ದುಬೈ ಪ್ರವಾಹದ ವೈರಲ್‌ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ

ದುಬೈ ಅತ್ಯಂತ ಭೀಕರ ಮಳೆಗೆ ಸಾಕ್ಷಿಯಾಗಿದೆ, ಆ ಗಾಳಿಯ ರಭಸ, ಧೋ ಎಂದು ಸುರಿಯುತ್ತಿರುವ ಮಳೆಯ ದೃಶ್ಯಗಳನ್ನು ನೋಡುವಾಗ ಭಯ ಹುಟ್ಟುತ್ತೆ. ಪ್ರಕೃತಿ ಹೀಗೆ ಮುನಿದರೆ ಬದುಕುವುದು ಹೇಗೆ? ಎಂಬ ಪ್ರಶ್ನೆ ಮೂಡುತ್ತೆ. ಮಳೆಯೇ ಬೀಳುವುದಿಲ್ಲ ಎಂದು ಹೇಳುತ್ತಿದ್ದ ದುಬೈ ರಾಷ್ಟ್ರ ಪ್ರವಾಹದಿಂದ ತತ್ತರಿಸಿದೆ. ದುಬೈ ಶ್ರೀಮಂತ ರಾಷ್ಟ್ರ, ಹಲವು ದೇಶಗಳಿಂದ ಉದ್ಯೋಗಕ್ಕಾಗಿ ಇಲ್ಲಿಗೆ ಬರುತ್ತಾರೆ.

ಈ ರಾಷ್ಟ್ರಕ್ಕೆ ಹೋಗುವವರಲ್ಲಿ ಭಾರತೀಯರು ಹೆಚ್ಚು. ದುಬೈಗೆ ಹೋದರೆ ಜೀವನದಲ್ಲಿ ಚೆನ್ನಾಗಿ ಹಣಗಳಿಸಿ ಬದುಕಿನಲ್ಲಿ ಆರ್ಥಿಕ ನೆಲೆ ಕಂಡುಕೊಳ್ಳಬಹುದೆಂದು ಆ ಮರುಭೂಮಿಗೆ ಹೋಗಿ ಕಷ್ಟಪಡುತ್ತಾರೆ. ಆದರೆ ಈಗ ಪ್ರಕೃತಿಯ ಮುಂದೆ ಆ ಶ್ರೀಮಂತ ರಾಷ್ಟ್ರ ಸೋತು ಹೋಗಿದೆ.

Flood In Dubai

ಕಳೆದ 75 ವರ್ಷದಲ್ಲಿ ದುಬೈನಲ್ಲಿ ಈ ಪಾಟಿ ಮಳೆ ಸುರಿದಿರಲಿಲ್ಲ, ಒಂದೂವರೆ ವರ್ಷದಲ್ಲಿ ಸುರಿಯುವ ಮಳೆಯ ಪ್ರಮಾಣ ಒಂದೇ ದಿನದಲ್ಲಿ ಸುರಿದರೆ ಪರಿಸ್ಥಿತಿ ಹೇಗಾಗಬೇಡ... ದುಬೈ ಪ್ರವಾಹ ಹಲವು ವೀಡಿಯೋಗಳು ವೈರಲ್‌ ಆಗುತ್ತಿದೆ.

ಐಷಾರಾಮಿ ಕಾರು ಮುಳುಗಿರುವುದು, ಪ್ರಾಣಿಗಳು ಜೀವ ಉಳಿಸಲು ಕಷ್ಟಪಟ್ಟಿದ್ದು, ಪ್ರವಾಹ ನೀರಿನಲ್ಲಿ ಬೋಟಿಂಗ್‌ ಮಾಡಿ ಖುಷಿ ಪಡುತ್ತಿರುವ ಜನರು, ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಬರಿಗಾಲಿನಲ್ಲಿ ಹೋಗುವವರು ಹೀಗೆ ಹಿಂದೆಂದೂ ಕಂಡಿರದ ದೃಶ್ಯಗಳು ದುಬೈಯಲ್ಲಿ ಕಂಡು ಬಂದಿದೆ.

ದುಬೈಯೆಂದರೆ ನಮ್ಮ ಕಣ್ಣಿಗೆ ಕಾಣುತ್ತಿದ್ದದ್ದು ಐಷಾರಾಮಿ ಹೋಟೆಲ್‌, ಮಾಲ್‌ಗಳು, ಲಕ್ಷುರಿ ಲೈಫ್‌ಸ್ಟೈಲ್‌... ಇಲ್ಲಿಯ ಸೆಲೆಬ್ರಿಟಿಗಳು ಶಾಪಿಂಗ್‌ಗಾಗಿ ದುಬೈಗೆ ಹೋಗುತ್ತಿದ್ದರು, ಒಂದೇ ರಾತ್ರಿಯಲ್ಲಿ ಪರಿಸ್ಥಿತಿಯೇ ಬದಲಾಗಿದೆ..... ಕೋಟಿ... ಕೋಟಿ ನಷ್ಟವಾಗಿದೆ. ದುಬಾರಿ ಕಾರುಗಳು ಕೆಟ್ಟು ನಿಂತಿದೆ... ದುಬೈ ಪ್ರವಾಹದ ಕೆಲ ವೀಡಿಯೋ ಗಳು...

