Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ಲಕ್ಷಣಗಳು ನಿರ್ಲಕ್ಷ್ಯ ಮಾಡಲೇಬೇಡಿ, ಪಾರ್ಶ್ವವಾಯು ಆಗಲಿದೆ ಎಂಬುವುದರ ಲಕ್ಷಣಗಳಿವು
ವಾತಾವರಣ ಹೆಚ್ಚಾಗುತ್ತಿದ್ದಂತೆ ಪಾರ್ಶ್ವವಾಯು ಅಪಾಯ ಅಧಿಕ.... ಇದ್ದಕ್ಕಿದ್ದಂತೆ ಸುಸ್ತಾಗುವುದು, ದೇಹ ಮರಗಟ್ಟಿದಂತಾಗಿ ಪಾರ್ಶ್ವವಾಯು ಉಂಟಾಗುವುದು. ಪಾರ್ಶ್ವವಾಯು ಉಂಟಾದರೆ ಅದರಿಂದ ಚೇತರಿಸಿಕೊಳ್ಳಲು ತುಂಬಾನೇ ಸಮಸಯ ಹಿಡಿಯುವುದು, ಇನ್ನು ಕೆಲವರು ಚೇತರಿಸಿಕೊಳ್ಳುವುದೇ ಇಲ್ಲ...
ಮೆದುಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳ ಪೂರೈಕೆ ಸರಿಯಾಗಿ ಆಗದೇ ಇದ್ದಾಗ ಬ್ರೈನ್ ಸ್ಟ್ರೋಕ್ ಅಥವಾ ಮೆದುಳಿನ ಪಾರ್ಶ್ವವಾಯು ಉಂಟಾಗುವುದು. ಪಾರ್ಶ್ವವಾಯು ಅಪಾಯವನ್ನು ದೇಹದಲ್ಲಿ ಕಂಡು ಬರುವ ಲಕ್ಷಣಗಳಿಂದಲೇ ಊಹಿಸಬಹುದು, ಅದ್ದರಿಂದ ಈ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಲೇಬೇಡಿ....

ಸುಸ್ತು, ದೇಹ ಮರಗಟ್ಟಿದಂತಾಗುವುದು
ಪಾರ್ಶ್ವವಾಯು ಬರುವ ಮುಂಚೆ ಕಂಡು ಬರುವ ಸಾಮಾನ್ಯ ಲಕ್ಷಣ ಇದಾಗಿದೆ, ದೇಹ ಮರಗಟ್ಟಿದಂತಾಗುವುದು, ಅದರಲ್ಲೂ ದೇಹದ ಒಂದು ಭಾಗ ಮರಗಟ್ಟಿದಂತಾಗುವುದು, ಪಾರ್ಶ್ವವಾಯು ಕೈಗಳ, ಕಾಲುಗಳ , ಮುಖದ ಸ್ವಾದೀನ ಕಳೆದುಕೊಳ್ಳುವಂತೆ ಮಾಡುವುದು. ನಡೆದಾಡುವಾಗ ದೇಹ ಸಮತೋಲನ ತಪ್ಪುವುದು. ಗಾಡಿ ಓಡಿಸುವಾಗ ಈ ರೀತಿ ಅನಿಸಿದರೆ ತಕ್ಷಣ ಗಾಡಿ ಸೈಡ್‌ಗೆ ಹಾಕಬೇಕು.
ಮಾತನಾಡಲು ಕಷ್ಟವಾಗುವುದು
ಪಾರ್ಶ್ವವಾಯು ಉಂಟಾದಾಗ ಮಾತುಗಳು ತೊದಲುವುದು, ಸ್ಪಷ್ಟವಾಗಿ ಉಚ್ಛಾರಣೆ ಮಾಡಲು ಸಾಧ್ಯವಾಗಲ್ಲ, ಸುತ್ತ ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ, ಕಣ್ಣುಗಳು ಮಂಜಾಗುವುದು. ಯಾವುದಾದರೂ ವಸ್ತುವನ್ನು ನೋಡಲು ಸಾಧ್ಯವಾಗಲ್ಲ, ವಸ್ತುಗಳು, ವ್ಯಕ್ತಿಗಳು ಮಂಜು ಮಂಜಾಗಿ ಕಾಣುವುದು.
