Just In
Don't Miss
- News
ಪಿಎಸ್ಐ ಹಗರಣ: ಬೊಮ್ಮಾಯಿ ರಾಜೀನಾಮೆಗೆ ರಾಹುಲ್ ಗಾಂಧಿ ಒತ್ತಾಯ
- Technology
ಶಿಯೋಮಿಯಿಂದ ಮತ್ತೆ ಹೊಸ ಸ್ಮಾರ್ಟ್ಬ್ಯಾಂಡ್ ಲಾಂಚ್; ಇದರ ಫೀಚರ್ಸ್ ಏನು?
- Automobiles
ಭಾರತದಲ್ಲಿ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಎಸ್ಪಿ ಬೈಕ್ ಬಿಡುಗಡೆ
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ನನ್ನ ಹೆಂಡತಿ ಮೋಸ ಮಾಡುತ್ತಿದ್ದಾಳಾ? ಅವಳ ಕಳ್ಳಾಟ ಇವುಗಳಿಂದ ಕಂಡುಹಿಡಿಯಬಹುದು ಗೊತ್ತಾ?
ಸಂಸಾರವೆಂದರೆ ಪ್ರೀತಿ, ನಂಬಿಕೆ. ಆ ನಂಬಿಕೆಗೆ ದ್ರೋಹವಾದರೆ ಅದನ್ನು ಸಹಿಸಲು ಯಾವ ಸಂಗಾತಿಗೂ ಸಾಧ್ಯಾಗುವುದಿಲ್ಲ. ಪತಿ ಪತ್ನಿಗೆ ಮೋಸ ಮಾಡಬಹುದು, ಪತ್ನಿ ಪತಿಗೆ ಮೋಸ ಮಾಡಬಹುದು. ಮೋಸ ಯಾರೇ ಮಾಡಲಿ ಒಡೆದು ಹೋಗುವುದು ಒಂದು ಸುಂದರ ಸಂಸಾರ, ಮಕ್ಕಳಿದ್ದರೆ ಅವರ ಭವಿಷ್ಯ. ಈ ಲೇಖನದಲ್ಲಿ ಪತ್ನಿ ಮೋಸ ಮಾಡುತ್ತಿದ್ದರೆ ಅದನ್ನು ತಿಳಿಯುವುದು ಹೇಗೆ ಎಂದು ಹೇಳಲಾಗಿದೆ.
ಪುರುಷರಿಗೆ ಹೋಲಿಸಿದರೆ ಸಂಗಾತಿಗೆ ಮೋಸ ಮಾಡುವ ಸ್ತ್ರೀಯರು ಅದು ತಮ್ಮ ಪತಿಗೆ ತಿಳಿಯದಂತೆ ನೋಡಿಕೊಳ್ಳುವಲ್ಲಿ ತುಂಬಾ ಹುಷಾರಾಗಿರುತ್ತಾರೆ. ಎಷ್ಟೋ ಪುರುಷರಿಗೆ ನನ್ನ ಹೆಂಡತಿ ನನಗೆ ಮೋಸ ಮಾಡುತ್ತಿದ್ದಾಳೆ ಎಂದು ತಿಳಿಯುವುದೇ ಇಲ್ಲ, ಇನ್ನ ಕೆಲವರಿಗೆ ಡೌಟ್ ಬರುತ್ತೆ ಆದರೆ ಅವಳು ತೋರಿಸುವ ಅತಿಯಾದ ಪ್ರೀತಿ ನೋಡುವಾಗ ಛೇ... ನಾನು ತಪ್ಪು ಭಾವಿಸಿದೆ ಅಲ್ವಾ ಎಂದು ಪಶ್ಚಾತಾಪ ಪಡುವಂತಾಗುವುದು. ಆದರೆ ಯಾವಾಗ ಹೆಂಡತಿ ಇದ್ದಕ್ಕಿದ್ದಂತೆ ತುಂಬಾ ಪ್ರೀತಿ ತೋರಿಸುತ್ತಾಳೋ ಆಗ ನೀವು ಸ್ವಲ್ಪ ಎಚ್ಚರವಹಿಸುವುದು ಒಳ್ಳೆಯದು.
ಹೆಂಡತಿಯ ವರ್ತನೆಯಲ್ಲಿ ಏನೋ ಬದಲಾವಣೆಗಳಾಗಿವೆ, ಅವಳ ಮೇಲೆ ಸಂಶಯ ಮೂಡಿದರೆ ನಿಮ್ಮ ಸಂಶಯವನ್ನು ಈ ರೀತಿ ಪರಿಹರಿಸಬಹುದು ನೋಡಿ:

1. ಅವಳ ಫೋನ್ ಸೈಲೆಂಟ್ ಮೂಡ್‌ನಲ್ಲಿಡುವುದು ಹಾಗೂ ಬಚ್ಚಿಡುವುದು
ಮೊದಲೆಲ್ಲಾ ಆ ರೀತಿ ಇರಲಿಲ್ಲ, ಆದರೆ ಇತ್ತೀಚೆಗೆ ಅವಳು ಫೋನ್ ಅನ್ನು ಸೈಲೆಂಟ್ ಮೂಡ್‌ನಲ್ಲಿ ಇಟ್ಟಿರುತ್ತಾಳೆ ಜೊತೆಗೆ ನಿಮ್ಮ ಕಣ್ಣಿಗೆ ಬೀಳದಂತೆ ಇಡುತ್ತಾಳೆ ಅವಳ ನಡೆಯನ್ನು ಸಂಶಯಿಸಬೇಕಾದದ್ದೇ. ಅವಳು ಮೊಬೈಲ್ ಪಾಸ್‌ವರ್ಡ್ ಬದಲಾಯಿಸಿರುತ್ತಾಳೆ, ನೀವು ಕೇಳಿದಾಗ ಹೇಳಲ್ಲ, ಅಲ್ಲದೆ ನೀನು ನನ್ನನ್ನು ಸಂಶಯ ಪಡುತ್ತಿದ್ದೀಯಾ ಎಂದೆಲ್ಲಾ ಎಮೋಷನಲ್ ಡ್ರಾಮ ಮಾಡಿದರೆ ಖಂಡಿತ ಏನೋ ಇದೆ ಎಂದು ಹೇಳಬಹುದು.

2. ನಿಮ್ಮೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತಾಳೆ
ಅವಳ ಸಾಮಾಜಿಕ ತಾಣದಲ್ಲಿ ನಿಮ್ಮ ಫೋಟೋಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತಾಳೆ, ಅಲ್ಲದೆ ನಿಮ್ಮ ಒಬ್ಬ ಪ್ರೇಮಿಯಾಗಿ ಒಬ್ಬ ಸ್ನೇಹಿತೆಯಂತೆ ವರ್ತಿಸಲು ಪ್ರಾರಂಭಿಸುತ್ತಾಳೆ. ಅವಳು ನಿಮ್ಮೊಂದಿಗೆ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಲು ಇಷ್ಟಪಡುವುದಿಲ್ಲ. ನೀವು ಹತ್ತಿರ ಹೋದರೆ ಆರೋಗ್ಯ ಕಾರಣ ನೀಡಬಹುದು.

3. ತುಂಬಾ ಹೊತ್ತು ಫೋನ್‌ನಲ್ಲಿ ಕಳೆಯುವುದು
ಅವಳು ತುಂಬಾ ಹೊತ್ತು ಫೋನ್‌ನಲ್ಲಿ ಕಳೆಯಬಹುದು. ಅಲ್ಲದೆ ಅವಳು ನಿಮ್ಮ ಎದುರಿಗೆ ಮಾತನಾಡುವಾಗ ಯಾವುದಾದರೂ ಫ್ರೆಂಡ್ ಹೆಸರು ಹೇಳಬಹುದು. ಆದರೆ ಹೂಂ, ಹಾಂ ಅಂದಷ್ಟೇ ಉತ್ತರಿಸಬಹುದು. ಅಲ್ಲದೆ ಅವಳು ಆಗಾಗ ಟೆಕ್ಟ್ಸ್ ನೋಡಿ ನಗುವುದು, ಯಾವುದೋ ಲೋಕದಲ್ಲಿ ಕಳೆದು ಹೋದಂತೆ ಇದ್ದರೆ ಅವಳಿಗೆ ಅಫೇರ್ ಇದೆ ಎಂದು ಹೇಳಬಹುದು.

