Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
ದೇವಗುರು ಮೇ 1ಕ್ಕೆ ವೃಷಭ ರಾಶಿಗೆ ಸಂಚರಿಸಿ 12 ತಿಂಗಳು ಅದೇ ರಾಶಿಯಲ್ಲಿ ಇರಲಿದೆ. ಗುರು ವೃಷಭ ರಾಶಿಯಲ್ಲಿ ಇರುವಾಗ ಮಕರ ರಾಶಿಯಲ್ಲಿ ಮೂರು ಹಾಗೂ 12ನೇ ಮನೆಯ ಅಧಿಪತಿಯಾದ ಗುರು ನಿಮ್ಮ 5ನೇ ಮನೆಯಲ್ಲಿ ಇರಲಿದೆ. ಗುರು ಪಂಚಮ ಸ್ಥಾನ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ ಬನ್ನಿ:

ಜನ್ಮ ಕುಂಡಲಿಯಲ್ಲಿ ಐದನೇ ಮನೆಯನ್ನು ಅದೃಷ್ಟದ ಮನೆ ಎಂದು ಹೇಳಲಾಗುವುದು, ಈ ಸ್ಥಾನ ವ್ಯಕ್ತಿಗೆ ಎಲ್ಲಾ ದಿಕ್ಕಿನಿಮದಲೂ ಪ್ರಗತಿ ತರಲಿದೆ. ವ್ಯಕ್ತಿಯ ಜೀವನದಲ್ಲಿ, ಸಂತೋಷ, ಸುಖ ಹೆಚ್ಚಾಗಲಿದೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ವಿವರವಾಗಿ ನೋಡುವುದಾದರೆ....
ದೇವ ಗುರು ಪಂಚಮ ಸ್ಥಾನದಲ್ಲಿ ಇದ್ದಾಗ
ಈ ಸ್ಥಾನ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಗುರು ಪಂಚಮ ಸ್ಥಾನದಲ್ಲಿ ಇದ್ದಾಗ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತೀರಿ, ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಪ್ರಗತಿಗೆ ಹೊಸ ಆಲೋಚನೆಗಳು ನಿಮಗೆ ಮೂಡಲಿದೆ. ನಿಮ್ಮ ಜ್ಞಾನ ಹೆಚ್ಚಾಗಲಿದೆ.
ಕುಟುಂಬ ಜೀವನ
ಗುರುವಿನ ಪಂಚಮ ಸ್ಥಾನದಲ್ಲಿ ಇರುವುದರಿಮದ ಕುಟುಂಬ ಜೀವನಕ್ಕೆ ಅನುಕೂಲಕರವಾಗಿದೆ. ಮಗುವಿನ ಅಪೇಕ್ಷಿತ ದಂಪತಿ ಸಿಹಿ ಸುದ್ದಿ ಪಡೆಯುತ್ತೀರಿ. ಮಕ್ಕಳಿರುವವರು ಮಕ್ಕಳ ಪ್ರಗತಿ ನೋಡಿ ಖುಷಿ ಪಡುತ್ತೀರಿ. ಇನ್ನು ಈ ಸಂಚಾರ ಪ್ರೇಮಿಗಳಿಗೂ ತುಂಬಾನೇ ಒಳ್ಳೆಯದಿದೆ. ಪ್ರೇಮ ವಿವಾಹವಾಗುತ್ತೀರಿ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ.
ನಿಮ್ಮಿಬ್ಬರ ಸಂಬಂಧ ಗಟ್ಟಿಯಾಗುವುದು, ಗುರುವಿನ ಸ್ಥಾನದಿಂದಾಗಿ ಸಂತೋಷದ ಕುಟುಂಬ ಜೀವನ ಅನುಭವಿಸಲು ಸಾಧ್ಯವಾಗುವುದು.
ವಿದೇಶದಲ್ಲಿ ಓದುವ ಅಥವಾ ಉದ್ಯೋಗ ಮಾಡುವ ಆಸೆ ಹೊಂದಿದ್ದರೆ
ಈ ಸಂಕ್ರಮಣ ನಿಮಗೆ ಅನುಕೂಲಕವಾಗಿರಲಿದೆ.... ಗುರು ಪಂಚಮ ಸ್ಥಾನದಲ್ಲಿದ್ದಾಗ ದೂರ ಪ್ರಯಾಣದ ಅವಕಾಶ ಸಿಗುವುದು, ಹೀಗಾಗು ನೀವು ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಲು ಸಾಧ್ಯವಾಗುವುದು. ಉನ್ನತ ಶಿಕ್ಷಣ ಮಾಡಲು ಯತ್ನಿಸುವವರಿಗೆ ಈ ಸಮಯ ಉತ್ತಮವಾಗಿದೆ.
ವೃತ್ತಿ ಜೀವನ
ಗುರುವಿನ ಸ್ಥಾನ ಅನುಕೂಲಕರವಾಗಿದೆ, ನಿಮ್ಮ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ, ನಿಮಗೆ ಬಡ್ತಿ ಸಿಗಲಲಿದೆ, ಸಂಬಳ ಹೆಚ್ಚಾಗಲಿದೆ. ಇನ್ನು ನೀವು ಬೇರೆ ಕಡೆ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಈ ಸಮಯ ಅನುಕೂಲಕರವಾಗಿದೆ. ನೀವು ಒಳ್ಳೆಯ ಸಂಬಳ ಪಡೆಯಬಹುದು, ಈ ದಿನ ನಿಮ್ಮ ಆರ್ಥಿಕ ಬದುಕು ಚೆನ್ನಾಗಿರಲಿದೆ.
ಆರ್ಥಿಕ ಬದುಕು
ನಿಮ್ಮ ಆರ್ಥಿಕ ಬದುಕು ಪ್ರಗತಿಯಾಗಲಿದೆ. ಉದ್ಯೋಗಿಗಳಿಗೆ ವೃತ್ತಿ ಬದುಕಿನಲ್ಲಿ ಒಳ್ಳೆಯ ಸ್ಥಾನ ದೊರೆಯುವುದು, ವ್ಯಾಪಾರಿಗಳ ವ್ಯವಹಾರ ವಿಸ್ತರಣೆಯಾಗುವುದು, ಹಾಗಾಗಿ ನಿಮಗೆ ಈ ಸಮಯ ಉತ್ತಮವಾಗಿರಲಿದೆ. ಆರ್ಥಿಕ ಕಾರಣಗಳಿಂದ ಬಾಕಿಯುಳಿದ ಕೆಲಸ ಕೂಡ ಗುರು ಸಂಚಾರದ ಬಳಿಕ ಪೂರ್ಣಗೊಳ್ಳಲಿದೆ. ಅಲ್ಲದೆ ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಕೂಡ ನೀವು ಉತ್ತಮ ಹಣ ಗಳಿಸಲು ಸಾಧ್ಯವಾಗುವುದು. ಹೀಗಾಗಿ ಆರ್ಥಿಕ ದೃಷ್ಟಿಯಿಂದ ಈ ಸಮಯ ಅದ್ಭುತವಾಗಿರಲಿದೆ.
ಪಂಚಮ ಸ್ಥಾನದಲ್ಲಿ ಗುರುವಿನ ಪ್ರಭಾವ
ಗುರುವಿನ ಪ್ರಭಾವದಿಂದ ನಿಮ್ಮ ಜ್ಞಾನ ಹೆಚ್ಚಾಗಲಿದೆ. ನಿಮ್ಮ ಮಾತು, ನಡವಳಿಕೆ ಚೆನ್ನಾಗಿರಲಿದೆ
ಯಾವುದೇ ಕಷ್ಟದ ಕೆಲಸವಿರಲಿ ಗುರುವಿನ ಬೆಂಬಲ ಇರುವುದರಿಂದ ಸುಲಭವಾಗಿ ಮಾಡಿ ಮುಗಿಸಲು ಸಾಧ್ಯವಾಗುವುದು.
ಗುರುಗ್ರಹದ ಮಂಗಳಕರ ಪ್ರಭಾವದಿಂದಾಗಿ ಬರಹಗಾರರಿಗೆ ತುಂಬಾ ಒಳ್ಳೆಯದು
ನಿಮ್ಮ ಬದುಕು ಸಂತೋಷದಿಂದ ಕೂಡಿರಲಿದೆ.
ಇನ್ನು ಅಹಂಕಾರದ ವರ್ತನೆ ತೋರದಂತೆ ಸಲಹೆ ನೀಡಲಾಗುವುದು. ಅಹಂಕಾರದ ವರ್ತನೆ ಸಮಸ್ಯೆಗಳನ್ನು ತರುವುದು, ಕುಟುಂಬದಲ್ಲಿಯೂ ಅಷ್ಟೇ ಕೋಪ ನಿಯಂತ್ರಿಸಿ, ಅವರಿಗಾಗಿ ಸಮಯ ನೀಡಿ, ಹೀಗೆ ಮಾಡಿದರೆ ಈ ಗುರು ಸಂಚಾರ ಅದ್ಭುತವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications