Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಇಹಲೋಕ ತ್ಯಜಿಸಿದ ಸೂಪರ್ ಕಳ್ಳ: ಕಳ್ಳನಾಗಿದ್ದಾಗಲೇ ಜಡ್ಜ್ ಆದ, 2000 ಖೈದಿಗಳನ್ನು ಬಿಡುಗಡೆ ಮಾಡಿದ!
ಧನಿ ರಾಮ್ ಮಿತ್ತಲ್ ಸೂಪರ್ ಕಳ್ಳನೆಂದೇ ಎಂದು ಗುರುತಿಸಿಕೊಂದ ವ್ಯಕ್ತಿ ಏಪ್ರಿಲ್ 18ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಈತನ ಕಳ್ಳತನದ ಕತೆ ಕಳೆದರೆ ಈನನೊಬ್ಬ ಚಾಣಾಕ್ಷ ಕಳ್ಳ ಎನ್ನುವುದರಲ್ಲಿ ಸಂದೇಹವಿಲ್ಲ, ಜಡ್ಜ್‌ನಂತೆ ವೇಷ ಧರಿಸಿ ಇಡೀ ಕೋರ್ಟ್ ಅನ್ನೇ ಯಾಮಾರಿಸಿದ್ದಾನೆ ಎಂದ ಮೇಲೆ ಈತ ಎಂಥ ಅಸಾಮಾನ್ಯ ಕಳ್ಳನಿರಬೇಡ?

ಈತ ಕಳ್ಳತನ ಮಾಡುವುದನ್ನು 1968ರಿಂದ ಪ್ರಾರಂಭಿಸಿದ, 2016ರಲ್ಲಿಯೂ ಕಾರು ಕದ್ದು ಸಿಕ್ಕಿ ಬಿದ್ದಿದ್ದ. ಈತ ಸಾಯುವಾಗಲೂ ಡಜನ್ ಗಟ್ಟಲೆ ಕೇಸ್ ಈತನ ಮೇಲಿತ್ತು.ಎಸಿಪಿ ಆಫೀಸರ್ ಈನ ಸಾವು ಖಚಿತ ಪಡಿಸಿದ ಮೇಲೆ ಆ ಕೇಸ್‌ಗಳನ್ನು ಕ್ಲೋಸ್ ಮಾಡಲಾಗಿದೆ.
ಬುದ್ಧಿವಂತ ಕಳ್ಳ
ಮಿತ್ತಲ್ ಬಿಎಸ್ಸಿ ಓದಿ ಏನೂ ಸೂಕ್ತ ಕೆಲಸದೇ ಇದ್ದಾಗ ಸ್ಟೇಷನ್ ಮಾಸ್ಟರ್ ಆಗಿ ಕೆಲಸಕ್ಕೆ ಸೇರಿದ್ದ, ಆದರೆ ಕದಿಯುವ ಬುದ್ಧಿಯಿಂದಾಗಿ ಕೆಲಸ ಕಳೆದುಕೊಂಡ, ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ಕಾರು ಕದ್ದು ಸಿಕ್ಕಿ ಬಿದ್ದು ಕೆಲಸ ಹೋಯ್ತು... ಅಲ್ಲಿಂದ ಆತನ ತನ್ನ ಕಳ್ಳತನ ಬಿಡಲೇ ಇಲ್ಲ... ಈತನ ಮೇಲೆ ಬರೋಬರಿ 1000 ಕೇಸ್‌ಗಳಿವೆ, 150 ಕಾರು ಕದ್ದ ಕೇಸ್ ಕೂಡ ಇದೆ. ಈತನ ಕತೆ ಇಲ್ಲಿಗೆ ನಿಲ್ಲುವುದಿಲ್ಲ..
ಕೋರ್ಟ್‌ನಲ್ಲಿ ಜಡ್ಜ್ ಕೂಡ ಆದ
ಈತ ಕಾನೂನು ಪದವಿ ಓದಿದ್ದ ಅಲ್ಲದೆ ಹ್ಯಾಂಡ್‌ರೈಟಿಂಗ್ ಅನಾಲಿಸಿಸ್ ಕೂಡ ಮಾಡಿದ್ದ, ಹೀಗಾಗಿ ಸುಲಭದಲ್ಲಿ ಜಡ್ಜ್ ಕೂಡ ಆದ. ಆತ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ, ಆವಾಗ ಹರಿಯಾಣದ ಜಿಲ್ಲಾ ನ್ಯಾಯಾಲಯದ ಜಡ್ಜ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ ಎಂಬ ಸುದ್ದಿ ಈತನಿಗೆ ತಿಳಿಯುತ್ತದೆ. ಆತನಿಗೆ ಕೋರ್ಟ್ ವಿಚಾರಗಳು ತುಂಬಾ ಗೊತ್ತಿರುತ್ತದೆ, ಹಾಗಾಗಿ ತಾನೇ ಒಂದು ನಕಲಿ ಲೆಟರ್ ತಯಾರಿಸಿ ಜಡ್ಜ್ ವಿಚಾರಣೆ ಮುಗಿಯುವವರೆಗೆ 2 ತಿಂಗಳ ಕಾಲ ರಜೆಯಲ್ಲಿ ಹೋಗಬೇಕೆಂದು ಬರಿದಿರುತ್ತದೆ.
