Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
ಗುರು ಧನು ರಾಶಿಯ 1ನೇ ಮತ್ತು 4ನೇ ಆಡಳಿತ ಗ್ರಹ. ಈ ಮೇ 1ರಿಂದ ಗುರು ನಿಮ್ಮ ರಾಶಿಯ 6ನೇ ಮನೆಯಲ್ಲಿ ಇರಲಿದೆ. ಗುರು 6ನೇ ಮನೆಯಲ್ಲಿ ಇರುವಾಗ 12 ತಿಂಗಳು ನಿಮಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಗುರು 6ನೇ ಮನೆಯಲ್ಲಿದ್ದಾಗ ಖರ್ಚು ಹೆಚ್ಚಲಿದೆ
ಗುರು 6ನೇ ಮನೆಗೆ ಬಂದಾಗ ನಿಮ್ಮ ಖರ್ಚುಗಳು ಹೆಚ್ಚಾಗಲಿದೆ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು, ಇದರಿಂದ ಆಸ್ಪತ್ರೆ, ಔಷಧ ಅಂತ ಹೆಚ್ಚು ಹಣ ಖರ್ಚಿರಲಿದೆ. ಅಲ್ಲದೆ ನ್ಯಾಯಾಲಕ್ಕೆ ಸಂಬಂಧಿಸಿದ ಪ್ರಕರಣಗಳು ಇದ್ದರೆ ಖರ್ಚು ಇನ್ನೂ ಅಧಿಕವಾಗಲಿದೆ. ಇನ್ನು ನೀವು ಯಾವುದಾದರೂ ಕಾರಣಕ್ಕೆ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದರೆ ಅದು ಯಶಸ್ವಿಯಾಗಲಿದೆ. ಆದರೆ ಅಗ್ಯತ ಮೀರಿ ಸಾಲ ಪಡೆಯದಿರುವುದು ಒಳ್ಳೆಯದು. ಇನ್ನು ಸಾಲ ಮಾಡಿದರೆ ಮರುಪಾವತಿ ಒತ್ತಡ ಕೂಡ ಹೆಚ್ಚಾಗಲಿದೆ.
ವೃತ್ತಿ ಭವಿಷ್ಯ
ವೃತ್ತಿ ಜೀವನ ಚೆನ್ನಾಗಿರಲಿದೆ, ಆದರೆ ನಿಮ್ಮ ಮೇಲೆ ಕೆಲವರಿಗೆ ಅಸೂಯೆ ಇರಲಿದೆ. ಅವರು ನಿಮ್ಮ ವಿರುದ್ಧ ಕೆಲ ಪಿತೂರಿ ಮಾಡಬಹುದು, ಆದ್ದರಿಂದ ನೀವು ತುಂಬಾನೇ ಜಾಗ್ರತೆಯಿಂದ ಹೆಜ್ಜೆ ಹಾಕಬೇಕು. ಉಳಿದಂತೆ ಕೆಲಸದಲ್ಲಿ ಸಮಸ್ಯೆಗಳಿರಲ್ಲ, ಅಲ್ಲದೆ ಕೆಲಸಕ್ಕೆ ಸಂಬಂಧಿಸಿದ ರಹಸ್ಯ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.
ಆಸ್ತಿ ಸಂಬಂಧಿಸಿದ ಪ್ರಯತ್ನದಲ್ಲಿ ಜಾಗ್ರತೆ
ಈ ಸಮಯದಲ್ಲಿ ಆಸ್ತಿ ಖರೀದಿಸಲು ಅಥವಾ ಆಸ್ತಿ ಮಾರಲು ಅನುಕೂಲಕರವಲ್ಲ. ಆಸ್ತಿಯಲ್ಲಿ ಈ ಅವಧಿಯಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಒಂದು ವೇಳೆ ಮಾಡುವುದೇ ಆದರೆ ಅದರ ಬಗ್ಗೆ ಚೆನ್ನಾಗಿ ವಿಚಾರಿಸಿ , ದಾಖಲೆಗಳನ್ನು ಪರಿಶೀಲಿಸಿ ಮಾಡುವುದು ಒಳ್ಳೆಯದು. ಆದರೆ ಈ ವರ್ಷ ಆಸ್ತಿಯಲ್ಲಿ ಹೂಡಿಕೆ ಮಾಡಲು ಹೋಗದಿರುವುದೇ ಒಳ್ಳೆಯದು.
