Latest Updates
-
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ
ಕಣ್ಣಿನ ಸೋಂಕಿಗೆ ಕಾರಣವಾಗಿರುವ ಮದ್ರಾಸ್ ಕಣ್ಣಿನ ಲಕ್ಷಣಗಳೇನು?
ಕಣ್ಣು ಕೆಂಪಗಾಗುವ ಮದ್ರಾಸ್ ಐ ಅಥವಾ ಅಮೇರಿಕಾದಲ್ಲಿ ಪಿಂಕ್ ಐ (Pink eye) ಎಂದು ಕರೆಯಲ್ಪಡುವ ಇಂತಹ ಕಾಯಿಲೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನು ಸಮಾನವಾಗಿ ಕಾಡುತ್ತದೆ. ಮುಖ್ಯವಾಗಿ ಇಂದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಹಾಗೂ ಮಕ್ಕಳಿಗೆ ಬಲುಬೇಗನೇ ಬಾಧಿಸುತ್ತದೆ. ಸಾಧಾರಣವಾಗಿ ಕಣ್ಣಿನ ಬಿಳಿ ಭಾಗವನ್ನು ಕೆಂಪಗಾಗಿಸುವ ಈ ಬೇನೆ ಕಣ್ಣುಗಳಲ್ಲಿ ಉರಿ ಹಾಗೂ ನೋಟದಲ್ಲಿ ತೊಂದರೆ ಬಾಧಿಸುತ್ತದೆ.
ಮೊದಲು ಒಂದು ಕಣ್ಣಿಗೆ ಬಂದ ಬೇನೆ ನಿಧಾನವಾಗಿ ಎರಡನೇ ಕಣ್ಣಿಗೂ ಹರಡುತ್ತದೆ. ಸಾಮಾನ್ಯವಾಗಿ ಯಾವುದೇ ಔಷಧವಿಲ್ಲದೇ ದೇಹದ ರೋಗ ನಿರೋಧಕ ಶಕ್ತಿಯನ್ನು ಏಳರಿಂದ ಹತ್ತು ದಿನಗಳಲ್ಲಿ ಕಡಿಮೆ ಮಾಡುತ್ತದೆ. ಇಂದು ಈ ಬೇನೆಗೆ ಔಷಧಿಗಳು ಲಭ್ಯವಿದ್ದು ಒಂದೆರೆಡು ದಿನಗಳಲ್ಲಿಯೇ ಇದರ ಪ್ರಖರತೆ ಕಡಿಮೆಯಾಗುತ್ತದೆ. ಈ ಬೇನೆಗೆ ಹಲವು ಮನೆಮದ್ದುಗಳೂ ಪರಿಣಾಮಕಾರಿಯಾಗಿವೆ. ಕಂಪ್ಯೂಟರ್ ಬಳಕೆದಾರರಿಗೆ ಕಣ್ಣಿನ ಕಾಳಜಿಯ ಟಿಪ್ಸ್
ಈ ಬೇನೆಗೆ ಕಾರಣವಾದ ಕೀಟಾಣುಗಳನ್ನು ಆಧರಿಸಿ ಮೂರು ವಿಧಗಳನ್ನಾಗಿ ವಿಂಗಡಿಸಲಾಗಿದೆ. staphylococcal ಅಥವಾ streptococcal ಎಂಬ ಬ್ಯಾಕ್ಟೀರಿಯಾ ಗಳಿಂದ ಬಂದರೆ bacterial conjunctivitis, ಧೂಳು, ಹೊಗೆ ಮೊದಲಾದವುಗಳ ಅಲರ್ಜಿಯ ಕಾರಣವಾಗಿ ಬಂದರೆ allergic conjunctivitis ಹಾಗೂ ಯಾವುದಾದರೂ ವೈರಸ್ಸಿನ ಕಾರಣ ಬಂದರೆ viral conjunctivitis ಎಂದು ಕರೆಯಲಾಗುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಮೂಲಕ ಬಂದಿರುವ ಬೇನೆ ಕೂಡಲೇ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಇವು ಗಾಳಿಯಲ್ಲಿ ಹರಡುವುದಿಲ್ಲವಾದರೂ ನೈರ್ಮಲ್ಯದ ಕೊರತೆಯಿಂದ ಶೀಘ್ರವಾಗಿ ಹರಡುತ್ತವೆ. ನೈರ್ಮಲ್ಯವನ್ನು ಎಂದಿಗೂ ಕಾಪಾಡುವ ಅಗತ್ಯವಿದೆಯಾದರೂ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಬೇನೆ ಬಂದರೆ ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು. ಇದು ಕಣ್ಣಿನಲ್ಲಿ ಬೆಳೆಯುವ ಅಪಾಯಕಾರಿಯಾದ ಹುಳ!

ಕಣ್ಣುಬೇನೆಯ ಲಕ್ಷಣಗಳು
ಅತಿಯಾದ ಕಣ್ಣೀರು, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ತುರಿಕೆ, ಬಾವು, ಸತತ ನೋವು, ಬೇನೆಯಿರುವ ಕಣ್ಣಿನಲ್ಲಿ ಪೊರೆಯಾಗುವುದು, ಕೊಂಚವೂ ಪ್ರಖರವಾದ ಬೆಳಕನ್ನು ನೋಡಲು ಅಸಾಧ್ಯವಾಗುವುದು, ಕಣ್ಣಿನಿಂದ ಬಿಳಿಬಣ್ಣದ ಪಿಸರು ಒಸರುವುದು (ವೈರಸ್ಸಿನಿಂದ ಉಂಟಾದ ಬೇನೆಯ ಲಕ್ಷಣ), ಹಳದಿ ಅಥವಾ ಹಸಿರುಮಿಶ್ರಿತ ಹಳದಿಬಣ್ಣದ ಪಿಸರು ಒಸರುವುದು (ಬ್ಯಾಕ್ಟೀರಿಯಾದಿಂದ ಉಂಟಾದ ಬೇನೆಯ ಲಕ್ಷಣ)

ಕಣ್ಣುಬೇನೆಗೆ ಮನೆಮದ್ದು: ಐಸ್ ತುಂಬಿದ ಚಿಕ್ಕ ಚೀಲವನ್ನು ಕಣ್ಣಿಗೊತ್ತಿಕೊಳ್ಳುವುದು
ಈ ವಿಧಾನದಿಂದ ಕಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳ ಚಟುವಟಿಕೆಗಳಿಗೆ ತಡೆಯುಂಟಾಗುವುದರಿಂದ ಕಣ್ಣಿನ ಬಾವು, ತುರಿಕೆ ಮತ್ತು ಕೆಂಪಗಾಗುವುದನ್ನು ತಡೆಗಟ್ಟಬಹುದು. ಇದಕ್ಕಾಗಿ ಬಟ್ಟೆಯನ್ನು ಐಸ್ ನೀರಿನಲ್ಲಿ ಮುಳುಗಿಸಿ ಹಿಂಡಿ ತಣ್ಣಿಗಿರುವಾಗಲೇ ಕಣ್ಣುಗಳನ್ನು ಮುಚ್ಚಿ ರೆಪ್ಪೆಗಳ ಮೇಲಿಡಬೇಕು. ಇದೇ ಬಟ್ಟೆಯನ್ನು ಮತ್ತೆ ಬಳಸಬಾರದು. ಇನ್ನೊಂದು ಹೊಸ ಬಟ್ಟೆಯನ್ನು ಬಳಸಿ ಇದೇ ವಿಧಾನವನ್ನು ಮುಂದುವರೆಸಬೇಕು. ಆದರೆ ಇದು ಬೇನೆಯ ಪ್ರಖರತೆಯನ್ನು ಕಡಿಮೆಗೊಳಿಸಬಲ್ಲುದೇ ಹೊರತು ಬೇನೆಗೆ ಪೂರ್ಣ ಚಿಕಿತ್ಸೆಯಲ್ಲ.

ಹಾಲು ಮತ್ತು ಜೇನು
ಸ್ವಲ್ಪ ಅಪ್ಪಟ ಜೇನು ಮತ್ತು ಪ್ಯಾಶ್ಚರೀಕರಿಸಿದ ಕೊಂಚ ಬಿಸಿಯಾದ ಹಸುವಿನ ಹಾಲನ್ನು ಸಮಪ್ರಮಾಣದಲ್ಲಿ ಬೆರೆಸಿ. ಈ ಮಿಶ್ರಣದಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಕೊಂಚ ಓರೆಯಾಗಿ ಮಲಗಿ ಕಣ್ಣು ತೆರೆದಿದ್ದಂತೆ ಒಂದು ಒಳಲೆಯಿಂದ ಈ ರಸ ಕಣ್ಣಿನ ಮೂಲಕ ಹರಿಯುವಂತೆ ಮಾಡಬೇಕು. ಕಣ್ಣುರೆಪ್ಪೆಗಳು ಮುಚ್ಚುವ ಸಂಭವವಿರುವುದರಿಂದ ಈ ಕಾರ್ಯಕ್ಕೆ ಇನ್ನೊಬ್ಬರ ಸಹಾಯ ಬೇಕು. ಹತ್ತಿಯ ಉಂಡೆಯೊಂದನ್ನು ಈ ರಸದಲ್ಲಿ ಅದ್ದಿ ಕಣ್ಣುಗಳನ್ನು ಒರೆಸಿಕೊಳ್ಳಬೇಕು. ಕೆಲವು ಹನಿಗಳನ್ನು ಕಣ್ಣಿನೊಳಕ್ಕೆ ಬೀಳುವಂತೆ ಮಾಡಿ ಬಿಗಿಯಾಗಿ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು. ದಿನಕ್ಕೆ ಒಂದೆರಡು ಬಾರಿ ಈ ವಿಧಾನ ಅನುಸರಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಕೊತ್ತಂಬರಿ ಬೀಜ
ಸ್ವಚ್ಛಪಡಿಸಿದ ಕೊತ್ತಂಬರಿ ಬೀಜಗಳನ್ನು ಕುಡಿಯುವ ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ಸುಮಾರು ಹತ್ತು ನಿಮಿಷದ ಬಳಿಕ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಬೇಕು. ಪೂರ್ಣವಾಗಿ ತಣ್ಣಗಾದ ಬಳಿಕ ನೀರನ್ನು ಸೋಸಿ ಕಣ್ಣುಗಳನ್ನು ಈ ನೀರಿನಿಂದ ತೊಳೆದುಕೊಳ್ಳಬೇಕು. ಹತ್ತಿಯುಂಡೆಯನ್ನು ಈ ನೀರಿನಲ್ಲಿ ಅದ್ದಿ ಕಣ್ಣುಗಳನ್ನು ಒರೆಸುವುದರಿಂದ ಹಾಗೂ ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದ ಉರಿತ, ಬಾವು ಮತ್ತು ನೋವುಗಳಿಂದ ಶೀಘ್ರ ಶಮನ ಪಡೆಯಬಹುದು.

ಬಿಸಿ ಎಣ್ಣೆಯ ಹಬೆ
ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಗಂಧ ಎಣ್ಣೆಗಳಾದ ಗುಲಾಬಿ, ಲ್ಯಾವೆಂಡರ್ ಅಥವಾ ಕ್ಯಾಮೋಮೈಲ್ ಎಣ್ಣೆಗಳ ಕೆಲವು ಹನಿಗಳನ್ನು ಒಂದು ಸ್ವಚ್ಛವಾದ ಬಿಸಿಯಾದ ಬಟ್ಟೆಯ ಪಟ್ಟಿಯ ಮೇಲೆ ಚಿಮುಕಿಸಬೇಕು. ಈ ಪಟ್ಟಿಯಲ್ಲಿನ ಎಣ್ಣೆ ಹೀರಿದ ಭಾಗ ಕಣ್ಣುಗಳಿಗೆ ತಾಕುವಂತೆ ಮುಚ್ಚಿಕೊಳ್ಳಬೇಕು. ಪ್ರತಿಬಾರಿ ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ದಿನಕ್ಕೆ ಮೂರು ನಾಲ್ಕು ಬಾರಿ ಹಚ್ಚಿಕೊಳ್ಳಬೇಕು. ಇದರಿಂದ ಉರಿ, ಬೇನೆ ಕಡಿಮೆಯಾಗುವುದು ಮಾತ್ರವಲ್ಲ, ಸೋಂಕು ಸಹಾ ಕಡಿಮೆಯಾಗುತ್ತದೆ.