ಮೈ ಬೆವರುವುದು, ತುಟಿ ಒಂದು ಪಕ್ಕಕ್ಕೆ ತಿರುಗುವುದು
ಇದು ಪಾರ್ಶ್ವವಾಯುವಿನ ಪ್ರಮುಖ ಲಕ್ಷಣವಾಗಿದೆ. ವ್ಯಕ್ತಿಯ ಮುಖ ನೋಡುತ್ತಿದ್ದಂತೆ ತಿಳಿಯುತ್ತದೆ, ಒಂದು ಕ್ಷಣವೂ ತಡಬೇಡಿ, ಕೂಡಲೇ ಸಮೀಪದ ಸುಸಜ್ಜಿತ ಆಸ್ಪತ್ರೆಗೆ ಮೊದಲು ತಲುಪಿಸಿ.
ಪಾರ್ಶ್ವವಾಯು ಉಂಟಾಗಲು ಪ್ರಮುಖ ಕಾರಣಗಳು
ಅತ್ಯಧಿಕ ರಕ್ತದೊತ್ತಡ
ರಕ್ತ ತೆಳುವಾಗಲು ಅಧಿಕ ಔಷಧ ಸೇವನೆ
ರಕ್ತನಾಳಗಳಿಗೆ ಹಾನಿ
ತಲೆಗೆ ಪೆಟ್ಟಾಗಿದ್ದರೆ
ಯಾರಿಗೆ ಅಪಾಯ ಹೆಚ್ಚು
ತುಂಬಾನೇ ದಪ್ಪಗಿರುವುದು
ದೈಹಿಕ ಚಟುವಟಿಕೆ ಕಡಿಮೆ ಇರುವುದು
ಮದ್ಯಸೇವನೆ
ಡ್ರಗ್ಸ್ ಸೇವನೆ
ವೈದ್ಯಕೀಯ ಕಾರಣಗಳು
ಅತ್ಯಧಿಕ ರಕ್ತದೊತ್ತಡ
ಅತ್ಯಧಿಕ ಧೂಮಪಾನ
ಮಧುಮೇಹ
ನಿದ್ರಾಹೀನತೆ
55 ವರ್ಷ ಮೇಲ್ಪಟ್ಟವರಲ್ಲಿ ಈ ಸೋಂಕು ಕಂಡು ಬರುವುದು
ಮಹಿಳೆಯರಿಗಿಂತ ಪುರುಷರಲ್ಲಿ ಪಾರ್ಶ್ಚವಾಯು ಹೆಚ್ಚಾಗಿ ಕಂಡು ಬರುವದುಉ
ಹಾರ್ಮೋನ್‌ಗಳು: ಹಾರ್ಮೋನ್ ಥೆರಪಿ ತೆಗೆದುಕೊಳ್ಳುವವರು
ತೊಂದರೆಗಳು
ಒಂದು ಭಾಗ ಬಲಹೀನವಾಗಿರುತ್ತದೆ
ಮಾತನಾಡಲು ಕಷ್ಟವಾಗುವುದು, ನುಂಗಲು ಕಷ್ಟವಾಗುವುದು
ನೆನಪಿನ ಶಕ್ತಿ ಕಡಿಮೆಯಾಗುವುದು
ನೋವು: ನೋವು, ಕೈ ಕಾಲುಗಳು ಮರಗಟ್ಟಿಂತಾಗುವುದು
ಸ್ಟ್ರೋಕ್‌ನ 3 ರೀತಿಯಲ್ಲಿ ಉಂಟಾಗುವುದು
ಇಸ್ಕೆಮಿಕ್ ಸ್ಟ್ರೋಕ್: ಇದು ಹೆಚ್ಚಾಗಿ ಕಂಡು ಬರುವ ಸ್ಟ್ರೋಕ್ ಆಗಿದೆ. ಶೇ. 87ರಷ್ಟು ಜನರಿಗೆ ಈ ಸ್ಟ್ರೋಕ್ ಕಂಡು ಬರುವುದು. ರಕ್ತ ಹೆಪ್ಪುಗಟ್ಟಿ, ಮೆದುಳಿಗೆ ಆಮ್ಲಜಮಕದ ಪೂರೈಕೆಯಾಗದೆ ಈ ಸ್ಟ್ರೋಕ್ ಉಂಟಾಗುವುದು.
ಹೆಮರಾಜಿಕ್ ಸ್ಟ್ರೋಕ್: ರಕ್ತನಾಳಗಳಿಗೆ ದಾಳಿಯಾದಾಗ ಈ ರೀತಿಯ ತೊಂದರೆ ಉಂಟಾಗುವುದು.
