Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಸುಡು ಬಿಸಿಲು: ಮನೆ ಸಮೀಪ ಈ ವಸ್ತುಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು, ಜಾಗ್ರತೆವಹಿಸಿ
ಈ ಬೇಸಿಗೆ ಕಾಲ ಈ ಹಿಂದಿನ ಬೇಸಿಗೆಕಾಲದಂತಿಲ್ಲ, ಉರಿ ಬಿಸಿಲು, ತುಂಬಾನೇ ಸೆಕೆ, ಇದರಿಂದ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತೊಂದರೆಯಾಗುತ್ತಿದೆ. ಪ್ರಾಣಿಗಳು ನೆರಳು ಇರುವ ಕಡೆ ಬರುತ್ತಿದೆ, ಹಾವುಗಳು ಕೂಡ ನೆರಳು ಇರುವ ಕಡೆ ಬರುತ್ತದೆ ಹಾಗಾಗಿ ಬೇಸಿಗೆಯಲ್ಲಿ ತುಂಬಾನೇ ಜಾಗ್ರತೆವಹಿಸಬೇಕು.
ಅದರಲ್ಲೂ ಮನೆಯ ಸುತ್ತಮುತ್ತ ಹುಲ್ಲು, ಗಿಡಗಳಿದ್ದರೆ ತುಂಬಾ ಜಾಗ್ರತೆವಹಿಸಬೇಕು. ಅದರಲ್ಲೂ ಬೇಸಿಗೆಯಲ್ಲಿ ಈ ಭಾಗಗಳಲ್ಲಿ, ಈ ವಸ್ತುಗಳಲ್ಲಿ ಹಾವು ಬಂದು ಸೇರುವ ಸಾಧ್ಯತೆ ಹೆಚ್ಚು, ಹಾಗಾಗಿ ಜಾಗ್ರತೆವಹಿಸಿ.

- ಕಾರುಗಳಲ್ಲಿ, ಬ್ಯಾಕ್ ಸೀಟ್‌ನಲ್ಲಿ ಹಾವು ಬಗ್ಗೆ ಜಾಗ್ರತೆ, ಇವುಗಳಲ್ಲಿ ಹಾವು ಇದ್ದರೆ ಗೊತ್ತಾಗುವುದಿಲ್ಲ, ಆದ್ದರಿಂದ ನಿಲ್ಲಿಸಿರುವ ಕಾರು ತೆಗೆಯುವ ಮುನ್ನ ತುಂಬಾನೇ ಜಾಗ್ರತೆವಹಿಸಿ.
- ಹೌದು ಬೇಸಿಗೆಯಲ್ಲಿ ಕಾರಿನಡಿಯಲ್ಲಿ, ಸೀಟ್‌ಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಇದೆ.
- ಮಗುವಿನ ಸ್ಟ್ರೋಲರ್ ಅಥವಾ ಹೋಟೆಲ್ ರೂಂಗಗಳಲ್ಲಿ ಹಾವು ಬಂದು ಸೇರಿಕೊಳ್ಳುವ ಸಾಧ್ಯತೆ ಇದೆ.
- ಇನ್ನು ಸ್ವಿಮ್ಮಿಂಗ್, ಈ ಪಕ್ಷಿಗಳು ಮೊಟ್ಟೆ ಇಡುವ ಸ್ಥಳಗಳಲ್ಲಿ ಕಂಡು ಬರುವುದು
- ಟಾಯ್ಲೆಟ್‌ನಲ್ಲಿಯೂ ಸೇರಿಕೊಳ್ಳುವುದು.
- ಮನೆ ಕಿಟಕಿ ಓಪನ್ ಇದ್ದರೆ ಮನೆಯೊಳಗಡೆ ಬರುವ ಸಾಧ್ಯತೆ ಇದೆ.
- ಮನೆಯ ಮುಂದುಗಡೆ ಇಟ್ಟಿರುವ ಹೂವಿನ ಕುಂಡಗಳಲ್ಲಿಯೂ, ಕೆಲವೊಂದು ಹೂವಿನ ಗಿಡಗಳಲ್ಲಿಯೂ ಕಂಡು ಬರುವುದು. ಇನ್ನು ಕೆಲವು ಹಾವುಗಳು ಹಸಿರು ಬಣ್ಣದಲ್ಲಿರುತ್ತದೆ, ಅವುಗಳು ಗಿಡಗಳ ಮಧ್ಯೆ ಇದ್ರೆ ಗೊತ್ತಾಗುವುದೂ ಇಲ್ಲ, ಆದ್ದರಿಂದ ನೋಡಿಕೊಂಡು ಕೆಲಸ ಮಾಡಿ.
ಬೇಸಿಗೆಯಲ್ಲಿ ಹಾವುಗಳು ಮನೆ ಸಮೀಪ ಬರದಂತೆ ಏನು ಮಾಡಬೇಕು?
- ಮನೆ ಮುಂದುಗಡೆ ತುಳಸಿ, ನರ್ವೀಸ ಗಿಡ ಈ ಬಗೆಯ ಗಿಡಗಳಿದ್ದರೆ ಅವುಗಳ ವಾಸನೆ ಹಾವುಗಳಿಗೆ ಇಷ್ಟವಿಲ್ಲ, ಆದ್ದರಿಂದ ಈ ಗಿಡಗಳಿದ್ದರೆ ಹಾವುಗಳು ಮನೆ ಬಳಿಗೆ ಬರುವುದಿಲ್ಲ.