ಗುರು ಹಿಮ್ಮುಖ ಚಲನೆಯಲ್ಲಿ ಇದ್ದ ಸಮಯ ನಿಮಗೆ ಒಳ್ಳೆಯದಿದೆ
ಅಕ್ಟೋಬರ್ 9 ರಿಂದ ದೇವ ಗುರು ಗುರು ತನ್ನ ಹಿಮ್ಮುಖ ಚಲನೆಯನ್ನು ಪ್ರಾರಂಭಿಸುತ್ತದೆ. ಈ ಅವಧಿಯು ನಿಮ್ಮ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಸಿಗಲಿದೆ. ಆದರೆ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.ಆದ್ದರಿಂದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಯತ್ನಿಸಿ. ಮನೆಯಲ್ಲಿ ಶುಭ ಕಾರ್ಯಗಳಿಗೆ ಹಣ ಖರ್ಚಾಗಲಿದೆ. ಹಣದ ಖರ್ಚು ಹೆಚ್ಚಾದರೂ ನಿಮಗೆ ದೊಡ್ಡ ಸಮಸ್ಯೆಯೇನೂ ಆಗುವುದಿಲ್ಲ, ನಿಮ್ಮೆಲ್ಲಾ ಸಮಸ್ಯೆಗಳಿಗೆ ಸಮಯಕ್ಕೆ ಹಣ ಸೇರುವುದು.
ಗುರು 6ನೇ ಮನೆಯಲ್ಲಿ ಇರುವಾಗ
ಗುರುವಿನ ಪ್ರಭಾವದಿಂದ ಸಮಾಜ ಸೇವೆ ಮಾಡುವವರು, ಕೀರ್ತಿಯನ್ನು ಗಳಿಸುತ್ತಾರೆ. ಅಲ್ಲದೆ ಈ ಅವಧಿಯಲ್ಲಿ ಧಾರ್ಮಿಕ ವಿಷಯಗಳತ್ತ ಗಮನಹರಿಸುತ್ತೀರಿ, ದಾನ ಮಾಡುವುದು, ಪೂಜೆಯನ್ನು ಮಾಡಿಸುವುದು ಮಾಡುತ್ತೀರಿ.
ವುವಾಹಿತರಿಗೆ ಸಂತಾನ ಭಾಗ್ಯ ದೊರೆಯಲಿದೆ.
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡಿದರೆ ಸಾಕಷ್ಟು ಕೀರ್ತಿ, ಲಾಭ ಸಿಗುತ್ತದೆ.
ಗುರುವಿನ ಸ್ಥಾನ ಬಲಪಡಿಸಲು ಏನು ಮಾಡಬೇಕು?
ಚಿನ್ನ ಮೈಮೇಲೆ ಇದ್ದರೆ ಒಳ್ಳೆಯದು, ಏಕೆಂದರೆ ಹಳದಿ ಲೋಹ, ಹಳದಿ ಬಟ್ಟೆ ಧರಿಸುವುದು ಒಳ್ಳೆಯದು ಎಂದು ಹೇಳಲಾಗುವುದು. ಹಳದಿ ಚಿಕ್ಕ ವಸ್ತ್ರವನ್ನು ನಿಮ್ಮ ಜೇಬು ಅಥವಾ ಪರ್ಸ್‌ನಲ್ಲಿ ಇಟ್ಟುಕೊಳ್ಳಿ.
ಗುರುವಾರ ಉಪವಾಸ ಮಾಡಿ, ಗುರುವಾಸ ಉಪವಾಸವಿದ್ದು ಗುರು ರಾಯರನ್ನು ಪೂಜಿಸಿ ಇದರಿಂದ ಸಮಸ್ಯೆ ದೂರಾಗುವುದು
ಓಂ ಗುರುವೇ ಮಂತ್ರ ಪಠಣೆ ಮಾಡಿ
ಬಡವರಿಗೆ ಸಹಾಯ ಮಾಡಿ, ನೀವು ಗುರುವಾರ ದೇವಾಲಯಕ್ಕೆ ಹೋಗಿ ಪ್ರಸಾದ ಅಥವಾ ಆಹಾರ ವಸ್ತುಗಳನ್ನು ದಾನ ಮಾಡಿ.
ಗೋವುಗಳಿಗೆ ಮೇವು ಹಾಕುವುದರಿಂದ ಕೂಡ ಶುಭ ಫಲ ಸಿಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications