Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
4 ಲಕ್ಷ ವೇತನವಿರುವ 37ರ ಮಹಿಳೆಗೆ ವರ ಬೇಕಾಗಿದ್ದಾನಂತೆ..! ಆದ್ರೆ ಒಂದೇ ಕಂಡಿಷನ್..!
ಇತ್ತೀಚಿಗೆ ಮದುವೆಗೆ ಹುಡುಗ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ. ಅದರಲ್ಲೂ ಹುಡುಗಿಯರ ಆಯ್ಕೆ ಕೇಳಿದರೆ ಜನ ತಬ್ಬಿಬ್ಬಾಗುತ್ತಾರೆ. ಅವರು ಸರ್ಕಾರಿ ಕೆಲಸದಲ್ಲಿರುವ ಹುಡುಗ ಬೇಕು ಅನ್ನೋದ್ರಿಂದ ಹಿಡಿದು ತಿಂಗಳಿಗೆ ಲಕ್ಷ ಲಕ್ಷ ಸಂಬಳ ತರುವ ಹುಡುಗ ಬೇಕು ಅನ್ನೋದು ಅವರ ನಿರೀಕ್ಷೆಯಾಗಿರುತ್ತೆ.
ಹೀಗಾಗಿ ಈಗ ಹುಡುಗರು ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಅಂತ ಗೋಳಾಡುತ್ತಿದ್ದಾರೆ. ಎಲ್ಲಿ ನೋಡಿದ್ರು, ಮದುವೆಯಾಗದ ಹುಡುಗರ ಕಷ್ಟದ ಕಥೆಗಳು ನೋಡಬಹುದು. ಇನ್ನು ಹುಡುಗಿರ ಬೇಡಿಕೆ ಪೂರೈಸುವಂತಹ ಹುಡುಗ ಇದ್ದರೂ ಆತನಿಗೆ ಒಂದಿಷ್ಟು ಗುಣಗಳಿರಬೇಕು ಎಂದು ಕೇಳಿಕೊಳ್ಳುವ ಹುಡುಗಿಯರಿದ್ದಾರೆ.

ಇಲ್ಲೊಂದು ಮಹಿಳೆ ಸಹ ಇದೇ ರೀತಿಯ ಬೇಡಿಕೆ ಇಟ್ಟು ಈಗ ಸುದ್ದಿಯಾಗಿದ್ದಾಳೆ. ಹೌದು ಮುಂಬೈನಲ್ಲಿ ನೆಲೆಸಿರುವ 37 ವರ್ಷದ ಮಹಿಳೆಯೊಬ್ಬಳು ತನಗೆ ಸೂಕ್ತ ವರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಈ ಪೋಸ್ಟ್ ಕಂಡ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.
ಆಕೆ ತನ್ನ 4 ಲಕ್ಷ ವೇತನವಿದೆ, ಓದಿಕೊಂಡಿರುವೆ ಎಂದಿದ್ದಾಳೆ. ಅಲ್ಲದೆ ನಾನೀಗ ಮದುವೆಯಾಗಬೇಕು ಎಂದುಕೊಂಡಿದ್ದು, ಸೂಕ್ತ ವರ ಬೇಕಾಗಿದ್ದಾನೆ ಎಂದು ಮರಾಠಿಯಲ್ಲಿ ಪೋಸ್ಟ್ ಮಾಡಿದ್ದಾಳೆ. ಆದರೆ ಆಕೆಯ ಕಂಡಿಷನ್‌ಗಳ ಕಂಡ ಜನ ಈ ಮದುವೆ ಎಂದಿಗೂ ನೆರವೇರುವುದಿಲ್ಲ ಎನ್ನುತ್ತಿದ್ದಾರೆ.
ಆಕೆ ವಾರ್ಷಿಕವಾಗಿ 4 ಲಕ್ಷ ರೂಪಾಯಿ ವೇತನ ಬರುವ ಕೆಲಸ ಮಾಡುತ್ತಿದ್ದಾಳಂತೆ. ಹೀಗಾಗಿ ಆಕೆಯನ್ನು ಮದುವೆಯಾಗಲು ವರ ಬುದ್ಧಿವಂತನಾಗಿ, ಹೆಚ್ಚು ಓದಿಕೊಂಡಿರಬೇಕಂತೆ, ಅದರಲ್ಲೂ ಸಿಎ (CA) ಆಗಿದ್ದರೆ ಆದ್ಯತೆಯಂತೆ. ಇದರ ಜೊತೆಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿ ವೇತನ ಪಡೆಯುತ್ತಿರಬೇಕಂತೆ. ಇಂತಹ ಬೇಡಿಕೆ ಮೂಲಕ ಆಕೆ ಪೋಸ್ಟ್ ಹಂಚಿಕೊಂಡಿದ್ದಾಳೆ.
