Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಒಂದು ತಿಂಗಳೊಳಗೆ ಮಗಳ ಮದುವೆಯಾದ್ರೆ ಬ್ಲಾಂಕ್ ಚೆಕ್ : ತಂದೆಯಿಂದ ಬಿಗ್ ಆಫರ್!
ಇಂಟರ್‌ನೆಟ್‌ನಲ್ಲಿ ಒಮ್ಮೊಮ್ಮೆ ಎಂತಹ ವಿಡಿಯೋಗಳು ಹರಿದಾಡುತ್ತವೆ ಅಂದ್ರೆ ನಾವದನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. ಅಂದ್ರೆ ಅಷ್ಟು ವಿಚಿತ್ರವಾಗಿರುತ್ತವೆ. ಕೆಲವು ಬಾರಿಯಂತು ಇದು ನಿಜವೇ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇದೀಗ ಇಂತಹದ್ದೆ ವಿಡಿಯೋವೊಂದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಯುವತಿಯ ತಂದೆಯೊಬ್ಬ ಮಗಳ ಮದುವೆಯಾಗುವಂತೆ ಹುಡುಗರನ್ನು ಕೇಳಿಕೊಳ್ಳುತ್ತಿರುವುದು ಕಂಡುಬರುತ್ತದೆ. ಮದುವೆ ಅಂದರೆ ಯುವತಿಗೆ ಹುಡುಗನನ್ನು ಹುಡುಕಿ ತಂದೆ ಮುಂದೆ ನಿಂತು ಮದುವೆಯಾಗುವುದು ನಡೆದು ಬಂದ ಸಂಪ್ರದಾಯ. ಆದರೆ ಇಲ್ಲಿ ಹುಡುಗಿಯ ತಂದೆ ತನ್ನ ಮಗಳನ್ನು ಮದುವೆಯಾಗುವಂತೆ ಮನವಿ ಮಾಡುತ್ತಿದ್ದಾನೆ.

ಆತ ಬರಿ ಮನವಿ ಮಾಡುತ್ತಿರುವುದು ಅಷ್ಟೇ ಅಲ್ಲ. ಜೊತೆಗೆ ಒಂದು ತಿಂಗಳಲ್ಲಿ ಮದುವೆಯಾದರೆ ಹುಡುಗನಿಗೆ ಬ್ಲಾಂಕ್ ಚೆಕ್ ನೀಡುವ ಆಫರ್ ಸಹ ನೀಡುತ್ತಿದ್ದಾರೆ. ಈ ವಿಡಿಯೋ ಹರಿಯಾಣದ್ದು ಎನ್ನಲಾಗುತ್ತಿದೆ. ಕಳೆದ ಮಾರ್ಚ್ 18ರಿಂದಲೂ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಮದುವೆಯಾಗದ ಹುಡುಗರು ಸಾಲು ಸಾಲು ಕಮೆಂಟ್ ಮಾಡುತ್ತಿದ್ದಾರೆ.
ಯಾವುದೇ ತಂದೆಗೆ, ಮಗಳ ಮದುವೆಯು ಅವರ ಜೀವನದ ದೊಡ್ಡ ಹಂತವಾಗಿರೋದ್ರಿಂದ ಸಂಭ್ರಮದಿಂದ ಮಾಡುವುದು, ಸರ್ಕಾರಿ ಕೆಲಸದಲ್ಲಿರುವ ಹುಡುಗನ ಹುಡುಕುವುದು ಅಷ್ಟೇ ಏಕೆ ನಗರದಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕು ಎಂಬೆಲ್ಲಾ ಬೇಡಿಕೆಗಳಿರುತ್ತವೆ. ಆದ್ರೆ ಈ ಘಟನೆಯಲ್ಲಿ ಇದ್ಯಾವುದೂ ಇಲ್ಲ.
ಸಾಮಾಜಿಕ ಜಾಲತಾಣದ ವಿಶಾಲ ಬಳಕೆಯು ವಧು ವರರ ಅನ್ವೇಷಣಾ ಕೇಂದ್ರಗಳಾಗಿವೆ. ಇದಕ್ಕೆ ನೈಜ ಸಾಕ್ಷಿ ಎಂದರೆ ಈ ವಿಡಿಯೋ ಆಗಿದೆ. ಇಲ್ಲಿ ಮಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡಿರುವ ತಂದೆ ಆಕೆಯ ನನ್ನ ಮಗಳಿಗೆ ಹುಡುಗ ಬೇಕಾಗಿದ್ದಾನೆ. ಯಾರು ಒಂದು ತಿಂಗಳಲ್ಲಿ ಮದುವೆಯಾಗುತ್ತಾರೋ ಅವರಿಗೆ ಖಾಲಿ ಚೆಕ್ ನೀಡುವ ಭರವಸೆ ನೀಡಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹುಡುಗಿಯ ತಂದೆಯ ನಡೆ ಬಗ್ಗೆ ಭಾರೀ ಟೀಕೆಗಳು ಸಹ ಕೇಳಿಬಂದಿವೆ. ಜೊತೆಗೆ ಇದರ ಹಿಂದಿನ ಉದ್ದೇಶ ಏನಿರಬಹುದು ಎಂಬ ಪ್ರಶ್ನೆಗಳು ಸಹ ನೆಟ್ಟಿಗರನ್ನು ಕಾಡುತ್ತಿವೆ. ಹುಡುಗಿಗೆ ಮದುವೆ ಮಾಡಲು ಹತ್ತಾರು ಮಾರ್ಗವಿದ್ದರೂ ಈ ರೀತಿ ಬ್ಲಾಂಕ್ ಚೆಕ್‌ನ ಆಮಿಷ ತೋರಿಸಿ ಮದುವೆ ಮಾಡುತ್ತಿರುವುದೇಕೆ? ಜೊತೆಗೆ ಹುಡುಗಿ ಕಣ್ಣೀರಿಡುತ್ತಿರುವುದು ಏಕೆ ಎಂಬ ಪ್ರಶ್ನೆ ವಿಡಿಯೋ ನೋಡಿದವರಲ್ಲಿ ಮೂಡಿದೆ.
ಈ ವಿಡಿಯೋದಲ್ಲಿರುವ ಹುಡುಗಿಯ ತಂದೆ ಸ್ವಂತ ಉದ್ಯಮಿಯಂತೆ, ಗುಜರಿ ವ್ಯಪಾರಿಯಾಗಿರು ಆತನ ಬಳಿ ಕೋಟಿ ಕೋಟಿ ಹಣವಿದೆಯಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ. ಹೀಗಾಗಿ 1 ತಿಂಗಳಲ್ಲಿ ಮದುವೆಯಾಗುವ ಹುಡುಗನಿಗೆ ಬ್ಲಾಂಕ್ ಚೆಕ್ ನೀಡಲಾಗುವುದು ಆತನಿಗೆ ಇಷ್ಟಬಂದಷ್ಟು ಮೊತ್ತ ಬರೆದುಕೊಳ್ಳಬಹುದು ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಆದರೆ ಅಷ್ಟೆಲ್ಲಾ ಸಿರಿವಂತನಾಗಿದ್ದರೆ ತಾನಾಗಿಯೇ ತಮ್ಮ ಮಗಳಿಗೆ ವರನನ್ನು ಹುಡುಕಿ ಮದುವೆ ಮಾಡುತ್ತಿದ್ದ. ಇಲ್ಲವೆ ಶ್ರೀಮಂತ ಮನೆತನದ ಹುಡುಗನನ್ನು ಆಕೆಯೇ ಆರಿಸಿಕೊಳ್ಳುತ್ತಿದ್ದಳು ಎಂಬುದು ನೆಟ್ಟಿಗರ ವಾದವಾಗಿದೆ.
ನಕಲಿ ವಿಡಿಯೋ ಸಹ ಆಗಿರಬಹುದು
ಇನ್ನು ಇಂತಹ ಹಲವು ವಿಡಿಯೋಗಳನ್ನು ನಾವಿಂದು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದಾಗಿದೆ. ಲೈಕ್ಸ್, ಫಾಲೋವರ್ಸ್, ಕಮೆಂಟ್ ಹಾಗೂ ವೈರಲ್ ಆಗುವ ಉದ್ದೇಶದಿಂದ ಇಂತಹ ವಿಡಿಯೋ ಮಾಡುವುದನ್ನು ನಾವು ನೋಡಬಹುದು. ಈ ವಿಡಿಯೋ ಸಹ ಈ ಸಾಲಿಗೆ ಸೇರಿದೆ ಎಂದು ಹಲವರು ಶಂಕಿಸಿದ್ದಾರೆ. ಹಲವು ಬಾರಿ ಇಂತಹ ಪ್ರಕರಣಗಳು ನಕಲಿ ಎಂದು ವರದಿಯಾಗುವುದೇ ಹೆಚ್ಚು. ಹೀಗಾಗಿ ಜನರು ಸಹ ಈ ವಿಡಿಯೋವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತಿಲ್ಲ. ಬದಲಿಗೆ ತಮಾಷೆಯ ಕಮೆಂಟ್‌ಗಳ ಮಾಡಿರುವುದನ್ನು ನೋಡಬಹುದು.



Click it and Unblock the Notifications