ದೊಡ್ಡ ಜೀರಿಗೆ (ಸೌಂಫ್)
ಕೊಂಚ ದೊಡ್ಡಜೀರಿಗೆಯನ್ನು ಕುಡಿಯುವ ನೀರಿನಲ್ಲಿ ಸುಮಾರು ಹತ್ತು ನಿಮಿಷ ಕುದಿಸಿ ಆರಲು ಬಿಡಬೇಕು. ಈ ನೀರನ್ನು ಶೋಧಿಸಿದ ಬಳಿಕ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಪ್ರತಿದಿನ ಎರಡು ಬಾರಿ ಈ ವಿಧಾನ ಅನುಸರಿಸುವುದರಿಂದ ಬೇನೆ, ಉರಿ, ಕಣ್ಣು ಕೆಂಪಗಾಗಿರುವುದು ಕಡಿಮೆಯಾಗುತ್ತದೆ.

ಸೇಬಿನ ವಿನೇಗರ್
ಒಂದು ಕಪ್ ಲೋಟದಲ್ಲಿ ಒಂದು ದೊಡ್ಡಚಮಚ ಸೇಬಿನ ವಿನೇಗರ್ (apple cider vinegar) ಸೇರಿಸಿ ಕಲಕಿಕೊಳ್ಳಿ. ಹತ್ತಿಯುಂಡೆಯನ್ನು ಈ ನೀರಿನಲ್ಲಿ ಅದ್ದಿ ಕಣ್ಣುಗಳನ್ನು ಒರೆಸುವುದರಿಂದ ಹಾಗೂ ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದ ಶೀಘ್ರ ಉಪಶಮನ ದೊರಕುತ್ತದೆ. ಆದರೆ ಈ ವಿನೆಗರ್ ಆಯ್ಕೆಮಾಡುವಾಗ ಅದರ ವಿವರಗಳಲ್ಲಿ ಮ್ಯಾಲಿಕ್ ಆಮ್ಲ (malic acid) ಇದೆಯೆಂಬುದನ್ನು ಖಚಿತಪಡಿಸಿಕೊಳ್ಳಿ. ಕಣ್ಣಿನ ಬ್ಯಾಕ್ಟೀರಿಯಾಗಳಿಗೆ ಈ ಆಮ್ಲ ರಾಮಬಾಣವಾಗಿದೆ.

ಜೇನು
ಜೇನನ್ನು ಎರಡು ವಿಧದಲ್ಲಿ ಉಪಯೋಗಿಸಬಹುದು. ಮೊದಲನೆಯದಾಗಿ ಜೇನಿನ ಚಿಕ್ಕ ಹನಿಯೊಂದು ನೇರವಾಗಿ ಕಣ್ಣಿನ ಮೇಲೆ ಬೀಳುವಂತೆ ಹಾಕಿ ಕಣ್ಣು ಮುಚ್ಚಿಕೊಳ್ಳುವುದು. ಎರಡನೆಯದಾಗಿ ಎರಡು ಕಪ್ ಕುದಿಯುವ ನೀರಿನಲ್ಲಿ ಮೂರು ದೊಡ್ಡ ಚಮಚ ಜೇನನ್ನು ಮಿಶ್ರಣ ಮಾಡಿ ತಣ್ಣಗಾದ ಬಳಿಕ ಈ ನೀರನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು.

ಆಲುಗಡ್ಡೆ
ಹಸಿ ಆಲುಗಡ್ಡೆಯನ್ನು ಅಡ್ಡಲಾಗಿ ಕತ್ತರಿಸಿ ತೆಳುವಾದ ಎರಡು ಬಿಲ್ಲೆಗಳನ್ನಾಗಿಸಿಕೊಳ್ಳಬೇಕು. ಈ ಬಿಲ್ಲೆಗಳನ್ನು ರಾತ್ರಿ ಕಣ್ಣುಗಳ ಮೇಲೆ ಇರಿಸಿಕೊಂಡು ಮಲಗಿಬಿಡಿ. (ಹೊರಳಾಡುವ ಅಭ್ಯಾಸವಿದ್ದರೆ ಈ ಬಿಲ್ಲೆ ಕಳಚಿಹೋಗದಂತೆ ಬಟ್ಟೆಯ ಪಟ್ಟಿಯನ್ನು ಸಡಿಲವಾಗಿ ಕಟ್ಟಿಕೊಳ್ಳಿ). ಸತತವಾಗಿ ಮೂರು ದಿನಗಳ ಕಾಲ ಈ ವಿಧಾನ ಅನುಸರಿಸುವುದರಿಂದ ಉತ್ತಮ ಪರಿಣಾಮ ಬೀರುತ್ತದೆ.

