Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ರಾಮ ನವಮಿ: ಆದರ್ಶ ದಾಂಪತ್ಯಕ್ಕೆ ರಾಮ-ಸೀತೆಯ ಸಂಬಂಧದಿಂದ ಕಲಿಯ ಬೇಕಾದ 5 ಪಾಠಗಳು
ಏಕ ಪತ್ನಿ ವ್ರತಸ್ಥ ಶ್ರೀರಾಮ. ಆದ್ದರಿಂದಲೇ ಎಲ್ಲಾ ಹೆಣ್ಮಕ್ಕಳು ನನ್ನ ಪತಿ ಶ್ರೀರಾಮನಂತಿರಬೇಕು ಎಂದು ಹೇಳಲಾಗುವುದು. ರಾಮಾಯಣ ಎಂಬುವುದು ಬರೀ ಪೌರಾಣಿಕ ಕತೆಯಲ್ಲ, ಅದು ಬದುಕಿನ ಮೌಲ್ಯವನ್ನು ತಿಳಿಸುತ್ತದೆ. ಶ್ರೀರಾಮ ಹಾಗೂ ಸೀತೆ ಮಾತೆಯ ಸಂಬಂಧ ಇನ್ನೆಷ್ಟೂ ವರ್ಷಗಳು ಕಳೆದರೂ ಗಂಡ-ಹೆಂಡತಿಗೆ ಮಾದರಿಯಾಗಿರುತ್ತಾರೆ.
ದಾಂಪತ್ಯ ಜೀವನದಲ್ಲಿ ಹಲವು ತೊಂದರೆಗಳು ಬರಬಹುದು, ಅದನ್ನು ಅವರಿಬ್ಬರು ಹೇಗೆ ಎದುರಿಸಿದರು ಅದೇ ರೀತಿ ಎದುರಿಸಿದರೆ ಬದುಕು ಚೆನ್ನಾಗಿರುತ್ತದೆ. ಶ್ರೀರಾಮ -ಸೀತೆ ಜೋಡಿಯಿಂದ ಪ್ರತಿಯೊಬ್ಬ ದಂಪತಿ ಅನುಸರಿಸಬೇಕಾದ ಗುಣಗಳಿವು:

ಪ್ರೀತಿ ಮತ್ತು ಗೌರವ, ನಂಬಿಕೆ:
ಇದು ಸಂಬಂಧಕ್ಕೆ ತುಂಬಾನೇ ಮುಖ್ಯ. ಇಬ್ಬರ ನಡುವೆ ಅಗಾಧವಾದ ಪ್ರೀತಿಯಿತ್ತು, ಅಷ್ಟೇ ಗೌರವವಿತ್ತು ಹೀಗಾಗಿಯೇ ಎಂಥ ಕಷ್ಟ ಬಂದರೂ ಇಬ್ಬರು ಜೊತೆಯಲ್ಲಿದ್ದರು, ಜೊತೆಯಾಗಿ ಇರಲು ರಾವಣನ ಬಳಿ ಹೋರಾಡಿದರು. ಶ್ರೀರಾಮ ಸೀತೆಯ ಮೇಲಿಟ್ಟ ನಂಬಿಕೆಯಿಂದಲೇ ರಾವಣ ಸೀತೆಯನ್ನು ಅಪಹರಿಸಿದರೂ ಅವಳನ್ನು ಮರಳಿ ತರುತ್ತಾನೆ.
ರಾವಣ ಸೀತೆಯನ್ನು ಅಪಹರಿಸಿದಾಗ ಶ್ರೀರಾಮ ಸೀತೆಯನ್ನು ಒಂದಿಷ್ಟೂ ಸಂಶಯ ಪಡಲಿಲ್ಲ, ಈ ಗುಣ ಪ್ರತಿಯೊಬ್ಬ ಪುರುಷನಲ್ಲಿಯೂ ಇರಬೇಕು, ಹೆಂಡತಿ ಮಾಡದೇ ಇರುವ ತಪ್ಪಿಗೆ ಅವಳನ್ನು ಶಿಕ್ಷಿಸಬಾರದು. ರಾವಣ ಅಪಹರಿಸಿದಾಗ ಅದರಲ್ಲಿ ಸೀತೆಯ ತಪ್ಪಿಲ್ಲ ಎಂಬುವುದು ರಾಮನಿಗೆ ಗೊತ್ತಿತ್ತು.
ಸುಖದಲ್ಲಿ ಮಾತ್ರವಲ್ಲ ಕಷ್ಟದಲ್ಲಿಯೂ ಜೊತೆಯಾಗಿರುವುದು
ಪಿತೃವಾಖ್ಯ ಪರಿಪಾಲನೆಗಾಗಿ ಶ್ರೀರಾಮ ಕಾಡಿಗೆ ಹೊರಟು ನಿಂತಾಗ ಸೀತೆ ಬೇಕಾದರೆ ಅರಮೆನೆಯಲ್ಲಿಯೇ ಉಳಿಯಬಹುದಿತ್ತು, ಆದರೆ ಆಕೆ ಎಲ್ಲಿ ಪತಿಯಿರುತ್ತಾನೋ ಅದುವೇ ನನಗೆ ಅರಮನೆ ಎಂದು ಪತಿ ಜೊತೆ ಅರಣ್ಯವಾಸಕ್ಕೆ ಹೋಗುತ್ತಾಳೆ. ಗಂಡನ ಸುಖದಲ್ಲಿ ಮಾತ್ರವಲ್ಲ ಅವನ ಕಾಷ್ಟದಲ್ಲಿಯೂ ಜೊತೆಯಾಗಿ ನಿಲ್ಲುವುದೇ ಪತ್ನಿಯ ಧರ್ಮ ಎಂಬುವುದನ್ನು ಸೀತೆ ಮಾತೆ ತಿಳಿಸಿಕೊಡುತ್ತಾಳೆ. ಇಬ್ಬರು ಜೊತೆಗೆ ಬಾಳಲು ತೀರ್ಮಾನಿಸಿದ ಮೇಲೆ ಏನೇ ಬರಲಿ ಇಬ್ಬರು ಜೊತೆಯಾಗಿರಬೇಕು, ಅದುವೇ ಸುಂದರ ದಾಂಪತ್ಯದ ಗುಟ್ಟು.
