Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
ದ್ವಾರಕೀಶ್ ಲವ್ ಸ್ಟೋರಿ ಏನು ಗೊತ್ತಾ.? ಎರಡನೇ ಮದ್ವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್..!
ಕನ್ನಡ ಚಿತ್ರರಂಗದ ಹಿರಿನ ನಟ- ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ. ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಗಳಿಸಿದ್ದ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕನ್ನಡದಲ್ಲಿ ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆ ಮಾಡಿದ್ದಾರೆ. ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ದ್ವಾರಕೀಶ್ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು.
ಕಳೆದ ಕೆಲವು ದಿನಗಳ ಹಿಂದೆ ದ್ವಾರಕೀಶ್ ನಿಧನ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಈ ವೇಳೆ ದ್ವಾರಕೀಶ್ ಅವರೇ ವಿಡಿಯೋ ಮಾಡುವ ಮೂಲಕ ಆರೋಗ್ಯವಾಗಿ ಇರುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿಕೊಂಡಿದ್ದರು.

ನಿನ್ನೆ ರಾತ್ರಿ (ಏಪ್ರಿಲ್ 15) ದ್ವಾರಕೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಸಣ್ಣ ಪ್ರಮಾಣದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ರಾತ್ರಿಯಿಡಿ ನಿದ್ದೇ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಸ್ವಲ್ಪ ಹೊತ್ತು ನಿದ್ದೆ ಮಾಡುತ್ತೇನೆ ಎಂದು ಮಲಗಿದ್ದರು. ಆ ವೇಳೆ ಹಾರ್ಟ್ ಅಟ್ಯಾಕ್ ಆಗಿದ್ದಾಗಿ ದ್ವಾರಕೀಶ್ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದರು.
ಆಪ್ತಮಿತ್ರ ಸಿನಿಮಾ ಮಾಡಿ ಮನೆ ಖರೀದಿಸಿದ್ದ ದ್ವಾರಕೀಶ್
ದ್ವಾರಕೀಶ್ ಆರಂಭದ ದಿನದಿಂದಲೂ ಕಷ್ಟಪಟ್ಟು ಬೆಳೆದವರು. ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಅರವಿಂದ್ ನಟನೆಯ ಆಪ್ತಮಿತ್ರ ಸಿನಿಮಾ ಮಾಡಿದ್ದ ದ್ವಾರಕೀಶ್ ಗೆಲುವು ಕಂಡಿದ್ದರು. ಈ ಸಿನಿಮಾ ಹಣದಿಂದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಅವರು ಸ್ವಂತ ಮನೆ ಖರೀದಿಸಿದ್ದರಯ.
ಗೌರವ ಡಾಕ್ಟರೇಟ್ ಒಲಿದಿತ್ತು
ಕಳೆದ 2022ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಿಸಿತ್ತು. ಸಿನಿಮಾ ಕ್ಷೇತ್ರಕ್ಕೆ ಅವರು ನೀಡುರುವ ಕೊಡುಗೆಯನ್ನು ಮನಗಂಡು ಈ ಗೌರವ ಡಾಕ್ಟರೇಟ್ ನೀಡುತ್ತಿರುವುದಾಗಿ ತಿಳಿಸಿತ್ತು. ನಟರಾಗಿ, ನಿರ್ದೇಶಕ, ನಿರ್ಮಾಪಕರಾಗಿ ಹಲವಾರು ಚಿತ್ರಗಳ ಕೊಡುಗೆ ನೀಡಿರುವ ಅವರು ಕನ್ನಡ ಚಿತ್ರರಂಗಕ್ಕೆ ಕಲಾಸೇವೆ ಸಲ್ಲಿಸಿದ್ದಾರೆ. ಡಾ. ವಿಷ್ಣುವರ್ಧನ್, ಡಾ. ರಾಜ್‌ಕುಮಾರ್ ಹಾಗೂ ಅಂಬರೀಶ್‌ರಂತಹ ಮೇರು ನಟರೊಂದಿಗೆ ಹಿರಿಯ ತೆರೆಯಲ್ಲಿ ಮಿಂಚಿರುವ ನಟ ದ್ವಾರಕೀಶ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ 40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು.
