Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಪ್ರತಿಯೊಂದು ಆಹಾರವು ಕಲಬೆರಕೆ ಆಗಿಯುತ್ತದೆ, ಇಲ್ಲವೆ ಕೆಮಿಕಲ್‌ಯುಕ್ತವಾಗಿರುತ್ತದೆ. ಸಾವಯವವಾಗಿ ಬೆಳೆದು ಮಾರುಕಟ್ಟೆಗೆ ತಂದು ಮಾರಾಟ ಮಾಡುವವರು ಬೆರಳೆಣಿಕೆ ಜನರಷ್ಟೇ ಸಿಗುತ್ತಾರೆ. ಅದರಲ್ಲೂ ನಾವು ಸೇವಿಸುವ ತರಕಾರಗಳ ಕುರಿತು ಕೇಳೋದೆ ಬೇಡ.
ತರಕಾರಿಗಳ ಬೆಳೆಯುವಾಗಲೂ ಹತ್ತಾರು ರೀತಿಯ ರಾಸಾಯನಿಕ ಬಳಸುತ್ತಾರೆ. ಬೆಳೆದ ಮೇಲೆ ಅದನ್ನು ಕೊಯ್ಲು ಮಾಡುವಾಗಲು ಕೆಮಿಕಲ್ ಬಳಸುತ್ತಾರೆ. ಜೊತೆಗೆ ಮಾರುಕಟ್ಟೆಗೆ ತಂದಾಗಲು ಅದನ್ನು ಕೆಮಿಕಲ್ ಬಳಸಿಯೇ ಹೆಚ್ಚು ದಿನ ಹಾಳಾಗದಂತೆ ಇಡುತ್ತಾರೆ. ಇದೇ ತರಕಾರಿಯನ್ನು ನಾವು ಖರೀದಿಸಿ ತಂದು ಸೇವಿಸಿ ಕಾಯಿಲೆಗೆ ಬೀಳುತ್ತಿದ್ದೇವೆ.

ಹೌದು ಇತ್ತೀಚಿಗೆ ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ತೂಕ ಹೆಚ್ಚಾಗುವುದು, ಹೃದಯ ಸಂಬಂಧಿ ಕಾಯಿಲೆ, ಹೃದಯಾಘಾತ, ಕಿಡ್ನಿ ವೈಫಲ್ಯಗಳು ಸೇರಿದಂತೆ ಹತ್ತಾರು ಸಮಸ್ಯೆಯನ್ನು ಯುವ ಜನತೆ ಎದುರಿಸುತ್ತಿವೆ. ಇದಕ್ಕೆಲ್ಲ ಪರೋಕ್ಷವಾಗಿ ನಮ್ಮ ದೈನಂದಿನ ಜೀವನ ಕ್ರಮವೂ ಕಾರಣವಾಗಿರುತ್ತದೆ. ನಾವು ಸೇವಿಸುವ ಆಹಾರದಲ್ಲಿಯೇ ಕೆಮಿಕಲ್‌ಗಳು ನಮ್ಮ ದೇಹ ಸೇರುತ್ತಿವೆ.
ನೀವು ಯಾವುದೇ ತರಕಾರಿ, ಹಣ್ಣು ಅಥವಾ ತಿಂಡಿ, ತಿನಿಸು ಖರೀದಿಸಿದರು ಅದರಲ್ಲಿ ರಾಸಾಯನಿಕದ ಅಂಶವನ್ನು ನಾವು ನೋಡಬಹುದು. ಆದರೆ ಕೆಮಿಕಲ್ ಹಾಕದೆಯೇ ಬೆಳೆಯುವ ಯಾವುದೇ ಪದಾರ್ಥಗಳು ಕಡಿಮೆ ದರಕ್ಕೆ ಸಿಗುವುದೂ ಇಲ್ಲ.
ಇದೆಲ್ಲದರ ನಡುವೆ ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಎಲೆಕೋಸಿಗೆ ವ್ಯಕ್ತಿಯಿಬ್ಬ ಕೆಮಿಕಲ್ ಬೆರೆಸುತ್ತಿರುವುದು ಕಂಡುಬಂದಿದೆ. ಎಲೆಕೋಸು ಕೊಯ್ಲು ಮಾಡಿ ವಾಹನದಲ್ಲಿ ಮಾರುಕಟ್ಟೆಗೆ ಸಾಗಿಸುವ ಮುನ್ನ ಆತ ಕೆಮಿಕಲ್ ಸಿಂಪಡಿಸುತ್ತಿರುವುದನ್ನು ನಾವು ನೋಡಬಹುದು.
ಆತ ಬಿಳಿ ಬಣ್ಣದ ಪೌಡರ್‌ನಂತೆ ಕಾಣುತ್ತಿರುವ ಕೆಮಿಕಲ್ ಅನ್ನು ಎಲೆಕೋಸುಗಳಿಗೆ ಹಾಕುತ್ತಿರುವುದ ನೋಡಬಹುದು. ಆದರೆ ಆತ ಯಾವ ರಾಸಾಯನಿಕ ಬೆರೆಸಿ ಈ ಪೌಡರ್ ತಯಾರಿಸಿದ್ದಾನೆ ಎಂಬುದು ಪತ್ತೆಯಾಗಿಲ್ಲ. ಆದರೆ ಎಲೆ ಕೋಸುಗಳು ಬಹುಬೇಗ ಹಾಳಾಗದಂತೆ ತಡೆಯಲು ಆತ ಈ ರೀತಿ ಮಾಡುತ್ತಿದ್ದಾನೆ.
ಅಂತಹ ತರಕಾರಿಗಳು ಹೃದಯಾಘಾತ, ಚರ್ಮದ ಸಮಸ್ಯೆಗಳು ಮತ್ತು ಕ್ಯಾನ್ಸರ್ ಅಪಾಯವನ್ನೂ ಸಹ ತರಬಹುದು ಎಂದು ವಿಡಿಯೋ ಹಂಚಿಕೊಂಡಿರುವ ಮಹಿಳೆ ಹೇಳುತ್ತಿದ್ದಾರೆ. ಇನ್ನು ಮಾರುಕಟ್ಟೆಯಿಂದ ನಾವು ಖರೀದಿಸುವ ತರಕಾರಿನಲ್ಲಿ ಬಿಸಿ ನೀರಿಗೆ ಉಪ್ಪು ಹಾಕಿ ಒಂದು ನಿಮಿಷ ಬಿಟ್ಟು ಬಳಿಕ ಚೆನ್ನಾಗಿ ತೊಳೆದ ಬಳಿಕ ಸೇವಿಸಬೇಕು ಎಂದು ವಿಡಿಯೋದಲ್ಲಿ ಸಲಹೆ ನೀಡುತ್ತಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಶಾಕ್ ಆಗಿದ್ದು, ಮಾರುಕಟ್ಟೆಯಲ್ಲಿ ಒಂದು ವಾರದಿಂದಲೂ ಇಟ್ಟುಕೊಂಡು ಮಾರುವ ತರಕಾರಿಗಳಿಗೆ ಈ ರೀತಿಯ ಪುಡಿ ಬಳಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ ಯಾವ ತರಕಾರಿಗಳನ್ನೂ ಈಗ ಧೈರ್ಯವಾಗಿ ಖರೀದಿಸಲು ಸಾಧ್ಯವಾಗುತ್ತಿಲ್ಲ, ಕಾರಣ ಎಲ್ಲದಕ್ಕು ರಾಸಾಯನಿಕ ಬಳಸಿಸುತ್ತಾರೆ. ತರಕಾರಿ ಮಾತ್ರವಲ್ಲ ಹಣ್ಣುಗಳಿಗೂ ಸಹ ವಿಪರೀತ ಕೆಮಿಕಲ್ ಬಳಸಿ ಅವು ಕೆಡದಂತೆ ಬಹಳ ದಿನಕಾಲ ಇಡುತ್ತಾರೆ. ಆದರೆ ಈ ಹಣ್ಣುಗಳ ಖರೀದಿಸಿ ಸೇವಿಸುವ ಮಂದಿ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂಬುದು ಬಳಕೆದಾರರ ವಾದವಾಗಿದೆ.
ಇಂತಹ ಜನಬಳಕೆಯ ವಸ್ತುಗಳಿಗೆ ರಾಸಾಯನಿಕ ಹಾಕುವುದನ್ನು ತಡೆಯಬೇಕು ಎನ್ನುವುದು ಮತ್ತೊಬ್ಬ ಬಳಕೆದಾರರ ಸಲಹೆಯಾಗಿದೆ. ಇಂತಹ ತರಕಾರಿಗಳ ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಯಾವ ರಾಸಾಯನಿಕ ಬಳಕೆ ಹೆಚ್ಚಾಗಿ ಮಾಡುತ್ತಾರೋ ಅಂತಹ ರಾಸಾಯನಿಕಗಳ ನಿಷೇಧ ಮಾಡಬೇಕು. ಯಾವೆಲ್ಲಾ ಮಾನವರು ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡಲಿವೆಯೋ ಅಂತಹ ಕೆಮಿಕಲ್‌ಗಳ ಬಳಕೆ ನಿಷೇಧಿಸಿ ಬಳಸಿದರೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications