Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಎಂಥ್ದೇ ಬ್ಯುಸಿ ಇರಲಿ, ಸಂಗಾತಿಯೊಂದಿಗೆ ಸಮಯ ಕಳೆಯದಾದೆ ಹೋದರೆ ಆ ಸಂಬಂಧ ಸೊರಗುವುದು
ಒಂದು ಮಾತು ಹೇಳಿದ ತಕ್ಷಣ ಬೆಟ್ಟದಷ್ಟು ಕೋಪ. ಇವನ ಜೊತೆ ಬಾಳುವುದು ಕಷ್ಟ ಎಂದು ಅವಳಿಗೆ ಅನಿಸುವುದು, ಇವಳ ಜೊತೆ ಬಾಳುವುದು ನರಕ ಎಂದು ಅವನಿಗೂ ಅನಿಸಲಾರಂಭಿಸುತ್ತದೆ, ನಂತರ ಇಬ್ಬರು ಬೇರೆಯಾಗಲು ತೀರ್ಮಾನಿಸುತ್ತಾರೆ, ಇದು ಈಗೀನ ಬಹುತೇಕರ ದಾಂಪತ್ಯ ಜೀವನದ ಕತೆಯಿದು.
ನಮ್ಮ ಹಿರಿಯರ ದಾಂಪತ್ಯ ಜೀವನದಲ್ಲಿ ಹಲವು ಸಮಸ್ಯೆಗಳಿತ್ತು, ಆದರೆ ಅವರಲ್ಲಿ ಹೊಂದಾಣಿಕೆಯಿತ್ತು ಹೀಗಾಗಿ ಅವರು 50ನ ವರ್ಷ ವಿವಾಹ ವಾರ್ಷಿಕೋತ್ಸ, 80ನೇ ವರ್ಷದ ವಾರ್ಷಿಕೋತ್ಸವ ಆಚರಿಸಲು ಸಾಧ್ಯವಾಗಿದ್ದು, ಆದರೆ ಇತ್ತೀಚಿನ ದಾಂಪತ್ಯ ಜೀವನದಲ್ಲಿ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಸಮಸ್ಯೆ ಶುರುವಾಗುವುದು, ಇತ್ತೀಚಿನ ವರ್ಷಗಳಲ್ಲಿ ಈ ವಿಚ್ಛೇದನವಾಗಲು ಪ್ರಮುಖ ಕಾರಣವೇನು ಎಂದು ನೋಡುವುದಾದರೆ ಇಬ್ಬರು ಜೊತೆಯಾಗಿ ಸಮಯ ಕಳೆಯದಿರುವುದು.

ಪ್ಯೂಚರ್ ಪ್ಯೂಚರ್ ಎಂದು ಇಬ್ಬರು ಬ್ಯುಸಿ ಓಟ ಓಡುತ್ತಿರುವಾಗ ಈ ಪ್ಯೂಚರ್‌ಗೆ ದಿನದಲ್ಲಿ ಒಂದು ಅರ್ಧ ತಾಸು ನಮಗಾಗಿ ಇಡಬೇಕು ಎಂಬುವುದನ್ನು ಮರೆತು ಬಿಡುತ್ತೇವೆ, ಹೀಗಾಗಿಯೇ ಈ ದಾಂಒತ್ಯ ಕಲಹ ಹೆಚ್ಚಾಗುವುದು. ಇಬ್ಬರು ದಿನದಲ್ಲಿ ಸ್ವಲ್ಪ ಸಮಯ ಮಾತನಾಡುತ್ತಾ ಕಳೆದರೆ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಳ್ಳಲು ಸಾಧ್ಯವಾಗುವುದು, ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದು.
ನೀವು ದಿನದಲ್ಲಿ ಕನಿಷ್ಠ 30 ನಿಮಿಷವಾದರೂ ಮನಸ್ಸು ಬಿಚ್ಚಿ ಮಾತನಾಡಿ
ಖುಷಿಯಿರಲಿ, ಯಾವುದೋ ಕಾರಣಕ್ಕೆ ಚಿಂತೆಯಿರಲಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಿ. ಇದರಿಂದ ಅವರಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಸಾಧ್ಯವಾಗುವುದು
ಮುಕ್ತವಾಗಿ ಮಾತನಾಡುವುದರಿಂದ ಇನ್ನೂ ಹತ್ತಿರವಾಗುತ್ತಾರೆ
ಇಬ್ಬರು ಮುಕ್ತವಾಗಿ ಮಾತನಾಡುವುದರಿಂದ ಇಬ್ಬರ ನಡುವೆ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುವುದು. ಸಂಗಾತಿ ಮೇಲೆ ನಂಬಿಕೆ ಹೆಚ್ಚಾಗುವುದು. ಈ ವ್ಯಕ್ತಿ ನನಗೆ ತುಂಬಾನೇ ಮುಖ್ಯ ಎಂದು ಅನಿಸಲಾರಂಭಿಸುವುದು.
