Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕನ್ನಡದಲ್ಲಿಯೇ UPSC ಪರೀಕ್ಷೆ 644ನೇ ರ‍್ಯಾಂಕ್ ಪಡೆದ ಶಾಂತಪ್ಪ ಕುರುಬರ: ಸಾಧನೆಯ ಛಲವಿದ್ದರೂ ಯಾವುದೂ ಅಡ್ಡಿಯಲ್ಲ
ಕನ್ನಡ ಮಾಧ್ಯಮದಲ್ಲಿ ಓದಿದರೆ ದೊಡ್ಡ-ದೊಡ್ಡ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯುವುದು ಕಷ್ಟ ಎಂದೇನೂ ಇಲ್ಲ, ಪಿಯುಸಿ ಫೇಲ್ ಆದರೂ ಜೀವನದಲ್ಲಿ ಸಾಧನೆ ಮಾಡಬಹುದು ಎಂಬುವುದನ್ನು ಸಾಧಿಸಿ ತೋರಿಸುವುದರ ಮೂಲಕ ಲಕ್ಷಾಂತಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿ ಮಾದರಿಯಾಗಿದ್ದಾರೆ ಶಾಂತಪ್ಪ ಕುರುಬರ.
2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್ ಪಡೆದಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಪರೀಕ್ಷೆ ವ್ಯಕ್ತಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ, ಅವರೇ ಹೇಳುತ್ತಾರೆ ಬಿರುಗಾಳಿಗೆ ಗರಿಬಿಚ್ಚಿ ಹಾರಬೇಕು, ಹಾರಿ ಗೂಡು ಕಟ್ಟಬೇಕು ಎಂಬ ದೃಢ ಸಂಕಲ್ಪ ಇರುವವನಿಗೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುವುದು.

ಪಿಯುಸಿ ಫೇಲ್, ಯುಪಿಎಸ್‌ಸಿಯಲ್ಲಿ ರ‍್ಯಾಂಕ್
ನಮ್ಮಲ್ಲಿ ಒಂದು ಕಲ್ಪನೆಯಿದೆ, ಪಿಯುಸಿಯಲ್ಲಿ ರ‍್ಯಾಂಕ್ ತೆಗೆದವರು ಮಾತ್ರ ಏನಾದರೂ ಸಾಧಿಸಲು ಸಾಧ್ಯ, ಅದೊಂದು ತಪ್ಪು ಕಲ್ಪನೆ ಎಂಬುವುದದಾಗಿ ಹಲವರು ಸಾಧಿಸಿ ತೋರಿಸಿದ್ದಾರೆ ಅವರಲ್ಲೊಬ್ಬರು ಶಾಂತಪ್ಪ ಕುರುಬರ.
ಇವರು ಪಿಯುಸಿಯಲ್ಲಿ ಫೇಲ್ ಆಗಿ ಮತ್ತೆ ಪರೀಕ್ಷೆ ಬರೆದು ಪಾಸಾದವರು. ನಂತರ ಬಿಎಸ್ಸಿಯಲ್ಲಿ ಶೇ. 76ರಷ್ಟು ಅಂಕ ಗಳಿಸಿದ್ದರು, ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಧ್ಯವಾಯ್ತು.
