ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ

ವೈದಿಕಶಾಸ್ತ್ರದ ಪ್ರಕಾರ ಏಪ್ರಿಲ್ 23ರ ರಾಶಿಫಲ
ತಿಥಿ: ಪೂರ್ಣಿಮಾ
ನಕ್ಷತ್ರ: ಚೈತ್ರ
ಯೋಗ: ಸಿದ್ಧಿಯೋಗ
ಪಕ್ಷ:ಶುಕ್ಲ ಪಕ್ಷ
ಅಭಿಜಿತ್ ಮುಹೂರ್ತ: ಬೆಳಗ್ಗೆ 11:53ರಿಂದ ಮಧ್ಯಾಹ್ನ 12:46ರವರೆಗೆ
ರಾಹುಕಾಲ: ಮಧ್ಯಾಹ್ನ 03:36ರಿಂದ ಸಂಜೆ 05:14ರವರೆಗೆ

Dina Bhavishya

ಮೇಷ ರಾಶಿ

ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಈ ದಿನ ನಿಮ್ಮ ವ್ಯವಹಾರದಲ್ಲಿ ನೀವು ಲಾಭ ಗಳಿಸಲು ಸಾಧ್ಯವಾಗುವುದು. ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ ಅದಕ್ಕೆ ಇಂದು ಉತ್ತಮ ಪರಿಹಾರ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀವು ಖರ್ಚು ಎಷ್ಟು ಮಿತಿಯಲ್ಲಿ ಮಾಡುತ್ತೀರೋ ಅಷ್ಟು ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರಲಿದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 2
ಶುಭ ಸಮಯ: ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 1:50 ರವರೆಗೆ

ವೃಷಭ ರಾಶಿ

ನೀವಿಂದು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕಚೇರಿಯಲ್ಲಿ ಕೆಲಸದ ಒತ್ತಡ ಅಧಿಕವಿರುವುದರಿಂದ ನಿಮಗೆ ತುಂಬಾ ಸುಸ್ತಾಗುವುದು. ಆದರೆ ನೀವು ಸ್ಮಾರ್ಟ್‌ ವರ್ಕ್ ಮಾಡಿದರೆ ಕೆಲಸದ ಹೊರೆ ಕಡಿಮೆ ಇರಲಿದೆ. ವ್ಯಾಪಾರಿಗಳಿಗೆ ಈ ದಿನ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ತನ್ನ ವ್ಯವಹಾರದಲ್ಲಿ ಬದಲಾವಣೆ ಬಗ್ಗೆ ಯೋಚಿಸಬಹುದು. ನೀವು ಆಸ್ತಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಇಂದು ನಿಮಗೆ ಉತ್ತಮ ಅವಕಾಶ ಸಿಗಬಹುದು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 4
ಶುಭ ಸಮಯ: ಸಂಜೆ 5:15 ರಿಂದ 7:30 ರವರೆಗೆ

ಮಿಥುನ ರಾಶಿ

ಉದ್ಯೋಗಿಗಳು ಸಂಬಳ ಹೆಚ್ಚಾಗುವ ಸಿಹಿ ಸುದ್ದಿ ಪಡೆಯಬಹುದು. ವ್ಯಾಪಾರಿಗಳು ಕಠಿಣ ಶ್ರಮ ಹಾಕುತ್ತೀರಿ, ಆದರೆ ಅದಕ್ಕೆ ತಕ್ಕ ಫಲ ಸಿಗಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದ ಉತ್ತಮ ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಅಲ್ಲದೆ ಪೋಷಕರ ಅನಾರೋಗ್ಯ ಸಮಸ್ಯೆ ನಿಮ್ಮ ಚಿಂತೆಗೆ ಕಾರಣವಾಗಬಹುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 19
ಶುಭ ಸಮಯ: ಬೆಳಗ್ಗೆ 6:20 ರಿಂದ 10 ರವರೆಗೆ

ಕರ್ಕ ರಾಶಿ

ಹಣದ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿರಲಿದೆ, ಅಲ್ಲದೆ ಉದ್ಯೋಗಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಕುಟುಂಬದಲ್ಲಿ ಶೀಘ್ರವೇ ಶುಭಕಾರ್ಯವೊಂದು ನಡೆಯಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಜೀವನಶೈಲಿ ಕಡೆಗೆ ಗಮನಹರಿಸುವುದು ಒಳ್ಳೆಯದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 25
ಶುಭ ಸಮಯ: ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ

ಸಿಂಹ ರಾಶಿ

ಉದ್ಯಮಿಗಳು ಈ ದಿನ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಉದ್ಯೋಗಿಗಳು ಈ ದಿನ ಕೋಪ ನಿಯಂತ್ರಿಸಲು ಸಲಹೆ ನೀಡಲಾಗುವುದು. ನಿಮ್ಮ ಕೋಪ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಸಂಜೆ 4:50 ರಿಂದ ರಾತ್ರಿ 8 ರವರೆಗೆ


ಕನ್ಯಾ ರಾಶಿ

ನಿರುದ್ಯೋಗಿಗಳು ನಿರಾಸೆ ಪಡಬೇಡಿ, ನೀವು ನಿಮ್ಮ ಪ್ರಯತ್ನ ಮುಂದುವರೆಸಿ, ಶೀಘ್ರದಲ್ಲಿಯೇ ನಿಮಗೆ ಒಳ್ಳೆಯ ಕೆಲಸ ಸಿಗಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಲಾಭ ಪಡೆಯುತ್ತಿರಬಹುದು. ಕೌಟುಂಬಿಕ ಜೀವನದಲ್ಲಿ ಖುಚಿ ಇರಲಿದೆ. ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಬೆಳಗ್ಗೆ 5:20 ರಿಂದ 7:45 ರವರೆಗೆ