ಒಳ್ಳೆಯ ಸ್ನೇಹವಿರುತ್ತದೆ
ಒಳ್ಳೆಯ ಸಂಗಾತಿ ಉತ್ತಮ ಸ್ನೇಹಿತರೂ ಆಗಿರುತ್ತಾರೆ. ನಮ್ಮ ಸ್ನೇಹಿತರ ಬಳಿ ನಾವು ನಮ್ಮ ಮನಸ್ಸಿನ ಎಲ್ಲಾ ಭಾವನೆಗಳನ್ನು ಹೇಳಿಕೊಳ್ಳುತ್ತೇವೆ ಅಲ್ವಾ? ಅದೆ ರೀತಿ ನಮ್ಮ ಸಂಗಾತಿಯ ಬಳಿಯೂ ಹೇಳಿಕೊಳ್ಳುವ ಬಾಂಧವ್ಯ ಇದ್ದರೆ ಆ ಸಂಬಮಧ ತುಂಬಾ ಚೆನ್ನಾಗಿರಲಿದೆ.
ದಂಪತಿ ಈ ರೀತಿ ಮಾಡಿ ನೋಡಿ ನಿಮ್ಮ ಸಂಬಂಧದಲ್ಲಿ ಹೊಸತನ ಕಂಡು ಬರುವುದು
ಇಬ್ಬರು ಖುಷಿಯಾಗಿ ಚಿಕ್ಕ ಟ್ರಿಪ್ ಹೋಗುವುದು, ಡಿನ್ನರ್‌ಗೆ ಹೋಗುವುದು ಮಾಡಿ, ಇಲ್ಲಾ ಇಬ್ಬರು ಜೊತೆಯಲ್ಲಿ ಸ್ವಲ್ಪ ದೂರ ವಾಕ್ ಮಾಡಿ.
ಇಬ್ಬರಿಗೂ ಇಷ್ಟವಾಗಿರುವ ಹವ್ಯಾಸಗಳನ್ನು ಮುಂದುವರೆಸಿ. ಸಿನಿಮಾಗೆ ಹೋಗುವುದು, ಟ್ರಿಪ್ ಹೋಗುವುದು, ಜಾಲಿ ರೈಡ್ , ಪುಸ್ತಕ ಓದುವುದು ಹೀಗೆ ನಿಮ್ಮಿಬ್ಬರಲ್ಲಿ ಈ ಹವ್ಯಾಸ ಕಾಮನ್ ಆಗಿದೆಯೋ ಅದರತ್ತ ಗಮನ ನೀಡಿ.
ಹೊಗಳಿಕೆ
ಸಂಗಾತಿಯ ತಪ್ಪುಗಳನ್ನು ಹುಡುಕಿ ಟೀಕೆ ಮಾಡುವಂತೆಯೇ ಅವರ ಒಳ್ಳೆತನವನ್ನು ಹೊಗಳಿ, ಬರೀ ಟೀಕೆ ಮಾತ್ರ ಮಾಡಬಾರದು, ಕೆಲವೊಂದು ವಿಚಾರಕ್ಕೆ ಅವರನ್ನು ಹೊಗಳಬೇಕು, ಹೀಗೆ ಮಾಡುವುದರಿಂದ ಇಬ್ಬರ ನಡುವೆ ಹೊಂದಾಣಿಕೆ, ಪ್ರೀತಿ ಹೆಚ್ಚಾಗುವುದು. ನಮ್ಮವರು ನಮ್ಮ ಕೆಲಸವನ್ನು ಹೊಗಳಿದಾಗ ಅದರ ಖುಷಿನೇ ಬೇರೆ. ಆದ್ದರಿಂದ ನಿಮ್ಮವರನ್ನು ಹೊಗಳಲು ಕಂಜೂಸ್ ಮಾಡಬೇಡಿ.
ಸಂಬಂಧ ಚೆನ್ನಾಗಿರಲು ಸಮಯದ ಇನ್ವೆಸ್ಟ್ ತುಂಬಾನೇ ಮುಖ್ಯ
ನೀವು ನಿಮ್ಮ ಸಂಬಂಧ ಚೆನ್ನಾಗಿಡಲು ಅವರಿಗಾಗಿ ಸಮಯ ನೀಡಬೇಕು. ಅದು ಯಾವುದೇ ಸಂಬಂಧವಾಗಿರಲಿದೆ, ಮಕ್ಕಳು-ಪೋಷಕರ ಸಂಬಂಧವಾಗಲಿ ಅವರಿಗೆ ಕೂಡ ಸಮಯ ನೀಡಬೇಕು. ಸಮಯ ನೀಡುವುದು ಎಂಬುವುದು ಯಾವುದೇ ಉಡುಗೊರೆಗಿಂತ ತುಂಬಾನೇ ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ಕಷ್ಟಪಡುತ್ತಿರುವುದು ನಿಮ್ಮ ಕಟುಂಬಕ್ಕಾಗಿ ಅಂದ ಮೇಲೆ ಅವರಿಗಾಗಿ ಸ್ವಲ್ಪ ಸಮಯ ಕಂಡುಕೊಳ್ಳಿ.



Click it and Unblock the Notifications