Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಂತಸ ತಂದ ಸಾತ್ವಿಕ್: ಆದರೆ ಭಾರತದಲ್ಲಿ ಈ ಬೋರ್‌ವೆಲ್ ಘಟನೆ ಮರುಕಳುಹಿಸುತ್ತಿರಲು ಕಾರಣವೇನು?
ಸತತ 20 ಗಂಟೆ 10 ನಿಮಿಷ ಸತತ ಪ್ರಯತ್ನ, ಊಟ, ನಿದ್ದೆ ಎಲ್ಲಾ ಬದಿಗುಟ್ಟು SDRF ಗಾಗೂ ಸ್ಥಳೀಯ ಪೊಲೀಸರ ನಿರಂತರ ಶ್ರಮ, ಕಣ್ಣೀರಿಟ್ಟು ದೇವರಲ್ಲಿ ನನ್ನ ಮಗುವನ್ನು ಬದುಕಿಸಿ ಕೊಡು ಎಂದ ಬೇಡುತ್ತಿರುವ ಕರುಳು ಹಿಂಡುವ ದೃಶ್ಯ, ನೆಂಟರಿಷ್ಟರು, ಊರಿನವರು ಮಾತ್ರ ಇಡೀ ಕರ್ನಾಟಕದ ಜನತೆ ಆ ಮಗುವಿನ ಜೀವ ಉಳಿಸು ದೇವರೇ ಎಂದು ಪ್ರಾರ್ಥಿಸಿತು...
ಮಗು ಜೀವಂತವಾಗಿ ಇದೆ ಎಂದು SDRF ತಂಡ ಎಂದು ಹೇಳುತ್ತಿದ್ದರೂ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಆತಂಕ, ಏಕೆಂದರೆ ಈ ಹಿಂದೆ ನಡೆದ ಎಷ್ಟೋ ಘಟನೆಗಳ ಜನರ ನೆನಪಿನಲ್ಲಿ ಬಂದು ಹೋಯ್ತು, ಮಧ್ಯಪ್ರದೇಶದಲ್ಲಿ 5 ಗಂಟೆ ಶ್ರಮಿಸಿ ಮಗುವನ್ನು ಬೋರೆವೆಲ್‌ನಿಂದ ಹೊರತೆಗೆದಾಗ ಜನರಿಗೆ ಖುಷಿಯಾಗಿತ್ತು.

ಏಕೆಂದರೆ ಹೊರ ತೆಗೆಯುವಾಗ ಬದುಕಿದ್ದ ಮಗು, ಬೋರ್‌ವೆಲ್‌ನಿಂದ ಹೊರಬಂದ ಕೆಲವೇ ನಿಮಿಷದಲ್ಲಿ ಸಾವನ್ನಪ್ಪಿತ್ತು. ಹಾಗಾಗಿ ಮನಸ್ಸಿನ ಮೂಲೆಯಲ್ಲಿ ಏನೋ ಒಂದು ರೀತಿಯ ಕಳವಳ. ಕೊನೆಗೂ ದೇವರು ದೊಡ್ಡವನು ಸಾತ್ವಿಕ್ ಪುರ್ನಜನ್ಮ ಪಡೆದು ಬಂದ... ಎಲ್ಲರ ಮುಖದಲ್ಲಿ ನಗು ಮೂಡಿತು.
ಭಾರತದಲ್ಲಿ ಈ ರೀತಿಯ ಘಟನೆ ಪದೇ ನಡೆಯುತ್ತಿರುವುದೇಕೆ?
ವರ್ಷದಲ್ಲಿ ಒಂದಾದರೂ ಮಗು ಬೋರ್‌ವೆಲ್‌ಗೆ ಬೀಳುತ್ತಿರುವ ಘಟನೆ ನಡೆಯುತ್ತಲೇ ಇರುತ್ತದೆ. ಜನರ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತದ್ಯಾಂತ ಸುಮಾರು 27 ಮಿಲಿಯನ್‌ಗಿಂತಲೂ ಅಧಿಕ ಬೋರ್‌ವೆಲ್‌ಗಳಿದೆ ಆದರೆ ಅವುಗಳಲ್ಲಿ ಸಾಕಷ್ಟು ಬೋರ್‌ವೆಲ್‌ಗಳಿಗೆ ನೀರು ಸಿಗದೆ ಹಾಗೇ ಬಿಟ್ಟಿದ್ದಾರೆ. ಅದನ್ನು ಸರಿಯಾಗಿ ಮುಚ್ಚದೆ ಇರುವ ಕಾರಣ ಮಕ್ಕಳು ಆಟವಾಡುತ್ತಾ ಅಲ್ಲಿಗೆ ಬಂದಾಗ ಬೋರ್‌ವೆಲ್‌ನಲ್ಲಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.
ಯಾವ ಬೋರ್‌ವೆಲ್ ಹೆಚ್ಚು ಅಪಾಯಕಾರಿ?
