Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಮುದುಕನ ಮದುವೆಯಾದ ಸುಂದರ ಹುಡುಗಿ: ಈ ಜೋಡಿ ನೋಡಿದವರಿಗೆ ಅನಿಸುತ್ತೆ ಹೀಗೂ ಉಂಟೇ...
ಮದುವೆಗೆ ಹುಡುಗಿ ಸಿಗುತ್ತಿಲ್ಲ ಎಂದು ಹುಡುಗರು ಸಂಕಟ ಪಡುತ್ತಿದ್ದಾರೆ, ಆದರೆ ತಾತನ ಪ್ರಾಯದ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವ ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಹುಡುಗರು ನಮಗೆ ಹುಡುಗಿ ಸಿಗುತ್ತಿಲ್ಲ, ಇಂಥವರಿಗೆಲ್ಲಾ ಸಿಗುತ್ತಿದೆಯಲ್ಲಾ ಎಂದು ಹೊಟ್ಟೆಹುರಿ ಪಟ್ಟುಕೊಳ್ಳುವಂತಿದೆ ಈ ವೀಡಿಯೋ....
ಆ ವ್ಯಕ್ತಿಯನ್ನು ನೋಡಿದರೆ ತಿಳಿಯುತ್ತೆ 70ರ ಪ್ರಾಯ ದಾಟಿದೆ... ಕೂದಲು ಬೆಳ್ಳಗಾಗಿದೆ, ದೇಹ ಕೃಶವಾಗಿದೆ, ಆದೆ ಆಕೆ ಸುರುದ್ರೂಪಿ, ಇಬ್ಬರು ಪರಸ್ಪರ ಹಾರ ಬದಲಾಯಿಸುತ್ತಿರುವ ವೀಡಿಯೋ ಇದಾಗಿದ್ದು ಇದನ್ನು ನೋಡಿದವರು ತರಾವರಿ ಕಮೆಂಟ್ ಹಾಕುತ್ತಿದ್ದರೆ.

ಆಕೆಯನ್ನು ನೋಡಿದರೆ ತುಂಬಾ ಖುಷಿ ಖುಷಿಯಿಂದ ಮದುವೆಯಾಗುತ್ತಿದ್ದಾಳೆ, ಮನೆಯವರು ಖುಷಿಯಿಂದ ಈ ಸಂಬಂಧ ಒಪ್ಪಿಕೊಂಡಿದ್ದಾರೆ. ಅಲ್ಲಿ ಖುಷಿಯ ವಾತಾವರಣ ಇದೆ. ಅವಳ ಖುಷಿ ನೋಡುವಾಗ ಅವಳು ಈತನನ್ನು ತುಂಬಾನೇ ಇಷ್ಟಪಟ್ಟು ಮದುವೆಯಾಗುತ್ತಿದ್ದಾಳೆ ಎಂಬುವುದು ಗೊತ್ತಾಗುತ್ತದೆ..
ಪ್ರೀತಿ ಕುರುಡು
ಪ್ರೀತಿ ಕುರುಡು ಅಂತಾರೆ, ಈ ಜೋಡಿಯನ್ನು ಈ ಹುಡುಗಿ ತನ್ನ ತಾತನ ಪ್ರಾಯದ ವ್ಯಕ್ತಿಯನ್ನು ಮದುವೆಯಾಗಿದ್ದಳಾಲ್ಲ ಎಂದನಿಸದೆ ಇರಲ್ಲ, ಯಾವ ಕಾರಣಕ್ಕೆ ಈತನನ್ನು ಮದುವೆಯಾದಳು ಎಂಬುವುದು ಗೊತ್ತಿಲ್ಲ, ಆದರೆ ಆಕೆ ತುಂಬಾ ಖುಷಿಯಿಂದಲೇ ಹೊಸ ಬದುಕಿಗೆ ಕಾಲಿಟ್ಟಿದ್ದಾಳೆ.
ಯಾವಾಗ ಈ ರೀತಿಯ ಮದುವೆ ಕಂಡು ಬರುವುದು?
ಈಗಾಗಲೇ ಒಂದು ಮದುವೆಯಾಗಿದ್ದರೆ ಅಥವಾ ತುಂಬಾ ವಯಸ್ಸಾಗಿದ್ದು ಮದುವೆಯಾಗದೆ ಇದ್ದರೆ ಈ ರೀತಿಯ ಸಂಬಂಧಕ್ಕೆ ಒಪ್ಪಿಕೊಳ್ಳುತ್ತಾರೆ, ಆದರೆ ಆಕೆ ನೋಡಿದರೆ ತುಂಬಾನೇ ಸುಂದರಿ ಹೀಗಾಗಿ ಈ ವೀಡಿಯೋ ನೋಡಿದ ನೆಟ್ಟಿಗರಿಗೆ ಅಚ್ಚರಿಯಾಗಿದೆ.
ವಯಸ್ಸಾದ ವ್ಯಕ್ತಿ ಮದುವೆಯಾಗುವುದು ಏಕೆ?
