ರಾಮಾಯಣದಿಂದ ಸ್ಪೂರ್ತಿ ಪಡೆದು ತನ್ನ ಚರ್ಮದಿಂದಲೇ ತಾಯಿಗೆ ಚಪ್ಪಲಿ ಮಾಡಿದ ಮಗ

ಹೆತ್ತ ತಾಯಿಯನ್ನು ಅನಾಥ ಆಶ್ರಮಕ್ಕೆ ಬಿಡುವ ಕಟುಕ ಮಕ್ಕಳನ್ನು ನೋಡುತ್ತೇವೆ, ತಾಯಿಯನ್ನು ದೇವತೆಯಂತೆ ಪೂಜಿಸುವವರನ್ನೂ ನೋಡುತ್ತೇವೆ, ಆದರೆ ಆದರೆ ಹೆತ್ತ ತಾಯಿಗೆ ತನ್ನ ಚರ್ಮದಿಂದ ಚಪ್ಪಲಿ ಮಾಡಿರುವ ಮಗನ ಬಗ್ಗೆ ಕೇಳಿದ್ದೀರಾ? ಇದ್ಯಾವುದು ಪೌರಾಣಿಕ ಕತೆಯಲ್ಲ, ತಾಯಿಯನ್ನು ಇಷ್ಟೊಂದು ಪ್ರೀತಿಸುತ್ತಿರುವ ಮಗ ನಮ್ಮ ಕಾಲದಲ್ಲಿಯೇ ಇದ್ದಾನೆ.

ಮಧ್ಯಪ್ರದೇಶದ ರೌನಾಂಕ್‌ ಗುರ್ಜಾರ್ ತನ್ನ ತಾಯಿ ಬಗ್ಗೆ ಇರುವ ಪ್ರೀತಿ ಮೂಲಕ ಎಲ್ಲ ಮಕ್ಕಳಿಗೆ ಮಾದರಿಯಾಗಿದ್ದಾನೆ, ಅವನಂತೆ ಚರ್ಮದಿಂದ ಚಪ್ಪಲಿ ಮಾಡಬೇಕಾಗಿಲ್ಲ, ಅಪ್ಪ-ಅಮ್ಮನ ತುಂಬಾ ಚೆನ್ನಾಗಿ ನೋಡಿಕೊಂಡರೆ ಸಾಕು.

Mother love

ಒಂದು ಕಾಲದಲ್ಲಿ ದೊಡ್ಡ ಕ್ರಿಮಿನಲ್ ಆಗಿದ್ದ

ಈತ ಒಂದು ಕಾಲದಲ್ಲಿ ದೊಡ್ಡ ಕ್ರಿಮಿನಲ್ ಆಗಿದ್ದ, ಅನೇಕ ಕಾನೂನು ಬಾಹಿರ ಚಟುವಟಿಕೆ ಮಾಡಿದ್ದ ಆದರೆ ಈಗ ಅದನ್ನೆಲ್ಲ ಒಳ್ಳೆಯ ಮಾರ್ಗದಲ್ಲಿ ನಡೆಯಲು ತೀರ್ಮಾನಿಸಿದ, ಈತ ಉಜ್ವೈನ್‌ನ ಸಂದಿಪನಿ ನಗರದಲ್ಲಿ ಭಗವದ್ಗೀತೆ ಕತೆಯ ಕಾರ್ಯಕ್ರಮ ನಡೆಯುತ್ತಿತ್ತು. ಆ ಕಾರ್ಯಕ್ರಮದಲ್ಲಿ ತನ್ನ ತಾಯಿಗೆ ತನ್ನದೇ ಚರ್ಮದಿಂದ ಮಾಡಿದ ಪಾದುಕೆಗಳನ್ನು ಅರ್ಪಿಸಿದ್ದನ್ನು ನೋಡಿ ಅಲ್ಲಿ ನೆರೆದಿದ್ದವರು ಅಚ್ಚರಿ ಪಟ್ಟಿದ್ದಾರೆ.

ಪೊಲೀಸರಿನಿಂದ ಗುಂಡೇಟು ಬಿದ್ದಿತ್ತು

ಈತ ಕ್ರಿಮಿನಲ್ ಚಟುವಟಿಕೆ ಮಾಡುತ್ತಿದ್ದಾಗ ಸಮಯದಲ್ಲಿ ಪೊಲೀಸರು ಈತನ ಕಾಲಿಗೆ ಗುಂಡೇಟು ಹಾಕುತ್ತಾರೆ, ಆತನ ತೊಡೆಯಿಂದ ಚರ್ಮ ತೆಗೆಯುವ ಚಿಕಿತ್ಸೆಯ ಸಂದರ್ಭದಲ್ಲಿ ತನ್ನ ಚರ್ಮವನ್ನು ಚಪ್ಪಲಿ ಮಾಡುವವರಿಗೆ ನೀಡಿ, ಇದರಿಂದ ಚಪ್ಪಲಿ ತಯಾರಿಸುವಂತೆ ಕೇಳುತ್ತಾನೆ, ಅದರಂತೆ ಅವರು ಇತರ ಪ್ರಾಣಿಗಳ ಚರ್ಮ ಒಣಗಿಸುವಂತೆ ಈತನ ಚರ್ಮವನ್ನು ಒಣಗಿಸಿ ಅದರಿಂದ ಚಪ್ಪಲಿ ತಯಾರಿಸಿಕೊಡುತ್ತಾರೆ.