ತುಲಾ ರಾಶಿ

ಈ ಅವಧಿ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಈ ಸಮಯದಲ್ಲಿ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು.
ಕಚೇರಿಯಲ್ಲಿ ನಿಮ್ಮ ಅಜಾಗರೂಕತೆಯಿಂದ ನಿಮ್ಮ ಬಾಸ್‌ನ ಮನಸ್ಥಿತಿ ಹಾಳಾಗುವುದು. ಅಂತಹ ಪರಿಸ್ಥಿತಿಯಲ್ಲಿ, ಇಂದು ನೀವು ಅವರ ಕೋಪವನ್ನು ಸಹ ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಗಮನಹರಿಸಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 32
ಶುಭ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ

ವೃಶ್ಚಿಕ ರಾಶಿ

ಈ ದಿನ ನಿಮಗೆ ಉತ್ತಮವಾಗಿದೆ, ಈ ದಿನ ಅಪೂರ್ಣವಾಗಿದ್ದ ಕೆಲಸ ಪೂರ್ಣಗೊಳ್ಳುವುದರಿಂದ ಖುಷಿಯಾಗುವುದು. ವ್ಯಾಪಶರಿಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಿದೆ. ಹೊಸ ವ್ಯವಹಾರ ಪ್ರಾರಂಭಿಸುವ ಚಿಂತೆಯಲ್ಲಿದ್ದರೆ ನೀವು ಸರಿಯಾಗಿ ವಿಚಾರಿಸಿದ ಬಳಿಕವಷ್ಟೇ ಮುಂದೆ ಹೆಜ್ಜೆ ಇಡಬೇಕು. ಹಣದ ವಿಷಯದಲ್ಲಿಈ ದಿನ ಉತ್ತಮವಾಗಿರಲಿದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತೀರಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಬೆಳಗ್ಗೆ 9:15 ರಿಂದ 11 ರವರೆಗೆ

ಧನು ರಾಶಿ

ವ್ಯಾಪಾರಿಗಲಿಗೆ ಈ ದಿನ ಉತ್ತಮವಾಗಿದೆ, ಈ ದಿನ ಲಾಭ ಗಳಿಸಲು ಸಾಧ್ಯವಾಗುವುದು. ಈ ದಿನ ಸಮಯಕ್ಕೆ ಮುಂಚಿತವಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದು. ಸಂಗಾತಿಗೆ ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 11
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

ಮಕರ ರಾಶಿ

ಈ ದಿನ ನಿಮಗೆ ಉತ್ತಮವಾಗಿರಲಿದೆ, ಹೊಸ ಜವಾಬ್ದಾರಿ ನಿಮಗೆ ಸಿಗಲಿದೆ. ವ್ಯಾಪಾರಿಗಳು ಅದರಲ್ಲೂ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರು ಉತ್ತಮ ಲಾಭ ಪಡೆಯುತ್ತಿದ್ದಾರೆ. ವೈವಾಹಿಕ ಜೀವನದಲ್ಲಿ ಕೆಲಸ ಸಮಸ್ಯೆಗಳಿರಬಹುದು, ಆರೋಗ್ಯದ ಕಡೆಗೂ ಗಮನಹರಿಸಬೇಕು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 27
ಶುಭ ಮುಹೂರ್ತ: ಬೆಳಗ್ಗೆ 10.30 ರಿಂದ ಮಧ್ಯಾಹ್ನ 12

ಕುಂಭ ರಾಶಿ

ಈ ದಿನ ನಿಮಗೆ ಉತ್ತಮವಾಗಿರಲಿದೆ. ಕುಟುಂಬ ಜೀವದಲ್ಲಿ ಅನುಕೂಲಕರ ಫಲಿತಾಂಶ ಪಡೆಯುತ್ತೀರಿ. ಇನ್ನು ವ್ಯಾಪಾರಿಗಿಗೂ ಈ ದಿನ ಚೆನ್ನಾಗಿರಲಿದೆ, ನೀವು ಊಹಿಸಿದಂತೆಯೇ ವ್ಯಾಪಾರ, ವಹಿವಾಟು ನಡೆಯಲಿದೆ. ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 5
ಶುಭ ಸಮಯ: ಸಂಜೆ 4:30 ರಿಂದ 7 ರವರೆಗೆ

ಮೀನ ರಾಶಿ

ಈ ದಿನ ಜಾಗ್ರತೆವಹಿಸಿ, ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸಿ, ನೀವು ದೊಡ್ಡ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ಅವರ ಬಗ್ಗೆ ಹೆಚ್ಚು ಗಮನ ಹರಿಸಬೇಕು ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಪಡೆಯಬಹುದು. ನಿರುದ್ಯೋಗಿಗಳು ಶೀಘ್ರದಲ್ಲಿಯೇ ಉದ್ಯೋಗದ ಸಿಹಿ ಸುದ್ದಿ ಪಡೆಯುತ್ತೀರಿ. ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಬೆಳಗ್ಗೆ 7 ರಿಂದ 10 ರವರೆಗೆ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Dina Bhavishya: Daily Horoscope Prediction for 12 Zodiac Signs on 23rd April in Kannada

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
Story first published: Monday, April 22, 2024, 22:08 [IST]
X
Desktop Bottom Promotion