Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
ಆಕಾಶದಲ್ಲಿ ಯಾವಾಗಲು ಅಚ್ಚರಿಯ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಗ್ರಹಣಗಳು, ಉಲ್ಕೆಗಳ ಹಾರಾಟ, ವಿಚಿತ್ರ ವಸ್ತುಗಳು ಕಾಣಿಸಿಕೊಳ್ಳುವುದು, ವಿಚಿತ್ರ ಕಾಮನಬಿಲ್ಲು, ಸೂರ್ಯನಿಗೆ ಕೊಡೆ ಹಿಡಿದ ರೀತಿಯ ಆಕೃತಿಗಳು, ಈಗ ಈ ಸಾಲಿಗೆ ಶೂನ್ಯ ನೆರಳು ಸಹ ಸೇರಿಕೊಂಡಿದೆ.
ಈ ವಿದ್ಯಮಾನ ಆಕಾಶದಲ್ಲಿಯೇ ನಡೆದರು ಅದರ ಪರಿಣಾಮ ಭೂಮಿ ಮೇಲೆ ಬೀಳುತ್ತದೆ. ಇಂದು ಬೆಂಗಳೂರು ಈ ಶೂನ್ಯ ನೆರಳಿನ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಹೌದು ಬೆಂಗಳೂರಿನಲ್ಲಿ ಸುಮಾರು 12:17 ರಿಂದ 12:24ರ ವರೆಗೆ 6 ನಿಮಿಷಗಳ ಕಾಲ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸುತ್ತಿದೆ.

ಈ ಶೂನ್ಯ ನೆರಳಿನ ವೇಳೆ ನಿಮ್ಮ ನೆರಳು ಸಂಪೂರ್ಣವಾಗಿ ಮಾಯವಾಗುತ್ತದೆ. ನೀವು ಬಿಸಿಲಿನಲ್ಲಿ ಹೊರಬಂದರೆ ನಿಮ್ಮ ನೆರಳು ಭೂಮಿಯ ಮೇಲೆ ಬೀಳದೆ ಇರುವ ವಿದ್ಯಮಾನ ಇದಾಗಿದೆ. ಇದೊಂದು ಅಚ್ಚರಿಯ ವಿದ್ಯಮಾನವಾಗಿದ್ದು, ಕೆಲವು ಬಾರಿ ಮಾತ್ರ ಸಂಭವಿಸುತ್ತದೆ. ಅಂದರೆ ಬಹುತೇಕ ವರ್ಷದಲ್ಲಿ ಎರಡು ಬಾರಿ ಈ ಶೂನ್ಯ ನೆರಳಿನ ವಿದ್ಯಮಾನ ಸಂಭವಿಸಲಿದೆ. ಸೂರ್ಯನು ನೇರವಾಗಿ ತಲೆಯೆ ಮೇಲೆ ಬಂದಾಗ ಈ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗುತ್ತೇವೆ.
ಸೂರ್ಯನ ಕೋನವು ಭೂಮಿಯ ಮೇಲ್ಮೈಗೆ ಬಹುತೇಕ ಲಂಬವಾಗಿರುವಾಗ ಸಮಭಾಜಕ ವೃತ್ತದ ಪ್ರದೇಶದಲ್ಲಿರುವ ಎಲ್ಲಾ ಪ್ರದೇಶಗಳು ಶೂನ್ಯ ನೆರಳಿನ ವಿದ್ಯಮಾನಕ್ಕೆ ಸಾಕ್ಷಿಯಾಗಲಿವೆ. ಇಂದು (ಏಪ್ರಿಲ್ 24) ಬೆಂಗಳೂರು ಸೇರಿ ಸಮೀಪದ ಹಲವು ನಗರಗಳಲ್ಲಿ ಶೂನ್ಯ ನೆರಳು ಕಾಣಿಸಲಿದೆ.
ಶೂನ್ಯ ನೆರಳು ದಿನ ಎಂದರೇನು?
