For Quick Alerts
ALLOW NOTIFICATIONS  
For Daily Alerts

ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

|

ಹದಿಹರೆಯದಲ್ಲಿ ಸಾಮಾನ್ಯವಾಗಿರುವ ಮೊಡವೆಗಳು ಮುಜುಗರಕ್ಕೆ ಕಾರಣವಾಗುತ್ತವೆ. ಕೆಲವರಿಗಂತೂ ನಡುವಯಸ್ಸು ದಾಟುವವರೆಗೂ ಮೊಡವೆಗಳ ಕಾಟ ಇದ್ದೇ ಇರುತ್ತದೆ. ಇವುಗಳನ್ನು ನಿಗ್ರಹಿಸಲು ಹಲವಾರು ಮದ್ದುಗಳಿವೆಯಾದರೂ ಸತತವಾಗಿ ಮತ್ತೆ ಮತ್ತೆ ಮೂಡುವ ಮೊಡವೆಗಳು ಇನ್ನಷ್ಟು ಚಿಂತೆಯನ್ನು ಹಚ್ಚಿಸುತ್ತವೆ. ಅದರಲ್ಲೂ ಯಾವುದಾದರೂ ಕಾರ್ಯಕ್ರಮಕ್ಕೆ ಹೊರಟಿರುವಾಗ ಬೆಳಿಗ್ಗೆ ಇರದಿದ್ದ ಮೊಡವೆ ಮಧ್ಯಾಹ್ನದ ಹೊತ್ತಿನಲ್ಲಿ ಧುತ್ತನೇ ಎದ್ದುಬಿಟ್ಟಿರುವುದಂತೂ ಅತೀವ ದುಃಖ ತರಿಸುತ್ತದೆ.

ಅಷ್ಟೇ ಏಕೆ ಇಡಿಯ ದಿನ ನೋವನ್ನೂ, ಉರಿಯನ್ನೂ ನೀಡುತ್ತಾ ನೆಮ್ಮದಿಯನ್ನು ಕೆಡಿಸುತ್ತವೆ. ಈಗಲೇ ಚಿವುಟಿ ತೆಗೆಯುವ ಎಂದು ಮನ ಹೇಳಿದರೆ ಬೇಡ, ಬಳಿಕ ಕಲೆ ಉಳಿಯುತ್ತದೆ ಎಂದು ವಿವೇಕ ಹೇಳುತ್ತದೆ. ಇವೆರಡರ ನಡುವಣ ಕಲಹದಲ್ಲಿ ಮನ ಮುದುಡುತ್ತದೆ. ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ನೂರಾರು ಔಷಧಿ, ಕ್ರೀಮ್‌ಗಳು ಲಭ್ಯವಿವೆ. ಆದರೆ ಮೊಡವೆಗಳಿಗೆ ಖಡಾಖಂಡಿತವಾದ ಔಷಧಿ ಇದುವರೆಗೆ ಲಭ್ಯವಿಲ್ಲ. ಹದಿಹರೆಯದಲ್ಲಿ ಮೊಡವೆ ರಾದ್ಧಾಂತ ಮಾಮೂಲು, ಚಿಂತೆ ಬಿಡಿ!

ಅಲ್ಲದೇ ಈ ಔಷಧಿಗಳಲ್ಲಿರುವ ಪ್ರಬಲ ರಾಸಾಯನಿಕಗಳು ಕೆಲವರಿಗೆ ಅಲರ್ಜಿಕಾರಕವಾಗಿದ್ದು ಚರ್ಮದ ಮೇಲೆ ಶಾಶ್ವತವಾದ ಹಾನಿಯನ್ನೂ ಮಾಡಬಹುದು. ಇಂತಹ ಸಮಯದಲ್ಲಿ ಕೆಲವು ಮನೆಮದ್ದುಗಳು ನಿಮ್ಮ ನೆರವಿಗೆ ಬರಲಿವೆ. ಇವು ಮೊಡವೆಯನ್ನು ಬೇಗನೇ ಹಣ್ಣಾಗುವಂತೆ ಮಾಡಿ ಒಳಗಿನ ಕೀವು ಸುಲಭವಾಗಿ ಹೊರಬರುವಂತೆ ಮಾಡುತ್ತದೆ ಹಾಗೂ ಬಳಿಕ ಹುಟ್ಟುವ ಹೊಸ ಚರ್ಮದಲ್ಲಿ ಕಲೆಯಿಲ್ಲದಂತೆಯೂ ನೋಡಿಕೊಳ್ಳುತ್ತದೆ. ಕೆಳಗಿನ ಮನೆಮದ್ದುಗಳನ್ನು ಕೇವಲ ಹದಿನೈದೇ ನಿಮಿಷದಲ್ಲಿ ಮಾಡಿ ಮುಗಿಸುವಂತಹದ್ದಾಗಿದ್ದು ನಿಮಗೆ ಅತಿ ಸೂಕ್ತ ಎನ್ನಿಸಿದ್ದನ್ನು ಆರಿಸಿಕೊಳ್ಳಿ:

