Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ವಿಶ್ವ ಆರೋಗ್ಯ ದಿನ: ಪರ್ವಾಗಿಲ್ಲ ಅಂತ ನೀವು ಮಾಡುವ ಈ 9 ತಪ್ಪುಗಳಿಂದಲೇ ಆರೋಗ್ಯ ಹದಗೆಡುತ್ತೆ ಜಾಗ್ರತೆ
ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ಇಂದು ಆರೋಗ್ಯ ಎಂಬುವುದು ಬೆರಳಿಣಿಕೆ ಜನರ ಸ್ವತ್ತಾಗಿದೆ, ಏಕೆಂದರೆ ಬಹುತೇಕ ಜನರಿಗೆ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಏಕೆಂದರೆ ನಮ್ಮ ಜೀವನ ಶೈಲಿ ಆ ರೀತಿ ಬದಲಾಗಿದೆ, ಹೀಗಾಗಿ ಆರೋಗ್ಯ ಸಮಸ್ಯೆ ಬದಲಿ ಉಡುಗೊರೆಯಾಗಿ ಸಿಕ್ಕಿದೆ.
ಈ ಆರೋಗ್ಯ ಎಂದಾಗ ನಾವು, ನೀವೆಲ್ಲಾ ಕೆಲವೊಂದು ತಪ್ಪು ಮಾಡುತ್ತೇವೆ, ಆದರೆ ನಮಗದು ನಮ್ಮ ಆರೋಗ್ಯಕ್ಕೆ ದೊಡ್ಡ ತೊಂದರೆಯಾಗುತ್ತೆ ಎಂದು ತಿಳಿದಿರುವುದಿಲ್ಲ, ಅಂಥ ಕೆಲ ತಪ್ಪುಗಳ ಬಗ್ಗೆ ಹೇಳಲಾಗಿದೆ ನೋಡಿ:

ಸಾಕಷ್ಟು ಹೊತ್ತು ನಿಲ್ಲದಿರುವುದು
ಹೆಚ್ಚಿನವರು ಡೆಸ್ಕ್ ಜಾಬ್ ಮಾಡ್ತಾ ಇದ್ದಾರೆ. ಬೆಳಗ್ಗೆ ಹೋಗಿ ಆಫೀಸ್ ಚೇರ್‌ನಲ್ಲಿ ಕೂತರೆ ಸಂಜೆಯವರೆಗೆ ಕೂತೇ ಕೆಲಸ ಮಾಡುತ್ತಾರೆ. ಮಧ್ಯದಲ್ಲಿ ವಾಶ್‌ರೂಂಗೆ ಹೋದರೂ ದಿನದಲ್ಲಿ 9 ಗಂಟೆ ಕೆಲಸ ಮಾಡುವಾಗ 8 ಗಂಟೆಗಿಂತಲೂ ಅಧಿಕ ಸಮಯ ಕೂತುಕೊಂಡೇ ಕೆಲಸ ಮಾಡುತ್ತೇವೆ. ಗಾಡಿಯಲ್ಲಿ ಕೂತುಕೊಂಡೇ ಟ್ರಾವೆಲ್ ಮಾಡುತ್ತೇವೆ, ಮನೆಗೆ ಬಂದು ಕೂರುತ್ತೇವೆ, ಇವುಗಳ ನಡುವೆ ನಿಲ್ಲುವುದನ್ನು ಮರೆತು ಬಿಡುತ್ತೇವೆ, ಹೀಗೆ ಮಾಡಿದರೆ
ಹೃದಯ ಸಂಬಂಧಿ ಸಮಸ್ಯೆ
ಮಧುಮೇಹ
ಒಬೆಸಿಟಿ
ರಕ್ತ ಹೆಪ್ಪುಗಟ್ಟುವುದು
ಮಾನಸಿಕ ಒತ್ತಡ
ಮರೆವು
ವೇರಿಕೋಸ್ ವೇಯಿನ್
ಕ್ಯಾನ್ಸರ್
ಸೊಂಟ ನೋವು, ಬೆನ್ನು ನೋವು ಈ ಬಗೆಯ ಸಮಸ್ಯೆ ಉಂಟಾಗುವುದು.
ತುಂಬಾ ಹೊತ್ತು ಕೂರಬೇಡಿ, ಮಧ್ಯದಲ್ಲಿ ಎದ್ದು ಸ್ವಲ್ಪ ಓಡಾಡಿ ಮತ್ತೆ ಬಂದು ಕೂರಿ. ಡೆಸ್ಕ್ ಜಾಬ್ ಮಾಡುವವರು ದಿನಾ ಅರ್ಧ ಗಂಟೆ ನಡೆಯುವ ವ್ಯಾಯಾಮ ಮಾಡುವುದು ಒಳ್ಳೆಯದು.
ಬೆಳಗ್ಗಿನ ತಿಂಡಿ ತಿನ್ನದಿರುವುದು
ಅಭ್ಯಾಸ ತುಂಬಾ ಜನರಲ್ಲಿ ಇರುತ್ತದೆ. ಬೆಳಗಿನ ತಿಂಡಿ ತಿನ್ನಲು ಹೊತ್ತಿಲ್ಲ ಎಂದು ಹಾಗೇ ಕೆಲಸಕ್ಕೆ ಓಡುವುದು ಮಾಡುತ್ತಾರೆ. ಈ ರೀತಿ ಬೆಳಗ್ಗೆ ತಿಂಡಿ ತಿನ್ನದೆ ಹೋದರೆ ಕೆಲಸ ಮಾಡಲು ಶಕ್ತಿ ಇರಲ್ಲ. ಸುಸ್ತು ಅನಿಸುವುದು. ಅಲ್ಲದೆ ಬ್ರೇಕ್‌ಫಾಸ್ಟ್ ಬಿಡುವುದರಿಂದ ಮರೆವಿನ ಸಮಸ್ಯೆ ಉಂಟಾಗುವುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಅಲ್ಲದೆ ಈ ರೀತಿ ಮಾಡುವುದರಿಂದ ಮೈ ತೂಕ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ, ಆದರೆ ಈ ರೀತಿ ಮಾಡುವುದರಿಂದ ಒಬೆಸಿಟಿ ಸಮಸ್ಯೆ ಉಂಟಾಗುವುದು.
