Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
96ನೇ ವಯಸ್ಸಿನಲ್ಲಿ ಮಗುವಿನ ತಂದೆಯಾದ ವ್ಯಕ್ತಿ.! ಯಾರೀತ..? ಈತನ ಕಥೆ ಏನು?
ಅನೇಕರಿಗೆ ಮಕ್ಕಳ ಹೆರುವುದು ಅವರ ಸಾಕಿ ಸಲುಹುವುದು ಜೀವನದ ಬಹುಮುಖ್ಯ ಅಂಗವಾಗಿರುತ್ತೆ, ಇನ್ನು ಕೆಲವರಿಗೆ ಮಕ್ಕಳಿಲ್ಲದಿದ್ದರೂ ದತ್ತು ಪಡೆದು ಮಕ್ಕಳ ಸಾಕುವುದರಿಂದ ಸಂತೋಷ ಕಾಣಲು ಮುಂದಾಗುತ್ತಾರೆ. ತಮ್ಮ ವಂಶ ಮುಂದೆಯು ಬೆಳೆದುಕೊಂಡು ಸಾಗಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ. ಇದಕ್ಕಾಗಿ ಎಂತಹ ಸಮಸ್ಯೆ, ಕಷ್ಟ ಎದುರಿಸಲು ಸಹ ಅವರು ಸಿದ್ಧರಿರುತ್ತಾರೆ.
ಇನ್ನೊಂದೆಡೆ ಕೆಲವರು ತಮ್ಮ ಇಳಿ ವಯಸ್ಸಿನಲ್ಲೂ ಮಕ್ಕಳ ಪಡೆಯುವುದನ್ನು ನಾವು ನೋಡಬಹುದು. ಅವರು ಮಕ್ಕಳ ಪಡೆಯುವ ಕ್ರಿಯೆಯನ್ನು ತಮ್ಮ ಇಳಿವಯಸ್ಸಿನಲ್ಲೂ ಮಾಡಿ ಯಶಸ್ವಿಯಾಗಿರುವವರು ಇದ್ದಾರೆ. ಇಲ್ಲಿಯೂ ಸಹ ಇದೇ ರೀತಿಯ ಘಟನೆ ನಡೆದಿದೆ. ಇಲ್ಲೊಬ್ಬ ವ್ಯಕ್ತಿ ತಮ್ನ 96ನೇ ವಯಸ್ಸಿನಲ್ಲಿ ಗಂಡು ಮಗುವಿನ ತಂದೆಯಾಗಿದ್ದ.

ರಾಮ್‌ಜಿತ್ ರಾಘವ್ ಗಂಡು ಮಗುವಿಗೆ ತಂದೆಯಾದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿದ್ದಾರೆ. ಆತ ತನ್ನ 96ನೇ ವಯಸ್ಸಿನಲ್ಲಿ ತಂದೆಯಾಗಿದ್ದ. ಹಾಗಾದ್ರೆ ಅಷ್ಟು ವರ್ಷ ಆತ ಕಾದಿದ್ದೇಕೆ? 96ನೇ ವಯಸ್ಸಿನಲ್ಲಿ ತಂದೆಯಾಗಲು ಸಾಧ್ಯವಾಗಿದ್ದು ಹೇಗೆ ಎಂಬ ಕುರಿತ ಮಾಹಿತಿ ಇಲ್ಲಿದೆ ನೋಡಿ.
ರಾಮ್‌ಜಿತ್ 2010 ರಲ್ಲಿ 94ನೇ ವಯಸ್ಸಿನಲ್ಲಿದ್ದಾಗ ತನ್ನ ಮೊದಲ ಮಗುವಿನ ತಂದೆಯಾಗಿದ್ದ. ಅವರು 24ನೇ ವಯಸ್ಸಿನಲ್ಲಿ ಮದುವೆಯಾಗಿದ್ದರೂ ಮೊದಲ ಪತ್ನಿ ತೀರಿಕೊಂಡ ಬಳಿಕ ಸುಮಾರು 25 ವರ್ಷ ಮತ್ತೊಂದು ಮದುವೆಯಾಗಿರಲಿಲ್ಲ. ಆದರೆ ಬಳಿಕ ಶಕುಂತಲಾ ದೇವಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದರು.
50ನೇ ವಯಸ್ಸಿನಲ್ಲಿ ಮತ್ತೊಂಧು ಮದುವೆಯಾಗಿದ್ದ ಅವರು ತಮ್ಮ 94ನೇ ವಯಸ್ಸಿನಲ್ಲಿ ಮೊದಲ ಮಗ ಕ್ರಮಜೀತ್‌ನನ್ನು 2010 ರಲ್ಲಿ ಜಗತ್ತಿಗೆ ಸ್ವಾಗತಿಸಿದರು. ಇದರೊಂದಿಗೆ, ರಾಮ್‌ಜಿತ್ ತಂದೆಯಾದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿ ಪಡೆದರು. ಆದರೆ ಇದೇ ದಾಖಲೆಯನ್ನು ಇನ್ನೆರಡು ವರ್ಷದಲ್ಲಿ ಅವರೇ ಮುರಿದರು.
