For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರಬಹುದು ಸ್ವಲ್ಪ ಗಮನ ಕೊಡಿ...

|

ಲೈಂಗಿಕ ಕಿರುಕುಳ ಎನ್ನುವುದು ಸಾಮಾನ್ಯವಾಗಿ ಎಲ್ಲೆಡೆಯಲ್ಲೂ ತೆರೆಮರೆಯಲ್ಲಿ ನಡೆಯುತ್ತಲೇ ಇರುತ್ತವೆ ಎಂದು ಹೇಳಬಹುದು. ಆದರೆ ಇತ್ತೀಚನ ದಿನದಲ್ಲಿ ವಯಸ್ಕರ ಮೇಲೆ ನಡೆದಂತೆ ಮಕ್ಕಳ ಮೇಲೂ ನಡೆಯುತ್ತಿದೆ ಎನ್ನುವುದು ಬಹಳ ಬೇಸರದ ಸಂಗತಿ ಎನ್ನಬಹುದು. ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗುವಿನ ಮೇಲೆ ಲೈಗಿಕ ಕಿರುಕುಳ ಹಾಗೂ ಮೌಕಿಕ ದುರ್ಬಳೆಕೆಗೆ ಬಳಸಿಕೊಳ್ಳುತ್ತಾರೆ ಎನ್ನಲಾಗುವುದು. ಹರೆಯಕ್ಕೆ ಕಾಲಿಡಲು ಸಿದ್ಧವಾಗಿರುವ ಮಕ್ಕಳ ಮೇಲೆ ದೈಹಿಕ ನಿಂದನೆ ಹಾಗೂ ಭಾವನಾತ್ಮಕವಾಗಿ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನಲಾಗುವುದು.

Child

ಬಹುತೇಕ ಮಕ್ಕಳಿಗೆ ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗೆ ಕಾರಣವೇನು ಅಥವಾ ಏಕೆ ಬದಲಾವಣೆ ಉಂಟಾಗುತ್ತಿದೆ ಎನ್ನುವ ವಿಷಯಗಳ ಕುರಿತಾಗಿಯೇ ಸಾಕಷ್ಟು ಕುತೂಹಲ ಹಾಗೂ ಭಯವನ್ನು ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ಮೇಲೆ ಲೈಂಗಿಕ ಕಿರುಕುಳ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗುವಂತೆ ಮಾಡುವುದರಿಂದ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಭೀರ ಪರಿಣಾಮ ಉಂಟಾಗಬಹುದು. ಕಿರುಕುಳ ನೀಡುವವರಿಗೆ ತಾವು ಮಾಡುವ ಕೃತ್ಯ ಯಾಋಇಗೆ ತಿಳಿದಿಲ್ಲ ಎಂದು ಭಾವಿಸಬಹುದು ಆದರೆ ಅದನ್ನು ಅನುಭವಿಸುವ ಮಕ್ಕಳ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುವುದು. ಇಂತಹ ಸಂಗತಿಗಳನ್ನು ಮಕ್ಕಳು ಪಾಲಕರ ಬಳಿ ಹೇಳಿಕೊಳ್ಳಲು ಭಯ ಪಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಮಕ್ಕಳ ಆಟ, ಪಾಠ, ಹವ್ಯಾಸ ಹಾಗೂ ಸ್ನೇಹಿತರ ಒಡನಾಟ