ಇನ್ನು ವರನಿಗೆ ವಾರ್ಷಿಕ 1 ಕೋಟಿ ರೂಪಾಯಿ ವೇತನ ಅಂದರೆ ತಿಂಗಳಿಗೆ ಸರಿ ಸುಮಾರು 8 ಲಕ್ಷಕ್ಕೂ ಅಧಿಕ ವೇತನ ಇರಬೇಕಾಗುತ್ತದೆ. ಹಾಗಾದರೆ ಅಷ್ಟೊಂದು ವೇತನ ಸಿಗುವ ವರ ಕೇವಲ 30 ಸಾವಿರ ವೇತನ ಬರುವ 37 ವರ್ಷದ ಮಹಿಳೆಯನ್ನು ಏಕೆ ಮದುವೆಯಾಗುತ್ತಾನೆ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ಹಲವರು ಈ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಆಕೆಯ ಆಸೆ ಈಡೇರುವುದು ಬಹಳ ಕಷ್ಟ ಎಂಬುದು ಹಲವರ ವಾದವಾಗಿದೆ. ಏಕೆಂದರೆ ಭಾರತದಲ್ಲಿ ಕೇವಲ 1.7 ಲಕ್ಷ ಜನರು ಒಂದು ಕೋಟಿಗಿಂತ ಅಧಿಕ ಸಂಬಳ ಪಡೆಯುವ ಕೆಲಸದಲ್ಲಿದ್ದಾರೆ. ಇವರು 37 ವರ್ಷದ ಈ ಮಹಿಳೆಯನ್ನು ಮದುವೆಯಾಗುವ ಸಾಧ್ಯತೆ ಕೇವಲ 0.01ರಷ್ಟು ಮಾತ್ರ ಎಂಬ ದಾಖಲೆಯನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಆದರೆ ಇದರಲ್ಲೊಂದು ವ್ಯವಸ್ಥಿತಿ ಜಾಲವಿದೆ ಎಂದು ಮತ್ತೊಬ್ಬರು ಹಂಚಿಕೊಂಡಿದ್ದಾರೆ. ಈ ರೀತಿ ಅತೀ ಹೆಚ್ಚು ಆಸ್ತಿ ಮತ್ತು ಸಂಬಳ ಬರುವ ಹುಡುಗನನ್ನು ವಿವಾಹವಾಗಿ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಮುಂದೆ ಜೀವನಾಂಶವಾಗಿ ಆತ ತನ್ನ ಆಸ್ತಿಯ ಭಾಗವನ್ನೇ ನೀಡಬೇಕಾದ ಅನಿವಾರ್ಯಕ್ಕೆ ಸಿಲುಕುತ್ತಾನೆ. ಹೀಗಾಗಿ ಇದೊಂದು ಜಾಲ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಹರಿಯಾಣದಲ್ಲಿ ಹುಡುಗಿಯ ತಂದೆಯೊಬ್ಬ ತನ್ನ ಮಗಳನ್ನು ಮದುವೆಯಾಗುವ ವರನಿಗೆ ಬ್ಲಾಂಕ್ ಚೆಕ್ ನೀಡುವುದಾಗಿ ಹೇಳಿ ವಿಡಿಯೋ ಮಾಡಿ ಹಂಚಿಕೊಂಡಿದ್ದ. ಈ ವಿಡಿಯೋ ಸಹ ವೈರಲ್ ಆಗಿತ್ತು. ಹಲವು ವರ್ಷದಿಂದ ಮಗಳಿಗೆ ವರನ ಹುಡುಕುತ್ತಿದ್ದೇವೆ. ಆಕೆಯನ್ನು ಮದುವೆಯಾಗುವ ಹುಡುಗನಿಗೆ ಬ್ಲಾಂಕ್ ಚೆಕ್ ನೀಡುತ್ತೇನೆ ಎಂದು ಹೇಳಿದ್ದ ವಿಡಿಯೋ ಅದಾಗಿತ್ತು. ಇದೀಗ 1 ಕೋಟಿ ರೂ. ವೇತನದ ಹುಡುಗ ಬೇಕಾಗಿದ್ದಾನೆ ಎಂದು ಹಾಕಿರುವ ಈ ಪೋಸ್ಟ್ ಸಹ ವೈರಲ್ ಆಗ್ತಿದೆ.



Click it and Unblock the Notifications
