Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾವನ್ನು ಚಿಟಿಕೆ ಹೊಡೆದಂತೆ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ಕೌಶಲ್ಯಕ್ಕೆ ಜನರು ಫಿದಾ: 17 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಪಡೆದ ವೀಡಿ
ಯಾವುದೇ ಭಯವಿಲ್ಲದೆ ವಿಷ ಸರ್ಪವನ್ನು ಮಿಠಾಯಿ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ತುಂಬಾನೇ ಗಮನ ಸೆಳೆದಿದ್ದು 17 ಮಿಲಿಯನ್‌ಗಿಂತಲೂ ಹೆಚ್ಚಿನ ಜನರು ಈ ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ತುಂಬಾನೇ ಶೇರ್ ಕೂಡ ಆಗಿದೆ.
ಆ ವ್ಯಕ್ತಿಯ ಹಾವು ಹಿಡಿಯುವ ಕೌಶಲ್ಯವನ್ನು ಜನರು ಹೊಗಳುತ್ತಿದ್ದಾರೆ, ಹಾವು ಹಿಡಿಯುವುದನ್ನು ನೋಡಿರುತ್ತೇವೆ, ಹಾವು ಹಿಡಿಯುವ ಅನೇಕ ವೀಡಿಯೋ ನೋಡಿರುತ್ತೇವೆ ಆದರೆ ಈ ರೀತಿಯೂ ಹಾವು ಹಿಡಿಯಬಹುದು ಎಂಬುವುದು ಈ ವೀಡಿಯೋ ನೋಡಿದಾಗ ತಿಳಿಯುತ್ತದೆ. ಅಲ್ಲದೆ ಇಷ್ಟೊಂದು ಸುಲಭವಾಗಿಯೂ ಹಾವು ಹಿಡಿಯಬಹುದೇ ಎಂದನಿಸದೆ ಇರಲ್ಲ, ಹಾಗಾಗಿ ಈ ವೀಡಿಯೋ ವೈರಲ್ ಆಗಿದೆ.

ಆ ವೀಡಿಯೋ ನೋಡುವಾಗಲೇ ಭಯವಾಗುತ್ತೆ, ಆ ಹಾವು ಹೆಡೆಯೆತ್ತಿ ಕಚ್ಚಲು ಪ್ರಯತ್ನಿಸುತ್ತಿದೆ, ಅ ವ್ಯಕ್ತಿ ಯಾವುದೇ ಭಯ ಪಡದೆ ಅವರೇನು ಮಾಡಬೇಕು ಅದರತ್ತ ಗಮನಹರಿಸಿದ್ದಾರೆ. ಅವರ ಕೈಯಲ್ಲಿರುವ ಪ್ಲಾಸ್ಟಿಕ್ ಹಬ್ಬದಲ್ಲಿ ಅದರ ತಲೆ ಹೋಗುವಂತೆ ಮಾಡುತ್ತಾರೆ.
ಆದರೆ ಹಾವು ನುಸುಳಿ ಹೊರ ಬರುತ್ತದೆ, ನಂತರ ಮೆಲ್ಲನೆ ಪ್ರಯತ್ನಿಸಿ ತಲೆಯೊಳಗಡೆ ಹೋಗುವಂತೆ ಮಾಡುತ್ತಾರೆ, ನಂತರ ಅದರ ಬಾಲವನ್ನು ಹಿಡಿದು ಡಬ್ಬಿಯೊಳಗಡೆ ಹಾಕುತ್ತಾರೆ, ಈ ವೀಡಿಯೋ ವೈರಲ್ ಆಗುತ್ತಿದೆ.
ಹಾವು ಹಿಡಿಯುವ ಕೌಶಲ್ಯ ಮೆಚ್ಚಿಕೊಂಡ ಜನ
ಹಾವನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕುವ ಕೌಶಲ್ಯ ನೋಡಿ ಇದು ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಪರ್ಫಾಮನ್ಸ್ ಎಂದು ಕಮೆಂಟ್ ಮಾಡಿದ್ದಾರೆ. ಹೌದು ಎಷ್ಟೊಂದು ಸರಳವಾಗಿ ಅವರು ಹಾವನ್ನು ಹಿಡಿದು ಡಬ್ಬದಲ್ಲಿ ತುಂಬಿದ್ದಾರೆ. ಅವರು ಡಬ್ಬದಲ್ಲಿ ಉಆವು ತುಂಬುವುದನ್ನು ನೋಡುತ್ತಾ ಸುತ್ತಲೂ ಜನ ನಿಂತಿದ್ದಾರೆ. ಇವರು ಹಾವು ಹಿಡಿಯುವುದನ್ನು ನೋಡುವಾಗ ತುಂಬಾನೇ ಖುಷಿಯಾಗುವುದು. ಹಾವಿಗೆ ಒಂದಿಷ್ಟೂ ನೋವಾಗಿಲ್ಲ, ಹಾವಿಂದ ಬೇರೆಯವರಿಗೂ ಏನೂ ತೊಂದರೆಯಾಗಿಲ್ಲ, ಆ ರೀತಿ ಹಾವನ್ನು ಡಬ್ಬದಲ್ಲಿ ತುಂಬಿದ್ದಾರೆ.