ತಮ್ಮ 96ನೇ ವಯಸ್ಸಿನಲ್ಲಿ ಮತ್ತೊಂದು ಮಗುವಿನ ತಂದೆಯಾದರು. ಹೀಗಾಗಿ 96ನೇ ವಯಸ್ಸಿಗೆ ತಂದೆಯಾದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿ ತಮ್ಮದಾಗಿಸಿಕೊಂಡರು. 2012ರಲ್ಲಿ, ಅವರ ಮೊದಲ ಮಗ ಜನಿಸಿದ ಕೇವಲ ಎರಡು ವರ್ಷಗಳ ನಂತರ ಎರಡನೇ ಮಗ ರಂಜೀತ್‌ನನ್ನು ಜಗತ್ತಿಗೆ ಸ್ವಾಗತಿಸಿದರು.
ಹರಿಯಾಣದ ಮಾಜಿ ಕುಸ್ತಿಪಟು ರಾಮ್‌ಜಿತ್, ಅವರು ಸಸ್ಯಹಾರಿಯಂತೆ. ಕಾಳು, ಬೇಳೆ, ಧಾನ್ಯ, ತರಕಾರಿ ಬಿಟ್ಟು ಬೇರೇನು ಸೇವಿಸಿಲ್ಲವಂತೆ, ಜೊತೆಗೆ ಗುಟ್ಕಾ, ಮದ್ಯಪಾನದಂತಹ ಯಾವ ಅಭ್ಯಾಸವು ಅವರಿಗಿಲ್ಲವಂತೆ. ಅವರ ಜೀವನ ಶೈಲಿ ಹಾಗೂ ಸಸ್ಯಹಾರಿ ಜೀವನ ಶೈಲಿಯನ್ನು PETA ತನ್ನ ಜಾಹೀರಾತು ಪ್ರಚಾರಕ್ಕೂ ಬಳಸಿಕೊಂಡಿತ್ತು.
ಶಕುಂತಲಾ ದೇವಿ ಅವರು ಮತ್ತೆ ಗರ್ಭಿಣಿಯಾಗದಂತೆ ನೋಡಿಕೊಳ್ಳಲು ಟ್ಯೂಬೆಕ್ಟಮಿ ಆಪರೇಷನ್ ಮಾಡಲು ನಿರ್ಧರಿಸಲಾಗಿತ್ತು. ಮೇ 2013 ರಲ್ಲಿ, ಶಕುಂತಲಾ ದೇವಿ ಅವರು ವಿಕ್ರಮಜೀತ್ ಅವರನ್ನು ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ವಾಪಸ್ಸು ಮನೆಗೆ ಬರುವಾಗ ಬಸ್ ನಿಲ್ದಾಣದಲ್ಲಿ ನಿದ್ದೆಗೆ ಜಾರಿದ ಆಕೆ ಎಚ್ಚರಗೊಂಡು ನೋಡಿದಾಗ ಎಲ್ಲಿಯೂ ತನ್ನ ಮಗು ಕಾಣಲಿಲ್ಲ.
ಮಗು ನಾಪತ್ತೆಯಾದ ಬಳಿಕ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆಕೆ ಪತಿ ರಾಮ್‌ಜಿತ್‌ನನ್ನು ಬಿಟ್ಟು ಹೋದರು. ಇದಾದ 6 ತಿಂಗಳ ಬಳಿಕ ಮರಳಿ ಬಂದಾಕೆ ತನ್ನ 2ನೇ ಮಗುವನ್ನು ತನ್ನೊಡನೆ ಕರೆದುಕೊಂಡು ಹೋದರು. ಆದರೆ 2020ರಲ್ಲಿ ರಾಮ್‌ಜಿತ್ ತನ್ನ 104ನೇ ವಯಸ್ಸಿನಲ್ಲಿ ನಿಧನರಾದರು. ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅವರು ನಿಧನರಾಗಿದ್ದರು.
ಆದರೆ ಅವರ ಮರಣದ ನಂತರ ಅವರ ವಯಸ್ಸಿನ ಕುರಿತು ಸಾಕಷ್ಟು ಪ್ರಶ್ನೆಗಳು ಎದ್ದವು, ಅವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದರು. ಆತ ಹೇಳುವ ವಯಸ್ಸಿಗೂ ಅವರ ದೈಹಿಕ ರೂಪಕ್ಕೂ ಸಂಬಂಧವಿರಲಿಲ್ಲ, ಅವರಿಗೆ ಅಷ್ಟು ವಯಸ್ಸು ಆಗಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದರು.



Click it and Unblock the Notifications