ಸ್ಪರ್ಧಾತ್ಮಕ ಪರೀಕ್ಷೆಗೆ ಸತತ 8 ಬಾರಿ ಬರೆದಿದ್ದರು
ಮರಳಿ ಯತ್ನವ ಮಾಡು ಯಶಸ್ಸು ಸಿಗುವುದು ಎಂಬ ಮಾತು ಸುಳ್ಳಲ್ಲ.. ಇವರು ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವುದು ಒಂದಲ್ಲಾ ಎರಡಲ್ಲ, ಸತತ 8 ಬಾರಿ ಪರೀಕ್ಷೆ ಬರೆದಿದ್ದಾರೆ. 6 ಮತ್ತು 7ನೇ ಬಾರಿ ಪ್ರಯತ್ನ ಮಾಡಿದಾಗ ಪ್ರಿಲಿಮಿನರಿ ಕ್ಲಿಯರ್ ಮಾಡಿದ್ದರು,ನಮುಖ್ಯ ಪರೀಕ್ಷೆಯಲ್ಲಿಯೂ ಪಾಸಾಗಿ ಸಂದರ್ಶನಕ್ಕೆ ಆಯ್ಕೆ ಆಗಿದ್ದರು. ಈಗ 8ನೇ ಬಾರಿ ಪರೀಕ್ಷೆ ಬರೆದಾಗ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದವರು
ಇವರು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗಿರಲಿಲ್ಲ, ಪಿಯುಸಿ ವಿಜ್ಞಾನ ವಿಷಯವನ್ನು ಕೂಡ ಕನ್ನಡದಲ್ಲಿಯೇ ಬರೆದವರು, ಯುಪಿಎಸ್‌ಸಿ ಪರೀಕ್ಷೆ ಕೂಡ ಕನ್ನಡದಲ್ಲಿಯೇ ಬರೆದು , ಸಂದರ್ಶನ ಕೂಡ ಕನ್ನಡದಲ್ಲಿಯೇ ಮುಗಿಸಿದ್ದಾರೆ. ಆದ್ದರಿಂದ ಕನ್ನಡ ಮಾಧ್ಯಮದಲ್ಲಿ ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸುವವರಿಗೆ ಇವರು ಸ್ಪೂರ್ತಿಯಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ ಬಹುತೇಕರಿಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಕೀಳೆರಿಮೆ ಇರುತ್ತೆ, ಇದರಿಂದಾಗಿ ಇಂಥ ಪರೀಕ್ಷೆ ಬರೆಯುವುದಕ್ಕೆ ಹೋಗುವುದಿಲ್ಲ, ಆದರೆ ಭಯಪಡಬೇಡಿ. ಸ್ಮರ್ಧಾತ್ಮಕ ಪರೀಕ್ಷೆ ಬರೆಯಲು ಬಯಸುವುದಾದರೆ ಕನ್ನಡದಲ್ಲಿ ಬರೆದು ಕೂಡ ಸಾಧನೆ ಮಾಡಬಹುದು ಎಂಬ ಶಾಂತಪ್ಪ ಕುರುಬರ ತೋರಿಸಿಕೊಟ್ಟಿದ್ದಾರೆ.
ಸಮಾಜ ಸೇವೆ ಮೂಲಕ ಗಮನ ಸೆಳೆದವರು
ಇವರು ಪೊಲೀಸ್ ಆಗಿದ್ದಾಗ ಸಮಾಜ ಸೇವೆಯ ಮೂಲಕ ಗಮನ ಸೆಳೆದಿದ್ದರು. ಇವರು ಸಾರ್ವಜನಿಕ ಶೌಚಾಲಯದ ಸ್ಥಿತಿ ಹಾಗೂ ಅದರಿಂದ ಮಹಿಳೆಯರಿಗೆ ಆಗುತ್ತಿರುವ ತೊಂದರೆ ನೋಡಿ ಸಾರ್ವಜನಿಕ ಶಾಚಗಹ ಅಭಿಯಾನ ಮಾಡಿದರು. ತಾವೇ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಕೊಟ್ಟಿದ್ದು ಇದರಿಂದ ಮಹಿಳೆಯರಿಗೆ ತುಂಬಾನೇ ಅನುಕೂಲಕರವಾಗಿದೆ.
ಇವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ 10ನೇ ತರಗತಿ ಮಕ್ಕಳಿಗೆ ಉಚಿತ ಟ್ಯೂಷನ್ ನೀಡಿದ್ದರು. ಸಮಾಜಕ್ಕೆ ತುಂಬಾನೇ ಸೇವೆ ಮಾಡುವ ತುಡಿತ ಇವರಲ್ಲಿದೆ, ಹಾಗಾಗಿ ದೊಡ್ಡ ಹುದ್ದೆ ಸಿಕ್ಕ ಬಳಿಕ ಇವರೂ ಸಮಾಜಕ್ಕೆ ಬಹು ದೊಡ್ಡ ಕೊಡಿಗೆಯನ್ನೇ ನೀಡಬಹುದು.
ಈಗ ಅವರ ಪಡೆದ ರ‍್ಯಾಂಕ್‌ನಿಂದ ಇಂಡಿಯನ್ ರೆವೆನ್ಯೂ ಸರ್ವೀಸ್ ಅಥವಾ ಐಪಿಎಸ್ ಅಧಿಕಾರಿಯಾಗಬಹುದು. ಸಾಧನೆಯ ಮನಸ್ಸು ಇದ್ದರೆ ಯಾವುದೂ ಅಡ್ಡಿಯಲ್ಲ ಅಲ್ವಾ?



Click it and Unblock the Notifications