man catches snake in plastic jar pic.twitter.com/meekqHQIAF
— internet hall of fame (@InternetH0F) April 15, 2024
ಇದನ್ನು ನೋಡಿ ನೀವು ಪ್ರಯತ್ನ ಮಾಡಬೇಡಿ
ಇನ್ನು ಈ ವೀಡಿಯೋ ನೋಡಿ ನೀವು ಪ್ರಯತ್ನ ಮಾಡಲು ಹೋಗಬೇಡಿ, ಏಕೆಂದರೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವನಕ್ಕೆ ಅಪಾಯ ಉಂಟಾಗುವುದು. ಅವರು ಹಾವು ಹಿಡಿಯುವುದರಲ್ಲಿ ಪರಿಣಿತರು ಇರಬಹುದು, ಹೀಗಾಗಿ ಹಾವನ್ನು ಅಷ್ಟು ಸುಲಭವಾಗಿ ಹಿಡಿದಿದ್ದಾರೆ.
ಬೇಸಿಗೆಯಲ್ಲಿ ಹಾವು ಕಾಟ ಹೆಚ್ಚು
ಈ ಬೇಸಿಗೆಯಲ್ಲಿ ಹಾವು ಕಾಟ ಅಧಿಕವಿರುತ್ತದೆ. ಹಾವು ಕಂಡ ತಕ್ಷಣ ಅದನ್ನು ಹೊಡೆದು ಕೊಲ್ಲಬೇಡಿ, ನಿಮ್ಮ ಸಮೀಪವಿರುವ ಉರುಗ ತಜ್ಞರಿಗೆ ಮಾಹಿತಿ ನೀಡಿ, ಅವರು ಬಂದು ಹಾವು ಹಿಡಿದು ಅದನ್ನು ಕಾಡುವ ಬಿಡುವ ಕೆಲಸ ಮಾಡುತ್ತಾರೆ. ಹಾಗಾಗಿ ಹಾವುಗಳನ್ನು ಕೊಲ್ಲುವುದು ಮಾಡಲೇಬೇಡಿ. ಹಾವು ಮನೆಯೊಳಗಡೆ ಸೇರಿದರೆ ಗಾಬರಿಯಾಗಿ ಕಿರುಚಾಡುವ ಬದಲಿಗೆ ಮನೆಯಿಮದ ಹೊರಗೆ ಬನ್ನಿ ಉರಗ ತಜ್ಞರಿಗೆ ತಿಳಿಸಿ, ಅವರು ಆ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಾರೆ, ಆದ್ದರಿಂದ ಹಾವುಗಳನ್ನು ಹೊಡೆದು ಸಾಯಿಸಬೇಡಿ.
ಬೇಸಿಗೆಯಲ್ಲಿ ಮನೆಯ ಸುತ್ತ-ಮುತ್ತ ಹಾವು ಸೇರದಂತೆ ಜಾಗ್ರತೆವಹಿಸಿ
ಬೇಸಿಗೆಯಲ್ಲಿ ಹಾವು ತಂಪು ಇರುವ ಕಡೆಗೆ ಬರುತ್ತದೆ, ಆದ್ದರಿಂದ ಮನೆಯ ಸುತ್ತಮುತ್ತ ಎಳ್ಳುಳ್ಳಿ ಜಜ್ಜಿ ಅದನ್ನು ನೀರಿನಲ್ಲಿ ಮಿಕ್ಸ್ ಮಾಡಿ ಮನೆಯ ಸುತ್ತ ಮುತ್ತ ಹಾಕಿ, ಇದರ ವಾಸನೆ ಹಾವುಗಳು ಮನೆಯ ಸಮೀಪ ಬರುವುದಿಲ್ಲ.
ಮನೆಯ ಸಮೀಪದಲ್ಲಿ ತಂಪು ಇರುವ ಸ್ಥಳಗಳು ಶೆಡ್, ಕಾರಿನಡಿಯಲ್ಲಿ, ಶೂನಲ್ಲಿ, ಹೆಲ್ಮೆಟ್‌ನಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು, ಆದ್ದರಿಂದ ನೀವು ತುಂಬಾನೇ ಜಾಗ್ರತೆವಹಿಸಬೇಕು.



Click it and Unblock the Notifications











