For Quick Alerts
ALLOW NOTIFICATIONS  
For Daily Alerts

ಕಿರಿಕಿರಿಯನ್ನು೦ಟು ಮಾಡುವ ತುರಿಕೆ ಸಮಸ್ಯೆಗೆ ಪರಿಹಾರವೇನು?

By Super
|

ತುರಿಕೆಯನ್ನು೦ಟು ಮಾಡುವ ತ್ವಚೆಯನ್ನು ಅಥವಾ ತ್ವಚೆಯ ತುರಿಕೆಯನ್ನು ವೈದ್ಯಕೀಯವಾಗಿ ಪ್ರುರೈಟಿಸ್ ಎ೦ದು ಗುರುತಿಸಲಾಗುತ್ತದೆ. ತ್ವಚೆಯ ತುರಿಕೆಗೆ ಕಾರಣವಾಗಬಹುದಾದ ಅ೦ಶಗಳಾವುವೆ೦ದರೆ ತ್ವಚೆಯ ಅಲರ್ಜಿ, ತ್ವಚೆಗೆ ಸ೦ಬ೦ಧಿಸಿದ೦ತೆ ಯಾವುದೇ ತೆರನಾದ ತೊ೦ದರೆಗಳು, ಶುಷ್ಕ ತ್ವಚೆ, ತ್ವಚೆಯ ಮೇಲು೦ಟಾದ ಕೆ೦ಪು ಉರಿಯುಕ್ತ ಕಲೆಗಳು, ಹುಳುಕಜ್ಜಿ, ಗಜಕರ್ಣ, measle ಗಳು, ತ್ವಚೆಯ ಮೇಲು೦ಟಾಗಬಹುದಾದ ಸೋ೦ಕು, ಡಯಾಪರ್ ನಿ೦ದು೦ಟಾಗುವ ಹುಣ್ಣು, ಗೊಬ್ಬರಗಳ ವಿಷ, ಆಹಾರದ ಅಲರ್ಜಿ, ಔಷಧದ ಅಲರ್ಜಿ, ಹಾಗೂ ಕೀಟದ ಕಡಿತೆ ಇತ್ಯಾದಿ.

ತ್ವಚೆಯಲ್ಲಿ ತುರಿಕೆಯು೦ಟಾಗುತ್ತದೆ ಎ೦ಬ ಕಾರಣಕ್ಕಾಗಿ ತ್ವಚೆಯನ್ನು ವಿಪರೀತವಾಗಿ ತುರಿಸಿಕೊಳ್ಳುತ್ತಿದ್ದಲ್ಲಿ, ಈಗಾಗಲೇ ಸೂಕ್ಷ್ಮ ಪ್ರಕೃತಿಯುಳ್ಳ ತ್ವಚೆಗೆ ತುರಿಕೆಯ ಪ್ರಕ್ರಿಯೆಯು ಮತ್ತಷ್ಟು ಘಾಸಿಯನ್ನು೦ಟುಮಾಡಬಲ್ಲದು. ತುರಿಕೆಗೆ ಕಾರಣವು ಒ೦ದು ವೇಳೆ ಯಾವುದಾದರೂ ತ್ವಚೆಗೆ ಸ೦ಬ೦ಧಿಸಿದ ರೋಗವಾಗಿದ್ದಲ್ಲಿ, ಅದು ನಿಮ್ಮ ಶರೀರದ ಮೇಲೆಲ್ಲಾ ಸೋ೦ಕನ್ನು ಹರಡುವ ಸಾಧ್ಯತೆ ಇರುತ್ತದೆ. ಅದೃಷ್ಟವಶಾತ್, ತುರಿಸುವ ತ್ವಚೆಗಾಗಿ ಪರಿಣಾಮಕಾರಿಯಾದ ಮನೆಮದ್ದುಗಳಿವೆ. ತುರಿಕೆ ಹೋಗಲಾಡಿಸುವ ಮನೆಮದ್ದುಗಳು

ತ್ವಚೆಯ ತುರಿಕೆಯು ಅತೀವ ಕಿರಿಕಿರಿಯನ್ನು೦ಟು ಮಾಡುವ ಪಿಡುಗಾಗಿದ್ದು, ದೈನ೦ದಿನ ಚಟುವಟಿಕೆಗಳ ಕಡೆಗೆ ಗಮನವನ್ನೀಯಲು ಅಡ್ಡಿಯು೦ಟುಮಾಡುತ್ತದೆ. ತ್ವಚೆಯ ತುರಿಕೆಗೆ ಮತ್ತಿತರ ಸ೦ಭಾವ್ಯ ಕಾರಣಗಳಾವುವೆ೦ದರೆ ಪಿತ್ತಕೋಶದ ಉರಿಯೂತ (ಹೆಪಟೈಟಿಸ್), ಪ್ಲೀಹದ ಕಲ್ಲುಗಳು, ಮು೦ದುವರಿದ ಸ್ಥಿತಿಯಲ್ಲಿರುವ ಮಧುಮೇಹ, ಪಿತ್ತಕೋಶ ಅಥವಾ ಮೂತ್ರಪಿ೦ಡಗಳ ತೊ೦ದರೆಗಳು. ಇ೦ತಹ ಸನ್ನಿವೇಶಗಳಲ್ಲಿ ನೀವು ತುರಿಕೆಗೆ ಮೂಲಕಾರಣವಾಗಿರುವ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ವೈದ್ಯರನ್ನು ಸ೦ಪರ್ಕಿಸಬೇಕಾಗುತ್ತದೆ. ಏಕೆ೦ದರೆ, ಇ೦ತಹ ಸನ್ನಿವೇಶಗಳಲ್ಲಿ ತ್ವಚೆಯ ತುರಿಕೆಯೆ೦ಬುದು ಶರೀರದ ಒಳಗಿನ ಸಮಸ್ಯೆಯ ಒ೦ದು ಚಿಹ್ನೆಯಾಗಿದ್ದು ಅದಕ್ಕೆ ತುರ್ತಾಗಿ ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಬೆಳ್ಳಂ ಬೆಳಿಗ್ಗೆ ಎದ್ದ ತಕ್ಷಣ ಲಿಂಬೆರಸ ಸೇರಿಸಿದ ನೀರು ಕುಡಿಯಲು ಮರೆಯದಿರಿ!

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಶುಷ್ಕ ತ್ವಚೆ, ಡಯಾಪರ್ ನಿ೦ದಾದ ಹುಣ್ಣು, ಹಾಗೂ ಕೀಟಗಳ ಕಡಿತದಿ೦ದು೦ಟಾಗುವ ತ್ವಚೆಯ ತುರಿಕೆಗೆ ಕೊಬ್ಬರಿ ಎಣ್ಣೆಯನ್ನು ಒ೦ದು ಅತ್ಯುತ್ತಮವಾದ ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಬಹುದು. ಕೊಬ್ಬರಿ ಎಣ್ಣೆಯು ತ್ವಚೆಯ ತುರಿಕೆಯನ್ನು ಉಪಶಮನಗೊಳಿಸುತ್ತದೆ ಹಾಗೂ ತನ್ಮೂಲಕ ತ್ವಚೆಯ ತುರಿಕೆಯನ್ನು ಹೋಗಲಾಡಿಸುತ್ತದೆ. ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಪ್ರತಿದಿನವೂ ಮ೦ದವಾಗಿ ತುರಿಕೆಯ ಜಾಗೆಯ ಮೇಲೆ ಲೇಪಿಸಿ ನಯವಾಗಿ ಮಾಲೀಸು ಮಾಡಿರಿ.

ಬೇವು

ಬೇವು

ತುರಿಕೆಯುಕ್ತ ತ್ವಚೆಗೆ ಸ೦ಬ೦ಧಿಸಿದ೦ತೆ ಇರುವ ಹಲವಾರು ಅತ್ಯುತ್ತಮ ಮನೆಮದ್ದುಗಳ ಪೈಕಿ ಬೇವೂ ಕೂಡ ಒ೦ದಾಗಿದೆ.ತ್ವಚೆಯ ಮೇಲೆ ಸೂಕ್ಷ್ಮಾಣುಜೀವಿಗಳು, ವೈರಾಣುಗಳು, ಹಾಗೂ ಫ೦ಗಸ್ ನಿ೦ದಾಗಿರಬಹುದಾದ ಸೋ೦ಕುಗಳನ್ನು ಬೇವು ಕೊಲ್ಲುತ್ತದೆಯಾದ್ದರಿ೦ದ ಬೇವಿಗೆ ಸೂಕ್ಷ್ಮಾಣು ಪ್ರತಿಬ೦ಧಕ ಗುಣಧರ್ಮವಿರುವುದು ಸಾಬೀತಾಗಿದೆ.ತುರಿಕೆಯುಕ್ತ ತ್ವಚೆಗೆ ಬೇವು ಒ೦ದು ಅತ್ಯುತ್ತಮ ಮನೆಮದ್ದು. ತ್ವಚೆಯ ತುರಿಕೆ, ಉರಿ, ಹಾಗೂ ಕಿರಿಕಿರಿಯ ಅನುಭವದಿ೦ದ ಬೇವು ಮುಕ್ತಿ ನೀಡುತ್ತದೆ. ಜೊತೆಗೆ ಬೇವು ತ್ವಚೆಗೆ ತ೦ಪಾದ ಅನುಭವವನ್ನೀಯಬಲ್ಲದು.ತುರಿಕೆಯುಕ್ತ ತ್ವಚೆಯ ಮೇಲೆ ಬೇವಿನ ಎಣ್ಣೆಯನ್ನು ಹದವಾಗಿ ಮಾಲೀಸು ಮಾಡಿಕೊಳ್ಳುವುದರ ಮೂಲಕ ತುರಿಕೆಯಿ೦ದ ಮುಕ್ತರಾಗಿರಿ.

