Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
85ರ ವಯಸ್ಸಲ್ಲೂ ಕುಕ್ಕಿಂಗ್ ಚಾನಲ್ ತೆರೆದ ಅಜ್ಜಿ..! ಈಗ 5 ಲಕ್ಷ ಚಂದಾದಾರರು.!
50 ವರ್ಷ ದಾಟುತ್ತಿದ್ದಂತೆ ದೇಹದಲ್ಲಿ ಎಲ್ಲಾ ರೀತಿಯ ಶಕ್ತಿಯು ಕುಂದುತ್ತದೆ. ನಮ್ಮ ಕೆಲಸವನ್ನು ನಾವು ಹೇಗೋ ಮಾಡಿಕೊಂಡು ಹೋಗುತ್ತೇವೆ. ವೃದ್ಧಾಪ್ಯದ ಮಧ್ಯದಲ್ಲಿ ಇರುವ ಈ ವಯಸ್ಸಿನಲ್ಲಿ ಸಾಕಷ್ಟು ಜನ ಹಾಸಿಗೆಯನ್ನು ಹಿಡಿದ ಅಥವಾ ವಿಧಿವಶರಾಗಿರುವುದನ್ನು ನಾವು ಕಾಣಬಹುದು.
ಹಾಗಾಗಿಯೇ 70-80ರ ನಂತರದ ವಯಸ್ಸು ಎಂದರೆ ಇತರರ ಮೇಲೆ ಅವಲಂಭಿತರಾಗಿರುವ ಸಮಯ. ಈ ಸಮಯದಲ್ಲಿ ಸಾಮಾನ್ಯವಾಗಿ ವೃದ್ಧರು ದೇವರ ನಾಮ, ಅಷ್ಟೋತ್ತರಗಳನ್ನು ಓದುತ್ತಾ ಮನೆಯಲ್ಲಿ ಆದಷ್ಟು ವಿಶ್ರಾಂತಿಯನ್ನು ಪಡೆಯುತ್ತಾರೆ. ಆವರಿಗೆ ಜೀವನದಲ್ಲಿ ಏನಾದರು ಸಾಧಿಸುವ ಛಲ ಉಳಿದಿರೋದಿಲ್ಲ.

ಇವರು ಕೊನೆತ ದಿನಗಳಲ್ಲಿ ನೆಮ್ಮದಿ ಕಾಣಲು ಹಂಬಲಿಸುತ್ತಾರೆ. ಪ್ರೀತಿ, ಒಂದಿಷ್ಟು ಆರೈಕೆ ಸಿಕ್ಕರೆ ಅವರ ಮುಖದಲ್ಲಿ ಸಂತೋಷ ನೋಡಬಹುದು. ಆದರೆ ಇಲ್ಲೊಬ್ಬ 85 ವರ್ಷದ ಅಜ್ಜಿ ಎಲ್ಲಾ ವಯಸ್ಸಿನ ಮಂದಿಗೆ ಹೊಸ ಚಿಗುರಿನ ಸ್ಫೂರ್ತಿಯಾಗಿದ್ದಾರೆ. 85ರ ಇಳಿ ವಯಸ್ಸಿನಲ್ಲೂ ಆಕೆ ಯುಟ್ಯೂಬ್ ಚಾನೆಲ್ ತೆರೆದು 1 ಸಾವಿರ ಮಂದಿ ಚಂದಾದಾರರು ಆಗಿರುವ ಖುಷಿ ಹಂಚಿಕಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಆಕೆಯ ಹೆಸರು ವಿಜಯ್ ನಿಶ್ಚಲ್, ಈ ವಯಸ್ಸಿನಲ್ಲೂ ಆಕೆ 'ದಾದಿ ಕಿ ರಸೋಯಿ' ಎಂಬ ಯುಟ್ಯೂಬ್ ಚಾನಲ್ ತೆರೆದು ಅದರಲ್ಲಿ ಅಡುಗೆಗೆ ಸಂಬಂಧಿಸಿದ ವಿಡಿಯೋ ಹಾಕೋದು ಆಕೆಯ ಹವ್ಯಾಸವಾಗಿದೆ. ಈಗಾಗಲೆ ಹಲವು ವಿಡಿಯೋ ಹಂಚಿಕೊಂಡಿರುವ ಆಕೆ ವಿಧ ವಿಧದ ಅಡುಗೆ ಮಾಡೋದು ಹೇಗೆ ಎನ್ನುವುದನ್ನ ವಿವರಿಸುತ್ತಾರೆ.
ಈ ಅಜ್ಜಿಯ ಹೊಸ ಚಾನಲ್‌ಗೆ ಈಗ 1 ಸಾವಿರ ಮಂದಿ ಸಬ್ಸ್‌ಸ್ಕ್ರೈಬರ್ಸ್ ಆದ ಕಾರಣ ಖುಷಿಯಲ್ಲಿ ತೇಲಾಡಿದ್ದಾರೆ. ದೊಡ್ಡ ಪರದೆಯ ಮೇಲೆ ಚಾನಲ್‌ನ ಚಂದಾದಾರರ ಸಂಖ್ಯೆ 1 ಸಾವಿರ ತಲುಪುವುದನ್ನು ನೋಡುತ್ತಿರುವ ಅಜ್ಜಿ 1 ಸಾವಿರ ಮುಟ್ಟುತ್ತಿದ್ದಂತೆ ಆಕೆ ಸಂತಸಕ್ಕೆ ಪಾರವೆ ಇಲ್ಲದಂತೆ ಕುಣಿದಾಡಿದ್ದಾರೆ. ಆದರೆ ಈ ವಿಡಿಯೋ ಬಹಳ ಹಳೆಯದ್ದು, ಈಗ ಆಕೆಯ ಚಾನಲ್ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಚಂದಾದಾರರ ಹೊಂದಿದೆ.
ಈ ವಿಡಿಯೋ ಕಂಡು ನೆಟ್ಟಿಗರು ಸಹ ಮೆಚ್ಚುಗೆ ಹೊರಹಾಕಿದ್ದಾರೆ. ಈ ವಯಸ್ಸಿನಲ್ಲೂ ಅಜ್ಜಿಯ ಉತ್ಸಾಹ ಕಂಡು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಅಂದ್ರೆ ಈ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 110 ಮಿಲಿಯನ್ ವೀಕ್ಷಣೆ ಕಂಡಿದೆ. ಜೊತೆಗೆ ಈ ವಿಡಿಯೋದ ಬಳಿಕ ಅವರ ಯುಟ್ಯೂಬ್ ಚಾನಲ್‌ನ ಚಂದಾದಾರರ ಸಂಖ್ಯೆ ಸಹ ಹೆಚ್ಚಾಗಿದೆ. ಈಗ ಅವರ ಯೂಟ್ಯೂಬ್‌ನಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರೆ.
ವಿವಿಧ ರೀತಿಯ ಅಡುಗೆ ಮಾಡುವ ಮೂಲಕ ಅವರು ಈಗ ಪ್ರಖ್ಯಾತಿ ಗಳಿಸಿದ್ದಾರೆ. ಅವರ ಅಡುಗೆ ಶೈಲಿಗೆ ಜನ ಫಿದಾ ಆಗಿದ್ದು, ಒಂದೊಂದು ವಿಡಿಯೋಗಳು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಾಣುತ್ತಿವೆ. ಎಲ್ಲಾ ವಿಡಿಯೋದಲ್ಲಿಯೂ ಅವರ ಸುಲಭ ರೀತಿಯ ಅಡುಗೆ ಶೈಲಿ, ಮಾತು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಅವರ ಯಶಸ್ಸಿಗೂ ಕಾರಣವಾಗಿದೆ. ಈವರೆಗೆ ಸುಮಾರು ನೂರಕ್ಕೂ ಅಧಿಕ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಅವರಿಗೆ ಯೂಟ್ಯೂಬ್ ಕಡೆಯಿಂದ ಸಿಲ್ವರ್ ಬಟನ್ ಸಹ ಸಿಕ್ಕಿದೆ. ಈ ಕುರಿತ ಖುಷಿಯನ್ನು ಸಹ ಅವರು ಹಂಚಿಕೊಳ್ಳುತ್ತಾ, ಇದೆಲ್ಲಾ ಸಾಧ್ಯವಾಗಿದ್ದು ನಿಮ್ಮೆಲ್ಲರ ಪ್ರೀತಿಯಿಂದ ನಾನಿಂದು ಯುಟ್ಯೂಬ್ ಸಿಲ್ವರ್ ಬಟನ್ ಪಡೆದುಕೊಂಡಿದ್ದೇನೆ. ನಾವೀಗ ತುಂಬ ದೊಡ್ಡ ಕುಟುಂಬ, ಪ್ರತಿಯೊಬ್ಬರಿಗೂ ಹೃದಯ ತುಂಬಿದ ಧನ್ಯವಾದಗಳು ಎಂದು ಅವರು ಪೋಸ್ಟ್ ಜೊತೆ ಹೇಳಿಕೊಂಡಿದ್ದರು.
ಇಷ್ಟೇ ಅಲ್ಲ ಅವರ ಈ ಯಶಸ್ಸಿನ ಪ್ರಯಾಣವನ್ನು ಕೆಲವು ಯುಟ್ಯೂಬ್ ಚಾನಲ್‌ಗಳು ಸಂದರ್ಶನ ಸಹ ನಡೆಸಿದ್ದವು. ಇದರಿಂದಾಗಿ ಮತ್ತಷ್ಟು ಖ್ಯಾತಿ ಪಡೆದರು. ಈಗ ಹಲವರಿಗೆ ಇವರೇ ಸ್ಪೂರ್ತಿಯಾಗಿದ್ದಾರೆ. 85ರ ಇಳಿ ವಯಸ್ಸಿನಲ್ಲಿಯೂ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದಿಷ್ಟು ಆರ್ಥಿಕ ಸ್ವಾವಲಂಭನೆಯನ್ನು ಅವರು ಸಾಧಿಸಿದ್ದಾರೆ.



Click it and Unblock the Notifications