ಉಗುರು ನೋಡಿ ಭವಿಷ್ಯ ಹೇಳಬಹುದಂತೆ! ನಂಬುತ್ತೀರಾ..?

Posted By: manu
Subscribe to Boldsky

ಅಂಗೈ ನೋಡಿ ಒಬ್ಬರ ಬಗ್ಗೆ ಹೇಳಬಹುದು, ಫೋಟೋ ನೋಡಿ ಒಬ್ಬರ ಕುರಿತು ಹೇಳಬಹುದು, ಕಣ್ಣ ರೇಖೆ ಸಹ ನೋಡಿ ಹೇಳುತ್ತಾರೆ, ಅರೆ ಇದೇನಿದು ನಮ್ಮ ಉಗುರು ನೋಡಿ ಏನು ಹೇಳಬಹುದು ಎಂದು ಅಚ್ಚರಿಯಾಗುತ್ತಿದೆಯೇ? ಹೌದು ಸ್ವಾಮಿ ನಿಮ್ಮ ಉಗುರು ಸಹ ನಿಮ್ಮ ಸ್ವಭಾವವನ್ನು ತಿಳಿಸಿಕೊಡುತ್ತದೆ. ಏಕೆಂದರೆ ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸಹ ಇತರರಿಗಿಂತ ವಿಭಿನ್ನವಾಗಿರುತ್ತಾನೆ. ಇಂತಹ ವಿಭಿನ್ನತೆಯನ್ನು ಸಹ ನಿಮ್ಮ ಉಗುರುಗಳಿಂದ ಗುರುತಿಸಬಹುದು. ಒಬ್ಬ ವ್ಯಕ್ತಿಯನ್ನು ಮೊಟ್ಟ ಮೊದಲ ಬಾರಿಗೆ ಕಂಡಾಗ ನಮಗೆ ಯಾವ ಭಾವನೆಯು ಮೂಡುತ್ತದೆಯೋ, ಹಾಗೆಯೇ ಅವರ ಉಗುರಿನ ಆಕಾರವು ಸಹ ಅವರ ಕುರಿತಾಗಿ, ಅಂದರೆ ಅವರ ವ್ಯಕ್ತಿತ್ವದ ಕುರಿತಾಗಿ ಮಾಹಿತಿಯನ್ನು ನೀಡುತ್ತದೆ. ಬೆರಳಿನ ಉಗುರಿಗೂ-ಆರೋಗ್ಯಕ್ಕೂ, ಎತ್ತಿಂದೆತ್ತ ಸಂಬಂಧ?

ಈ ಅಂಕಣದಲ್ಲಿ ನೀವು ಕೆಲವೊಂದು ಉಗುರುಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಮಾಹಿತಿಗಳು ನಿಮ್ಮ ವ್ಯಕ್ತಿತ್ವದ ಕುರಿತಾಗಿ ಸಹ ತಿಳಿಸಿಕೊಡುತ್ತವೆ. ಇದರ ನಿಯಮಗಳು ಸರಳವಾಗಿರುತ್ತವೆ ಮತ್ತು ನಿಮ್ಮನ್ನು ಅಚ್ಚರಿಗೆ ಸಹ ತಳ್ಳುತ್ತವೆ. ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವವನ್ನು ತಿಳಿಸುವ ಈ ಮಾಹಿತಿಗಳು ನಿಮಗೆಯೇ ಗೊತ್ತಿರುವುದಿಲ್ಲ. ಇನ್ನೂ ಕೆಲವೊಂದು ಇದೆ ಎಂಬುದನ್ನು ನೀವೇ ಒಪ್ಪಿಕೊಳ್ಳುವಿರಿ! ಬನ್ನಿ ಇನ್ನು ನಿಮ್ಮಿಂದ ಕುತೂಹಲವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ನಮಗೆ ಗೊತ್ತು, ಮೊದಲು ಆ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ವಿಶೇಷ ಸೂಚನೆ: ಈ ಮಾಹಿತಿಗಳು ನಿಮ್ಮ ಕುರಿತು ಎಲ್ಲಾ ಮಾಹಿತಿಯನ್ನು ಹೊಂದಿರುವುದಿಲ್ಲ ಹಾಗು ಪರಿಪೂರ್ಣವಾಗಿ ನಿಖರತೆಯನ್ನು ಹೊಂದಿರದೆ ಇರಬಹುದು. ಆದರೂ ಒಮ್ಮೆ ತಮಾಷೆಯಾಗಿ ಇದನ್ನು ಪರೀಕ್ಷಿಸಿ ನೋಡಿ ಎಂದು ಸಲಹೆ ಮಾಡುತ್ತೇವೆ.