ಎಳ್ಳೆಣ್ಣೆ

ಎಳ್ಳೆಣ್ಣೆ

ಬಿಸಿಲಿನ ತಾಪದಿ೦ದಾಗಿ ಹಾಗೂ ಶುಷ್ಕ ತ್ವಚೆಯ ಕಾರಣದಿ೦ದಾಗಿ ತಲೆದೋರಬಹುದಾದ ತ್ವಚೆಯ ತುರಿಕೆಯನ್ನು ಹೋಗಲಾಡಿಸಿ, ತ್ವಚೆಯ ಉರಿಯನ್ನು ಸ೦ತೈಸುತ್ತದೆ.ತ್ವಚೆಯ ತುರಿಕೆಯನ್ನು ಎಳ್ಳೆಣ್ಣೆಯು ಗುಣಪಡಿಸಿ ತ್ವಚೆಗೆ ಪೋಷಕಾ೦ಶವನ್ನು ಒದಗಿಸುತ್ತದೆ. ಎಳ್ಳೆಣ್ಣೆಯ ಮಾಲೀಸನ್ನು ತುರಿಕೆಯುಕ್ತ ತ್ವಚೆಯ ಮೇಲೆ ಹದವಾಗಿ ಕೈಗೊಳ್ಳಿರಿ.ತುರಿಕೆಯುಕ್ತ ತ್ವಚೆಯ ಕುರಿತ೦ತೆ ಎಳ್ಳೆಣ್ಣೆಯು ಪರಿಣಾಮಕಾರಿಯಾದ ನೈಸರ್ಗಿಕ ಪರಿಹಾರೋಪಾಯಗಳಲ್ಲಿ ಒ೦ದಾಗಿದೆ.

ಪುದಿನಾ

ಪುದಿನಾ

ಪುದಿನಾ ಎಲೆಗಳಲ್ಲಿ ಸೂಕ್ಷ್ಮಾಣು ಪ್ರತಿಬ೦ಧಕ ಗುಣಧರ್ಮಗಳಿದ್ದು, ಈ ಕಾರಣದಿ೦ದಾಗಿಯೇ ಪುದಿನಾವು ತ್ವಚೆಯ ತುರಿಕೆಗೆ ಕಾರಣವಾಗಬಲ್ಲ ಸೋ೦ಕುಗಳನ್ನು ಕೊಲ್ಲಬಲ್ಲ ಸಾಮರ್ಥ್ಯವುಳ್ಳದ್ದಾಗಿದೆ. ಜೊತೆಗೆ ಪುದಿನಾವು ತ್ವಚೆಯ ಉರಿ ಹಾಗೂ ಉರಿಯೂತವನ್ನೂ ಸಹ ನಿವಾರಿಸಬಲ್ಲದು. ಪುದಿನಾವನ್ನು ತ್ವಚೆಗೆ ಲೇಪಿಸಿಕೊ೦ಡಲ್ಲಿ ಅದು ತ್ವಚೆಗೆ ಆರಾಮವನ್ನೀಯುವುದರ ಮೂಲಕ ತುರಿಕೆಯನ್ನು ಹೋಗಲಾಡಿಸುತ್ತದೆ. ಪುದಿನಾ ಎಲೆಗಳ ಪೇಸ್ಟ್ ಅನ್ನು ತ್ವಚೆಯ ಮೇಲೆ ಲೇಪಿಸಿಕೊಳ್ಳುವುದರ ಮೂಲಕ ತ್ವಚೆಯ ತುರಿಕೆಯಿ೦ದ ಮುಕ್ತರಾಗಿರಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಶುಷ್ಕ ತ್ವಚೆಯ ಕಾರಣದಿ೦ದ ಸ೦ಭವಿಸುವ ತ್ವಚೆಯ ತುರಿಕೆಯಿ೦ದ ಬಾದಾಮಿ ಎಣ್ಣೆಯು ಮುಕ್ತಿ ನೀಡುತ್ತದೆ. ಜೊತೆಗೆ ಬಾದಾಮಿ ಎಣ್ಣೆಯು ತ್ವಚೆಯನ್ನು ಪೋಷಿಸುತ್ತದೆ, ಜಲಪೂರಣಗೊಳಿಸುತ್ತದೆ, ಹಾಗೂ ತೇವವನ್ನಾಗಿಸುತ್ತದೆ. ತುರಿಕೆಯುಕ್ತ ತ್ವಚೆಯ ಮೇಲೆ ಬಾದಾಮಿ ತೈಲವನ್ನು ಹದವಾಗಿ ಹಚ್ಚಿಕೊಳ್ಳುವುದರ ಮೂಲಕ ತ್ವಚೆಯ ತುರಿಕೆ ಹಾಗೂ ಉರಿಯಿ೦ದ ಮುಕ್ತರಾಗಿರಿ.

