Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೊಮ್ಮಕ್ಕಳ ಮುಂದೆ 4:30:11 ಗಂಟೆ ದಂಡಾಸನ ಮಾಡಿ ಗಿನ್ನಿಸ್ ರೆಕಾಡ್ ಸೇರಿದ ಬಲೇ.. ಅಜ್ಜಿ
ಪ್ಲಾಂಕ್ ಪೋಸ್ ಅಂದರೆ ದಂಡಾಸನದಲ್ಲಿ ನೀವೆಷ್ಟು ಹೊತ್ತು ನಿಲ್ಲುವಿರಿ? 1 ನಿಮಿಷ ? 5 ನಿಮಿಷ ? ಹೆಚ್ಚೆಂದರೆ 10 ನಿಮಿಷ ಅಷ್ಟೊತ್ತಿಗೆ ಸುಸ್ತಾಗಿ ಬಿಡುತ್ತೇವೆ. ಅದರಲ್ಲೂ ಇದನ್ನು ಅಭ್ಯಾಸ ಮಾಡದೆ ಮಾಡಿದರೆ ಒಂದು ನಿಮಿಷ ಮಾಡಲು ಸಾಧ್ಯವಿಲ್ಲ, ಈ ದಂಡಾಸನವನ್ನು ಒಬ್ಬರು ಅದರಲ್ಲೂ 58 ವರ್ಷದ ಮಹಿಳೆಯೊಬ್ಬರು 4 ಗಂಟೆ 30 ನಿಮಿಷ, 11 ಸೆಕೆಂಡ್ ಮಾಡಿ ವಿಶ್ವದಾಖಲೆ ಮಾಡಿದ್ದಾರೆ.

ಅವರ ಹೆಸರು ಡೋನ್‌ಜೀನ್, ನಮ್ಮಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಇರುವ ವಯಸ್ಸು. ಈ ವಯಸ್ಸಿನಲ್ಲಿ ಯೌವನ ಪ್ರಾಯದವರು ಮಾಡಕ್ಕಾಗಲ್ಲ ಅಂತಹ ಸಾಧನೆ ಮಾಡಿದ್ದಾರೆ. ಅಷ್ಟೊಂದು ದೀರ್ಘಾವಧಿ ದಂಡಾಸನ ಮಾಡುವುದು ಎಂದರೆ ಅದು ಸಾಮಾನ್ಯವಾದ ವಿಷಯ ಅಲ್ವೇ ಅಲ್ಲ... ಮತ್ತೊಂದು ವಿಶೇಷವೆಂದರೆ 12 ವರ್ಷದ ಹಿಂದೆ ಇವರೇ ಮಾಡಿದ ರೆಕಾರ್ಡ್ ಅನ್ನು ಇಷ್ಟು ವಯಸ್ಸಾದ ಮೇಲೆ ಮುರಿದಿರುವುದು.
ಶಾಲಾ ಶಿಕ್ಷಕಿಯಾಗಿರುವ ಅವರು ನಿವೃತ್ತಿ ಆಗಿದ್ದಾರೆ. ಇನ್ನು ಆಸಕ್ತಿಕರ ವಿಷಯವೆಂದರೆ ಅವರು ಈ ರೀತಿ ಪ್ಲಾಂಕ್ ಮಾಡಲು ಆರಂಬಿಸಿದ್ದು ಕೂಡ 12 ವರ್ಷದ ಹಿಂದೆ, ಅವರ ಕೈ ಮುರಿದಿತ್ತು, ಭಾರ ಎತ್ತಲು ಕೂಡ ಸಾಧ್ಯವಾಗಿರಲಿಲ್ಲ, ಕೈಗಳ ಬಲಕ್ಕೆ ದಂಡಾಸನ ಅಭ್ಯಾಸ ಮಾಡುತ್ತಾರೆ. ಈಗ ಇದರಲ್ಲಿ ಸಾಧನೆಯ ಹಂತಕ್ಕೆ ಬಂದಿದ್ದಾರೆ.
12 ಮೊಮ್ಮಕ್ಕಳ ಎದುರಿಗೆ ಡಂಡಾಸನ ಮಾಡಿದ ಅಜ್ಜಿ
ಈ ವೀಡಿಯೋದಲ್ಲಿ ನೋಡಬಹುದು ಅಜ್ಜಿ ದಂಡಾಸನ ಮಾಡುವಾಗ ಪುಟಾಣಿಗಳು ಸಂತೋಷ ಪಡುತ್ತಿದ್ದಾರೆ, ತಾವೂ ಪ್ಲಾಂಕ್ ಮಾಡಲು ಯತ್ನಸುತ್ತಿದ್ದಾರೆ. ಅಜ್ಜಿಗೆ 12 ಮೊಮ್ಮಕ್ಕಳು, ಅವರೆಲ್ಲಾ ಮೊಮ್ಮಕ್ಕಳು ತಮ್ಮ ಅಜ್ಜಿಯ ಸಾಧನೆ, ಸ್ಟೆಮಿನಾ ನೋಡಿ ಖುಷಿ ಪಟ್ಟಿದ್ದರು.
ಅವರು ಈ ಹಿಂದೆ ಮಾಡಿದ ರೆಕಾರ್ಡ್‌ಗಿಂತ 10 ನಿಮಿಷ ಅಧಿಕ ಪ್ಲಾಂಕ್ ಮಾಡಿ ತಮ್ಮ ರೆಕಾರ್ಡ್ ತಾವೇ ಮುರಿದರು. ನಮ್ಮ ಕೈಗಳಿಗೆ ನೋವಾಯ್ತು. ನನಗೆ ಈ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲವೇ ಎಂದು ಒತ್ತಡಕ್ಕೆ ಒಳಗಾಗಿದ್ದೆ ಎಂದು ತಮ್ಮ ರೆಕಾರ್ಡ್ ಮುರಿದ ಬಳಿಕ ಮಾಧ್ಯಮದ ಜೊತೆಗೆ ಇಷ್ಟು ದೀರ್ಘಾವಧಿ ಪ್ಲಾಂಕ್‌ನ ಸವಾಲುಗಳ ಬಗ್ಗೆ ಹಂಚಿಕೊಂಡರು.
ದಂಡಾಸನ ಮಾಡುವುದು ಅಷ್ಟು ಸುಲಭವಲ್ಲ
ಕೈಗಳಿಂದಲೇ ದೇಹವನ್ನು ಬ್ಯಾಲೆನ್ಸ್ ಮಾಡಬೇಕು, ಈ ರೀತಿ ಮಾಡುವುದು ತುಂಬಾನೇ ಕಷ್ಟ. ಇಡೀ ದೇಹದ ಭಾರ ಕೈಗಳ ಮೇಲೆ ನಿಂತಿರುತ್ತದೆ, ಈ ದಂಡಾಸನವನ್ನು ಕೆಲವೊಂದು ನಿಮಿಷಗಳವರೆಗೆ ಮಾಡುತ್ತಾರೆ, ಈ ರೀತಿ ಕೆಲವರಷ್ಟೇ ಗಂಟೆಗಳವರೆಗೆ ನಿಲ್ಲಬಹುದು, ಏಕೆಂದರೆ ಈ ಸಾಹಸಕ್ಕೆ ಪ್ರಯತ್ನ, ಮೋಬಲ , ರಟ್ಟೆ ಬಲ ಎಲ್ಲವೂ ಬೇಕು. ಈ ಅಜ್ಜಿ ನಿಜಕ್ಕೂ ಗ್ರೇಟ್ ಅಲ್ವಾ?



Click it and Unblock the Notifications