ಮಾಧ್ಯಮದ ಜೊತೆ ಮಾತನಾಡಿದ ಗುರ್ಜರ್ ನಾನು ಪ್ರತಿದಿನ ರಾಮಾಯಣ ಪಠಿಸುತ್ತಿದ್ದೆ, ಶ್ರೀರಾಮ ನನಗೆ ಸ್ಪೂರ್ತಿಯಾಗಿದ್ದ, ರಾಮಾಯಣದಲ್ಲಿ ಶ್ರೀರಾಮ ಒಂದು ಕಡೆ ಹೇಳುತ್ತಾನೆ, ತಾಯಿಗೆ ನನ್ನ ಚರ್ಮದಿಂದ ಪಾದುಕೆಗಳನ್ನು ಮಾಡಿದರೆ ಸಾಲದು. ಹೀಗಾಗಿ ನಾನು ಚರ್ಮದಿಂದಲೇ ನನ್ನ ತಾಯಿಗೆ ಪಾದುಕೆ ಮಾಡಲು ತೀರ್ಮಾನಿಸಿದೆ ಎಂದು ಹೇಳಿದ್ದಾನೆ.

ತಾಯಿಗೆ ತನ್ನ ಚರ್ಮದಿಂದ ಮಾಡಿದ ಚಪ್ಪಲಿ ತೊಡಿಸಿದ ಮಗ

ಸ್ವರ್ಗ ಎಂಬುವುದು ತಂದೆ-ತಾಯಿಯ ಪಾದಗಳಲ್ಲಿ ಇರುತ್ತದೆ ಎಂದು ಹೇಳಲು ಬಯಸುತ್ತೇನೆ, ತಂದೆ ಸ್ವರ್ಗಕ್ಕೆ ಇರುವ ಏಣಿ, ತಾಯಿ ನಮಗಾಗಿ ಸ್ವರ್ಗವನ್ನೇ ಮಾಡುವವಳು. ಭಗವದ್ಗೀತೆ ಕತೆ ಪ್ರಸಂಗವನ್ನು ಜಿತೇಂದ್ರ ಮಹಾರಾಜರು ನಡೆಸಿಕೊಡುತ್ತಿದ್ದರು, ಈ ಸಮಯದಲ್ಲಿ ಗುರ್ಜರ್ ತನ್ನ ತಾಯಿಗೆ ತನ್ನ ಚರ್ಮದಿಂದ ತಯಾರಿಸಿದ ಪಾದುಕೆ ತೊಡಿಸುತ್ತಾನೆ.

ಮಗನ ಈ ಕಾರ್ಯ ನೋಡಿ ತಾಯಿಗೆ ಅವನ ಪ್ರೀತಿ ನೋಡಿ ಖುಷಿಯಾಗುತ್ತದೆ, ತನ್ನ ಚರ್ಮದಿಂದಲೇ ಪಾದುಕೆ ತಯಾರಿಸಿರುವುದು ನೋಡಿ ಅಳು ತಡೆಯೋಕೆ ಆಗಲಿಲ್ಲ, ಹೆತ್ತ ಮಕ್ಕಳಿಗೆ ಒಂದು ಸೂಜಿ ಚುಚ್ಚಿದರೆ ತಾಯಿಗೆ ಸಹಿಸೋಕೆ ಸಾಧ್ಯವಿಲ್ಲ, ಅಂಥದ್ದರಲ್ಲಿ ಮಗನ ಚರ್ಮದಿಂದ ಮಾಡಿದ ಚಪ್ಪಲಿ ಎಂದಾಗ ಆ ತಾಯಿಗೆ ಖುಷಿಯ ಜೊತೆಗೆ ನೋವು ಆಗಿರುತ್ತದೆ.

ರೋನಕ್‌ನಂಥ ಮಗ ನನಗೆ ಸಿಕ್ಕಿರುವುದು ನನ್ನ ಪುಣ್ಯ. ದೇವರು ಅವನ ಎಲ್ಲಾ ಕಷ್ಟಗಳಿಂದ ಅವನನ್ನು ಪಾರು ಮಾಡಲಿ, ಅವನಿಗೆ ಜೀವನದಲ್ಲಿ ಯಾವುದೇ ಸಂಕಷ್ಟ ಅವನಿಗೆ ಬರದಿರಲಿ ಎಂದು ತಾಯಿ ಮನಸ್ಸು ತುಂಬಿ ಹರಿಸಿದ್ದಾಳೆ.

ತಾಯಿಯ ಆಶೀರ್ವಾದವಿದ್ದರೆ ಸಾಕು ಮಕ್ಕಳು ಜೀವನದಲ್ಲಿ ಮುಂದೆ ಬರುತ್ತಾರೆ, ಆದರೆ ಇಂದು ಎಷ್ಟೋ ಮಕ್ಕಳು ತಮ್ಮ ಸ್ವಾರ್ಥದಿಂದಾಗಿ ಹೆತ್ತವರನ್ನು ಕಡೆಗಣಿಸುತ್ತಿದ್ದಾರೆ, ಅವರನ್ನು ಕೊನೆಗಾಲದಲ್ಲಿ ಅನಾಥ ಆಶ್ರಮಕ್ಕೆ ಬಿಡುತ್ತಿದ್ದಾರೆ, ಅವರ ಕಣ್ಣಿಂದ ಕಣ್ಣೀರು ಹಾಕಿಸುತ್ತಿದ್ದಾರೆ, ಅದು ಶಾಪವಾಗುವುದು. ತಾಯಿ ಕಣ್ಣಿಂದ ಕಣ್ಣೀರು ಬರಬಾರದು ಆನಂದ ಬಾಷ್ಪ ಬರಬೇಕು, ಹಾಗೆ ಮಕ್ಕಳು ನೋಡಿಕೊಳ್ಳಬೇಕು.

English summary

Son Presented Footwear To Mother Made By His Won Skin In Kannada

Madhya Predesh Son Presented Footwear To Mother Made By His Won Skin, read on...
X
Desktop Bottom Promotion