ನಾವು ಸುಖದಲ್ಲಿದ್ದಾಗ ನಮ್ಮ ಜೊತೆ ಇರುವವರು ನಂತರ ಕಷ್ಟ ಬಂದಾಗ ನಮ್ಮನ್ನು ಬಿಟ್ಟು ಹೋಗುವವರನ್ನು ನಂಬಲೇಬಾರದು.
ಇಬ್ಬರ ನಡುವೆ ಒಳ್ಳೆಯ ಸಂವಹನ ಇರಬೇಕು
ಸೀತೆ ಹಾಗೂ ಶ್ರೀರಾಮನ ಸಮಬಂಧ ತುಂಬಾನೇ ಚೆನ್ನಾಗಿತ್ತು. ಅವರಿಬ್ಬರ ಏನೇ ವಿಷಯವಾದರೂ ಮುಕ್ತವಾಗಿ ಮಾತನಾಡಿಕೊಳ್ಳುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ, ಅದರಂತೆ ಯಾವುದೇ ಸಂಬಂಧವಾಗಿರಲಿ ಸಂಬಂಧ ತುಂಬಾನೇ ಚೆನ್ನಾಗಿರಬೇಕೆಂದರೆ ಇಬ್ಬರ ನಡುವೆ ಸಂವಹನ ಚೆನ್ನಾಗಿರಬೇಕು.
ಧರ್ಮ'
ಯಾರೇ ಅಗಲಿ ಧರ್ಮ ಬಿಟ್ಟು ಅಧರ್ಮದಲ್ಲಿ ನಡೆಯಬಾರದು, ಧರ್ಮದಲ್ಲಿ ನಡೆದರೆ ಜಯ ಎಂದೆಂದಿಗೂ ನಮ್ಮದಾಗಿರುತ್ತದೆ ಎಂಬುವುದು ರಾಮಾಯಣ ಓದಿದಾಗ ತಿಳಿಯುತ್ತೆ. ರಾಮ ಧರ್ಮ ಪರಿಪಾಲನೆ ಮಾಡಿದರೆ ರಾವಣ ಅಧರ್ಮದ ಹಾದಿ ತುಳಿದ, ಹೀಗಾಗಿ ನಾಶವಾದ.
ಸವಾಲು ಜೊತೆಯಾಗಿ ಎದುರಿಸಬೇಕು
ರಾಮ ಕಾಡಿಗೆ ಬಂದಿದ್ದಕ್ಕೆ ನನಗೆ ಈ ಗತಿಯಾಯ್ತು ಎಂದು ಎಂದಿಗೂ ಸೀತೆ ಹೇಳಲಿಲ್ಲ, ಸೀತೆಯನ್ನು ಶ್ರೀ ರಾಮ ಎಂದಿಗೂ ಸಂಶಯಿಸಲಿಲ್ಲ.
ರಾಮನಿಗೆ ಸೀತೆಯ ಮೇಲೆ ಸಂದೇಹವಿರಲ್ಲ
ಸಂದೇಹವಿಲ್ಲದಿದ್ದರೆ ಮತ್ಯಾಕೆ ಅಗ್ನಿ ಪರೀಕ್ಷೆ ಮಾಡಿದ ಎಂಬ ಪ್ರಶ್ನೆಯೂ ಬರುತ್ತದೆ. ಶ್ರೀರಾಮ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ಮಾಡಿಸುತ್ತಿರಲಿಲ್ಲ, ಅಯೋಧ್ಯೆಯ ರಾಜನಾಗಿದ್ದ, ಅಲ್ಲದೆ ರಾಮನಿಗೆ ಹೆಂಡತಿ ಮೇಲೆ ಸಂಶಯವಿರಲಿಲ್ಲ, ಜನತೆ ಮಾತನಾಡಬಾರದು, ರಾಜ ತನ್ನ ಹೆಂಡತಿಯ ಪರ ಸುಳ್ಳು ಹೇಳುತ್ತಿದ್ದಾನೆ ಅನಿಸಬಾರದು ಎಂಬ ಕಾರಣಕ್ಕೆ ಅಗ್ನಿ ಪರೀಕ್ಷೆ ಮಾಡಲಾಯಿತು, ರಾಮನಿಗೆ ಸೀತೆ ಮೇಲೆ ಪೂರ್ಣ ನಂಬಿಕೆಯಿತ್ತು, ನಂಬಿಕೆಯಿಲ್ಲದಿದ್ದರೆ ಸೀತೆಗಾಗಿ ಹೋರಾಟ ನಡೆಯುತ್ತಿತ್ತಾ? ಆದ್ದರಿಂದ ಸಂಸಾರದಲ್ಲಿ ನಂಬಿಕೆ ಎಂಬುವುದು ಮುಖ್ಯವಾಗಿರುತ್ತದೆ.



Click it and Unblock the Notifications