4. ನೀವು ಎಲ್ಲಿ ಇದ್ದೀರ, ಎಷ್ಟೊತ್ತಿಗೆ ಬರುತ್ತೀರಾ ಎಂದು ಕೇಳಿ ತಿಳಿಯುತ್ತಿದ್ದರೆ
ಪ್ರತಿಯೊಬ್ಬ ಹೆಂಡತಿ ಅವಳ ಗಂಡನ ಮೇಲೆ ಕಾಳಜಿ ತೋರಿಸುತ್ತಾಳೆ. ನೀವು ಎಲ್ಲಿದ್ದೀರ, ಎಷ್ಟೊತ್ತಿಗೆ ಬರುತ್ತೀರಾ ಎಂದು ಕೇಳಿ ತಿಳಿದುಕೊಳ್ಳುವುದು ಸಹಜ. ನೀವು ಬರುವಾಗ ನಿಮಗೆ ಒಂದು ಒಳ್ಳೆಯ ಅಡುಗೆ ರೆಡಿಯಿರುತ್ತೆ, ನಿಮ್ಮನ್ನು ಕಾಣುವಾಗ ಅವಳಲ್ಲಿ ಖುಷಿ ಇರುತ್ತೆ. ಆದರೆ ಅಂಥದ್ದು ಏನೂ ಇಲ್ಲ, ನೀವು ಮನೆಗೆ ಬಂದಾಗ ಅವಳು ಯಾವುದೇ ಪ್ರೀತಿ ತೋರಿಸಲ್ಲ ಅಥವಾ ಓವರ್ ಕಾಳಜಿ ತೋರಿಸುತ್ತಾಳೆ ಎಂದರೆ ನಿಮ್ಮ ಟೈಮಿಂಗ್ ತಿಳಿದು ನೀವು ಇಲ್ಲದ ಸಮಯದಲ್ಲಿ ಮೋಸ ಮಾಡುತ್ತಾಳೆ ಎಂದರ್ಥ.

5. ಅವಳ ದಿನಚರಿ ಬಗ್ಗೆ ತುಂಬಾ ಹೇಳುತ್ತಿದ್ದರೆ
ನೀವು ಕೇಳದೇ ಹೋದರೆ ನಾನು ಅಲ್ಲಿಗೆ ಹೋಗಿದ್ದೆ, ಇಲ್ಲಿಗೆ ಹೋಗಿದ್ದೆ ಹಾಗಾಯ್ತು, ಹೀಗಾಯ್ತು ಎಂದು ತಾನು ಹೊರಗಡೆ ಇದ್ದ ಅಷ್ಟು ಸಮಯದ ಬಗ್ಗೆ ವರದಿ ಒಪ್ಪಿಸುತ್ತಿದ್ದಾಳೆ ಎಂದಾದರೆ ಅವಳು ನಿಮಗೆ ಸುಳ್ಳು ಹೇಳುತ್ತಿದ್ದಾಳೆ ಎಂದರ್ಥ. ಏಕೆಂದರೆ ಮೊದಲೆಲ್ಲಾ ಅವಳು ಆ ರೀತಿ ಹೇಳ್ತಾ ಇರಲಿಲ್ಲ ಅಲ್ವಾ? ಆದರೆ ಇತ್ತೀಚೆಗೆ ಆಫೀಸ್‌ನಲ್ಲಿ ತುಂಬಾ ಕೆಲಸ ಇತ್ತು, ಆ ಪ್ರಾಜೆಕ್ಟ್ ಇತ್ತು, ಅದು ಹಾಗಾಯ್ತು, ಹೀಗಾಯ್ತು ಅಂತ ಹೇಳುತ್ತಿದ್ದರೆ ಹೋ ಹೌದಾ ! ಅಂತ ನೀವು ಸುಮ್ಮನಿದ್ದರೆ ಅದು ಅವಳಿಗೆ ಪ್ಲಸ್ ಆಗುತ್ತೆ. ಅವಳು ಮೋಸ ಮಾಡುತ್ತಿರುವುದು ನಿಮಗೇ ತಿಳಿಯದೇ ಇರಲಿ ಎಂದು ತುಂಬಾ ಒಳ್ಳೆಯವಳಂತೆ ನಟಿಸುತ್ತಿರುತ್ತಾಳೆ.

6. ನೀವು ಮೋಸ ಮಾಡುತ್ತಿದ್ದೀರಿ ಎಂದು ಗೂಬೆ ಕೂರಿಸುವುದು
ಅವಳಿಗೆ ಅವಳು ಮೋಸ ಮಾಡುತ್ತಿದ್ದಾಳೆ ಎಂಬುವುದು ಗೊತ್ತಿರುತ್ತದೆ, ಆದರೆ ಅದು ತಪ್ಪೆಂದು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ, ಆಗ ನಿಮ್ಮ ಮೇಲೆ ಗೂಬೆ ಕೂರಿಸುತ್ತಾಳೆ. ಅಲ್ಲದೆ ನಿಮ್ಮ ಹೊರಗಡೆ ಬರುವುದು ಕಮ್ಮಿ ಮಾಡುತ್ತಾಳೆ.

7. ಯಾವುದೇ ಕಾರಣವಿಲ್ಲದೆ ಗಿಫ್ಟ್ ನೀಡುವುದು
ಸರ್‌ಪ್ರೈಸ್ ಗಿಫ್ಟ್ ಯಾವತ್ತೂ ಸ್ಪೆಷಲ್ ಹಾಗೂ ಖುಷಿ ನೀಡುತ್ತೆ, ಗಂಡ-ಹೆಂಡತಿ ಸಂಬಂಧ ಮತ್ತಷ್ಟು ಬಲಪಡಿಸುತ್ತೆ. ಆದರೆ ಆ ಗಿಫ್ಟ್ ಹಿಂದೆ ಒಂದು ಕಾರಣ ಇರುತ್ತೆ. ಆದರೆ ಅವಳು ಕಾರಣವಿಲ್ಲದೆ ಗಿಫ್ಟ್ಸ್ ನೀಡುತ್ತಾಳೆ ಎಂದಾದರೆ ಮನೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಿರಲಿ ಎಂದು ಅವಳು ಕಂಡು ಕೊಂಡಿರುವ ಮಾರ್ಗವಾಗಿರುತ್ತೆ.

8. ಬೆಡ್‌ರೂಂನಲ್ಲಿ ಹೊಸ ಭಂಗಿ ಟ್ರೈ ಮಾಡಲು ಹೇಳುವುದು
ಲೈಂಗಿಕ ತೃಪ್ತಿಗಾಗಿ ಒಬ್ಬರಿಗೊಬ್ಬರು ಟಿಪ್ಸ್ ಕೊಡುವುದು ಸಹಜ. ಆದರೆ ಅವಳು ಹೊಸತನವನ್ನು ಟ್ರೈ ಮಾಡಲು ಹೇಳುವುದು ಅದರಲ್ಲಿ ಅವಳು ಪಳಗಿದಂತೆ ವರ್ತಿಸಿದರೆ ಅವಳಿಗೆ ಬೇರೆ ಸಂಬಂಧ ಇದೆ ಎಂಬುವುದನ್ನು ಸೂಚಿಸುತ್ತೆ. ಅಲ್ಲದೆ ನಿಮ್ಮ ಬಗ್ಗೆ ಅವಳಿಗೆ ಖುಷಿ ಇಲ್ಲದಿರುವುದು. ಜೊತೆಗೆ ನಿಮ್ಮನ್ನು ನಿರ್ಲಕ್ಷ್ಯ ಮಾಡಲಾರಂಭಿಸುತ್ತಾಳೆ.

9. ಅವಳ ಲುಕ್ ಬಗ್ಗೆ ಗಮನ ನೀಡುವುದು
ಇತ್ತೀಚೆಗೆ ಅವಳು ಅವಳ ದೇಹದ ಕಡೆ ತುಂಬಾ ಗಮನ ನೀಡುತ್ತಾಳೆ, ಡ್ರೆಸ್ಸಿಂಗ್ ಬದಲಾಯಿಸಿದ್ದಾಳೆ, ಅವಳ ಲುಕ್ ಬದಲಾಯಿಸಲು ಇಷ್ಟಪಡುತ್ತಾಳೆ, ಆದರೆ ನಿಮ್ಮತ್ತ ಯಾವುದೇ ಆಕರ್ಷಣೆ ಇಲ್ಲ ಎಂದಾದರೆ ಅವಳಿಗೆ ಬೇರೆಯದೇ ಸೆಳೆತವಿದೆ ಎಂಬುವುದನ್ನು ಸೂಚಿಸುತ್ತೆ.

