Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ 6 ಬಗೆಯ ರಿಲೇಷನ್‌ಶಿಪ್‌ನಲ್ಲಿದ್ದರೆ ಬ್ರೇಕ್‌ಅಪ್ ಮಾಡಿಕೊಳ್ಳುವುದೇ ವಾಸಿ
ಬ್ರೇಕ್‌ಅಪ್ ಅದು ತರುವ ನೋವು ಅಷ್ಟಿಷ್ಟಲ್ಲ, ಆದರೆ ಕೆಲ ಟಾಕ್ಸಿಕ್ ಸಂಬಂಧದಲ್ಲಿ ಬ್ರೇಕ್‌ಅಪ್ ಆದರೆ ಮಾತ್ರ ನೆಮ್ಮದಿ ಸಿಗಲು ಸಾಧ್ಯ. ಏಕೆಂದರೆ ಆ ಸಂಬಂಧದ್ಲಿ ಪ್ರೀತಿಗಿಂತ ಹೆಚ್ಚಾಗಿ ಮೋಸ, ನೋವು, ಹಿಂಸೆ, ಅಭದ್ರತೆ ಇರುತ್ತದೆ.
ಅಂಥ ಸಂಬಂಧದಲ್ಲಿ ಇದ್ದರೆ ದಿನಾ ವೇತನೆ ಪಡಬೇಕೇ ಹೊರತು ಮನಸ್ಸಿಗೆ ಒಂದಿಷ್ಟೂ ನೆಮ್ಮದಿಯಿರಲ್ಲ. ಆದ್ದರಿಂದ ನಿಮ್ಮ ಸಂಬಂಧ ಈ ರೀತಿಯಿದ್ದರೆ ಅದು ಟಾಕ್ಸಿಕ್ ರಿಲೇಷನ್‌ಶಿಪ್, ಅದನ್ನು ಬ್ರೇಕ್‌ಅಪ್ ಮಾಡುವುದೇ ಒಳ್ಳೆಯದು ನೋಡಿ:

ದಿನಾ ಜಗಳ, ಹಿಂಸೆ
ಜಗಳವಾಡದ ಜೋಡಿ ಇರಲ್ಲ, ಕೆಲವರು ಜಗಳವಾಡದ ದಿನವಿರಲ್ಲ ಆದರೂ ಪ್ರೀತಿ ಇರುತ್ತೆ ಅಂಥ ಜೋಡಿಗಳ ಬಗ್ಗೆ ಹೇಳುತ್ತಿಲ್ಲ, ಇನ್ನು ಕೆಲ ಸಂಬಂಧ ಇರುತ್ತದೆ ಅಲ್ಲಿ ಜಗಳ ಅಂದ್ರೆ ದೈಹಿಕ ಹಿಂಸೆ, ಮಾನಸಿಕ ಹಿಂಸೆ ಇರುತ್ತದೆ, ಅಲ್ಲದೆ ಆಗಾಗ ಬೇಡ ಎಂದು ಬಿಟ್ಟು ಹೋಗುವುದು ಮತ್ತೆ ಸ್ವಲ್ಪ ದಿನವಾದ ಮೇಲೆ ಬರುವುದು ಹೀಗೆ ನಡೆಯುತ್ತಿರುತ್ತದೆ. ಈ ರೀತಿಯ ಸಂಬಂಧ ಟಾಕ್ಸಿಕ್ ಸಂಬಂಧ, ಇಂಥ ರಿಲೇಷನ್‌ಶಿಪ್ ಬ್ರೇಕ್‌ಅಪ್ ಮಾಡಿದರೆ ಒಳ್ಳೆಯದು.
ಅವರಿಗಾಗಿ ಎಲ್ಲಾ ತ್ಯಾಗ ಮಾಡಿದರೂ ಅವರಿಂದ ಪ್ರೀತಿ ದೊರೆಯದಿದ್ದರೆ
ಪ್ರೀತಿಗಾಗಿ ಮನೆಯವರು, ಆಸ್ತಿ, ಅಂತಸ್ತು ಎಲ್ಲಾ ತ್ಯಾಗ ಮಾಡುವವರನ್ನು ನೋಡುತ್ತೇವೆ. ಆದರೆ ಆ ವ್ಯಕ್ತಿಗಾಗಿ ಅಷ್ಟೆಲ್ಲಾ ತ್ಯಾಗ ಮಾಡಿದರೂ, ಆ ವ್ಯಕ್ತಿಯಿಂದ ನಿಂದನೆ ಬಿಟ್ಟು ಪ್ರೀತಿಯ ಮಾತುಗಳಿಲ್ಲ, ನಿಮ್ಮ ಬಗ್ಗೆ ಗೌರವವಿಲ್ಲ ಎಂದರೆ ಬ್ರೇಕ್‌ಅಪ್ ಎಂಬ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ.
ಪ್ರತಿಬಾರಿ ಬ್ರೇಕ್ಅಪ್ ಬಗ್ಗೆ ಯೋಚಿಸುತ್ತಿದ್ದರೆ
ಪ್ರತಿಬಾರಿ ಬ್ರೇಕಪ್ ಬಗ್ಗೆ ಯೋಚಿಸುತ್ತಿದ್ದರೆ ಈ ಸಂಬಂಧದಲ್ಲಿ ನೆಮ್ಮದಿ ಇಲ್ಲದಿದ್ದರೆ , ಅವರು ನಮ್ಮ ಬಾವನೆಗಳನ್ನು ಗೌರವಿಸುತ್ತಿಲ್ಲ, ನಮ್ಮನ್ನು ಪ್ರೀತಿಸುತ್ತಿಲ್ಲ ಎಂದಾದರೆ ಆ ಸಂಬಂಧದಿಂದ ದೂರಾಗುವುದು ಒಳ್ಳೆಯದು. ಪ್ತತಿಬಾರಿ ಆಲೋಚನೆ ಮಾಡುತ್ತಿದ್ದೇವೆ ಎಂದಾದರೆ ಆ ವ್ಯಕ್ತಿ ನಮ್ಮ ಮನಸ್ಸಿಗೆ ಅಷ್ಟೇನು ಹತ್ತಿರವಲ್ಲ, ಪ್ರೀತಿಯಲ್ಲದ ಪ್ರೀತಿ ಅದು, ಆದ್ದರಿಂದ ಇಂಥ ಸಂಬಂಧದಿಂದ ಹೊರಬಂದರೆ ಇಬ್ಬರಿಗೂ ನೆಮ್ಮದಿ.
ಮೋಸ ಮಾಡುವುದು
ನಾವು ಅಷ್ಟಾಗಿ ನಂಬಿದ ವ್ಯಕ್ತಿ ಮೋಸ ಮಾಡುತ್ತಿದ್ದರೆ ಅಥವಾ ಅವರ ಮೋಸ ನಿಮಗಾಗಿ ಗೊತ್ತಾಗಿ ಅವರು ನಿಮ್ಮ ಬಳಿ ಕ್ಷಮೆ ಕೇಳಿ ಮತ್ತೆ ಪದೇ ಪದೇ ಆ ತಪ್ಪು ಮಾಡುತ್ತಿದ್ದರೆ ಅವರಿಂದ ದೂರಾಗುವುದೇ ನೆಮ್ಮದಿ, ಇಲ್ಲದಿದ್ದರೆ ತುಂಬಾನೇ ಮಾನಸಿಕ ಹಿಂಸೆ ಅನುಭವಿಸಬೇಕಾಗುವುದು. ಪ್ರೀತಿ ಎಂದರೆ ಆ ಸಂಬಂಧದಲ್ಲಿ ನಿಯತ್ತು ಇರಬೇಕಾಗುತ್ತದೆ, ಅದುವೇ ಇಲ್ಲದಿದ್ದರೆ ಅಂಥ ಸಂಬಂಧದಲ್ಲಿ ಮುಂದುವರೆಯುವುದರಿಂದ ನೋವು ಹೊರತು ಬೇರೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ನಿಮ್ಮ ಜೊತೆ ಭವಿಷ್ಯದ ಬಗ್ಗೆ ಯಾವುದೇ ಪ್ಲ್ಯಾನ್ ಇಲ್ಲದಿರುವುದು
ಪ್ರೇಮಿಗಳಾದರೆ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರೆ. ಆದರೆ ಅವರ ಭವಿಷ್ಯದ ಪ್ಲ್ಯಾನ್‌ನಲ್ಲಿ ನೀವಿಲ್ಲ ಎಂದು ನಿಮಗೆ ತಿಳಿದಾಗ ಅಂಥ ಸಂಬಂಧದಲ್ಲಿ ಮುಂದುವರೆಯಬೇಕೆ ಎಂದು ಯೋಚಿಸಿದರೆ ಒಳ್ಳೆಯದು, ಏಕೆಂದರೆ ಅವರು ನಿಮಗೆ ಮೋಸ ಮಾಡುವ ಸಾಧ್ಯತೆ ತುಂಬಾನೇ ಇದೆ. ಆದ್ದರಿಂದ ಅಂಥ ಸಂಬಂಧದ ಬಗ್ಗೆ ನೀವು ಜಾಗ್ರತೆವಹಿಸಬೇಕು.
ನಿಮ್ಮ ವೃತ್ತಿ ಬಗ್ಗೆ ಗೌರವ ಇಲ್ಲದಿರುವುದು
ನಾವು ತುಂಬಾ ಇಷ್ಟಪಡುವ ವೃತ್ತಿ ಬಗ್ಗೆ ನಮ್ಮ ಸಂಗಾತಿಗೆ ಗೌರವವಿಲ್ಲ, ಅವರು ನಮ್ಮ ಭಾವನೆಗಳಲ್ಲಿ ಗೌರವ ನೀಡುತ್ತಿಲ್ಲ, ತುಂಬಾ ಸ್ವಾರ್ಥಿಯಾಗಿ ಯೋಚಿಸುತ್ತಾರೆ ಎಂದಾದರೆ ಅಂಥ ಸಂಬಂಧದ ಬಗ್ಗೆ ಜಾಗ್ರತೆ. ಇಂಥವರ ಜೊತೆ ಸಂಬಂಧ ಮುಂದುವರೆಸಿಕೊಂಡು ಹೋಗಬೇಕೆ ಎಂಬುವುದು ಯೋಚಿಸಿದರೆ ಒಳ್ಳೆಯದು, ಇಲ್ಲದಿದ್ದರೆ ಭವಿಷ್ಯದಲ್ಲಿ ತುಂಬಾನೇ ಕಷ್ಟ ಅನುಭವಿಸಬೇಕಾಗುವುದು.



Click it and Unblock the Notifications
