Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
ಬೇಸಿಗೆಯಲ್ಲಿ ನಮ್ಮ ದೇಹ ಹಲವು ರೀತಿಯ ಪರಿವರ್ತನೆ ಹಾಗೂ ಹೊರಗಿನ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಹೊರಗಿನ ತಾಪಮಾನಕ್ಕೆ ದೇಹ ಹೊಂದಿಕೊಳ್ಳುವಲ್ಲಿ ಸ್ವಲ್ಪ ಬದಲಾವಣೆಯಾದರು ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇನ್ನು ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಾಯಿಯ ಹುಣ್ಣು ಅಥವಾ ನಾಲಗೆ ಮೇಲೆ ಹುಣ್ಣಾಗುವುದು ಸಾಮಾನ್ಯ ಎನ್ನುವಂತಾಗಿದೆ.
ನಾಲಗೆ ಮತ್ತು ಬಾಯಿಯಲ್ಲಿ ಹುಣ್ಣಾಗುವುದರಿಂದ ವಿಪರೀತಿ ನೋವಿಗೆ ಕಾರಣವಾಗುತ್ತದೆ. ಪ್ರಾಥಮಿಕವಾಗಿ ಇದು ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದೇಹದಲ್ಲಿ ವಿಪರೀತ ಶಾಖ ಉತ್ಪಾದನೆ ಹಾಗೂ ಆಹಾರ ಕ್ರಮದ ಕಾರಣದಿಂದಾಗಿ ಈ ಹುಣ್ಣು ಕಾಣಿಸಿಕೊಳ್ಳಬಹುದು. ಇದೊಂದು ಕಾರಣ ಹೊರತುಪಡಿಸಿ ಉಳಿದಂತೆ ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯಾದಾಗಲೂ ಈ ಹುಣ್ಣು ಕಾಣಿಸಿಕೊಳ್ಳುತ್ತದೆ.

ಹೌದು ನಮ್ಮ ದೇಹದಲ್ಲಿ ವಿಟಮಿನ್ B12 ಕಡಿಮೆಯಾದಾಗ ಬಾಯಿಯಲ್ಲಿ ಇಲ್ಲವೆ ನಾಲಗೆಯ ಮೇಲೆ ಹುಣ್ಣು ಕಾಣಿಸಿಕೊಳ್ಳುತ್ತದೆ. ಈ ವಿಟಮಿನ್ ಬಿ12 ನಮ್ಮ ನರಕೋಶಗಳು ಮತ್ತು ರಕ್ತಕಣಗಳನ್ನು ಆರೋಗ್ಯವಾಗಿಡುವಲ್ಲಿ ನೆರವಾಗುತ್ತದೆ. ಆದರೆ ಈ ವಿಟಮಿನ್ ಬಿ12 ಅನ್ನು ನಮ್ಮ ದೇಹ ಸ್ವತಂತ್ರವಾಗಿ ಉತ್ಪಾದಿಸುವ ಶಕ್ತಿ ಹೊಂದಿಲ್ಲ. ಈ ವಿಟಮಿನ್ ಬೇಕಾದರೆ ನಾವು ತರಕಾರಿ, ಹಣ್ಣು ಸೇರಿದಂತೆ ಕೆಲವೊಂದು ಆಹಾರವನ್ನು ಸೇವಿಸುವುದರ ಮೂಲಕ ಪಡೆಯಬಹುದಾಗಿದೆ.
ವಿಟಮಿನ್ ಬಿ 12 ಮಾಂಸ, ಡೈರಿ ಮತ್ತು ಮೊಟ್ಟೆಗಳಂತಹ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಕೆಲವು ಧಾನ್ಯಗಳು, ಬ್ರೆಡ್‌ನಲ್ಲೂ ಈ ವಿಟಮಿನ್ ಇರುವಿಕೆ ಕಾಣಬಹುದು. ಆದರೆ ನಮ್ಮ ದೇಹಕ್ಕೆ ಈ ವಿಟಮಿನ್ ಬಿ12 ಕಡಿಮೆಯಾಗಿದೆ ಎಂದು ಮೊದಲೆ ತಿಳಿಯುತ್ತದೆ. ಹಾಗಾದರೆ ಈ ವಿಟಮಿನ್ ಕಡಿಮೆಯಾಗಿರುವುದು ತಿಳಿಯುವುದಾದರು ಹೇಗೆ.?
ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ 12ನ ಅಂಶವಿರುವುದರಿಂದ ಬಹುತೇಕರಿಗೆ ಈ ವಿಟಮಿನ್ ಕೊರತೆಯಾಗುವುದಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಈ ವಿಟಮಿನ್ ಕೊರತೆಯ ಸಮಸ್ಯೆ ನಾವು ಕಾಣಬಹುದು. ವಿಟಮಿನ್ ಬಿ12 ಕೊರತೆ ಉಂಟಾದರೆ ಏಕಾಗ್ರತೆಯಿಂದ ಇರುವುದು ಕಷ್ಟವಾಗುತ್ತಾ ಹೋಗುತ್ತದೆ. ನರಗಳಿಗೆ ಹಾನಿಯುಂಟಾಗುವುದರಿಂದ ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಒಂದು ಕೆಲಸದ ಮೇಲೆ ನಿಮ್ಮ ಗಮನ ಇಡಲು ಸಾಧ್ಯವಾಗದಿರದ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗುತ್ತದೆ.
ನಾಲಗೆ, ಬಾಯಿ, ಕಣ್ಣಿನಲ್ಲಿ ಹುಣ್ಣು
ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಿಂದಾಗಿ ಬಾಯಿ, ನಾಲಗೆ, ಕಣ್ಣಿನಲ್ಲಿ ಹುಣ್ಣುಗಳು ಆಗಬಹುದು. ಇದು ಸುಮಾರು ವಾರಕ್ಕೂ ಹೆಚ್ಚು ದಿನ ಹುಣ್ಣು ದೊಡ್ಡದಾಗುತ್ತದೆ ಜೊತೆಗೆ ಉರಿ ಹೆಚ್ಚಾಗುತ್ತದೆ. ಇನ್ನು ಕಣ್ಣಿನಲ್ಲಿ ಮರಳಿನ ಕಣ ಸೇರಿಕೊಂಡು ಚುಚ್ಚಿದ ಅನುಭವವಾಗುತ್ತದೆ. ಕೇವಲ ಕಣ್ಣು ಮಾತ್ರವಲ್ಲ ಕೈ ಹಾಗೂ ಕಾಲುಗಳಲ್ಲಿ ಚುಚ್ಚಿದಂತಾಗುವುದು.
ವಿಟಮಿನ್ ಬಿ 12 ಕೊರತೆಯು ಅಸಹಜವಾಗಿ ದೊಡ್ಡ ಪ್ರಮಾಣದ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ, ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಇದು ರಕ್ತಹೀನತೆಗೆ ಕಾರಣವಾಗುತ್ತದೆ. ಇದು ಬಾಯಿ, ನಾಲಗೆ ಹುಣ್ಣಿಗೆ ಪರೋಕ್ಷವಾಗಿ ಕಾರಣವಾಗುತ್ತದೆ.
ವಿಟಮಿನ್ ಬಿ12 ಬೇಕಾದರೆ ಯಾವ ಆಹಾರ ಸೇವಿಸಬೇಕು?
ವಿಟಮಿನ್ ಬಿ 12 ವಿಟಮಿನ್ ಅನ್ನು ನಮ್ಮ ದೇಹ ಉತ್ಪಾದಿಸಲು ಸಾಧ್ಯವಿಲ್ಲ ಹೀಗಾಗಿ ನಾವು ಆ ವಿಟಮಿನ್ ಇರುವ ಆಹಾರ ಸೇವನೆ ಮಾಡಬೇಕಿದೆ. ವಿಟಮಿನ್ ಬಿ 12 ನ ಕೆಲವು ಉತ್ತಮ ಮೂಲಗಳೆಂದರೆ ಹಂದಿ ಮಾಂಸ, ಕೋಳಿ, ಕುರಿ ಮಾಂಸ, ಮೀನು, ಏಡಿ, ಹಾಲು, ಚೀಸ್ ಮತ್ತು ಮೊಸರು ಮತ್ತು ಮೊಟ್ಟೆಗಳಂತಹ ಡೈರಿ ಉತ್ಪನ್ನಗಳು.
ಬೀಟ್ರೂಟ್, ಕಡಲೆಗಳು, ಬೀನ್ಸ್, ಪಾಲಕ್ ಸೊಪ್ಪು ಹಾಗೂ ಬಹುಪಾಲು ಎಲ್ಲಾ ಹಣ್ಣುಗಳಲ್ಲು ನೀವು ಈ ವಿಟಮಿನ್ ಅಂಶ ನೋಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

