Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
'ಉಡುಗೊರೆ ಬೇಡ, ಮೋದಿಗೆ ಓಟು ಹಾಕಿ' ಎಂಬ ಮದುವೆ ಆಮಂತ್ರಣ ಪತ್ರಿಕೆ ವೈರಲ್
ಚುನಾವಣೆ ದಿನಾಂಕ ಪ್ರಕಟವಾಗಿದೆ, ಎಲ್ಲಾ ಪಕ್ಷಗಳು ತಮ್ಮ ಪಕ್ಷದ ಪರ ಓಟು ಹಾಕುವಂತೆ ಕೇಳುತ್ತೇರೆ, ಆದರೆ ಇಲ್ಲೊಂದು ಮದುವೆ ಆಮಂತ್ರಣದಲ್ಲಿ ಮೋದಿಗೆ ಓಟು ಕೇಳಲಾಗಿದೆ, ಇದೀಗ ಈ ಮದುವೆ ಕಾರ್ಡ್ ವೈರಲ್ ಆಗಿದೆ.
ಮದುಮಗನ ತಂದೆ ತನ್ನ ಒಬ್ಬನೇ ಮಗನ ಮದುವೆಗೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ ರೀತಿ ಮಾತ್ರ ತುಂಬಾನೇ ಭಿನ್ನವಾಗಿದೆ, ಸಾಮಾನ್ಯವಾಗಿ ವರ-ವಧುವಿಗೆ ಆಶೀರ್ವಾದ ಮಾಡಿ ಎಂದು ಬರೆಯಲಾಗಿರುತ್ತೆ, ಇನ್ನು ಮದುವೆಗೆ ಬರುವ ಅತಿಥಿಗಳು ಉಡುಗೊರೆಯೊಂದಿಗೆ ಬಂದು ವರ-ವಧುವನ್ನು ಆಶೀರ್ವದಿಸುತ್ತಾರೆ. ಆದರೆ ಇವರು ನಮ್ಮ ಮಗನ ಮದುವೆಗೆ ಯಾವುದೇ ಉಡುಗೊರೆ ತರಬೇಡಿ, ಬದಲಿಗೆ ಮೋದಿಗೆ ಓಟು ಹಾಕಿ ಅದುವೇ ನೀವು ನಮಗೆ ಕೊಡುವ ಉಡುಗೊರೆ ಎಂದು ಬರೆದಿದ್ದಾರೆ. ಈ ಮದುವೆ ಪತ್ರ ನೋಡಿದವರು ಮದುವೆಗೆ ಹೀಗೂ ಕರೆಯುತ್ತಾರಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.

ತೆಲಂಗಾಣದ ನಂದಿಕಾಂತಿ ನರಸಿಂಹಲು ಹಾಗೂ ನಂದಿಕಾಂತಿ ನಿರ್ಮಲ ಅವರು ತಮ್ಮ ಏಕೈಕ ಪುತ್ರನ ಮದುವೆಗೆ ಈ ರೀತಿಯ ಸ್ಪೆಷಲ್ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಿಸಲಾಗಿದೆ. ಇವರು ಮೋದಿಯ ಕಟ್ಟಾ ಅಭಿಮಾನಿ, ಮೋದಿಯಂಥ ವ್ಯಕ್ತಿ ದೇಶವನ್ನು ನಡೆಸಬೇಕು ಎಂದು ಹೇಳುತ್ತಿರುತ್ತಾರೆ. ಮೋದಿ ಮೇಲಿನ ಅಭಿಮಾನವನ್ನು ಅವರು ತಮ್ಮ ಮಗನ ಮದುವೆಯಲ್ಲಿಯೂ ವ್ಯಕ್ತಪಡಿಸಿದ್ದಾರೆ. ಅವರು ಈ ರೀತಿ ಮದುವೆ ಆಮಂತ್ರಣ ಪತ್ರಿಕೆ ಮಾಡಿರುವುದಕ್ಕೆ ಬಿಜೆಪಿಯವರು ಬಿಟ್ಟು ಬೇರೆ ಪಕ್ಷದವರು ಮದುವೆಗೆ ಬರುತ್ತಾರೆಯೇ ಎಂಬ ಪ್ರಶ್ನೆ ಮೂಡುವುದು ಅಲ್ವಾ? ಸಾಮಾನ್ಯವಾಗಿ ಮದುವೆ ಮತ್ತಿತರ ಸಮಾರಂಭಗಳಲ್ಲಿ ಪಕ್ಷ ಬೇಧವಿಲ್ಲದೆ ಎಲ್ಲರೂ ಬರುತ್ತಾರೆ, ಆದರೆ ಈ ರೀತಿ ಒಟು ಕೇಳಿದರೆ ಆ ಪಕ್ಷವನ್ನು ಬೆಂಬಲಿಸುವವರು ಮಾತ್ರ ಬರಬಹುದೇನೋ ಅಲ್ವಾ?
ಅವರಿಗೆ ಪುತ್ರ ಒಬ್ಬನೇ ಆದರೆ ಇಬ್ಬರು ಪುತ್ರಿಯರು ಇದ್ದು ಅವರ ಮದುವೆ ಮಾಡಲಾಗಿದೆ, ಅವರ ಮದುವೆಯಲ್ಲಿ ಈ ರೀತಿಯ ಆಮಂತ್ರಣ ಮಾಡಿಸಿರಲಿಲ್ಲ.
ಇದೇ ರೀತಿಯ ಕೆಲ ಭಿನ್ನ ಮದುವೆ ಕಾರ್ಡ್‌ಗಳು ಗಮನ ಸೆಳೆಯುತ್ತದೆ, ಇತ್ತೀಚೆಗೆ ಇನ್ನೊಂದು ಮದುವೆ ಕಾರ್ಡ್‌ನಲ್ಲಿ ನೀವು ಯಾವಾಗ ನನ್ನ ಮದುವೆ ಎಂದು ಕೇಳುತ್ತಿದ್ದೀರಾ ಅಲ್ವಾ? ಮದುವೆಯಿದೆ ನೀವು ಬರಲೇಬೇಕು ಎಂದು ಪ್ರಿಂಟ್ ಮಾಡಿಸಿರುವ ಮದುವೆ ಕಾರ್ಡ್ ಕೂಡ ವೈರಲ್ ಆಗಿತ್ತು.
ಇನ್ನೊಂದು ಮದುವೆಯಲ್ಲಿ(ವಿದೇಶದಲ್ಲಿ ನಡೆದಿದ್ದು) ಮದು ಮಗ-ಮದುಮಗಳ ಒಂದು ವಿಚಿತ್ರ ಅನಿಸುವ ಬೇಡಿಕೆ ಇಡುತ್ತಾರೆ, ಅವರು ಒಂದು ಆಮಂತ್ರಣ ಪತ್ರಿಕೆ ನೀಡಿದರು ಅದರಲ್ಲಿ ಮದುವೆಗೆ ಬಂದವರು ದೊಡ್ಡವರು 40 ಡಾಲರ್ ಅಂದರೆ ಭಾರತದ ರುಪಾಯಿ 3,343.75 , ಮಕ್ಕಳಿಗೆ 20 ಡಾಲರ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು, ಏಕೆಂದರೆ ಅವರ ರಿಸೆಪ್ಷನ್‌ನ ಬಫೆಟ್ ಬೆಲೆಯನ್ನು ಸರಿದೂಗಿಸಲು ಅತಿಥಿಗಳು ದುಡ್ಡು ನೀಡಬೇಕು ಎಂದು ಕೇಳಿಕೊಂಡಿದ್ದರು. ನೀವೆಲ್ಲಾ ಹಣ ಪಾವತಿಸಿದರೆ ನಾವೆಲ್ಲಾ ಒಳ್ಳೆಯ ಆಹಾರ ಸವಿಯಬಹುದು ಎಂದು ಹೇಳಿದ್ದರು.
ಹೀಗೆ ಚಿತ್ರ ವಿಚಿತ್ರ ಮದುವೆ ಕಾಗದಗಳು ವೈರಲ್ ಆಗಿವೆ, ಈ ಹಿಂದೆ ಕೂಡ ಅಂದರೆ 2019ರಲ್ಲಿ ಹೈದರಾಬಾದ್‌ನ ಮುಖೇಶ್ ರಾವ್ ಯಂಡೆ ಎಂಬುವವರು ಮದುವೆಗೆ ದುಬಾರಿ ಉಡುಗೊರೆ ಬದಲಿಗೆ ಮೋದಿಗೆ ಓಟ್ ಮಾಡುತ್ತೀನಿ ಎಂದು ಪ್ರಾಮಿಸ್ ಮಾಡಿ ಆಮಂತ್ರಣ ಪತ್ರಿಕೆ ಮಾಡಿಸಿದ್ದರು. ಹೀಗೆ ಅನೇಕ ಚಿತ್ರ ವಿಚಿತ್ರ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿವೆ, ಈಗ ಚುನಾವಣೆ ಹತ್ರ ಬರುತ್ತಿದ್ದು ಈ ಕಾಗದ ಜನರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದೆ.



Click it and Unblock the Notifications