ವಯಸ್ಸಾದ ವ್ಯಕ್ತಿ ಮದುವೆಯಾಗಲು ಬಯಸಿದರೆ ಈ ವಯಸ್ಸಿನಲ್ಲಿ ಇದೆಲ್ಲ ಬೇಕೆ? ಎಂದು ಆಡಿಕೊಳ್ಳುತ್ತಾರೆ. ಇಳಿ ವಯಸ್ಸಿನಲ್ಲಿ ನಮ್ಮನ್ನು ನೋಡಿಕೊಳ್ಳಲು ಒಬ್ಬರು ಬೇಕು ಎಂದು ಹೆಚ್ಚಿನವರು ಮದುವೆಯಾಗುತ್ತಾರೆ, ಕೆಲವು ಕಡೆ ಮಕ್ಕಳೇ ತಮ್ಮ ತಂದೆ-ತಾಯಿಗೆ ಮರು ಮದುವೆ ಮಾಡುತ್ತಾರೆ.
ಈ ರೀತಿ ಮದುವೆಯಾಗುವವರು ಸಾಮಾನ್ಯವಾಗಿ ಮಧ್ಯ ವಯಸ್ಸಿನ ಮಹಿಳೆಯರನ್ನು ಮದುವೆಯಾಗುತ್ತಾರೆ, ಆದರೆ ಈ ವೀಡಿಯೋದಲ್ಲಿ ಹುಟುಗಿ ನೋಡಲು 30ರ ಆಸುಪಾಸಿನಂತೆ ಕಾಣುತ್ತದೆ. ಆಕೆಗೆ ಈ ಪ್ರೀತಿಯಲ್ಲಿ ಸುರಕ್ಷತೆ ಅನುಭವ ಉಂಟಾಗಿರಬಹುದು, ಆದ್ದರಿಂದಲೇ ಮದುವೆಗೆ ಒಪ್ಪಿರುತ್ತಾಳೆ.
ಹೆಣ್ಣು ಸಂಬಂಧದಲ್ಲಿ ಸುರಕ್ಷತೆ ಬಯಸುತ್ತಾಳೆ
ಯಾವುದೇ ಹೆಣ್ಣಾಗರಲಿ ತನ್ನ ಸಂಬಂಧದಲ್ಲಿ ಸುರಕ್ಷತೆ ಬಯಸುತ್ತಾಳೆ, ಅವಳಿಗೆ ಪ್ರೀತಿಯಲ್ಲಿ ಅಭದ್ರರತೆ ಅಂದರೆ ನಮ್ಮ ಪತಿ ಬೇರೆ ಹೆಣ್ಣಿನ ಸಹವಾಸ ಮಾಡಬಹುದೇ ಎಂಬ ಭಯ ಕಾಡಿದರೆ ಅವಳ ಮನಸ್ಸಿನ ನೆಮ್ಮದಿ ಹಾಳಾಗುವುದು, ಇನ್ನು ಬಹಳಷ್ಟು ಜನರು ಹಣದ ಸುರಕ್ಷತೆ ಕೂಡ ನೋಡುತ್ತಾರೆ. ಆ ವ್ಯಕ್ತಿ ಶ್ರೀಮಂತನಾಗಿದ್ದರೆ ಮನೆ, ಕಾರು, ಬಂಗಲೆ ಅಂತ ಜೀವಿಸುತ್ತಿದ್ದರೆ ಅಂಥವನನ್ನು ಮದುವೆಯಾಗಲು ಬಯಸುತ್ತಾರೆ. ಇಲ್ಲಿ ಹೆಣ್ಣು ಸ್ವಾರ್ಥಿಯಲ್ಲ, ಅವಳು ತಾನು ತನ್ನ ಕುಟುಂಬದಲ್ಲಿ ಖುಷಿಯಾಗಿರಬೇಕೆಂದು ಬಯಸುತ್ತಾಳೆ.
ಅಧಿಕ ಪ್ರಾಯದ ವ್ಯಕ್ತಿಯನ್ನು ಮದುವೆಯಾದರೆ ಪ್ಲಸ್-ಮೈನಸ್ ಎರಡೂ ಇದೆ
ಅಧಿಕ ಪ್ರಾಯದ ವ್ಯಕ್ತಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾನೆ, ಅವನು ಜೀವನದಲ್ಲಿ ಸೆಟಲ್ ಆಗಿರುವುದರಿಂದ ಅವಳಿಗೆ ಯಾವುದೇ ಕೊರತೆಯಾಗಲ್ಲ. ಆದರೆ ಇಂಥ ಸಂಬಂಧದಲ್ಲಿ ಕಂಡು ಬರುವ ಸಮಸ್ಯೆಯೆಂದರೆ ಸಂಶಯ. ತನಗೆ ಪ್ರಾಯವಾಗಿದ್ದು ಹೆಂಡತಿ ಸುಂದರಿಯಾಗಿದ್ದರೆ ಸಂಶಯ ರೋಗ ಹೆಚ್ಚಿನ ಸಂಬಂಧಗಳಲ್ಲಿ ಕಂಡು ಬರುತ್ತದೆ, ಇವರ ಸಂಬಂಧ ಆ ರೀತಿ ಆಗದೆ ಇರಲಿ ಅಲ್ವೇ?.. ಜೀವನದಲ್ಲಿ ಕಳೆದು ಹೋದ ಪ್ರೀತಿ ಹುಡುಕಿ ಆಗುತ್ತಿರುವ ಮದುವೆ ಇದಾಗಿರಬಹುದು, ಇವರು ಚೆನ್ನಾಗಿ ಬಾಳಲಿ...



Click it and Unblock the Notifications











