Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಭೂತ-ಪ್ರೇತಗಳಂತೆ ಕಾಣುವ ಜೊಂಬಿ ಗೊಂಬೆ ಜತೆಗೆ ಮದುವೆಯಾದ ಮಹಿಳೆ!!
ಕೆಲವು ಸಿನಿಮಾಗಳು ಜೀವನದ ಮೇಲೆ ಅಗಾಧ ಪರಿಣಾಮ ಬೀರುವುದು. ಹೀಗಾಗಿ ಆ ಸಿನಿಮಾಗಳಿಂದ ಪ್ರಭಾವಿತರಾಗಿ ಏನೇನೋ ಮಾಡಲು ಹೋಗುವರು. ಇನ್ನು ಕೆಲವು ಮಂದಿ ಜೀವನದಲ್ಲಿ ಬೇರೆಯೇ ವಿಧದ ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡು ಬದುಕುವರು. ಇವರು ಬೇರೆಯವರಿಗಿಂತ ತುಂಬಾ ಭಿನ್ನವಾಗಿ ಆಲೋಚನೆ ಮಾಡಿ ಬದುಕುವರು. ಇಂತಹ ಜನರು ಮದುವೆ ವಿಚಾರಕ್ಕೆ ಬಂದಾಗಲೂ ಹೀಗೆ ಮಾಡುವರು. ಕೆಲವರು ಗಾಳಿ ತೇಲುತ್ತಾ ಮದುವೆಯಾದರೆ, ಇನ್ನೊಬ್ಬರು ನೀರಿನಾಳದಲ್ಲಿ ಮೀನಿನಂತೆ ಈಜಿಕೊಂಡು, ಮತ್ತೆ ವಿಮಾನದ ಒಳಗಡೆ ಹೀಗೆ ಹಲವಾರು ರೀತಿಯಿದೆ.

ಇದು ಮದುವೆಯ ವಿಧಾನಗಳು. ಕೆಲವು ಜನರು ಪುರುಷರನ್ನೇ ಮದುವೆಯಾಗುವರು ಮತ್ತು ಹೆಣ್ಣು ಹೆಣ್ಣನ್ನೇ ಮದುವೆಯಾಗಿರುವುದನ್ನು ನೋಡಿದ್ದೇವೆ. ಇಲ್ಲೊಬ್ಬಳು ಮಹಿಳೆಯು ಸಿನಿಮಾಗಳಲ್ಲಿ ತುಂಬಾ ಭಯಾನಕವಾಗಿ ಕಾಣುವಂತಹ ಜೊಂಬಿ ಬೊಂಬೆಯೊಂದಿಗೆ ಮದುವೆಯಾಗಿದ್ದಾಳೆ. ತನ್ನ ತಂದೆಗೆ ಜೊಂಬಿ ಬೊಂಬೆಗಳ ಮೇಲೆ ಅತಿಯಾದ ಪ್ರೀತಿಯಿದ್ದ ಕಾರಣದಿಂದಾಗಿ ಅವರು ತನಗೆ ಜೊಂಬಿ ಬೊಂಬೆ ಉಡುಗೊರೆಯಾಗಿ ನೀಡಿದರು. ಇದರಿಂದಾಗಿ ಅದರ ಬಗ್ಗೆ ತನಗೆ ಕೂಡ ಆಕರ್ಷಣೆ ಹೆಚ್ಚಾಯಿತು. ಈಗ ಆಕೆಯ ಆ ಬೊಂಬೆಯನ್ನು ಮದುವೆಯಾಗಿದ್ದು, ಅದರೊಂದಿಗೆ ಜೀವನ ಸಾಗಿಸಿ, ಮಕ್ಕಳನ್ನು ಪಡೆಯಬೇಕೆಂದು ಬಯಸಿದ್ದಾಳೆ. ಈ ವಿಚಿತ್ರ ಕಥೆಯ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ....

ಈ ಗೊಂಬೆಯು ಆಕೆಗೆ ತಂದೆಯ ಉಡುಗೊರೆಯಾಗಿತ್ತು!
ಮಗಳು ಜೊಂಬಿ ಸಿನಿಮಾ ಮತ್ತು ತುಂಬಾ ಭಯಾನಕ ಸಿನಿಮಾಗಳನ್ನು ಹೆಚ್ಚಾಗಿ ಆಸಕ್ತಿಯಿಂದ ವೀಕ್ಷಿಸುತ್ತಿದ್ದ ಕಾರಣದಿಂದಾಗಿ ಆಕೆಗೆ ಜೊಂಬಿ ಬೊಂಬೆಯನ್ನು ಉಡುಗೊರೆ ನೀಡಲು ಅವರು ನಿರ್ಧರಿಸಿದ್ದರು. ಆಕೆ 13ರ ಹರೆಯದಲ್ಲಿ ಇರುವಾಗ ಆಕೆಗೆ ಈ ಗೊಂಬೆಯು ಉಡುಗೊರೆಯಾಗಿ ಸಿಕ್ಕಿತ್ತು. ತಂದೆಯ ಸಾವಿನ ಬಳಿಕ ಆಕೆಗೆ ಈ ಗೊಂಬೆಯ ಬಗ್ಗೆ ಒಂದು ರೀತಿಯ ಆಕರ್ಷಣೆ ಉಂಟಾಯಿತು.

