Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಶಾಸ್ತ್ರದ ಪ್ರಕಾರ ಒಂದೇ ಗೋತ್ರದಲ್ಲಿ ಮದುವೆಯಾಗಬಾರದು ಏಕೆ? ಆದರೆ ಏನಾಗುತ್ತೆ?
ಹಿಂದೂ ಧರ್ಮದಲ್ಲಿ ಮದುವೆಯಾಗುವಾಗ ಗೋತ್ರ ನೋಡಿ ಮದುವೆಯಾಗುತ್ತಾರೆ. ನಂಬಿಕೆಗಳ ಪ್ರಕಾರ, ಗೋತ್ರವು ಸಪ್ತಋಷಿಗಳ ವಂಶಸ್ಥರ ರೂಪವಾಗಿದೆ. ಒಂದೇ ರಕ್ತದ ಗುಂಪಿಗೆ ಸೇರಿದವರು ಪರಸ್ಪರ ಮದುವೆಯಾಗಬಾರದಂದು ಹೇಳಲಾಗುವುದು. ಒಂದೇ ಗೋತ್ರದ ಸಂಬಂಧ ಬಂದರೆ ಅದನ್ನು ತಿರಸ್ಕರಿಸಲಾಗುವುದು.

ಒಂದೇ ಗೋತ್ರದವರು ಎಂದರೆ ಏನರ್ಥ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹುಡುಗ ಮತ್ತು ಹುಡುಗಿ ಒಂದೇ ಗೋತ್ರವನ್ನು ಹೊಂದಿದ್ದಾರೆ ಎಂದರೆ ಅವರ ಪೂರ್ವಜರು ಒಂದೇ ಆಗಿರುತ್ತಾರೆ. ಈ ಕಾರಣಕ್ಕಾಗಿ, ಹುಡುಗರು ಮತ್ತು ಹುಡುಗಿಯರು ಪರಸ್ಪರ ಸಹೋದರ ಮತ್ತು ಸಹೋದರಿ ಸಂಬಂಧ. ಸಹೋದರ-ಸಹೋದರಿ ಸಂಬಂಧ ಮದುವೆಯಾಗಲ್ಲ. ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಏಳು ತಲೆಮಾರುಗಳ ನಂತರ ಗೋತ್ರ ಬದಲಾಗುತ್ತದೆ.
ಯಾವ ಕುಲಗಳು ಮದುವೆಯಾಗುವುದಿಲ್ಲ?
ಹಿಂದೂ ಧರ್ಮದಲ್ಲಿ, ಕೆಲವು ಗೋತ್ರಗಳಲ್ಲಿ ಮದುವೆಯನ್ನು ನಿಷೇಧಿಸಲಾಗಿದೆ. ಮದುವೆಯ ಸಮಯದಲ್ಲಿ, ಮೂರು ಗೋತ್ರಗಳನ್ನು ನೋಡಲಾಗುವುದು. ಮೊದಲನೆಯದು ತಾಯಿಯ ಗೋತ್ರ. ಎರಡನೆಯದಾಗಿ, ತಂದೆಯ ಗೋತ್ರ, ಮೂರನೆಯದು, ಅಜ್ಜಿಯ ಕುಲ. ಈ ಗೋತ್ರದಲ್ಲಿ ಸಂಬಂಧ ಬಂದರೆ ಮದುವೆಯಾಗಬಾರದು.
ಗೋತ್ರದೊಳಗೆ ಮದುವೆಯಾಗುವುದರಿಂದ ಯಾವ ಸಮಸ್ಯೆಗಳು ಉದ್ಭವಿಸುತ್ತವೆ?
ಹಿಂದೂ ನಂಬಿಕೆಗಳ ಪ್ರಕಾರ, ಒಂದೇ ಗೋತ್ರದಲ್ಲಿ ಹುಡುಗ ಮತ್ತು ಹುಡುಗಿ ಮದುವೆಯಾದರೆ, ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಒಂದೇ ಗೋತ್ರದೊಳಗೆ ಮದುವೆ ನಡೆದರೆ ಆ ದಂಪತಿಗೆ ಹುಟ್ಟುವ ಮಗು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಬಳಲುವುದು ಎಂದು ಹೇಳಲಾಗುವುದು. ಇದು ಬರಿ ನಂಬಿಕೆ ಮಾತ್ರವಲ್ಲ ವೈಜ್ಞಾನಿಕ ಸತ್ಯವು ಹೌದು. ಸಂಬಂಧದಲ್ಲಿ ಮದುವೆಯಾಗಬಾರದು ವಿಜ್ಞಾನ ಕೂಡ ಹೇಳುತ್ತದೆ.
ಒಂದೇ ಗೋತ್ರದಲ್ಲಿ ಮದುವೆಯಾದರೆ ಕೆಲವೊಂದು ಅನುವಂಶೀಯ ಕಾಯಿಲೆಗಳು ಹುಟ್ಟುವ ಮಕ್ಕಳಿಗೆ ಬರಬಹುದು, ಜನಿಸುವ ಮಗುವಿನಲ್ಲಿ ದೈಹಿಕ ನ್ಯೂನತೆ ಕಂಡು ಬರುವುದು, ಹೀಗಾಗಿ ಒಂದೇ ಗೋತ್ರದಲ್ಲಿ ಮದುವೆಯಾಗಬಾರದು ಎಂದು ಹೇಳಲಾಗುವುದು.
ಈ ಕಾರಣದಿಂದ ಒಂದೇ ಗೋತ್ರದಲ್ಲಿ ಮದುವೆಯಾಬಾರದು ಎಂದು ಹೇಳಲಾಗುವುದು
- ಒಂದೇ ಗೋತ್ರದಲ್ಲಿ ಮದುವೆಯಾದರೆ ಮಕ್ಕಳಲ್ಲಿ ದೈಹಿಕ ನ್ಯೂನತೆ ಉಂಟಾಗುವುದು.
- ಒಂದೇ ಗೋತ್ರದಲ್ಲಿ ಮದುವೆಯಾಗುವುದು ಎಂದರೆ ಸ್ವಂತ ಸಹೋದರನನ್ನು , ಸಹೋದರಿಯನ್ನು ಮದುವೆಯಾಗಿದಂತಾಗುವುದು. ಯಾರೂ ಸಹೋದರ, ಸಹೋದರಿಯನ್ನು ಮದುವೆಯಾಗುವುದಿಲ್ಲ
- ಒಂದೇ ಗೋತ್ರದಲ್ಲಿ ಮದುವೆಯಾದರೆ ಆ ಸಂಬಂಧ ಚೆನ್ನಾಗಿರುವುದಿಲ್ಲ
ಹಿಂದೂ ಧರ್ಮದಲ್ಲಿ ಮದುವೆಗೆ ಸಂಬಂಧದ ಜೊತೆ ರಾಶಿ, ಗಣ ಎಲ್ಲವನ್ನೂ ನೋಡಿ ಮದುವೆ ಮಾಡಲಾಗುವುದು, ಇವೆಲ್ಲಾ ಹೊಂದಾಣಿಕೆಯಾದರೆ ಮಾತ್ರ ಅವರ ಬದುಕು ಚೆನ್ನಾಗಿರುತ್ತದೆ ಎಂದು ನಂಬಲಾಗುವುದು.
ಮದುವೆ ಅಂತ ಬಂದಾಗ ಹಿರಿಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ತುಂಬಾನೇ ಜಾಗ್ರತೆವಹಿಸುತ್ತಾರೆ
ಮನೆತನ ನೋಡುತ್ತಾರೆ
ಹೌದು ತಮ್ಮ ಮಕ್ಕಳಿಗೆ ಮದುವೆ ಸಂಬಂಧ ನೋಡುವಾಗ ಆ ಮನೆಯವರು ಎಂಥವರು, ಅವರ ಮಕ್ಕಳ ಸ್ವಭಾವ ಎಂಥದ್ದು, ನಮ್ಮ ಕುಟುಂಬಕ್ಕೆ ಅವರು ಹೊಂದಿಕೆಯಾಗುತ್ತಾರೆ ಎಂದೆಲ್ಲಾ ನೋಡಿ ಮದುವೆ ಮಾಡಿಕೊಡಲಾಗುವುದು. ಹಿರಿಯರು ಮದುವೆಗೆ ಸಂಬಂಧ ನೋಡುವಾಗ ಇದೆಲ್ಲಾ ನೋಡುವುದು ನಮ್ಮ ಮಕ್ಕಳ ಭವಿಷ್ಯ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಮದುವೆಯನ್ನು ಮಾಡಲಾಗುವುದು. ಇವೆಲ್ಲಾ ಸರಿಯಾಗಿದ್ದರೆ ಮಾತ್ರ ಮದುವೆ ಸಂಬಂಧ ಚೆನ್ನಾಗಿರುತ್ತದೆ ಎಂಬ ನಂಬಿಕೆ. ಹಾಗಾಗಿ ಒಂದು ಮದುವೆ ಅಂತ ಬಂದಾಗ ತುಂಬಾನೇ ವಿಚಾರಿಸಲಾಗುವುದು.
ಮದುವೆ ಎಂಬುವುದು ಇಬ್ಬರು ಜೊತೆಯಾಗಿ ಬಾಳುವ ಬದುಕು, ಆದರೆ ಈ ಬದುಕಿನಲ್ಲಿ ಮನೆಯವರು ತುಂಬಾನೇ ಪ್ರಭಾವ ಬೀರುತ್ತಾರೆ, ಬೆಳೆದು ಬಂದ ರೀತಿ ಪ್ರಭಾವ ಬೀರುವುದು ಹಾಗಾಗಿ ಒಂದು ಸಂಬಂಧ ಚೆನ್ನಾಗಿರಲು ಅವರ ಬಗ್ಗೆ ಮಾತ್ರವಲ್ಲ ಅವರ ಕುಟುಂಬದ ಬಗ್ಗೆಯೂ ತಿಳಿಯುವುದು ಮುಖ್ಯವಾಗಿದೆ ಅಲ್ವಾ?



Click it and Unblock the Notifications