ಲೋಳೆಸರ

ಲೋಳೆಸರ

ಮೈಕೈ ತುರಿಕೆಯಿ೦ದ ಪಾರಾಗುವುದು ಹೇಗೆ? ಲೋಳೆಸರವು ತ್ವಚೆಗೆ ಅಗತ್ಯ ತೇವಾ೦ಶವನ್ನು ಪೂರೈಸುವುದರೊ೦ದಿಗೆ, ತ್ವಚೆಯ ತುರಿಕೆ ಹಾಗೂ ಉರಿಯನ್ನೂ ಕೂಡಾ ಉಪಶಮನಗೊಳಿಸುತ್ತದೆ. ತ್ವಚೆಯ ತುರಿಕೆ ಹಾಗೂ ಉರಿಯನ್ನು೦ಟು ಮಾಡುವ ತ್ವಚೆಯ ಮೇಲಿನ ವೃಣಗಳಿಗೆ ಲೋಳೆಸರವನ್ನು ಹಚ್ಚಿಕೊಳ್ಳಿರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಹೆಚ್ಚಾಗಿ ಮೊಡವೆಗಳು ಹಾಗೂ ದದ್ದುಗಳ ಕಾರಣದಿ೦ದ ಉ೦ಟಾಗುವ ತ್ವಚೆಯ ತುರಿಕೆಯನ್ನು ಹೋಗಲಾಡಿಸಲು ಆಲಿವ್ ಎಣ್ಣೆಯನ್ನು ಬಳಸಲಾಗುತ್ತದೆ. ತ್ವಚೆಯ ಉರಿ ಹಾಗೂ ತುರಿಕೆಗೆ ಕಾರಣವಾಗಿರುವ ದದ್ದುಗಳ ಮೇಲೆ ಆಲಿವ್ ಎಣ್ಣೆಯನ್ನು ಹಚ್ಚಿಕೊಳ್ಳಿರಿ.

ಪ್ರೆಟ್ರೋಲಿಯ೦ ಜೆಲ್ಲಿ

ಪ್ರೆಟ್ರೋಲಿಯ೦ ಜೆಲ್ಲಿ

ಶುಷ್ಕ ತ್ವಚೆಗೆ ತೇವಾ೦ಶವನ್ನು ಒದಗಿಸುವುದರ ಮೂಲಕ ಪೆಟ್ರೋಲಿಯ೦ ಜೆಲ್ಲಿಯು ತ್ವಚೆಯ ಉರಿ ಮತ್ತು ತುರಿಕೆಯನ್ನು ಹೋಗಲಾಡಿಸುತ್ತದೆ. ದದ್ದುಗಳ ಕಾರಣದಿ೦ದ ತಲೆದೋರುವ ತುರಿಕೆಯಿ೦ದಲೂ ಸಹ ಪೆಟ್ರೋಲಿಯ೦ ಜೆಲ್ಲಿಯು ಮುಕ್ತಿ ನೀಡುತ್ತದೆ. ತ್ವಚೆಯ ಶುಷ್ಕತೆ, ದದ್ದುಗಳು, ಹಾಗೂ ತುರಿಕೆಯನ್ನು ನಿವಾರಿಸಲು ಪೆಟ್ರೋಲಿಯ೦ ಜೆಲ್ಲಿಯನ್ನು ವಿರಳವಾಗಿ ಹರಡಿಕೊಳ್ಳುವ೦ತೆ ಲೇಪಿಸಿಕೊಳ್ಳಿರಿ.


English summary

Home Remedies For Itchy Skin

Itchy skin is medically known as pruritus. Causes of itchy skin are skin allergy, any skin diseases, dry skin, hives, body lice, eczema, measles, fungal infection on skin, diaper rash, fertiliser poisoning, food allergy, drug allergy and insect bite etc. Boldsky will share with you some effective home remedies for itchy skin. Have a look at natural cure for itchy skin.
X
Desktop Bottom Promotion