Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
ಪ್ರತಿವರ್ಷ ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುವುದು. ಭೂಮಿ ರಕ್ಷಣೆಯ ಮಹತ್ವ ತಿಳಿಸಲು ಈ ದಿನವನ್ನು ಆಚರಿಸಲಾಗುವುದು. ಈಗಾಗಲೇ ಭೂಮಿಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ಪ್ರಕೃತಿ ವಿಕೋಪಗಳ ಸಂಭವಿಸುತ್ತಿದೆ.
ಮರುಭೂಮಿಯಾಗಿದ್ದ ದುಬೈನಲ್ಲಿ ಪ್ರವಾಗ ಉಕ್ಕಿ ಹರಿದಿದೆ, ಭಾರತದ ಹಲವು ಕಡೆ ಬರಗಾಲ ಉಂಟಾಗಿದೆ, ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಈ ಭೂಮಿಯನ್ನು ಮನುಷ್ಯ ಎಷ್ಟು ಸ್ವಾರ್ಥಿಯಾಗಿ ಬಳಸುತ್ತಾನೋ ಪ್ರಕೃತಿ ಅಷ್ಟೇ ಪ್ರಮಾಣದಲ್ಲಿ ನಷ್ಟವನ್ನು ಉಂಟು ಮಾಡುತ್ತದೆ, ಆದ್ದರಿಂದ ಪ್ರಕೃತಿಯನ್ನು ಕಾಪಾಡಿದರೆ ಮಾತ್ರ ಸಂತೋಷ, ಸಮೃದ್ಧಿಯ ಬದುಕು ನಡೆಸಲು ಸಾಧ್ಯ.

ವಿಶ್ವ ಭೂಮಿ ದಿನದ ಇತಿಹಾಸ
ವಿಶ್ವ ಭೂಮಿ ದಿನದ ಇತಿಹಾಸ ನೋಡುವುದಾದರೆ ವಿಶ್ವ ಭೂ ದಿನವನ್ನು ಮೊದಲ ಬಾರಿಗೆ1970 , ಏಪ್ರಿಲ್ 22ರಂದು ಆಚರಿಸಿದರು. 1969 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ UNSEO ಸಮ್ಮೇಳನದಲ್ಲಿ ಶಾಂತಿ ಕಾರ್ಯಕರ್ತ ಜಾನ್ ಮೆಕ್ ಕಾನ್ನೆಲ್ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯ ಬಗ್ಗೆ ಪ್ರಸ್ತಾಪಿಸಿದರು. ವಿಶ್ವ ಭೂ ದಿನವನ್ನು ಮೊದಲು 1970 ಮಾರ್ಚ್ 21ರಂದು ನಡೆಸಲು ಪ್ರಸ್ತಾಪಿಸಲಾಗಿತ್ತು.
ನಂತರ, ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಗೇಲಾರ್ಡ್ ನೆಲ್ಸನ್ ಏಪ್ರಿಲ್ 22,1970 ರಂದು ರಾಷ್ಟ್ರವ್ಯಾಪಿ ಪರಿಸರ ಕಾಳಜಿ ನಡೆಸಲು ಅಭಿಮಾನ ನಡೆಸಲಾಯ್ತು, ಈ ದಿನವನ್ನು 'ಅರ್ಥ್ ಡೇ' ಅಂದರೆ ಭೂಮಿ ದಿನವಂದು ಕರೆಯಿತು, ಅಲ್ಲಿಂದ ವಿಶ್ ಭೂಮಿ ದಿನವನ್ನು ಆಚರಿಸಲಾಗುವುದು.
ಮನುಷ್ಯ ಭೂಮಿಗೆ ತೊಂದರೆ ನೀಡಬಾರದು
ಮನುಷ ಭೂಮಿಗೆ ತೊಂದರೆ ಕೊಟ್ಟರೆ ಅದರ ಕೆಟ್ಟ ಫಲವನ್ನೂ ಅವನು ಅನುಭವಿಸಬೇಕಾಗುತ್ತದೆ, ಆದ್ದರಿಮದ ಭೂಮಿಗೆ ಹಾನಿಯಾಗುವ ಕಾರ್ಯಗಳನ್ನು ಮಾಡಬಾರದು. ನಾವು ನಮ್ಮ ಮುಂದಿನ ಪೀಳಿಗೆಗೆ ಮಾಡುವ ಅತಿ ದೊಡ್ಡ ಆಸ್ತಿಯೆಂದರೆ ಈ ಭೂಮಿಯ ರಕ್ಷಣೆ. ಆಸ್ತಿ, ಅಂತಸ್ತು ಏನೇ ಮಾಡಿದರೂ ಈ ಭೂಮಿ ಮುನಿಸಿದರೆ ಇರುತ್ತದೆಯೇ? ಭೂಕಂಪನದಿಂದ ಕಟ್ಟಡಗಳ ನೆಲ ಸಮವಾಗಿದೆ, ಪ್ರವಾಹದಿಂದಾಗಿ ಆಸ್ತಿಗಳು ಕೊಚ್ಚಿ ಹೋಗಿದೆ, ಆದ್ದರಿಂದ ಪ್ರಕೃತಿ ಮುನಿಸಿದರೆ ಯಾವ ಆಸ್ತಿಯೂ ಉಳಿಯಲ್ಲ.