ಈ ಲೆಟರ್ ಸಿಕ್ಕ ಮೇಲೆ ಆ ಜಡ್ಜ್ ಕೂಡ ರಜೆಯಲ್ಲಿ ಹೋಗುತ್ತಾರೆ, ನಂತರ ಮತ್ತೊಂದು ಲೆಟರ್‌ನಲ್ಲಿ ಈ ನ್ಯಾಯಾಲಕ್ಕೆ ತಾತ್ಕಾಲಿಕ ಜಡ್ಜ್ ನೇಮಕವಾಗಿದ್ದರೆ, ಅವರು ನಾಳೆಯಿಂದಲೇ ಕೆಲಸ ಪ್ರಾರಂಭಿಸುತ್ತಾರೆ ಎಂದು ಬರೆದಿರುವ ಲೆಟರ್ ಆಗಿತ್ತು, ಜಡ್ಜ್‌ಗೆ ಕಳುಹಿಸಿರುವ ಹಾಗೂ ಕೋರ್ಟ್‌ಗೆ ಬಂದಿರುವ ಲೆಟರ್ ಹೈಕೋರ್ಟ್‌ನಿಂದ ಬಂದ ಲೆಟರ್ ರೀತಿಯಲ್ಲೇ ಇರುವುದರಿಂದ ಎಲ್ಲರೂ ಸತ್ಯ ಎಂದು ನಂಬುತ್ತಾರೆ. ಆವಾಗ ಈತ ಹೊಸ ಜಡ್ಜ್‌ನಂತೆ ಕೋರ್ಟ್‌ಗೆ ಬರುತ್ತಾರೆ, ಈತ ನಕಲಿ ಎಂಬುವುದು ಯಾರಿಗೂ ಗೊತ್ತಾಗಲಿಲ್ಲ, ಈ ಸಂದರ್ಭದಲ್ಲಿ ಜಡ್ಜ್‌ನಂತೆ ಸಹಿ ಮಾಡಿ ಸುಮಾರು 2000 ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ. ಈಗ ಜಡ್ಜ್ ಸೀಟ್‌ನಲ್ಲಿ 40 ದಿನಗಳ ಕಾಲ ಕೂತಿದ್ದ. ಇದು ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಅಲ್ಲಿಂದ ಪಲಾಯನ ಮಾಡಿದ್ದ.
ಈತನಿಗೆ ಅಟೋಮೊಬೈಲ್ ಮೇಲೆ ತುಂಬಾನೇ ಪ್ರೀತಿ, ಈತ ತುಂಬಾ ಕಡೆ ಕಾರು ಕಳ್ಳತನ ಮಾಡಿದ್ದ, ಅದರಲ್ಲೂ ಕೋರ್ಟ್ ಆವರಣದಲ್ಲಿ ನಿಲ್ಲಿಸಿರುತ್ತಿದ್ದ ಕಾರುಗಳನ್ನು ಕದಿಯುತ್ತಿದ್ದ. ಹರಿಯಾಣ, ಚತ್ತೀಸ್‌ಗಡ, ಪಂಜಾಬ್, ರಾಜಾಸ್ಥಾನದಲ್ಲಿ ಕಾರುಗಳನ್ನು ಕದ್ದಿದ್ದ.