ನಾಲ್ಕು ವರ್ಷಗಳಿಂದ ಆಕೆ ಗೊಂಬೆ ಜತೆಗೆ ಸಂಬಂಧದಲ್ಲಿದ್ದಳು
ಫೆಲಿಸಿಟಿಗೆ 16ರ ಹರೆಯದಲ್ಲಿ ಇರುವಾಗಲೇ ಆ ಗೊಂಬೆಯೊಂದಿಗೆ ಸೆಳೆತ ಉಂಟಾಗಿತ್ತು. ಆಕೆ ಆರಂಭದಲ್ಲಿ ತನ್ನ ಭಾವನೆಗಳನ್ನು ಗುಟ್ಟಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ಅಂತಿಮವಾಗಿ ಆಕೆ ಗೊಂಬೆ ಜತೆಗಿನ ತನ್ನ ಭಾವನೆಯನ್ನು ಹೊರಹಾಕಿಯೇ ಬಿಟ್ಟಳು.

ಆಕೆ ತನ್ನ ಜೀವನದ ಸಂಗಾತಿ ಜತೆಗೆ ಮದುವೆಯಾದಳು
ಆಕೆ ಕೆಲ್ಲಿ ಎನ್ನುವ ಗೊಂಬೆಯನ್ನು ತನ್ನ ಜೀವನದ ಪ್ರೀತಿಯಾಗಿ ಆಯ್ಕೆ ಮಾಡಿಕೊಂಡ ಬಳಿಕ ತನ್ನ ಜೀವನವು ಸಂಪೂರ್ಣವಾಗಿದೆ ಎಂದು ಆಕೆ ಭಾವಿಸಿದ್ದಾಳೆ.

ಮದುವೆ ಪಟ್ಟಿಯಲ್ಲಿ ಇದೆಲ್ಲವೂ ಇತ್ತು
ಮದುವೆಯ ಅತಿಥಿಗಳ ಪಟ್ಟಿಯಲ್ಲಿ ಕುಟುಂಬದವರು ಮತ್ತು ಸ್ನೇಹಿತರು, ಆಕೆಗೆ ಸಂಬಂಧಿಸಿರುವಂತಹ ಸುಮಾರು ಎಂಟು ಗೊಂಬೆಗಳು ಕೂಡ ಇದ್ದವು. ಈ ಮದುವೆಗೆ ಸುಮಾರು 500 ಡಾಲರ್ ಖರ್ಚಾಗಿದೆ ಎಂದು ವರದಿಗಳು ಹೇಳಿವೆ. ಇದರಲ್ಲಿ ಮದುವೆಯ ಬಟ್ಟೆ, ಕೆಲ್ಲಿಯ ಸೂಟ್ ಮತ್ತು ಮದುವೆ ನಡೆದ ಹೊರಾಂಗಣ ಪ್ರದೇಶದಲ್ಲಿನ ಅಲಂಕಾರಕ್ಕಾಗಿ ಹಣ ಖರ್ಚು ಮಾಡಲಾಗಿತ್ತು.

ಒಂದು ದಿನ ಗೊಂಬೆಯಿಂದ ಮಗು ಪಡೆಯುವ ಬಯಕೆ ಹೊಂದಿರುವಳು!
ಮಹಿಳೆಯ ಪ್ರಕಾರ ಈ ಜೊಂಬಿ ಗೊಂಬೆಯು ಈಗ 37 ವರ್ಷ ಪ್ರಾಯದ್ದಾಗಿದೆ ಮತ್ತು ಈ ಜೋಡಿಯು ಮಗುವನ್ನು ಪಡೆಯುವ ಬಯಕೆ ಕೂಡ ಹೊಂದಿರುವರು. ಗೊಂಬೆ ಜತೆಗೆ ಮಗುವನ್ನು ಪಡೆಯಲು ತಾನು ವೀರ್ಯ ಬ್ಯಾಂಕ್ ಗೆ ಕೂಡ ಭೇಟಿ ನೀಡಿರುವುದಾಗಿ ವಧು ಹೇಳಿಕೊಂಡಿದ್ದಾಳೆ. ಇಂತಹ ವಿಚಿತ್ರ ಮದುವೆ ಬಗ್ಗೆ ನಿಮ್ಮ ಅನಿಸಿಕೆ ಏನು? ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ ಕಳುಹಿಸಿ.



Click it and Unblock the Notifications