ಅರಿಶಿನ
ಒಂದು ಕಪ್ ಕುದಿಯುವ ನೀರಿಗೆ ಎರಡು ಟೀ ಚಮಚ ಅರಿಶಿನದ ಪುಡೆ ಬೆರೆಸಿ. ಕಣ್ಣುಗಳು ತಡೆದುಕೊಳ್ಳುವಷ್ಟು ಬಿಸಿಯಿರುವಾಗ ಹತ್ತಿಯುಂಡೆಯಲ್ಲಿ ಈ ನೀರನ್ನು ಅದ್ದಿ ಕಣ್ಣುಗಳನ್ನು ಒರೆಸಿಕೊಳ್ಳಿ.

ಕುಲದ ಮಲ್ಲಿಗೆ (Calendula)
ಒಂದು ಕಪ್ ನೀರಿನಲ್ಲಿ ಎರಡು ಟೀ ಚಮಚದಷ್ಟು ಕುಲದ ಮಲ್ಲಿಗೆ ಹೂಗಳ ದಳಗಳನ್ನು ಸುಮಾರು ಹತ್ತು ನಿಮಿಷಗಳವರೆಗೆ ಬೇಯಿಸಿ. ಪೂರ್ಣವಾಗಿ ತಣ್ಣಗಾದ ಮೇಲೆ ಈ ನೀರನ್ನು ಸೋಸಿ ಕಣ್ಣುಗಳನ್ನು ತೊಳೆದುಕೊಳ್ಳಿ. ಹೆಚ್ಚಿನ ಪರಿಣಾಮಕ್ಕಾಗಿ ಸ್ವಲ್ಪ ಬಿಸಿಯಿರುವಂತೆ ಹತ್ತಿಯುಂಡೆಗಳನ್ನು ಅದ್ದಿ ಕಣ್ಣುಗಳನ್ನು ಆಗಾಗ ಒರೆಸುತ್ತಿರಿ.

ಲೋಳೆಸರ (Aloe Vera)
ಲೋಳೆಸರವನ್ನು ಕಣ್ಣುಗಳನ್ನು ತೊಳೆದುಕೊಳ್ಳಲು ಹಾಗೂ ಕಣ್ಣುಗಳ ಮೇಲೆ ಒತ್ತಿಕೊಳ್ಳಲೂ ಉಪಯೋಗಿಸಬಹುದು. ಒಂದು ಹತ್ತಿಯುಂಡೆಯನ್ನು ಲೋಳೆಸರದ ರಸದಲ್ಲಿ ಅದ್ದಿ ಕಣ್ಣುಗಳನ್ನು ಒತ್ತಿಕೊಳ್ಳಬೇಕು. ಕಣ್ಣುಗಳನ್ನು ತೊಳೆದುಕೊಳ್ಳಲು ಒಂದು ಕಪ್ ಕುದಿಸಿ ಆರಿಸಿದ ನೀರಿಗೆ ಅರ್ಧ ಟೀ ಚಮಚ ಲೋಳೆಸರವನ್ನು ಸೇರಿಸಿ ಉಪಯೋಗಿಸಬೇಕು. ಇದೇ ರಸವನ್ನು ಇನ್ನೊಮ್ಮೆ ಉಪಯೋಗಿಸಬೇಕಾದರೆ ಅರ್ಧ ಟೀ ಚಮಚ ಬೋರಿಕ್ ಆಮ್ಲದ ಪುಡಿಯನ್ನು ಸೇರಿಸಬೇಕು.