ಅಗಲವಾದ, ಚಪ್ಪಟೆಯಾದ ಉಗುರುಗಳು

ಅಗಲವಾದ, ಚಪ್ಪಟೆಯಾದ ಉಗುರುಗಳು

ಈ ಬಗೆಯ ಉಗುರುಗಳನ್ನು ಹೊಂದಿರುವವರು ಪರಿಶುದ್ಧವಾದ ಮನಸ್ಸನ್ನು ಹೊಂದಿರುತ್ತಾರೆ ಮತ್ತು ಪ್ರತಿಯೊಂದರಲ್ಲಿಯೂ, ಪ್ರತಿಯೊಂದನ್ನು ವಿಶ್ಲೇಷಣೆಯನ್ನು ಮಾಡುವ ಮನೋಭಾವ ಹೊಂದಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಗಲವಾದ, ಚಪ್ಪಟೆಯಾದ ಉಗುರುಗಳು

ಅಗಲವಾದ, ಚಪ್ಪಟೆಯಾದ ಉಗುರುಗಳು

ಈ ರೀತಿಯ ಉಗುರನ್ನು ಹೊಂದಿರುವವರು ನಂಬಿಕೆಗೆ ಅರ್ಹತೆಯನ್ನು ಹೊಂದಿರುತ್ತಾರೆ, ಜನರನ್ನು ಅರ್ಥ ಮಾಡಿಕೊಳ್ಳುವ, ಅವರ ಸಮಸ್ಯೆಗಳನ್ನು ಕೇಳುವಂತಹ ಸೌಜನ್ಯವನ್ನು ಹೊಂದಿರುವ ಹಾಗು ಮಾತಾಡುವ ಮುನ್ನ ಆಲೋಚಿಸಿ ಮಾತನಾಡುವ ಗುಣವನ್ನು ಇವರು ಹೊಂದಿರುತ್ತಾರೆ. ಜನರು ತಮ್ಮ ಕಷ್ಟಗಳಿಗೆ ನಿಮ್ಮ ಬಳಿ ಪರಿಹಾರ ಕೇಳಲು ಆಗಮಿಸುತ್ತಾರೆ.

ಉದ್ದವಾದ, ಆಯತಾಕಾರದ ಉಗುರುಗಳು

ಉದ್ದವಾದ, ಆಯತಾಕಾರದ ಉಗುರುಗಳು

ಈ ಬಗೆಯ ಉಗುರುಗಳನ್ನು ಹೊಂದಿರುವ ಜನರು ತುಂಬಾ ವಾಚಾಳಿಗಳಾಗಿರುತ್ತಾರೆ ಮತ್ತು ಸಂವಹನ ಕಲೆ ಇವರಿಗೆ ಸಿದ್ಧಿಸಿರುತ್ತವೆ. ಜೀವನದ ಹೊಸ ಅನುಭವಗಳನ್ನು ಪಡೆಯಲು ಇವರು ಸದಾ ಇಚ್ಛಿಸುತ್ತಾರೆ ಮತ್ತು ಜೀವನದ ಕುರಿತು ತೃಪ್ತ ಮನೋಭಾವವನ್ನು ಹೊಂದಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉದ್ದವಾದ, ಆಯತಾಕಾರದ ಉಗುರುಗಳು

ಉದ್ದವಾದ, ಆಯತಾಕಾರದ ಉಗುರುಗಳು

ಅಲ್ಲದೆ ನಿಮ್ಮ ಜೀವನವನ್ನು ಸದಾ ಹೊಸತನದತ್ತ ಕೊಂಡೊಯ್ಯಲು ನೀವು ಶ್ರಮಿಸುತ್ತೀರಿ. ಯಾವುದೇ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಇವರು ನೀಡುತ್ತಾರೆ ಮತ್ತು ಸಣ್ಣ ಸಣ್ಣ ವಿವರಗಳಿಗೂ ಸಹ ಗಮನವನ್ನು ನೀಡುವ ಗುಣ ಇವರಿಗೆ ಇರುತ್ತದೆ.

ಏಕಪ್ರಕಾರವಾಗಿಲ್ಲದ, ಸಣ್ಣ ಉಗುರುಗಳು

ಏಕಪ್ರಕಾರವಾಗಿಲ್ಲದ, ಸಣ್ಣ ಉಗುರುಗಳು

ಈ ರೀತಿಯ ಉಗುರುಗಳನ್ನು ಹೊಂದಿರುವವರು ತೀರ ಸೂಕ್ಷ್ಮ ಮನೋಭಾವವನ್ನು ಹೊಂದಿರುತ್ತಾರೆ ಮತ್ತು ಒಳನೋಟವನ್ನು ಹೊಂದಿರುತ್ತಾರೆ. ಇವರು ಮೂಡಿ ಎಂದರೆ ಸದಾ ಭಾವನಾತ್ಮಕವವಾಗಿ ಕಾಣಿಸಿಕೊಳ್ಳುತ್ತಾರೆ. ಇತರರೊಂದಿಗೆ ತಾಳ್ಮೆಯಿಂದ ವರ್ತಿಸುತ್ತಾರೆ. ಶಾಂತ ಮನೋಭಾವ ಇವರದು. ಆದರೆ ಜನ ನಿಮ್ಮಲ್ಲಿರುವ ಈ ಗುಣವನ್ನು ಇದನ್ನು ಗುರುತಿಸಲು ವಿಫಲರಾಗಿರುತ್ತಾರೆ.

ಸಣ್ಣದಾಗಿರುವ, ವೃತ್ತಾಕಾರದ ಉಗುರುಗಳು

ಸಣ್ಣದಾಗಿರುವ, ವೃತ್ತಾಕಾರದ ಉಗುರುಗಳು

ನೀವು ಸೃಜನಶೀಲತೆಯನ್ನು ಹೊಂದಿರುವ, ಲವಲವಿಕೆಯಿಂದ ಇರುವ ವ್ಯಕ್ತಿಗಳಾಗಿರುತ್ತೀರಿ. ನಿಮ್ಮಲ್ಲಿ ಕೆಲವೊಂದು ರಹಸ್ಯವಾಗಿ ಅಡಗಿರುವ ಪ್ರತಿಭೆಗಳು ಸಹ ಇರುತ್ತವೆ. ಜನ ನಿಮ್ಮ ಜೊತೆ ಇರಲು ಇಷ್ಟಪಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಣ್ಣದಾಗಿರುವ, ವೃತ್ತಾಕಾರದ ಉಗುರುಗಳು

ಸಣ್ಣದಾಗಿರುವ, ವೃತ್ತಾಕಾರದ ಉಗುರುಗಳು

ಅಲ್ಲದೆ ನೀವು ಸಂಪೂರ್ಣವಾಗಿ ಧನಾತ್ಮಕ ಮನೋಭಾವ ಮತ್ತು ಆಲೋಚನೆಗಳನ್ನು ಮಾಡುತ್ತೀರಿ. ಜನ ನಿಮ್ಮನ್ನು ಹಠಮಾರಿಗಳು ಎಂದು ಗುರುತಿಸುತ್ತಾರೆ, ಆದರೆ ನೀವು ಹಠಮಾರಿಗಳು ಅಲ್ಲ.

ತ್ರಿಕೋನಾಕಾರದ ಉಗುರುಗಳು

ತ್ರಿಕೋನಾಕಾರದ ಉಗುರುಗಳು

ನೀವು ಧೈರ್ಯಶಾಲಿಗಳು ಮತ್ತು ಜೀವನದ ಕುರಿತಾಗಿ ಉತ್ಸಾಹವನ್ನು ಹೊಂದಿರುವ ಜನರಾಗಿರುತ್ತೀರಿ. ನೀವು ಜೀವನದಲ್ಲಿ ಏನನ್ನು ಬಯಸುತ್ತೀರಿ ಅದನ್ನು ಪಡೆಯುವ ಛಲವನ್ನು ಹೊಂದಿರುತ್ತೀರಿ. ನೀವು ಪಡುವ ಕಷ್ಟಕ್ಕೆ ತಕ್ಕಂತಹ ಪ್ರತಿಫಲವನ್ನು ಪಡೆಯುತ್ತೀರಿ.

ದೊಡ್ಡದಾದ, ಆಯತಾಕಾರದ ಉಗುರುಗಳು

ದೊಡ್ಡದಾದ, ಆಯತಾಕಾರದ ಉಗುರುಗಳು

ನಿಮಗೆ ಉತ್ತಮವಾದ ನಾಯಕತ್ವ ಗುಣಗಳು ಇರುತ್ತವೆ ಮತ್ತು ನೀವು ಒಬ್ಬ ಮೌಲ್ಯಯುತವಾದ ವ್ಯಕ್ತಿಯಾಗಿರುತ್ತೀರಿ. ಜನರು ನಿಮ್ಮನ್ನು ಗೌರವಿಸುತ್ತಾರೆ ಮತ್ತು ನೀವು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿರುತ್ತೀರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೊಡ್ಡದಾದ, ಆಯತಾಕಾರದ ಉಗುರುಗಳು

ದೊಡ್ಡದಾದ, ಆಯತಾಕಾರದ ಉಗುರುಗಳು

ನೀವು ಒಬ್ಬ ಸ್ಥಿರತೆಯನ್ನು ಹೊಂದಿರುವ ವ್ಯಕ್ತಿಯಾಗಿರುತ್ತೀರಿ, ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಒಳ್ಳೆಯವರ ಸಹವಾಸವನ್ನು ಇಷ್ಟಪಡುತ್ತೀರಿ.

English summary

What The Shape Of Nails Tells About You

It is said that "face is the index of the mind", just like that the shape of your fingers can reveal much about your nature. Having said that, each person is unique in his/her own way, but some your nails can actually predict your character too. Have a look at this article and know what your nails say about your character.
Story first published: Saturday, December 5, 2015, 11:04 [IST]