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ (ASI) ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ಸಮೀಪ ಇರುವ ಪ್ರದೇಶಗಲ್ಲಿ ವರ್ಷಕ್ಕೆ ಎರಡು ಬಾರಿ ಈ ಶೂನ್ಯ ನೆರಳು ವಿದ್ಯಮಾನ ಘಟಿಸಲಿದೆ. ಈ ಸಮಯದಲ್ಲಿ ಸೂರ್ಯ ನೇರವಾಗಿ ತಲೆಯ ಮೇಲಿರುತ್ತಾನೆ. ಹೀಗಾದಾಗ ನಮ್ಮ ನೆರಳು ನೇರವಾಗಿ ಬೀಳಬೇಕಾಗುತ್ತದೆ. ಹೀಗೆ ಬಿದ್ದಾಗ ಭೂಮಿ ಮೇಲೆ ನೆರಳು ಮೂಡುವುದಿಲ್ಲ. ಈ ವೇಳೆ ನೆರಳು ಮಾಯವಾಗಿರುವಂತಹ ಅನುಭವವಾಗುತ್ತದೆ. ಇಂದು ಉತ್ತರಾಯಣದಲ್ಲಿ ಸೂರ್ಯ ಇರುವ ಕಾರಣದಿಂದ ಉಂಟಾಗುತ್ತಿದೆ. ಮುಂದೆ ಆಗಸ್ಟ್ ತಿಂಗಳಲ್ಲಿ ಸೂರ್ಯ ದಕ್ಷಿಣಾಯಣದಲ್ಲಿರುವಾಗಲು ಇದೇ ವಿದ್ಯಮಾನ ಮತ್ತೊಮ್ಮೆ ಎದುರಾಗಲಿದೆ.
ಕಳೆದ ವರ್ಷ ಅಂದರೆ ಸರಿಯಾಗಿ ಏಪ್ರಿಲ್ 25, 2023ರಂದು ಹಾಗೂ ಅದೇ ವರ್ಷ ಆಗಸ್ಟ್ 18ರಂದು ಸಹ ಈ ಘಟನೆಗೆ ಬೆಂಗಳೂರು ಸಾಕ್ಷಿಯಾಗಿತ್ತು. ಏಪ್ರಿಲ್ 25ಕ್ಕೆ ಬೆಂಗಳೂರಿನಲ್ಲಿ ಶೂನ್ಯ ನೆರಳಿನ ಅಪರೂಪದ ಘಟನೆ ನಡೆದಿತ್ತು. ಇದಾದ ಬಳಿಕ ಆಗಸ್ಟ್ 18ರಂದು ಸಹ ಶೂನ್ಯ ನೆರಳು ದಿನ ನಡೆದಿತ್ತು.
ಶೂನ್ಯ ನೆರಳು ವಿದ್ಯಮಾನ ವೀಕ್ಷಿಸಲು ಯಾವ ಉಪಕರಣವೂ ಬೇಕಿಲ್ಲ
ಇನ್ನು ಈ ವಿಶೇಷ ವಿದ್ಯಮಾನ ವೀಕ್ಷಿಸಲು ಯಾವ ಉಪಕರಣಗಳ ಅಗತ್ಯವಿರುವುದಿಲ್ಲ. ಗ್ರಹಣ, ಗ್ರಹ, ಉಲ್ಕೆ ನೋಡಲು ಕೆಲವು ಉಪಕರಣಗಳ ಅಗತ್ಯವಿದೆ. ಆದರೆ ಈ ಶೂನ್ಯ ನೆರಳಿನ ವಿದ್ಯಮಾನ ನಮ್ಮ ಕಣ್ಣ ಮುಂದೆಯೇ ಜರುಗುತ್ತದೆ. ಜೊತೆಗೆ ಇದರಿಂದ ಯಾವ ಹಾನಿಯಾಗಲಿದೆ ಅಥವಾ ಯಾವುದೇ ಕೆಟ್ಟದ್ದಾಗಲಿ ಆಗುವುದಿಲ್ಲ.



Click it and Unblock the Notifications
