Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ದುಬೈಯ ಪ್ರವಾಹದ ದೃಶ್ಯಗಳು: ಪ್ರಕೃತಿಯ ರುದ್ರಾವತಾರ, ಒಂದೂವರೆ ವರ್ಷದ ಮಳೆ 24 ಗಂಟೆಯಲ್ಲಿ ಬಂದಿದೆ
ಪ್ರಕೃತಿ ಮುಂದೆ ಮನುಷ್ಯ ಏನೂ ಇಲ್ಲ ಎಂಬುವುದು ಆಗಾಗ ಸಾಬೀತಾಗುತ್ತಿದೆ. ಇದೀಗ ದುಬೈ ಮತ್ತೊಂದು ಉದಾಹರಣೆಯಾಗಿದೆ. ಆಗರ್ಭ ಶ್ರೀಮಂತರ ನಾಡು ದುಬೈ... ಅಲ್ಲಿರುವ ಗಗನಚುಂಬಿ ಕಟ್ಟಡಗಳು, ಅತ್ಯಾಧುನಿಕ ಗಾಡಿಗಳು, ಮೆಟ್ರೋ, ರೈಲ್ವೆ ಸ್ಟೇಷನ್, ದುಬಾರಿ ಮಾಲ್‌ಗಳು ಎಲ್ಲವೂ ಈಗ ನೀರಿನಿಂದ ಆವೃತವಾಗಿದೆ. ಇತಿಹಾಸದಲ್ಲಿಯೇ ಕಂಡರಿಯದ ಮಳೆ ಸುರಿದಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.

ಮೈ ನಡುಕ ಹುಟ್ಟುಸುತ್ತದೆ ಅಲ್ಲಿಯ ದೃಶ್ಯ
ದುಬೈನ ಈಗೀನ ಪರಿಸ್ಥಿತಿ ನೋಡಿದರೆ ಎಂಥವರಿಗೂ ಭಯವಾಗುತ್ತೆ, ಮಳೆಯ ಮುಂದೆ ಮನುಷ್ಯರಿಗೆ ಹಿಡಿದು ನಿಲ್ಲಲು ಸಾಧ್ಯವೇ ಇಲ್ಲ, ವಿಶ್ವದಲ್ಲಿರುವ ದೊಡ್ಡ ಏರ್‌ಪೋರ್ಟ್‌ಗಳಲ್ಲಿ ಒಂದಾಗಿರು ದುಬೈ ಏರ್‌ಪೋರ್ಟ್ ಸ್ಥಿತಿ ನೋಡಿದರೆ ಅಯ್ಯೊ ಅನಿಸುತ್ತೆ, ಇನ್ನು ದೊಡ್ಡ ಮಾಲ್‌ಗಳ ರೂಫಿಂಗ್‌ಗಳು ನೀರು ತುಂಬಿ ಮುರಿದು ಬೀಳುತ್ತಿದೆ, ಮೆಟ್ರೋ ಸ್ಟೇಷನ್‌ಗಳಲ್ಲಿ ನೀರು ನುಗ್ಗಿದೆ. ಆಫೀಸ್‌ಗಳಲ್ಲಿ ನೀರು ತುಂಬಿಕೊಂಡಿದೆ. ಆಫೀಸ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಕೆಲವು ಗಂಟೆಗಳ ಕಾಲ ಫ್ಲೈಟ್ ಕಾರ್ಯಾಚರಣೆಯನ್ನು ನಿಲ್ಲಿಸಲಾಯ್ತು. ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿಯೇ ಇರುವಂತಾಯ್ತು.
ಮಾಲ್‌ನಲ್ಲಿ ಮೇಲ್ಙಾವಣಿ ಕುಸಿದಿದೆ
ಐಷಾರಾಮಿ ಮಾಲ್‌ಗಳಲ್ಲಿ ನೀರು ತುಂಬಿ ಅದರ ಮೇಲ್ಛಾವಣಿ ಕುಸಿಯುತ್ತಿರುವ ವೀಡಿಯೋ ಕೂಡ ವೈರಲ್ ಆಗಿತ್ತು. ಜನರಿಗೆ ಮನೆಯಿಂದ ಹೊರಗಡೆ ಇಳಿಯಲು ಕಷ್ಟವಾಗುವುದು, ಅಲ್ಲಿಯ ರೋಗಿಗಳ ಪರಿಸ್ಥಿತಿ ಹೇಳುವಂತೆಯೇ ಇಲ್ಲ. ಒಮಾನ್‌ನಲ್ಲಿ ಶಾಲಾ ಮಕ್ಕಳಿದ್ದ ವ್ಯಾನ್ ಕೊಚ್ಚಿ ಹೋಗಿ 17 ಮಕ್ಕಳು ಸಾವನ್ನಪ್ಪಿದ್ದರು.
Perfect example of "when life throws you lemons, you make lemonade." #Dubai pic.twitter.com/YQ2ASqNPmy
— Wazhma Ayoubi 🇦🇫 (@WazhmaAyoubi) April 16, 2024
1.5 ವರ್ಷದಲ್ಲಿ ಬೀಳುವ ಮಳೆ 24 ಗಂಟೆಯಲ್ಲಿ ಸುರಿದಿದೆ
ಮರುಭೂಮಿಯಲ್ಲಿ ಪ್ರವಾಹ ಉಂಟಾಗಿದೆ. ಒಂದೂವರೆ ವರ್ಷ ಸುರಿಯುವ ಮಳೆ 24 ಗಂಟೆಯಲ್ಲಿ ಸುರಿದಿದೆ. ದುಬೈ, ಒಮಾನ್‌ನಲ್ಲಿ ಪ್ರವಾಹದಿಂದಾಗಿ ತುಂಬಾ ನಷ್ಟ ಉಂಟಾಗಿದೆ. ಆದರೆ ಎಷ್ಟು ನಷ್ಟ ಉಂಟಾಗಿದೆ ಎಂಬ ಲೆಕ್ಕ ಇನ್ನೂ ಸಿಕ್ಕಿಲ್ಲ. ದುಬಾರಿ ಕಾರುಗಳು ನೀರಿನಲ್ಲಿ ಮುಳುಗಿವೆ, ಅನೇಕ ಮನೆಗಳಿಗೆ ನಷ್ಟ ಉಂಟಾಗಿದೆ.