10. ನಿಮ್ಮ ಒಳಿತು-ಕೆಡಕು ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರುವುದು
ನಿಮಗೇ ಏನೇ ಆದರೂ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ತನ್ನ ಪಾಡಿಗೆ ತಾನಿರುತ್ತಾಳೆ. ಅಲ್ಲದೆ ಚಿಕ್ಕ ವಿಷಯವನ್ನು ದೊಡ್ಡದು ಮಾಡಿ ಜಗಳವಾಡುತ್ತಾಳೆ, ನೀವು ಏನು ಮಾಡಿದರೂ ಅವಳಿಗೆ ಇಷ್ಟವಾಗಲ್ಲ ಈ ರೀತಿಯ ವರ್ತನೆಗಳು ಅವಳು ಈಗಾಗಲೇ ಬೇರೆ ವ್ಯಕ್ತಿಯತ್ತ ಆಕರ್ಷಿತಳಾಗಿದ್ದಾಳೆ ಎಂದು ಸೂಚಿಸುತ್ತೆ.

11. ಒಂದು ಫ್ರೆಂಡ್ ಹೆಸರು ಹೇಳಿ ಆಗಾಗ ಔಟಿಂಗ್ ಹೋಗುವುದು
ಅವಳು ಹೊರಗಡೆ ಹೋಗುವಾಗ ಯಾವುದೋ ಒಂದು ಫ್ರೆಂಡ್ ಹೆಸರು ಹೇಳುತ್ತಾಳೆ ಇನ್ನು ಹೀಗೆ ಹೊರಗಡೆ ಹೋಗುವಾಗ ನಿಮ್ಮನಾಗಲಿ, ಬುದ್ಧಿ ಬಂದಿದ್ದ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿಲ್ಲ ಎಂದಾದರೆ ಅವಳು ಫ್ರೆಂಡ್ ಹೆಸರು ಹೇಳಿ ಕಾಮುಕನ ಜೊತೆ ಹೋಗುತ್ತಿದ್ದಾಳೆ ಎಂಬುವುದನ್ನು ಸೂಚಿಸುತ್ತೆ.

12. ಲೈಂಗಿಕ ಸೋಂಕು ತಗುಲಿದ್ದರೆ
ನಿಮಗೆ ಯಾವುದೇ ಲೈಂಗಿಕ ಸೋಂಕಿಲ್ಲ, ಆದರೆ ನಿಮ್ಮ ಪತ್ನಿಗೆ ಬಂದಿದೆ ಎಂದಾದರೆ ಅವಳು ನಿಮಗೆ ವಂಚಿಸಿದ್ದಾಳೆ ಎಂದರ್ಥ.
ಸಂಬಂಧದಲ್ಲಿ ನಂಬಿಕೆ ತುಂಬಾ ಮುಖ್ಯ, ಆದರೆ ನಮ್ಮ ಸಂಗಾತಿಯಲ್ಲಿ ಏನೋ ಬದಲಾವಣೆಯಾದಾಗ ಸಂಶಯ ಪಡುವುದು ತಪ್ಪಲ್ಲ. ವೃಥಾ ಸಂಶಯ ಪಡಬೇಡಿ, ನೀವು ಸಂಶಯ ಪಡುತ್ತಿದ್ದರೆ ಆ ಸಂಶಯವನ್ನು ಆರಂಭದಲ್ಲಿ ವ್ಯಕ್ತ ಪಡಿಸಬೇಡಿ. ಮೊದಲಿಗೆ ಸಾಕ್ಷ್ಯ ಸಂಗ್ರಹಿಸಿ, ನಂತರ ಸಾಕ್ಷ್ಯ ಸಮೇತ ಮಾತನಾಡಿ.