ಪ್ರಕೃತಿಯನ್ನ ಹೇಗೆ ರಕ್ಷಣೆ ಮಾಡಬೇಕು
- ಪರಿಸರಕ್ಕೆ ಹತ್ತಿರವಾಗಬೇಕು, ಅಂದರೆ ಪರಿಸರವನ್ನು ಪ್ರೀತಿಸಬೇಕು.
- ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.
- ಸಾವಯವ ವಸ್ತುಗಳನ್ನು ಬಳಸಬೇಕು.
- ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಬ್ಯಾಗ್ ಬಳಸಬಾರದು
- . ಓಡಾಡಲು ಬೈಕ್, ಕಾರು ಬದಲಿಗೆ ಸೈಕಲ್ ಹೆಚ್ಚು ಬಳಸಿದರೆ ವಾಯು ಮಾಲಿನ್ಯ ಕಡಿಮೆಯಾಗುವುದು.
ಪ್ರತಿಯೊಂದು ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮರ ಗಿಡಗಳನ್ನು ಬೆಳೆಸಬೇಕು,ಇದು ನಾವು ನಮ್ಮ ಮುಂದಿನ ಪೀಳಿಗೆಗೆ ನೀಡುವ ಅತಿ ಕೊಡ್ಡ ಕೊಡುಗೆ
ಭೂಮಿ ಕುರಿತ ಕೋಟ್‌ಗಳು
ಈ ಭೂಮಿಯಿದ್ದರೆ ಮಾತ್ರ ನಾವಿರುವುದು, ನಮಗಿರುವುದು ಒಂದೇ ಭೂಮಿ ಜೋಪಾನ ಮಾಡೋಣ
ಭೂಮಿಯಲ್ಲಿ ಗಿಡ ನೆಟ್ಟರೆ ತಂಪು ನೀಡುತ್ತೆ, ಮಳೆ ಬರುತ್ತೆ, ಅದೇ ಬರ ಕಡಿದರೆ ಮರುಭೂಮಿಯಾಗುವುದು ಜೋಕೆ!
ಮನುಷ್ಯ ಪ್ರಕೃತಿಯನ್ನು ಹೇಗೆ ನೋಡಿಕೊಳ್ಖುತ್ತಾನೆ ಅದರಂತೆ ಪ್ರತಿಫಲ ಭೂದೆವಿ ನೀಡುತ್ತಾಳೆ
ಪರಿಸರ ಖುಷಿಯಾಗಿದ್ದರೆ ಮನುಷ್ಯ ಖುಷಿಯಾಗಿರುತ್ತಾನೆ, ನಮ್ಮ ದಃಖವೆಲ್ಲಾ ಮರೆಯುತ್ತಾನೆ
ಪ್ರತಿದಿನವೂ ಭೂಮಿ ದಿನ , ಹವಾಮಾನ ಬದಲಾವಣೆ ತಡೆಗಟ್ಟಲೂ ನಾವು ಪ್ರಯತ್ನಿಸುತ್ತಿದ್ದರೆ ಮುಂದಿನ ಭವಿಷ್ಯ ಭಯಾನಕವಾಗಿರುತ್ತೆ
ಹವಾಮಾನ ಬದಲಾದಾಗ ಏನಾಗುತ್ತದೆ ಎಂಬುವುದನ್ನು ನೋಡುತ್ತಿದ್ದೇವೆ, ಇನ್ನಾದರೂ ಎಚ್ಚೆತ್ತುಕೊಳ್ಳೋಣ
ಭೂಮಿ ಎಲ್ಲಾ ಜೀವಿಗಳಿಗೆ ಆಶ್ರಯ ನೀಡುತ್ತೆ, ಮನುಷ್ಯ ಬಿಟ್ಟರೆ ಬೇರೆ ಯಾವ ಪ್ರಾಣಿಯೂ ಈ ಭೂಮಿಗೆ ಹಾನಿ ಮಾಡುತ್ತಿಲ್ಲ, ನಾವು ಬದುಕಬೇಕು, ಆದರೆ ಭೂಮಿಯಿದ್ದರೆ ಮಾತ್ರ ನಾವು ಬದುಕುವುದು



Click it and Unblock the Notifications