ಕಡಿಮೆ ನಿದ್ದೆ ಮಾಡುವುದು
ದಿನದಲ್ಲಿ 6 ಗಂಟೆ ನಿದ್ದೆ ಅವಶ್ಯಕ, ಆದರೆ ಕಡಿಮೆ ನಿದ್ದೆ ಮಾಡುವುದರಿಂದ ದೇಹಕ್ಕೆ ತೊಂದರೆಯಾಗುವುದು. ನಿದ್ದೆ ತುಂಬಾನೇ ಕಡಿಮೆಯಾದರೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು.
ನಿದ್ದೆ ಕಡಿಮೆಯಾದರೆ
ನೆನಪಿನ ಶಕ್ತಿ ಕಡಿಮೆಯಾಗುವುದು
ಖಿನ್ನತೆ
ಹೃದಯದ ಸಮಸ್ಯೆ
ಒಬೆಸಿಟಿ
ಕ್ಯಾನ್ಸರ್
ಸೀನು ತಡೆಗಟ್ಟುವುದು
ನಿಮಗೆ ಸೀನು ಬಂದಾಗ ಅಕ್ಷಿ... ಅಂತ ಹೇಳಿ ತಡೆಹಿಡಿಯಬೇಡಿ. ತಡೆಹಿಡಿದರೆ ಕಣ್ಣಿನ ರಕ್ತನಾಳಕ್ಕೆ ತೊಂದರೆಯಾಗುವುದು, ಕಿವಿಗೆ ಹಾನಿಯಾಗುವುದು.
ತುಂಬಾ ಜೋರಾಗಿ ಮ್ಯೂಸಿಕ್ ಹಾಕುವುದು
ಮ್ಯೂಸಿಕ್ ಒಳ್ಳೆಯದು, ಆದರೆ ಜೋರಾಗಿ ಹಾಕಿ ಕೇಳುವುದು ಒಳ್ಳೆಯದಲ್ಲ. ಆದ್ದರಿಂದ ಮ್ಯೂಸಿಕ್ ಅನ್ನು ಕಡಿಮೆ ಧ್ವನಿಯಲ್ಲಿ ಕೇಳಿ.
ಭಾರವಾದ ಬ್ಯಾಗ್‌ಗಳನ್ನು ಹೊತ್ತು ನಡೆಯುವುದು
ಶಾಲಾ ಮಕ್ಕಳ ಬಗ್ಗೆ ಜಾಗ್ರತೆವಹಿಸಬೇಕು, ಅವರು ತುಂಬಾನೇ ಭಾರವಾದ ಬ್ಯಾಗ್‌ಗಳನ್ನು ಹೊತ್ತು ಸಾಗಿ. ತುಂಬಾ ಭಾರವಾದ ಬ್ಯಾಗ್ ಹೊತ್ತು ನಡೆಯುವುದರಿಂದ
ಕುತ್ತಿಗೆ ನೋವು
ಬೆನ್ನು ನೋವು
ಸಂಧಿನೋವು
ಈ ಬಗೆಯ ಸಮಸ್ಯೆ ಕಾಡುವುದು. ಇನ್ನು ಲ್ಯಾಪ್‌ಟಾಪ್ ಬ್ಯಾಗ್ ತೆಗೆದುಕೊಂಡು ಹೋಗುವುದಾದರೆ ಒಳ್ಳೆಯ ಸಪೋಟಿವ್ ಬ್ಯಾಗ್ ತೆಗೆದುಕೊಳ್ಳಿ.
ತಿಂದ ತಕ್ಷಣ ಹಲ್ಲುಜ್ಜುವುದು
ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ಒಳ್ಳೆಯದು, ಆದರೆ ತಿಂದ ತಕ್ಷಣ ಹಲ್ಲುಜ್ಜುವುದು ಒಳ್ಳೆಯದಲ್ಲ. ಟೀ, ಕಾಫಿ, ಸೋಡಾ, ಸಿಟ್ರಸ್ ಈ ಬಗೆಯ ಆಹಾರ ತಿಂದ ತಕ್ಷಣ ಹಲ್ಲುಜ್ಜಬೇಡಿ.
ಸೂರ್ಯನ ಬೆಳಕು ಮೈಮೇಲೆ ಬೀಳದಿರುವುದು
ಹೆಚ್ಚಿನವರು ಸೂರ್ಯನ ಬೆಳಕಿಗೆ ನಿಲ್ಲುವುದೇ ಇಲ್ಲ, ಇದರಿಂದ ವಿಟಮಿನ್ ಡಿ ಸಮಸ್ಯೆ ಉಂಟಾಗುವುದು, ಆದ್ದರಿಂದ ಪ್ರತಿದಿನ ಬೆಳಗ್ಗೆ 9 ಗಂಟೆಯ ಒಳಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲಿ.
ನೀರು ತುಂಬಾನೇ ಕಡಿಮೆ ಕುಡಿಯುವುದು
ನೀರು ತುಂಬಾನೇ ಕಡಿಮೆಯಾದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು. ನೀರಿನ ಸಮಸ್ಯೆ ಕಡಿಮೆಯಾದರೆ
ಕಿಡ್ನಿ, ತ್ವಚೆ, ಲಿವರ್ ಇವುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications