Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
ಊಟ ಚೆನ್ನಾಗಿ ಸೇರಬೇಕು ಅಂದ್ರೆ ಅಲ್ಲಿ ಉಪ್ಪಿನಕಾಯಿ ಇಲ್ಲವೆ ಯಾವುದಾದರು ರುಚಿ ರುಚಿಯ ಪಲ್ಯ ಇರಬೇಕು. ಉಪ್ಪಿನಕಾಯಿ ಇದ್ದರಂತು ಒಂದೆರಡು ತುತ್ತು ಹೆಚ್ಚಾಗಿ ತಿನ್ನಬಹುದು. ಉಪ್ಪಿನಕಾಯಿಯಲ್ಲಿ ನಿಮಗೆ ಗೊತ್ತಿರುವಂತೆ ಹತ್ತಾರು ವಿಧಗಳಿವೆ, ಪ್ರಕಾರಗಳಿವೆ, ಈಗಂತು ಮಾರುಕಟ್ಟೆಯಲ್ಲಿ ನೀವು ಉಹಿಸದಷ್ಟು ರೀತಿಯ ಉಪ್ಪಿನಕಾಯಿಗಳಿವೆ.
ತರಕಾರಿಗಳಿಂದ ಹಿಡಿದು ನಾನ್ ವೆಜ್, ಮಾಂಸಹಾರಿ ಉಪ್ಪಿನಕಾಯಿಗಳು ಸಹ ಸಿಗುತ್ತವೆ. ಇನ್ನು ಮನೆಗಳಲ್ಲು ಸಹ ಉಪ್ಪಿನಕಾಯಿ ಮಾಡಿಕೊಂಡು ಊಟದ ಜೊತೆ ಸವಿಯುವುದನ್ನು ಸಹ ನಾವು ನೋಡಿದ್ದೇವೆ. ಇದರಲ್ಲಿ ಮಾವಿನಕಾಯಿ ಉಪ್ಪಿನಕಾಯಿ, ಲಿಂಬು ಉಪ್ಪಿನಕಾಯಿ, ಬೆಳ್ಳುಳ್ಳಿ ಉಪ್ಪಿನಕಾಯಿ, ನಲ್ಲಿಕಾಯಿ ಉಪ್ಪಿನಕಾಯಿ ಹೆಚ್ಚು ಫೇಮಸ್ ಆಗಿವೆ.

ಇದರಲ್ಲಿ ನಾವಿಂದು ನೆಲ್ಲಿಕಾಯಿಯಿಂದ ಬಾಯಿ ಚಪ್ಪರಿಸಿ ತಿನ್ನಬಹುದಾದ ಉಪ್ಪಿನಕಾಯಿ ಮಾಡೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ. ಈ ನಲ್ಲಿಕಾಯಿ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಉಪ್ಪಿನಕಾಯಿ ಮಾಡುವುದು ಹೇಗೆ? ಅದನ್ನು ಸರಿಯಾದ ರೀತಿ ಇಡುವುದು ಹೇಗೆ ಎಂಬ ಕುರಿತ ಮಾಹಿತಿಯನ್ನು ನಾವಿಂದು ತಿಳಿಯೋಣ.
ನೆಲ್ಲಿಕಾಯಿ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ನೆಲ್ಲಿಕಾಯಿ - ಅರ್ಧ ಕೆ.ಜಿ
- ಖಾರದ ಪುಡಿ
- ಜೀರಿಗೆ - 2 ಟಿಸ್ಪೂನ್
- ಇಂಗು
- ಮೆಂತ್ಯ - 1/2 tbs
- ಸಾಸಿವೆ
- ಓಂಕಾಳು
- ಅರಿಶಿನ ಪುಡಿ - 1/2 ಟೀಸ್ಪೂನ್
- ಬೆಳ್ಳುಳ್ಳಿ-2
- ಉಪ್ಪು
ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ?
ಒಂದು ಪಾತ್ರೆಯಲ್ಲಿ ಮೆಂತ್ಯ, ಜೀರಿಗೆ, ಸಾಸಿವೆ, ಸೋಂಕಾಳು, ಒಂಕಾಳು ಹಾಕಿಕೊಂಡು ಹುರಿದುಕೊಳ್ಳಿ. ಸಣ್ಣ ಉರಿಯಲ್ಲಿಟ್ಟುಕೊಂಡು ಹುರಿದುಕೊಳ್ಳಿ. ಹೆಚ್ಚು ಉರಿಯಲ್ಲಿಟ್ಟು ಹುರಿದುಕೊಳ್ಳಬೇಡಿ. ಮಸಾಲೆ ಕಪ್ಪಾದರೆ ರುಚಿ ಹಾಳಾಗುತ್ತದೆ. ಇದನ್ನು ಹುರಿದ ಬಳಿಕ ಮತ್ತೊಂದು ಬೌಲ್ಗೆ ಹಾಕಿ ಇಟ್ಟುಕೊಳ್ಳಿ. ಬಳಿಕ ಇದನ್ನು ಮಿಕ್ಸಿ ಜಾರ್ಗೆ ಹಾಕಿ ಪುಡಿ ಮಾಡಿಕೊಳ್ಳಿ.
ಇನ್ನೊಂದು ಕಡೆ ಒಂದು ಇಡ್ಲಿ ಪಾತ್ರೆಯಲ್ಲಿ ನೀರು ಇಟ್ಟು ಅದಕ್ಕೆ ನೆಲ್ಲಿಕಾಯಿ ಹಾಕಿ ಬೇಯಿಸಬೇಕು. ನಲ್ಲಿಕಾಯಿಯನ್ನು ನೀರಿಗೆ ಹಾಕಿ ಬೇಯಿಸಬೇಡಿ ಅದು ಹಬೆಯಲ್ಲಿ ಬೇಯಬೇಕು. ನೆಲ್ಲಿಕಾಯಿ ಸಾಫ್ಟ್ ಆಗುವವರೆಗೆ ಬೇಯಿಸಿ.
ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿಕೊಂಡು ಎಣ್ಣೆ ಕಾಯಲು ಬಿಡಿ. ಬಳಿಕ ಈ ಎಣ್ಣೆಗೆ ಸಾಸಿವೆ, ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಇಂಗು, ಖಾರದ ಪುಡಿ, ಅರಶಿನ ಪುಡಿ ಹಾಕಿ ತಿರುಗಿಸಿಕೊಳ್ಳಿ. ಬಳಿಕ ಇದಕ್ಕೆ ಬೇಯಿಸಿಕೊಂಡಿರುವ ನೆಲ್ಲಿಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ತಿರುಗಿಸಿ, ಉರಿಯನ್ನು ಸಣ್ಣದಾಗಿ ಇಟ್ಟುಕೊಳ್ಳಿ.
2 ನಿಮಿಷ ಬೇಯಿಸಿದ ಬಳಿಕ ಅದಕ್ಕೆ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ, ಅಲ್ಲದೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಬಳಿಕ 2 ನಿಮಿಷಗಳ ಫ್ರೈ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ನೆಲ್ಲಿಕಾಯಿ ಉಪ್ಪಿನಕಾಯಿ ತಯಾರಾಗುತ್ತದೆ. ಇದು ಊಟದ ಜೊತೆ ಬಾಯಿ ಚಪ್ಪರಿಸಿ ತಿನ್ನಲು ಬಲು ರುಚಿ ಯಾಗಿರುತ್ತದೆ. ನೆಲ್ಲಿಕಾಯಿ
ಉಪ್ಪಿನಕಾಯಿ ಹಾಕಲೆಂದೇ ವಿಶೇಷ ನೆಲ್ಲಿಕಾಯಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಫಾರಂ ನೆಲ್ಲಿಕಾಯಿಯನ್ನೂ ಉಪ್ಪಿನಕಾಯಿಗೆ ಬಳಸಲಾಗುತ್ತೆ. ಆದ್ರೆ ದೊಡ್ಡ ಗಾತ್ರದ ನೆಲ್ಲಿಕಾಯಿ ಇದಕ್ಕೆ ಬಳಸಬೇಡಿ. ಅದು ಉಪ್ಪಿನಕಾಯಿಗೆ ರುಚಿಸುವುದಿಲ್ಲ.



Click it and Unblock the Notifications