ನೀರಿನಲ್ಲಿ ಮುಳುಗಿದ ರೋಲ್ ರಾಯ್ಸ್

ಜಗತ್ತಿನ ದುಬಾರಿಗಳಲ್ಲಿ ಒಂದಾದ ರೋಲ್‌ ರಾಯ್ಸ್ ನೀರಿನಲ್ಲಿ ಮುಳುಗಿರುವ ದೃಶ್ಯ ವೈರಲ್‌ ಆಗುತ್ತಿದೆ.... ರೋಲ್‌ ರಾಯ್ಸ್ ಕಾರಿನ ಬೆಲೆಯೇ 6 ಕೋಟಿಯಿಂದ ಪ್ರಾರಂಭವಾಗುತ್ತದೆ... ಅಷ್ಟೊಂದು ದುಬಾರಿ ಕಾರು ನೀರಿನಲ್ಲಿ ಮುಳುಗಡೆಯಾಗಿದೆ.
ಈ ವೀಡಿಯೋ ನೋಡಿದವರು ದೇವರ ಜೊತೆ ಮನುಷ್ಯನ ಆಟ ನಡೆಯಲ್ಲ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಜೀವ ಉಳಿಸಲು ಬೆಕ್ಕಿನ ಪರದಾಟ

ಮನುಷ್ಯರೇ ಒದ್ದಾಡುವಾಗ ಪ್ರಾಣಿಗಳತ್ತ ಗಮನ ನೀಡುವವರು ಯಾರು ಅಲ್ವಾ ಬೆಕ್ಕೊಂದು ತನ್ನ ಪ್ರಾಣ ಉಳಿಸಿಕೊಳ್ಳಲು ಕಾರಿನ ಡೋರ್‌ ಹ್ಯಾಂಡಲ್ ಹಿಡಿದು ನಿಂತಿರುವ ವೀಡಿಯೋ ಕೂಡ ವೈರಲ್ ಆಗುತ್ತಿದೆ.

ನೀರು ತುಂಬಿದ ದುಬೈ ಏರ್‌ಪೋರ್ಟ್‌ ಲಂಡನ್, ಅಮೆರಿಕ ಈ ದೇಶಗಳಿಗೆ ಹೋಗುವವರು ದುಬೈ ಮೂಲಕ ಹೋಗುತ್ತಾರೆ, ಮಳೆ ನೀರು ಅಲ್ಲಿಯ ಏರ್‌ಪೋರ್ಟ್‌ಗೆ ನುಗ್ಗಿ ಏರೋಪ್ಲೇನ್ ಹಾರಾಟ ಸಾಧ್ಯವಾಗಲಿಲ್ಲ.

ನೀರಿನಲ್ಲಿ ಮುಳುಗಿದ ನಗರ

ಈ ದೃಶ್ಯ ನೋಡಿ ಇಡೀ ನಗರದಲ್ಲಿ ಹೇಗೆ ನೀರು ತುಂಬಿಕೊಂಡಿದೆ, ರಸ್ತೆಯೆಲ್ಲಾ ನೀರು, ನೀರಿನಲ್ಲಿ ನಿಂತಿರುವ ರಾಶಿ ಕಾರುಗಳು, ಕೆಳ ಹಂತಸ್ತಿನ ಮನೆಗಳಿಗೆಲ್ಲಾ ನೀರು ತುಂಬಿ ಕೊಂಡಿದೆ.

ಸಮುದ್ರದಲ್ಲಿ ವಿಮಾನ ನಿಂತಂತೆ ಇದೆ

ಹಡಗು ಸಮುದ್ರದಲ್ಲಿ ನಿಂತಂತೆ ವಿಮಾನ ಕಾಣುತ್ತಿದೆ, ನೀರಿನ ನಡುವೆ ಇರುವ ಏರೋಪ್ಲೇನ್‌ ಸ್ಥಿತಿ ನೋಡಿ ಹೇಗಿದೆ.

ದೇವರು ಮುನಿದರೆ ಹುಲು ಮಾನವ ಏನು ಮಾಡಲು ಸಾಧ್ಯ ಅಲ್ವಾ?

English summary

Flood In Dubai: Dubai Rain Viral Videos In Kannada

Flood In Dubai: Dubai rain flood viral videos, read on...
Story first published: Thursday, April 18, 2024, 14:00 [IST]
X
Desktop Bottom Promotion