ಟ್ರಾನ್ಸೈಂಟ್ ಇಸ್ಕೆಮಿಕ್ ಅಟ್ಯಾಕ್: ಇದು ಮೆದುಳಿಗೆ ಸಾಮಾನ್ಯಕ್ಕಿಂತ ಹೆಚ್ಚು ರಕ್ತಸ್ರಾವವಾದಾಗ ಉಂಟಾಗುವುದು. ಈ ರೀತಿಯಾದಾಗ ರಕ್ತ ಸಂಚಾರ ಸಹಜ ಸ್ಥಿತಿಗೆ ಬಂದಾಗ ಯಾವುದೇ ಚಿಕಿತ್ಸೆಯಲ್ಲಿ ಗುಣವಾಗುವುದು.
ಚಿಕಿತ್ಸೆ
ಇಸ್ಕೆಮಿಕ್ ಸ್ಟ್ರೋಕ್
ರಕ್ತನಾಳಗಳು ಬ್ಲಾಕ್ ಆದಾಗ ಅಥವಾ ಕಿರಿದಾದಾಗ ಈ ರೀತಿಯ ಸ್ಟ್ರೋಕ್ ಉಂಟಾಗುವುದು. ಈ ರೀತಿಯಾದಾಗ ರಕ್ತ ಹೆಪ್ಪುಗಟ್ಟಿದ್ದನ್ನು ಕರಗಿಸುವ ಚಿಕಿತ್ಸೆ ನೀಡಲಾಗುವುದು. ಇದನ್ನು ಆಸ್ಪಿರಿನ್ ಅಥವಾ ಇಂಜೆಕ್ಷನ್ ನೀಡಿ ರೋಗಿಯ ಚೇತರಿಸುವಂತೆ ಮಾಡಲಾಗುವುದು. ಸ್ಟ್ರೋಕ್ ತಗುಲಿದ 4.5 ಗಂಟೆಯ ಒಳಗಾಗಿ ಈ ಚಿಕಿತ್ಸೆ ನೀಡಬೇಕು.
ಹೆಮರಾಜಿಕ್ ಸ್ಟ್ರೋಕ್: ರಕ್ತಸ್ರಾವವಾಗುವುದನ್ನು ತಡೆಗಟ್ಟಲು ಚಿಕಿತ್ಸೆ ನೀಡಲಾಗುವುದು. ರಕ್ತದೊತ್ತಡ ಕಡಿಮೆಯಾಗಲು ಚಿಕಿತ್ಸೆ ನೀಡಲಾಗುವುದು. ಸರ್ಜನ್ ರಕ್ತನಾಳಗಳಲ್ಲಿ ಉಂಟಾದ ತೊಂದರೆಯನ್ನು ಸರಿಪಡಿಸುತ್ತಾರೆ.
ಪಾರ್ಶ್ವವಾಯು ತಗುಲಿದ ವ್ಯಕ್ತಿಗೆ ಈ ಬಗೆಯ ಚಿಕಿತ್ಸೆ ನೀಡಿದರೆ ಒಳ್ಳೆಯದು
ಸ್ಪೀಚ್ ಥೆರಪಿ: ಪಾರ್ಶ್ವವಾಯು ಉಂಟಾದರೆ ಅವರು ಮಾತನಾಡುವುದು ಅರ್ಥ ಆಗಲ್ಲ, ಸ್ಪೀಚ್ ಥೆರಪಿ ಕೊಡಿಸಿದರೆ ಅವರಿಗೆ ಸಂವಹನ ಮಾಡಲು ಸುಲಭವಾಗುವುದು.
ಫಿಸಿಕಲ್ ಥೆರಪಿ: ಮಸಾಜ್ ಹಾಗೂ ಕೆಲವೊಂದು ವ್ಯಾಯಾಮ ಮಾಡಿಸಲಾಗುವುದು.
ಆಕ್ಯೂಪೇಷನಲ್ ಥೆರಪಿ: ಇದರಿಂದ ವ್ಯಕ್ತಿ ತನ್ನ ದೈನಂದಿನ ಕಾರ್ಯಗಳನ್ನು ಮಾಡಲು ಸುಲಭವಾಗುವುದು
ಸಹಾಯ: ಅವರಿಗೆ ಕುಟುಂಬದವರ ಹಾಗೂ ಸ್ನೇಹಿತರ ಬೆಂಬಲ ಬೇಕಾಗುವುದು, ಇವೆಲ್ಲಾ ಮಾಡಿದರೆ ರೋಗಿ ಬೇಗನೆ ಚೇತರಿಸಿಕೊಳ್ಳುವಂತಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications