೂಕ್ಷ್ಮಭಾಗಗಳಿಗೆ ದಾಟಿಕೊಳ್ಳಬಹುದು. ಇದಕ್ಕೂ ಮುನ್ನ ಸ್ವಚ್ಛವಾಗಿ ಕೈ ತೊಳೆದುಕೊಂಡಿದ್ದರೂ ನಮ್ಮ ಕೈಗಳು ಪೂರ್ಣವಾಗಿ ಸುರಕ್ಷಿತವಲ್ಲ.

ಕಣ್ಣುಗಳು

ಕಣ್ಣುಗಳು

ಕಣ್ಣಿನ ಸೋಂಕಿಗೆ ಕಾರಣವಾಗಿರುವ ಮದ್ರಾಸ್ ಕಣ್ಣಿನ ಲಕ್ಷಣಗಳೇನು?

ಕಣ್ಣುಗಳು

ಕಣ್ಣುಗಳು

ಕಣ್ಣುಗಳ ರೆಪ್ಪೆಗಳ ಒಳಭಾಗದಲ್ಲಿ ಚಿಕ್ಕ ಕೀವುಗುಳ್ಳೆಗಳು ಮೂಡುತ್ತವೆ. ಆದ್ದರಿಂದ ಕಣ್ಣುಗಳಿಗೆ ಎಷ್ಟೇ ತುರಿಕೆಯಾದರೂ ಬೆರಳುಗಳಿಂದ ಮುಟ್ಟಬಾರದು. ಬದಲಿಗೆ ಸ್ವಚ್ಛ ಬಟ್ಟೆಯೊಂದನ್ನು ಕೊಂಚವೇ ಬಿಸಿಯಾಗಿಸಿ ಕಣ್ಣುಗಳಿಗೆ ಒತ್ತಿಕೊಳ್ಳುವ ಮೂಲಕ ತುರಿಕೆ ಕಡಿಮೆಯಾಗುತ್ತದೆ.

ಬಾಯಿ

ಬಾಯಿ

ಚಿಕ್ಕ ಮಕ್ಕಳಲ್ಲಿ ಬಾಯಿಯಲ್ಲಿ ಬೆರಳಿಡುವ ಅಭ್ಯಾಸವಿರುತ್ತದೆ. ಆದರೆ ಪ್ರೌಢರಾಗುತ್ತಿದ್ದಂತೆ ಈ ಅಭ್ಯಾಸ ಇಲ್ಲವಾಗಬೇಕು. ಕೆಲವರಿಗೆ ಇನ್ನೂ ಬಾಯಿಯಲ್ಲಿ ಬೆರಳಿಡುವ ಅಭ್ಯಾಸವಿರುತ್ತದೆ. ಉಳಿದವರಲ್ಲಿ ಕೆಲವರಿಗೆ ಅನೈಚ್ಛಿಕವಾಗಿ ಬಾಯಿಯಲ್ಲಿ ಬೆರಳು ಹಾಕಿ ಚೀಪುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸದಿಂದ ಬೆರಳುಗಳಲ್ಲಿರುವ ಒಟ್ಟೂ ಕೀಟಾಣುಗಳಲ್ಲಿ ಮೂರನೆಯ ಒಂದರಷ್ಟು ಕೀಟಾಣುಗಳು ಬಾಯಿಯಲ್ಲಿ ಉಳಿದುಬಿಡುತ್ತವೆ.

ಮೂಗಿನ ಒಳಗೆ

ಮೂಗಿನ ಒಳಗೆ

ಮೂಗಿನ ಹೊಳ್ಳೆಯೊಳಗೆ ಬೆರಳು ತೂರಿಸಿ ಒಳಗಿನ ಮೇಣವನ್ನು ಕೆರೆದು ತೆಗೆಯುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಇದು ನೋಡಲೂ ಅಸಹ್ಯವಾಗಿದ್ದು ಅನಾರೋಗ್ಯಕರವೂ ಆಗಿದೆ. ತಜ್ಞರ ಪ್ರಕಾರ ಈ ಅಭ್ಯಾಸವಿರುವ 51% ಶೇಖಡಾ ಜನರ ಮೂಗಿನಲ್ಲಿ Staphylococcus ಎಂಬ ಬ್ಯಾಕ್ಟೀರಿಯಾ ಉಳಿದವರಿಗಿಂತ ಅತಿ ಹೆಚ್ಚಾಗಿರುತ್ತದೆ.

ಉಗುರುಗಳ ಅಡಿಯಲ್ಲಿ

ಉಗುರುಗಳ ಅಡಿಯಲ್ಲಿ

ನಮ್ಮ ಉಗುರುಗಳ ಅಡಿಯಲ್ಲಿ ಅತಿ ಹೆಚ್ಚಿನ ಕೊಳೆ ತುಂಬಿರುತ್ತದೆ. ಇದರಲ್ಲಿ ಕ್ರಿಮಿ, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಯಥೇಚ್ಛವಾಗಿರುತ್ತವೆ. ಇದರಲ್ಲಿ ಮಾರಕ Staphylococcus ಬ್ಯಾಕ್ಟೀರಿಯಾ ಸಹಾ ಸೇರಿವೆ. ಅಷ್ಟೇ ಅಲ್ಲದೇ ಕೆಲವು ವೈರಸ್ಸುಗಳು ಸಹಾ ಇಲ್ಲಿರುತ್ತವೆ. ಆದ್ದರಿಂದ ಉಗುರುಗಳ ಅಡಿಯಲ್ಲಿನ ಕೊಳೆಯನ್ನು ಸೂಕ್ತ ಉಪಕರಣದ ಹೊರತಾಗಿ ಇತರ ಬೆರಳ ಉಗುರಿನಿಂದ ತೆಗೆಯಲು ಹೋಗಲೇಬಾರದು. ಉಗುರು ನೋಡಿ ಭವಿಷ್ಯ ಹೇಳಬಹುದಂತೆ! ನಂಬುತ್ತೀರಾ..?

English summary

Top touching these parts on the body

Here, in this article, we are about to share details on some of the body parts that should not be touched with nails or even fingers. This is really important, as we end up fidgeting with the skin, which can cause scars and other unwanted skin problems. Find out here....
X
Desktop Bottom Promotion