Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಇನ್ಸ್ಸ್ಟಾಗ್ರಾಮ್ನಲ್ಲಿ ಪ್ರೀತಿಸಿ 80ರ ವೃದ್ಧನ ಮದುವೆಯಾದ 34ರ ಮಹಿಳೆ..!
ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಿಶ್ಚಯವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅಂದರೆ ಯಾವ ಗಂಡು ಯಾವ ಹೆಣ್ಣಿನ ಜೊತೆ ಬಾಳಬೇಕು ಎಂಬುದನ್ನು ದೇವರೇ ನಿರ್ಧರಿಸಿರುತ್ತಾನೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಈ ಮಾತಿನ ಅರ್ಥವಾಗಿತ್ತು.
ಕಾಲ ಬದಲಾದಂತೆ ಕೆಲವೊಂದು ಸಂಪ್ರದಾಯ, ಆಚರಣೆಗಳು ಬದಲಾಗುತ್ತಾ ಹೋಗುತ್ತದೆ. ಅಂತಹ ಸಂಪ್ರದಾಯದಲ್ಲಿ ಮದುವೆ ಕೂಡ ಒಂದಾಗಿದೆ. ಹಿಂದಿನ ಕಾಲದಲ್ಲಿ 18 ದಾಟುತ್ತಿದ್ದಂತೆ ಮದುವೆಯಾಗುತ್ತಾ ಇದ್ದರು. ಆದರೆ ಈಗ ಉನ್ನತ ಶಿಕ್ಷಣ ಅದರ ಬಳಿಕ ವೃತ್ತಿ ಹೀಗೆ ಹಲವಾರು ಕಾರಣಗಳಿಂದಾಗಿ ಮದುವೆ ವಿಳಂಬವಾಗುತ್ತಿದೆ.
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮತ್ತು ಕೆಲವೊಂದು ಸಾಮಾಜಿಕ ಬದಲಾವಣೆಗಳು ಇದಕ್ಕೆ ಕಾರಣವೆನ್ನಬಹುದು. ಆದರೆ ಇನ್ನು ಕೆಲವರು ಮದುವೆಯಾಗಲು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಸಂಗಾತಿ ಸಿಗದೆ ಮದುವೆ ವಿಳಂಬವಾಗುತ್ತಿರುತ್ತದೆ. ಇದಿಷ್ಟೆ ಅಲ್ಲ ನಾವಿಂದು ಚಿತ್ರ ವಿಚಿತ್ರ ಮದುವೆ ಪ್ರಸಂಗಗಳ ನೋಡುತ್ತಿದ್ದೇವೆ. ಈ ವಿಚಿತ್ರ ಸಾಲಿಗೆ ಇಲ್ಲೊಂದು ಮದುವೆಯೂ ಸೇರಿಕೊಂಡಿದೆ.

80 ವರ್ಷದ ವ್ಯಕ್ತಿಯೊಬ್ಬ ತನ್ನ ಅರ್ಧ ವಯಸ್ಸಿಗಿಂತಲೂ ಚಿಕ್ಕ ವಯಸ್ಸಿನ ಮಹಿಳೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಸಿ ಮದುವೆಯಾದ ಘಟನೆ ನಡೆದಿದೆ. ಮಧ್ಯಪ್ರದೇಶದ ಅಗರ್ ಮಾಲ್ವಾ ಪ್ರದೇಶದಲ್ಲಿ ಈ ಅಚ್ಚರಿಯ ವಿವಾಹ ನಡೆದಿದೆ.
Instagram ನಲ್ಲಿ ಪ್ರೀತಿಸಿ ಮದುವೆ
ಮಹಾರಾಷ್ಟ್ರದ 34 ವರ್ಷದ ಮಹಿಳೆ ಶೀಲಾ ಮತ್ತು ಎಂಪಿಯ ಮಗರಿಯಾ ಗ್ರಾಮದ ಬಲುರಾಮ್ ಈಗ ಮದುವೆಯಾದ ಜೋಡಿಯಾಗಿದ್ದಾರೆ. ಅವರು ಸುನ್ನರ್ ಪಟ್ಟಣದ ನ್ಯಾಯಾಲಯದಲ್ಲಿ ಮದುವೆಯಾಗಿದ್ದಾರೆ. ಬಲುರಾಮ್ ಇನ್ಸ್ಸ್ಟಾಗ್ರಾಮ್ , ಫೇಸ್ಬುಕ್ ಬಳಕೆಯಲ್ಲಿ ಎತ್ತಿದ ಕೈ ಅಂತೆ. ಆತನ ಬಳಿ ಒಂದು ಸ್ಮಾರ್ಟ್ ಫೋನ್ ಸಹ ಇತ್ತು. ಆತನ ಸ್ನೇಹಿತನ ಸಹಾಯದಿಂದ ಇನ್ಸ್ಸ್ಟಾಗ್ರಾಮ್ನಲ್ಲಿ ರೀಲ್ಸ್ ನೋಡುವ ಅಭ್ಯಾಸ ಇಟ್ಟುಕೊಂಡಿದ್ದನಂತೆ. ದಿನದಲ್ಲಿ ಬಹುಪಾಲು ಸಮಯ ಆತ ಇನ್ಸ್ಸ್ಟಾಗ್ರಾಮ್ನಲ್ಲಿ ಕಳೆಯುತ್ತಿದ್ದನಂತೆ.
ಹೀಗೆ ರೀಲ್ಸ್ ನೋಡುವಾಗ ಶೀಲಾ ಎಂಬಾಕೆಯ ರೀಲ್ಸ್ ವಿಡಿಯೋ ನೋಡಿ ಬಲುರಾಮ್ ಮನಸೋತಿದ್ದಾರೆ. ಬಳಿಕ ಆಕೆಯನ್ನು ಮೆಸೆಂಜರ್ ಮೂಲಕ ಸಂಪರ್ಕಿಸಿ ಇಬ್ಬರು ಚಾಟಿಂಗ್ನಲ್ಲಿ ಬ್ಯುಸಿಯಾಗಿದ್ದರಂತೆ. ಹೀಗಾಗಿ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದರಂತೆ.
ಬಲುರಾಮ್ ಅಗರ್ ಮಾಲ್ವಾ ಜಿಲ್ಲೆಯ ಸುಮಾರು 100 ಮನೆಗಳನ್ನು ಹೊಂದಿರುವ ಮಗರಿಯಾ ಎಂಬ ಸಣ್ಣ ಹಳ್ಳಿಯಿಂದ ಬಂದವರು. ಎರಡು ವರ್ಷಗಳ ಹಿಂದೆ ಅವರು ನಿಜವಾಗಿಯೂ ಖಿನ್ನತೆಗೆ ಒಳಗಾಗಿದ್ದರು. ಬಲುರಾಮ್ಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಅವರೆಲ್ಲರು ಮದುವೆಯಾಗಿ ಬೇರೆ ಬೇರೆ ಕಡೆಗಳಲ್ಲಿ ವಾಸವಿದ್ದಾರೆ. ಆದರೆ ಬಲುರಾಮ್ ಒಬ್ಬಂಟಿಯಾಗಿ ವಾಸವಿದ್ದರು. ಆದರೆ ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಸಾಲ ಮಾಡಿಕೊಂಡಿದ್ದರು.
ಆದರೆ ಈ ವೇಳೆ ಸ್ನೇಹಿತನೊಬ್ಬ ಆತನಿಗೆ ಸ್ಮಾರ್ಟ್ಫೋನ್ ಜೊತೆಗೆ ಇನ್ಸ್ಸ್ಟಾಗ್ರಾಮ್ ಖಾತೆ ತೆರೆದು ಕೊಟ್ಟಿದ್ದ. ಇದರಲ್ಲಿ ರೀಲ್ಸ್ ನೋಡುತ್ತಿದ್ದರು. ಜೊತೆಗೆ ಸ್ನೇಹಿತನ ಜೊತೆ ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡುತ್ತಿದ್ದರು. ಹೀಗಾಗಿ ಇಬ್ಬರು ಗ್ರಾಮದಲ್ಲಿ ಫೇಮಸ್ ಸಹ ಆದರು. ಅವರಿಗೆ ಇನ್ಸ್ಸ್ಟಾಗ್ರಾಮ್ನಲ್ಲಿ ಅನುಯಾಯಿಗಳು ಹುಟ್ಟಿಕೊಂಡರು.
ಇತ್ತ ಮಹಾರಾಷ್ಟ್ರದ ಅಮರಾವತಿಯಲ್ಲಿ ನೆಲೆಸಿರುವ ಶೀಲಾ ಇಂಗ್ಲೆ ಅವರನ್ನು ಬಾಲುರಾಮ್ ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿದ್ದಾರೆ. ಇಬ್ಬರೂ Instagram ನಲ್ಲಿ ಸಂಭಾಷಣೆಯನ್ನು ಪ್ರಾರಂಭಿಸಿದರು. ಆದರೆ ಬಾಲುರಾಮ್ಗೆ ಅಕ್ಷರಗಳು ತಿಳಿಯುತ್ತಿರಲಿಲ್ಲ. ಹೀಗಿರುವಾಗ ತನ್ನ ಸ್ನೇಹಿತ ವಿಷ್ಣು ಸಹಾಯ ಮಾಡುತ್ತಿದ್ದ, ಶೀಲಾಳ ಎಲ್ಲಾ ಮೆಸೇಜ್ಗಳಿಗೂ ವಿಷ್ಣು ಪ್ರತ್ಯುತ್ತರ ನೀಡುತ್ತಿದ್ದ. ಈ ವಿಚಾರ ಶೀಲಾಳಿಗೂ ತಿಳಿದಿತ್ತು. ಒಳಿಕ ಬಾಲುರಾಮ್ಗೆ 80 ವರ್ಷ ತಿಳಿದ ಬಳಿಕವೂ ಆಕೆ ಮನೆ ಬಿಟ್ಟು ಬಂದು ಆತನೊಂದಿಗೆ ಮದುವೆಯಾಗಲು ನಿರ್ಧರಿಸಿದಳು.



Click it and Unblock the Notifications