ಮಕ್ಕಳ ಆಟ, ಪಾಠ, ಹವ್ಯಾಸ ಹಾಗೂ ಸ್ನೇಹಿತರ ಒಡನಾಟ

ಮಕ್ಕಳ ಆಟ, ಪಾಠ, ಹವ್ಯಾಸ ಹಾಗೂ ಸ್ನೇಹಿತರ ಒಡನಾಟ ಹೀಗೆ ಪ್ರತಿಯೊಂದು ಸಂಗತಿಯ ಮೇಲೆ ಪಾಲಕರು ಸಾಕಷ್ಟು ಗಮನ ಹಾಗೂ ಕಾಳಜಿಯನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಮಾಧ್ಯಮಗಳು, ಅಂತರ್ಜಾಲ, ಮೊಬೈಲ್, ಸಾಮಾಜಿಕ ತಾಣ ಹೀಗೆ ವಿವಿಧ ರೀತಿಯಲ್ಲಿ ಲೈಂಗಿಕತೆ ಹಾಗೂ ಪರಸ್ಪರ ವಿರುದ್ಧ ಲಿಂಗದವರ ನಡುವಿನ ಆಕರ್ಷಣೆಯ ಬಗ್ಗೆ ಅನುಚಿತ ಮಾಹಿತಿಗಳನ್ನು ಪಡೆದುಕೊಂಡಿರುತ್ತಾರೆ. ಅದರ ಬಗ್ಗೆ ಸೂಕ್ತ ಜ್ಞಾನ ಇಲ್ಲದೆ ಇರುವುದು ಸಹ ಮಕ್ಕಳ ಮೇಲೆ ದೌರ್ಜನ್ಯ ಉಂಟಾಗಲು ಕಾರಣವಾಗುತ್ತವೆ.

Most Read:ಭೂತ-ಪ್ರೇತಗಳಂತೆ ಕಾಣುವ ಜೊಂಬಿ ಗೊಂಬೆ ಜತೆಗೆ ಮದುವೆಯಾದ ಮಹಿಳೆ!!

ಕಾನೂನು ವ್ಯವಸ್ಥೆ

ಕಾನೂನು ವ್ಯವಸ್ಥೆ

ಹಾಗಾಗಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ, ಅವರ ಹಕ್ಕು, ನ್ಯಾಯ, ಕಾನೂನು ವ್ಯವಸ್ಥೆಯ ಕುರಿತು ಸಹ ಸಾಕಷ್ಟು ಮಾಹಿತಿಯನ್ನು ಹೊಂದಿರಬೇಕು. ಅಲ್ಲದೆ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ದೌರ್ಜನ್ಯ ಉಂಟುಮಾಡುವುದರ ಬಗ್ಗೆ ಮಾಹಿತಿ ಹಾಗೂ ಅಂತಹ ಸಮಯದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಧೈರ್ಯ ಹಾಗೂ ಸಾಂತ್ವಾನ ನೀಡುವ ಕೆಲಸ ನಮ್ಮಿಂದ ಆಗಬೇಕು. ಇಲ್ಲವಾದರೆ ಅವರು ಅನುಭವಿಸಿದ ಘಟನೆಗಳು ಅಥವಾ ಅನುಭವಗಳು ಅವರ ಜೀವನದಲ್ಲಿ ಒಂದು ಗಾಯವಾಗಿ ಉಳಿದುಕೊಳ್ಳುತ್ತದೆ. ಹೌದು, ನಮ್ಮ ಅರಿವಿಗೆ ಬಾರದೆಯೇ ಮಕ್ಕಳು ಸಾಕಷ್ಟು ಸನ್ನಿವೇಶಗಳಿಗೆ ಅಥವಾ ದೌರ್ಜನ್ಯಕ್ಕೆ ಒಳಗಾಗಬಹುದು. ಅಂತಹ ಸಮಯದಲ್ಲಿ ನೀವು ಯಾವ ರೀತಿಯ ಕಾಳಜಿಯನ್ನು ನಿರ್ವಹಿಸಬೇಕು? ಅವರ ಜೀವನ ದುರ್ಬಳಕೆಗೆ ಒಳಗಾಗದಂತೆ ಹೇಗೆ ನೋಡಿಕೊಳ್ಳಬೇಕು? ಮಕ್ಕಳು ಅಂತಹ ಸಮಸ್ಯೆ ಎದುರಿಸಲು ಕಾರಣವೇನು? ಎನ್ನುವಂತಹ ಅನೇಕ ಸಂಗತಿಗಳ ಕುರಿತು ಸೂಕ್ತ ಮಾಹಿತಿಯನ್ನು ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ.

ಒಬ್ಬಂಟಿಗಳಾಗಬಹುದು

ಒಬ್ಬಂಟಿಗಳಾಗಬಹುದು

ಭಾವನಾತ್ಮಕವಾಗಿ ಮಕ್ಕಳ ಮೇಲೆ ದೌರ್ಜನ್ಯ ಉಂಟಾದರೆ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಿಲ್ಲ. ಅದು ಅವರಿಂದಾಗದ ಸಂಗತಿಯಾಗಿರುತ್ತದೆ. ಅವರ ಭಾವನೆಗಳು ಸಾಕಷ್ಟು ನೋವಿನಿಂದ ಕೂಡಿರುತ್ತದೆ. ಅವರಿಗೆ ತಮ್ಮ ಭಾವನೆಗಳನ್ನು ಹೇಗೆ ನಿರ್ವಹಿಸಬೇಕು? ಅಥವಾ ಆ ಭಾವನೆ ಗಳನ್ನು ಹೇಗೆ ವ್ಯಕ್ತಪಡಿಸುವುದು? ಎನ್ನುವ ಗೊಂದಲದಲ್ಲಿ ಇರುತ್ತಾರೆ. ಆಗ ಭಾವನೆಗಳನ್ನು ಬಚ್ಚಿಡುವುದು, ಜನರಿಂದ ದೂರ ಸರಿಯುವುದು ಅವರ ವರ್ತನೆಯಾಗ ಬಹುದು. ನಂತರ ಅಂತರ್ಮುಖಿಗಳಾಗಿ ಮಾರ್ಪಡುತ್ತಾರೆ.

ತಮ್ಮದೇ ಆದ ನಿರ್ಧಾರ ಕೈಗೊಳ್ಳಲು ಭಯಪಡುವರು

ತಮ್ಮದೇ ಆದ ನಿರ್ಧಾರ ಕೈಗೊಳ್ಳಲು ಭಯಪಡುವರು

ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿರುವ ಮಕ್ಕಳು ತಮ್ಮದೇ ಆದ ನಿರ್ಧಾರ ಕೈಗೊಳ್ಳಲು ಸಾಕಷ್ಟು ಭಯಪಡುತ್ತಾರೆ. ತಾವು ಎದುರಿಸುವ ಪ್ರತಿಯೊಂದು ಕ್ಷಣವು ಅವರಿಗೆ ಕಷ್ಟ ಹಾಗೂ ಗೊಂದಲದಿಂದ ಕೂಡಿರುವಂತೆ ಆಗುವುದು. ತಮ್ಮ ಅಭಿಪ್ರಾಯವನ್ನು ಪಾಲಕರಲ್ಲಿ ಅಥವಾ ಸ್ನೇಹಿತರಲ್ಲಿ ಹೇಳಿಕೊಳ್ಳಲು ಹಿಂದೇಟು ಹಾಕುವರು.

ವಿಪರೀತ ನಾಚಿಕೆಗೆ ಒಳಗಾಗಬಹುದು

ವಿಪರೀತ ನಾಚಿಕೆಗೆ ಒಳಗಾಗಬಹುದು

ದೌರ್ಜನ್ಯ ಅನುಭವಿಸಿದ ಮಕ್ಕಳು ಸಾಕಷ್ಟು ಅಂಜಿಕೆ ಹಾಗೂ ನಾಚಿಕೆಗೆ ಒಳಗಾಗುತ್ತಾರೆ. ಅವರು ಏನನ್ನಾದರೂ ಸಮಾಜದ ಮುಂದೆ ಅಥವಾ ಮನೆ ಮಂದಿಯ ಎದುರು ವ್ಯಕ್ತಪಡಿಸಬೇಕು ಎಂದರೆ ಅದು ಅವರಿಗೆ ಒಂದು ಕಠಿಣದ ಸಂಗತಿಯಾಗುವುದು. ತಮ್ಮ ಭಾವನೆ ಅಥವಾ ಆಲೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಭಯಪಡುವರು. ಇವರ ವಿಶ್ವಾಸ ಮಟ್ಟವು ದಿನದಿಂದ ದಿನಕ್ಕೆ ಕುಗ್ಗುತ್ತಾ ಸಾಗುವುದು. ಅವು ವಿಪರೀತ ಮುಜುಗರದ ಸಂಗತಿಯಾಗಿ ಹೊರ ಹೊಮ್ಮುತ್ತವೆ.

Most Read:ಈ ದೇಶಗಳಲ್ಲಿ ಮದುವೆಯಾಗಲು ಪುರುಷರಿಗೆ ಹೆಣ್ಣು ಸಿಗುವುದು ತುಂಬಾ ಕಷ್ಟ!

ಜನರಿಂದ ಒತ್ತಡ ಅನುಭವಿಸುವರು

ಜನರಿಂದ ಒತ್ತಡ ಅನುಭವಿಸುವರು

ಇವರು ತಮ್ಮ ಆಸೆಗಳನ್ನು ಅದುಮಿಡಲು ಬಯಸುತ್ತಾರೆ. ಬಹುತೇಕ ಸಂದರ್ಭದಲ್ಲಿ ತಮಗೆ ಬೇಕಾದ ವಸ್ತು ಅಥವಾ ವಿಷಯಗಳನ್ನು ಜನರ ಮುಂದೆ ಹೇಳಲು ಭಯಪಡುವರು. ಬದಲಿಗೆ ಅವರ ಅಗತ್ಯತೆಗಳನ್ನು ಮರೆಮಾಚುವುದು ಅಥವಾ ತ್ಯಾಗ ಮಾಡುವ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಮಾನಸಿಕ

ಒತ್ತಡವನ್ನು ಯಾವ ರೀತಿಯಲ್ಲಿ ಹೊರ ಹಾಕಬಹುದು ಎಂದು ಹೇಳಲು ಸಾಧ್ಯವಾಗದು. ಅವರು ಅದನ್ನು ಯಾವ ಮಟ್ಟದಲ್ಲಿ ಹೊರ ಹಾಕಬಹುದು ಎಂದು ಊಹಿಸಲು ಕಷ್ಟವಾಗಬಹುದು.

ಸ್ವಯಂ ದೂಷಣೆಗೆ ಮುಂದಾಗುತ್ತಾರೆ

ಸ್ವಯಂ ದೂಷಣೆಗೆ ಮುಂದಾಗುತ್ತಾರೆ

ತಮ್ಮ ಕೋಪ, ಆಸೆ, ಭಾವನೆ ಹಾಗೂ ಅಗತ್ಯತೆಗಳನ್ನು ಮರೆಮಾಚುವುದು, ತಮ್ಮ ಮನಸ್ಸಿನಲ್ಲಿಯೇ ಇಟ್ಟಿಕೊಳ್ಳುವಂತಹ ಕೆಲಸವನ್ನು ಮಾಡುತ್ತಾ ಸಾಗುವಾಗ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುವುದು. ಅದರ ಪ್ರಭಾವದಿಂದ ಸ್ವಯಂ ದೂಷಣೆ ಮಾಡಿಕೊಳ್ಳಬಹುದು. ಸತತವಾಗಿ ಎಲ್ಲಾ

ವಿಷಯದಲ್ಲೂ ತಮ್ಮಿಂದ ತಪ್ಪಾಗುತ್ತಿದೆ ಅಥವಾ ತಾವು ನಿಷ್ಪ್ರಯೋಜಕರು ಎನ್ನುವಂತಹ ಭಾವನೆಗಳನ್ನು ಸಹ ಹೊಂದಬಹುದು.

English summary

Facing Sexual Abuse As A Child Leads

If a person has been abused emotionally as a child, it has a great impact on the person's life as there are many things that change the child's life, especially when they turn adults. From becoming an introvert to hiding their emotions behind their smile, they tend to do all.Facing Emotional Abuse As A Child Leads
Story first published: Saturday, February 23, 2019, 16:45 [IST]
X
Desktop Bottom Promotion