ಮಳೆ ನೀರಿನಲ್ಲಿಯೂ ಆಟ ಆಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ
when life throws you lemons, you make lemonade ಎಂಬ ಮಾತಿದೆ ಅದರಂತೆ ದುಬೈನಲ್ಲಿ ಈ ಪ್ರವಾಹ ನೀರಿನಲ್ಲಿ ಬೋಟಿಂಗ್ ಮಾಡುತ್ತಾ ಹೋಗುತ್ತಿರುವವರನ್ನು ಕಾಣಬಹುದು.
Perfect example of "when life throws you lemons, you make lemonade." #Dubai pic.twitter.com/YQ2ASqNPmy
— Wazhma Ayoubi 🇦🇫 (@WazhmaAyoubi) April 16, 2024
ಕೆಲವು ಕಡೆ ಬರಗಾಲ, ಇನ್ನು ಕೆಲವು ಕಡೆ ಪ್ರವಾಹ
ಈ ವರ್ಷ ಪ್ರಕೃತಿ ಮನುಷ್ಯರೊಂದಿಗೆ ತುಂಬಾನೇ ಆಟವಾಡುತ್ತಿದೆ, ಕೆಲವು ಕಡೆ ತೀವ್ರ ಬರಗಾಲ, ಇನ್ನು ಕೆಲವು ಕಡೆ ಮಳೆಯಿಂದ ಪ್ರವಾಹ ಹೀಗೆ ಪ್ರಕೃತಿಯ ಆಟಕ್ಕೆ ಜನರು ಸುಸ್ತಾಗಿದ್ದಾರೆ. ಒಟ್ಟಿನಲ್ಲಿ ಈ ವರ್ಷ ಪ್ರಕೃತಿ ಮುನಿಸಿಕೊಂಡತೆ ಕಾಣುತ್ತಿದೆ. ಮರುಭೂಮಿಯಲ್ಲಿ ಪ್ರವಾಹ ಉಂಟಾಗುತ್ತಿದೆ ಹಸಿರು ಭೂಮಿ ಬರಡಾಗುತ್ತಿದೆ, ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.
ಹವಮಾನದಲ್ಲಿನ ಬದಲಾವಣೆಯಿಂದಾಗಿ ಪ್ರವಾಹ
ಮನುಷ್ಯನೇ ಮಾಡಿದ ತಪ್ಪಿನಿಂದಾಗಿ ಈಗ ಕಷ್ಟ ಅನುಭವಿಸುತ್ತಿದ್ದಾನೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡುಗಳನ್ನು ನಾಶ ಮಾಡಿದ, ನೀರು ಹರಿದು ಹೋಗುವ ಸ್ಥಳಗಳಲ್ಲಿ ಕಟ್ಟಡಗಳನ್ನು ಕಟ್ಟಿದ, ಇದರ ಪರಿಣಾಮದಿಂದಾಗಿ ತೀವ್ರ ಮಳೆಯಾದಾಗ ಪ್ರವಾಹದಿಂದ ತತ್ತರಿಸುತ್ತಿದ್ದಾನೆ. ಇಡೀ ವಿಶ್ವದಲ್ಲಿ ಹವಾಮಾನದಲ್ಲಿ ಬದಲಾವಣೆಯಾಗಿದೆ.
Dubai a day after heavy rain
— Aamaj News English (@aamajnews_EN) April 17, 2024
Sources from Dubai, UAE say to Aamaj News that after a day of heavy rain, water has still accumulated in some areas of the city, but efforts are underway to remove it.
The rains in the city of Dubai have been called unprecedented.#aamajnews pic.twitter.com/7T4fDFOyRu
ಇನ್ನು ಹಲವು ಕಡೆ ಪ್ರಕೃತಿ ವಿಕೋಪದ ಸೂಚನೆಯಿದೆ
ಈ ವರ್ಷದ ಭವಿಷ್ಯವಾಣಿಯಲ್ಲಿಯೂ ಪ್ರಕೃತಿ ವಿಕೋಪದ ಬಗ್ಗೆ ಹೇಳಲಾಗಿತ್ತು. ಈ ಪ್ರವಾಹ, ಭೂಕಂಪನ ಈ ರೀತಿಯ ಪ್ರಕೃತಿ ವಿಕೋಪವಾದರೂ ಎಂಥ ಶ್ರೀಮಂತ ರಾಷ್ಟ್ರವಾದರೂ ಸಂಕಷ್ಟದಲ್ಲಿ ಸಿಲುಕುತ್ತೆ. ಪ್ರಕೃತಿಯ ಮುಂದೆ ಮಾನವ ಹುಲು ಮಾನವ ಎಂದು ಹೇಳುವುದು ಸುಮ್ಮನ್ನಲ್ಲ.
Unbelievable scenes from Dubai due to heavy rains.. and the city crumbled like this..🤯🤯🤯 pic.twitter.com/ThMhx9tZ3l
— Khabri_Prasang (@Prasang_) April 17, 2024



Click it and Unblock the Notifications