ಬೋರ್‌ವೆಲ್‌ನಲ್ಲಿ ನೀರು ಬತ್ತಿದಾಗ ಅದರಲ್ಲಿದ್ದ ಪಿವಿಸಿ ಪೈಪ್ ತೆಗೆಯುತ್ತಾರೆ, ಇದರಿಂದ ಭೂಮಿಯಲ್ಲಿ ದೊಡ್ಡ ಗುಂಡಿ ಹಾಗೆಯೇ ಉಳಿಯುತ್ತದೆ, ಇಂಥ ಬೋರ್‌ವೆಲ್‌ಗಳೇ ಅಪಾಯಕಾರಿ. ಎಲ್ಲಿಯೇ ಇಂಥದ್ದೇ ಬೋರ್‌ವೆಲ್ ಕಂಡರೆ ಅದನ್ನು ಮುಚ್ಚಿಸುವಂತೆ ಹೇಳಬೇಕು, ಅವರು ನಿಮ್ಮ ಮಾತು ಕೇಳದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ.
ಸುಪ್ರೀಂಕೋರ್ಟ್ 2010ರಲ್ಲಿಯೇ ಯಾವೆಲ್ಲಾ ಸುರಕ್ಷತೆಕ್ರಮ ಅನುಸರಿಸಬೇಕು ಎಂದು ಹೇಳಿದೆ:
ಒಂದು ವೇಳೆ ಬೋರ್‌ವೆಲ್‌ನಲ್ಲಿ ನೀರಿಲ್ಲ ಎಂದಾದರೆ ಅದನ್ನು ಹಾಗೆಯೇ ಬಿಡುವಂತಿಲ್ಲ, ಸಂಬಂಧ ಪಟ್ಟ ಇಲಾಖೆಯಿಂದ ಸರ್ಟಿಫಿಕೇಟ್ ನೀಡಬೇಕು. ಜಿಲ್ಲಾಧಿಕಾರಿ ಅಥವಾ ಬ್ಲಾಕ್ ಡೆವಲೆಪ್‌ಮೆಂಟ್ ಆಫೀಸ್ ಈ ಬಗ್ಗೆ ಗಮನಹರಿಸಬೇಕು. ಇಂಥ ಬೋರ್‌ವೆಲ್ ಸುತ್ತ ತಂತಿ ಬೇಲೆ ಹಾಕಬೇಕು.
ಬೋರ್‌ವೆಲ್‌ನೊಳಗೆ ಮಣ್ಣು, ಮರಳು, ಕಲ್ಲು ಹಾಕಿ ತುಂಬಿದರೆ ತುಂಬಾ ಒಳ್ಳೆಯದು.
ಸಾತ್ವಿಕ್ ಘಟನೆ ದೇಶದ ಗಮನ ಸೆಳೆದಿದೆ
ಹೌದು ಪುಟ್ಟ ಬಾಲಕ ಪವಾಡದಂತೆ ಪಾರಾಗಿರುವುದು ಜನತೆಗೆ ಖುಷಿ ತಂದಿದ್ದು ದೇಶದ ಗಮನ ಸೆಳೆದಿದೆ ಈ ರಕ್ಷಣಾ ಕಾರ್ಯ ಮಾಡಿದವರ ಬುದ್ಧಿವಂತೆಕೆಯನ್ನು ಅವರ ಶ್ರಮವನ್ನು ಜನರು ಕೊಂಡಾಡುತ್ತಿದ್ದಾರೆ. ಪೋಷಕರ ಚಿಕ್ಕ ನಿರ್ಲಕ್ಷ್ಯದಿಂದಾಗಿ ಮಗು ಬೋರ್‌ವೆಲ್‌ಗೆ ಬಿತ್ತು, ಮನೆ ಸಮೀಪ ಅಥವಾ ತೋಟದಲ್ಲಿ ಬೋರ್‌ವೆಲ್ ಮುಚ್ಚಿರದಿದ್ದರೆ ಅದನ್ನು ಮುಚ್ಚಿ, ಇಲ್ಲಾಂದ್ರೆ ಇಂಥ ಅವಘಡಗಳು ಮುಂದುವರೆಯುತ್ತೆ. ಈ ಮಗು ದೇವರ ಕರುಣೆಯಿಂದ ಬದುಕಿ ಬಂದಿದೆ, ತಲೆ ಕೆಳಗಾದ ಸ್ಥಿತಿಯಲ್ಲಿ, ಹೊಟ್ಟೆಗೆ ಆಹಾರವಿಲ್ಲದೆ 20 ಗಂಟೆ ಮಗು ಬೋರ್‌ವೆಲ್ ಒಳಗಿತ್ತು.
ಸಾತ್ವಿಕ್ ಈಗ ಎಲ್ಲರ ಮುಖದಲ್ಲಿ ನಗು ಮೂಡಿಸಿದ್ದಾನೆ, ಆದರೆ ಇನ್ಮುಂದೆ ಈ ರೀತಿಯ ಘಟನೆ ಉಂಟಾಗದಂತೆ ಜನರು ತುಂಬಾನೇ ಎಚ್ಚರವಹಿಸಬೇಕು. ಸಾತ್ವಿಕ್‌ದ್ದೇ ಕೊನೆಯ ಪ್ರಕರಣ ಆಗಲಿ.



Click it and Unblock the Notifications