ಹಗಲಿನಲ್ಲಿ ಕಾರು ಕದಿಯುತ್ತಿದ್ದ ಕಳ್ಳ
ಈತ ರಾತ್ರಿ ಹೊತ್ತು ಹೋಗಿ ಕಾರು ಕದಿಯುತ್ತಿರಲಿಲ್ಲ, ಬದಲಿಗೆ ಹಗಲಿನಲ್ಲಿಯೇ ತಾನು ಟಾರ್ಗೆಟ್ ಮಾಡಿದ ಕಾರುಗಳನ್ನು ಕದಿಯುತ್ತಿದ್ದ. ಅದರಲ್ಲೂ ಕೋರ್ಟ್ ಆವರಣದಲ್ಲಿ ನಿಲ್ಲಿಸಿರುವ ಕಾರುಗಳನ್ನು ಕದಿಯಲಾರಂಭಿಸಿದ. ಕಾರುಗಳನ್ನು ಕದ್ದು ತುಂಬಾ ಸಲ ಸಿಕ್ಕಿಬಿದ್ದಿದ್ದ, ಆದರೂ ಜೈಲ್‌ನಿಂದ ಬಿಡುಗಡೆಯಾದ ಮೇಲೆ ಕೂಡ ಕಾರುಗಳನ್ನು ಕದಿಯುವುದನ್ನು ಮುಂದುವರೆಸಿದ.
ಕ್ರಿಮಿನಲ್ ಆಗುವುದಕ್ಕಾಗಿ ಕಾನೂನು ಓದಿದ
ಕಾನೂನು ಓದಿ ಜನರಿಗೆ ನ್ಯಾಯ ಕೊಡಿಸಬೇಕೆಂದು ಕಾನೂನು ಪದವಿ ಮಾಡುತ್ತಾರೆ. ಆದರೆ ಈತ ಜೈಲ್‌ಗೆ ಹೋಗುತ್ತಿದ್ದಾಗ ವಕೀಲರಿಗೆ ಫೀಸ್ ಕೊಡಬೇಕಾಗಿತ್ತು, ಅದೇ ನಾನೇ ಕಾನೂನು ಓದಿದರೆ ನಮ್ಮ ಕೇಸ್ ನಾನೇ ವಾದಿಸಬಹುದಲ್ವಾ ಎಂಬ ಉದ್ದೇಶದಿಂದ ಕಾನೂನು ಪದವಿ ಪೂರ್ಣಗೊಳಿಸುತ್ತಾನೆ. ಅಲ್ಲದೆ ಕೋರ್ಟ್‌ನಲ್ಲಿ ತನ್ನ ಮೇಲಿದ್ದ ಕೇಸ್‌ಗಳನ್ನು ತಾನೇ ಓದಿಸಿ ಗೆಲ್ಲುತ್ತಿದ್ದ.
ಇಂಥ ಚಾಣಾಕ್ಷ ಕಳ್ಳನನ್ನು ಯಾರೂ ನೋಡಿರಲಿಲ್ಲ
ಕಳ್ಳರು ತುಂಬಾನೇ ಬುದ್ಧವಂತರೇ ಆಗಿರುತ್ತಾರೆ, ಅವರು ತಮ್ಮ ಬುದ್ಧಿಯನ್ನು ಕೆಟ್ಟ ಕಾರ್ಯಕ್ಕಾಗಿ ಬಳಸುತ್ತಾರೆ ಅಷ್ಟೇ. ಆದರೆ ಇಷ್ಟೊಂದು ಬುದ್ಧಿವಂತ ಕಳ್ಳನನ್ನು ಯಾರೂ ನೋಡಿರಲಿಲ್ಲ, ತಾನೇ ಜಡ್ಜ್‌ನಂತೆ ಹೋಗಿ ಕೋರ್ಟ್ ಅನ್ನು 40 ದಿನಗಳವರೆಗೆ ಯಾಮಾರಿಸುವುದು ಎಂದರೆ ನಂಬುವಂಥ ವಿಷಯವೇ. ಈತ ಮಾಡಿದ್ದ.. ಈತನ ಬಗ್ಗೆ ಸಿನಿಮಾ ಮಾಡಿದರೆ ರೋಚಕವಾಗಿರಲಿದೆ, ಹಾಗಿದೆ ಈತನ ಕತೆ.
ವಯಸ್ಸಾಗುತ್ತಿದ್ದಂತೆ ಕಳ್ಳತನ ಕೆಲಸ ಕಡಿಮೆ ಮಾಡುತ್ತಿದ್ದ , ಆದರೂ 2016ರಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದ. ವಯೋಸಹಜ ಕಾಯಿಲೆಯಿಂದಾಗಿ ಏಪ್ರಿಲ್ 18ಕ್ಕೆ ಸಾವನ್ನಪ್ಪಿದ್ದಾರೆ ಎಂದು ಅವರ ಮಗ ಹೇಳಿದ್ದಾರೆ, ಪೊಲೀಸರು ಈತನ ಸಾವಿನ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.



Click it and Unblock the Notifications