- ಇನ್ನು ಬೆಳ್ಳುಳ್ಳು ತುಂಬಾ ಪರಿಣಾಮಕಾರಿ. ಬೆಳ್ಳುಳ್ಳು ಜಜ್ಜಿ ಅದನ್ನು ನೀರಿನಲ್ಲಿ ಬೆರೆಸಿ ಮನೆಯ ಸುತ್ತ ಮುತ್ತ ಸಿಂಪಡಿಸಿದರೆ ಹಾವುಗಳು ಬರುವುದಿಲ್ಲ. ಬೆಳ್ಳುಳ್ಳಿ ವಾಸನೆ ಹಾವುಗಳಿಗೆ ಇಷ್ಟವಿಲ್ಲ ಹಾಗಾಗಿ ಹಾವುಗಳು ಬರುವುದಿಲ್ಲ.
- ಇನ್ನು ವಿನೆಗರ್, ಬಟ್ಟೆ ಕರ್ಪೂರ, ಪುದೀನಾ ಎಣ್ಣೆ ಇವುಗಳ ವಾಸನೆಗೂ ಹಾವುಗಳು ಬರುವುದಿಲ್ಲ.
ಹೆಲ್ಮೆಟ್, ಶೂ ಧರಿಸಿದಾಗ ಜಾಗ್ರತೆವಹಿಸಿ
ಬೈಕ್ ಅನ್ನು ಹೊರಗಡೆ ನಿಲ್ಲಿಸಿ, ಕೆಲವರು ಹೆಲ್ಮೆಟ್ ಕೂಡ ಬೈಕ್‌ನಲ್ಲಿ ಇಡುತ್ತಾರೆ, ಅತವಾ ಮನೆಯ ಹೊರಗಡೆ ಜಗುಲಿಯಲ್ಲಿ (ಹಳ್ಳಿಗಳ ಕಡೆ) ಇಡುತ್ತಾರೆ, ಶೂವುಗಳನ್ನುಕೂಡ ಹೊರಗಡೆ ಇಡಲಾಗುವುದು. ಇವುಗಳ ಬಗ್ಗೆ ಗಮನಹರಿಸಬೇಕು. ಅವುಗಳ ಒಳಗೆ ಹಾವುಗಳು ಸೇರುವ ಸಾಧ್ಯತೆ ಹೆಚ್ಚು.
ಚಿಕ್ಕ ಮಕ್ಕಳಿರುವ ಕಡೆಗೆ ಜಾಗ್ರತೆವಹಿಸಿ
ಚಿಕ್ಕ ಮಕ್ಕಳು ಓಡಾಡುತ್ತಾರೆ, ಆದ್ದರಿಂದ ಅವರು ಓಡಾಡುವ ಕಡೆ ತುಂಬಾನೇ ಜಾಗ್ರತೆವಹಿಸಿ, ಅಲ್ಲಿ ಹಾವು ಬಂದು ಸೇರುವ ಯಾವುದೇ ವಸ್ತುಗಳನ್ನು ಇಡಬೇಡಿ, ಸುರಕ್ಷತೆ ದೃಷ್ಟಿಯಿಂದ ಬೆಳ್ಳುಳ್ಳಿ ನೀರನ್ನು ಸಿಂಪಡಿಸಿ.
ಮನೆಯಲ್ಲಿ ಹಾವು ಬಂದರೆ ಏನು ಮಾಡಬೇಕು?
ಹಾವು ಮನೆಗೆ ಬಂದಾಗ ಗಾಬರಿಯಾಗುತ್ತೇವೆ. ಕೆಲವರು ಮನೆ ಸಮೀಪ ಹಾವು ಬಂದಾಗ ಅದನ್ನು ಹೊಡೆದು ಕೊಲ್ಲುವುದು ಮಾಡುತ್ತಾರೆ, ಹಾಗೆ ಮಾಡಬೇಡಿ, ಬದಲಿಗೆ ಹಾವು ಹಿಡಿಯುವವರನ್ನು ಕರೆಸಿ ಅವರು ಆ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬರುತ್ತಾರೆ, ಯಾವುದೇ ಹಾವು ಆದರೂ ಕೊಲ್ಲಬೇಡಿ.
ಅದು ವಿಷ ಜಂತು, ಆದರೆ ಅದಾಗಿ ಕಚ್ಚುವುದಿಲ್ಲ, ಅದಕ್ಕೆ ನೋವು ಮಾಡಿದಾಗ ಕಚ್ಚುತ್ತದೆ, ಹಾವು ಹಿಡಿದ ಬಳಿಕ ಅದರ ಬಾಲ ಹಿಡಿದು ಫೋಟೋ ಪೋಸ್ ನೀಡುವುದು, ವೀಡಿಯೋ ಮಾಡುವುದು ಮಾಡಬೇಡಿ, ಬದಲಿಗೆ ಸುರಕ್ಷಿತವಾಗಿ ಚೀಲದಲ್ಲಿ ತುಂಬಿ ಅದನ್ನು ದೂರ ಬಿಟ್ಟು ಬರಬೇಕು.



Click it and Unblock the Notifications