ಎರಡು ಮದುವೆಯಾಗಿದ್ದ ದ್ವಾರಕೀಶ್
ಮೊದಲ ಪತ್ನಿಗೆ ಮಕ್ಕಳಿದ್ದಾಗಲೇ ದ್ವಾರಕೀಶ್ ಎರಡನೇ ಮದುವೆಯಾಗಿದ್ದರು. ಆದರೆ ಅವರ ಪ್ರೇಮ ಕಥೆ ಬಹಳ ಚರ್ಚೆ ಹುಟ್ಟುಹಾಕಿತ್ತು. ಒಮ್ಮೆ ಅವರೇ ಈ ಕುರಿತು ಹೀಗೆ ಹೇಳಿಕೊಂಡಿದ್ದರು. "ಎಲ್ಲರನ್ನು ಮದರಾಸಿನ ಫೈವ್ ಸ್ಟಾರ್ ಹೋಟೆಲೊಂದಕ್ಕೆ ಕರೆದುಕೊಂದು ಹೋದೆ. ಊಟ ಮಾಡುವ ಮೊದಲು ಒಂದು ನೋಟ್ ಪುಸ್ತಕವನ್ನು ಅಂಬುಜಾ ಮುಂದಿಟ್ಟು ಹೇಳಿದೆ : ಇದೊಂದು ಕಾದಂಬರಿ ಅಂತಿಟ್ಕೋ. ಇದು ನನ್ನ ಲೈಫ್ ಸ್ಟೋರಿ. ಲವ್‌ನಲ್ಲಿ ಬಿದ್ದಿದ್ದೇನೆ. ಆಕೆಯ ಹೆಸರು ಶೈಲಜಾ. ನೀನು ಒಪ್ಪಿದರೆ ಮದುವೆಯಾಗಬೇಕೂಂತಿದ್ದೇನೆ. ಇಲ್ಲವದರೆ ಇಲ್ಲ. ಮರೆತುಬಿಡಲು ಪ್ರಯತ್ನಿಸುತ್ತೇನೆ. ಈ ನೋಟ್ ಪುಸ್ತಕದ ಕೊನೆಯ ಪುಟದಲ್ಲಿ ನಿನಗೆ ಏನನ್ನಿಸುತ್ತದೋ ಅದನ್ನು ಬರೆ.
ಕಾದಂಬರಿ ಸುಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ದುಃಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ಇಷ್ಟನ್ನು ಹೇಳಿ ಮೌನವಾದೆ. ಐದೇ ಐದು ನಿಮಿಷ ಯೋಚಿಸಿದ ಅಂಬುಜಾ ಆ ನೋಟ್ ಪುಸ್ತಕವನ್ನು ಹತ್ತಿರ ಎಳೆದುಕೊಂಡು ಕೊನೆಯ ಪುಟದಲ್ಲಿ ಅದೇನನ್ನೋ ಬರೆದಳು. ನಾನು ಓದಿದೆ : ನಿಮ್ಮ ಸಂತೋಷವೇ ನನ್ನ ಸಂತೋಷ. ಹೆಂಡತಿಯ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೆ ಅಲ್ಲಿಂದಲೇ ಫೋನ್ ಮಾಡಿ ಶೈಲಜಾಗೆ ವಿಷಯ ತಿಳಿಸಿದೆ.
ಅಂಬುಜಾ ಕೂಡಾ ಆಕೆಯ ಜೊತೆ ಮಾತನಾಡಿದಳು. ಐವರು ಮಕ್ಕಳೂ ಕಂಗ್ರಾಟ್ಸ್ ಹೇಳಿದರು. ನೀವು ನಂಬುವುದಿಲ್ಲ. ಆದರೆ ಇದು ನಿಜ. ಎಲ್ಲರ ಹಾಜರಿಯಲ್ಲೇ ನಾನು ಶೈಲಜಾಳ ಕುತ್ತಿಗೆಗೆ ತಾಳಿ ಕಟ್ಟಿದೆ. ಮೊದಲ ಹೆಂಡತಿ, ಮಕ್ಕಳೆಲ್ಲಾ ಶುಭ ಹಾರೈಸಿದರು. ಸಿನಿಮಾದಲ್ಲಾದರೆ ದುಃಖಾಂತವಾಗಬಹುದಾಗಿದ್ದ ಕಥೆ ನನ್ನ ಸ್ವಂತ ಬದುಕಿನಲ್ಲಿ ಸುಖಾಂತವಾಯಿತು ಎಂದಿದ್ದರು.



Click it and Unblock the Notifications