ನೆಲ್ಲಿಕಾಯಿ
ಒಂದು ಕಪ್ ನೆಲ್ಲಿಕಾರಿ ರಸವನ್ನು ಎರಡು ಟೀ ಚಮಚ ಜೇನಿನೊಂದಿಗೆ ಸೇರಿಸಿ ಈ ಮಿಶ್ರಣವನ್ನು ದಿನಕ್ಕೆರಡು ಬಾರಿ ಸೇವಿಸಬೇಕು.

ವಿವಿಧ ತರಕಾರಿಗಳ ರಸಗಳು
ಪಾಲಕ್ ಸೊಪ್ಪಿನ ರಸ 200 ಮಿಲೀ, ಕ್ಯಾರೆಟ್ ರಸ 300 ಮಿಲೀ ಸೇರಿಸಿ ಶರಬತ್ತಿನಂತೆ ಕುಡಿಯಬೇಕು. ಕೊತ್ತಂಬರಿಯಂತೆಯೇ ತೋರುವ ಪಾರ್ಸ್ಲೇ ಸೊಪ್ಪಿನ 200 ಮಿಲೀ ರಸವನ್ನೂ 300 ಮಿಲೀ ಕ್ಯಾರೆಟ್ ರಸದೊಂದಿಗೆ ಸೇರಿಸಿ ಸೇವಿಸಬಹುದು. ದಿನಕ್ಕೆರಡು ಅಥವಾ ಮೂರು ಬಾರಿ ಕುಡಿಯುವುದರಿಂದ ಕಣ್ಣುಬೇನೆಗೆ ಶೀಘ್ರ ಉಪಶಮನ ದೊರಕುತ್ತದೆ.

ಲಿಂಬೆರಸ
ಲಿಂಬೆರಸದ ಕೆಲವು ಹನಿಗಳನ್ನು ಹಸ್ತಗಳ ಮೇಲೆ ಚಿಮುಕಿಸಿ ಕಣ್ಣುಗಳ ಅಕ್ಕಪಕ್ಕದಲ್ಲಿ ನಯವಾಗಿ ಅದ್ದಬೇಕು. ಸ್ವಚ್ಛವಾದ ಬೆರಳಿನಿಂದ ಕಣ್ಣಿನ ಬಿಳಿಭಾಗದಲ್ಲಿ ಸ್ವಲ್ಪವೇ ಸ್ವಲ್ಪ ಲೆಂಬೆ ರಸವನ್ನು ಹಚ್ಚಬೇಕು. ಸುಮಾರು ಐದು ನಿಮಿಷ ಭಾರೀ ಉರಿಯಾದರೂ ಆ ಬಳಿಕ ಒಸರುವ ಪಿಸರಿನ ಮೂಲಕ ಕಣ್ಣಿನಲ್ಲಿದ್ದ ಸಕಲ ಬ್ಯಾಕ್ಟೀರಿಯಾಗಳು ಹೊರಬರುತ್ತವೆ.

ಉಪ್ಪು
ಒಂದು ಕಪ್ ಕುದಿಯುತ್ತಿರುವ ನೀರಿಗೆ ಸ್ವಲ್ಪ ಉಪ್ಪು ಹಾಕಬೇಕು. ಹತ್ತಿಯುಂಡೆಯನ್ನು ಈ ನೀರಿನಲ್ಲಿ ಅದ್ದಿ ಎಷ್ಟು ಸಾಧ್ಯವೋ ಅಷ್ಟು ಬೆಚ್ಚಗಿರುವಂತೆ ಕಣ್ಣುಗಳ ಮೇಲೆ ಅದ್ದಿಕೊಳ್ಳಬೇಕು.

ಮೊಸರು
ಕಣ್ಣುಗಳನ್ನು ಮುಚ್ಚಿಕೊಂಡು ದಪ್ಪ ಮೊಸರನ್ನು ಹಚ್ಚಿಕೊಂಡು ಒಣಗಲು ಬಿಡಬೇಕು. ಇಡಿಯ ರಾತ್ರಿ ಬಿಟ್ಟರೆ ಸಹಾ ಒಳ್ಳೆಯದು. ಬಳಿಕ ಸ್ವಚ್ಛವಾದ ತಣ್ಣೀರಿನಿಂದ ತೊಳೆದುಕೊಳ್ಳಬೇಕು



Click it and Unblock the Notifications