Effective home remedies to treat pimples

ಎಲೆಕೋಸಿನ ಎಲೆಗಳು

ಇವುಗಳನ್ನು ರುಬ್ಬಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಅದನ್ನು ಮೊಡವೆಗಳಿಂದ ಭಾದಿತವಾಗಿರುವ ಭಾಗಕ್ಕೆ ಹಚ್ಚಿ. ಇದರ ರಸವನ್ನು ಮುಖದ ಮೇಲೆ ಹಾಗೆಯೇ 30 ನಿಮಿಷಗಳ ಕಾಲ ಇರಲು ಬಿಡಿ. ನಂತರ ಇದನ್ನು ತೊಳೆಯಿರಿ. ಈ ಸಂಕೋಚಕವನ್ನು ಹೀಗೆಯೇ ಕೆಲದಿನ ಮಾಡಿ ನಂತರ ಅದರ ಬದಲಾವಣೆಯನ್ನು ನೀವೇ ಗಮನಿಸಿ. ಈ ಆಹಾರಗಳನ್ನು ತಿಂದರೆ ಮೊಡವೆ ಬರುವುದೇ?

ಜೇನುತುಪ್ಪ ಮತ್ತು ಚಕ್ಕೆ ಜೇನು

Effective home remedies to treat pimples

ತುಪ್ಪ ಮತ್ತು ಚಕ್ಕೆ (ದಾಲ್ಚಿನ್ನಿ)ಯ ಪುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಇದನ್ನು ಮಲಗುವ ಮೊದಲು ಮೊಡವೆಗಳ ಮೇಲೆ ಲೇಪಿಸಿ. ಮರುದಿನ ಬೆಳಗ್ಗೆ ಇದನ್ನು ಬೆಚ್ಚನೆಯ ನೀರಿನಿಂದ ತೊಳೆಯಿರಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಕೊಂಚ ಕಮಟುವಾಸನೆಯನ್ನು ಹೊಂದಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದು ಚರ್ಮಕ್ಕೆಉತ್ತಮವಾದ ಪೋಷಣೆಯನ್ನು ನೀಡುತ್ತದೆ.

Effective home remedies to treat pimples

ಈ ಎಣ್ಣೆಯನ್ನು ಸಹಾ ಬೆರಳ ತುದಿಗೆ ಕೊಂಚವಾಗಿಯೇ ಹಚ್ಚಿ ನಯವಾಗಿ ಮಸಾಜ್ ಮಾಡಿ, ಒಂದು ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಎಣ್ಣೆ ಸಹಾ ಕೊಂಚ ಉರಿ ತರಿಸಬಹುದು, ಬಿಸಿಯ ಅನುಭವವೂ ಆಗಬಹುದು.

ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ.

Effective home remedies to treat pimples

ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಟೊಮೇಟೊ ಜ್ಯೂಸ್

ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮೇಟೊ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ಚಿಕ್ಕಚಮಚ ಅಡುಗೆಸೋಡಾ ಬೆರೆಸಿ ಮಿಶ್ರಣ ಮಾಡಿ. ಇನ್ನು ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ಈ ಮಿಶ್ರಣವನ್ನು ತಣ್ಣಗಿನ ಹಾಲು ಉಪಯೋಗಿಸಿ ತೂಳೆದುಕೊಳ್ಳಿ. ದಿನಕ್ಕೆರಡು ಬಾರಿಯಂತೆ ಒಂದು ವಾರ ಈ ವಿಧಾನವನ್ನು ಅನುಸರಿಸಿದರೆ ಮೊಡವೆಗಳು ಪೂರ್ಣವಾಗಿ ಮಾಯವಾಗುತ್ತವೆ.

ಲಿಂಬೆ ಹಣ್ಣು

ಚೆನ್ನಾಗಿ ಹಣ್ಣಾಗಿರುವ ಒಂದು ಲಿಂಬೆಹಣ್ಣನ್ನು ಕತ್ತರಿಸುವ ಮೊದಲು ಮೇಜಿನ ಮೇಲೆ ಹಸ್ತದಿಂದ ಸ್ವಲ್ಪ ಒತ್ತಡದಲ್ಲಿ ಉರುಳಾಡಿಸಿ ಮೆತ್ತಗಾಗಿಸಿಕೊಳ್ಳಿ. ಬಳಿಕ ಇದನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ. ಬೀಜಗಳನ್ನು ನಿವಾರಿಸಿ. ಇದಕ್ಕೆ ಒಂದು ದೊಡ್ಡಚಮಚ ಉಪ್ಪು ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ

Effective home remedies to treat pimples

ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಕೊಂಚ ಉರಿಯಾಗುತ್ತದೆ, ಬರೆಯ ಹದಿನೈದು ನಿಮಿಷ ಸಹಿಸಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಇನ್ನಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬೇಡಿ. ಇದು ಮೊಡವೆಯನ್ನು ಶೀಘ್ರವೇ ಹಣ್ಣಾಗಿಸಿ ಕೀವು ಹೊರಬರುವಂತೆ ನೋಡಿಕೊಳ್ಳುತ್ತದೆ.

English summary

Effective home remedies to treat pimples

There are a lot of lotions and medicines on the market to treat pimples but they can take time. Many natural methods are effective in treating pimples within a very short time period. So boldsky Share some effective home remedies for pimples have a look
Story first published: Saturday, October 24, 2015, 23:13 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X