For Quick Alerts
ALLOW NOTIFICATIONS  
For Daily Alerts

ಈ ದೇಶಗಳಲ್ಲಿ ಮದುವೆಯಾಗಲು ಪುರುಷರಿಗೆ ಹೆಣ್ಣು ಸಿಗುವುದು ತುಂಬಾ ಕಷ್ಟ!

|

ಕೆಲವೊಂದು ರಾಷ್ಟ್ರಗಳಲ್ಲಿ ಹೆಣ್ಣು ಹಾಗೂ ಗಂಡಿನ ಅನುಪಾತವು ಗಣನೀಯವಾಗಿ ಏರುಪೇರಾಗಿರುತ್ತದೆ. ಇದರಿಂದಾಗಿಯೇ ಕೆಲವು ರಾಷ್ಟ್ರಗಳಲ್ಲಿ ಒಂದು ಹುಡುಗಿಯು ಇಬ್ಬರು ಹುಡುಗರನ್ನು ಮದುವೆಯಾಗಲು ಅನುಮತಿಯು ಇದೆ. ಯಾಕೆಂದರೆ ಈ ರಾಷ್ಟ್ರಗಳಲ್ಲಿ ಮದುವೆಯಾಗಲು ಪುರುಷರಿಗೆ ಹೆಣ್ಣಿನ ಕೊರತೆಯಿದೆ. ಭಾರತದಲ್ಲೂ ಕೆಲವೊಂದು ಜನಾಂಗ ಹಾಗೂ ಜಾತಿಗಳಲ್ಲಿ ಇಂತಹ ಸಮಸ್ಯೆಯು ಕಾಡುತ್ತಿದೆ.

ಅತಿಯಾಗಿ ಹೆಣ್ಣು ಭ್ರೂಣ ಹತ್ಯೆ ಮಾಡಿರುವಂತಹ ಪರಿಣಾಮದಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆಯು ಆತಂಕಕಾರಿಯಾಗಿ ಕಡಿಮೆಯಾಗುತ್ತಿದೆ.

Countries Where Men Have Tough Times Finding A Women To Marry

ಪ್ರತಿಯೊಬ್ಬರಿಗೂ ಮದುವೆಯಾಗಬೇಕೆಂಬ ಹಂಬಲ ಇದ್ದೇ ಇರುತ್ತದೆ. ಆದರೆ ಹೆಣ್ಣು ಮಕ್ಕಳೇ ಸಿಗದೆ ಇದ್ದರೆ ಯಾರನ್ನು ಮದುವೆಯಾಗುವುದು ಎನ್ನುವ ಪ್ರಶ್ನೆ ಬರುತ್ತದೆ. ಇಂತಹ ಸಮಸ್ಯೆ ನಿವಾರಣೆ ಮಾಡಲು ವಧು ದಕ್ಷಿಣಿ ಕೂಡ ಸ್ವೀಕಾರ ಮಾಡುವ ಸಂಪ್ರದಾಯವು ಇದೆ. ಪುರುಷರ ಸಂಖ್ಯೆಯು ಮಹಿಳೆಯರಿಗಿಂತ ಹೆಚ್ಚಾದರೆ ಆಗ ಹೆಣ್ಣು ಸಿಗುವುದು ತುಂಬಾ ಕಠಿಣವಾಗುವುದು. ಈ ದೇಶದಲ್ಲಿ ಕೂಡ ಇದೇ ಪರಿಸ್ಥಿತಿ ನೆಲೆಯೂರಿದೆ. ಇಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಯಾವ ದೇಶಗಳು ಇಂತಹ ಸಮಸ್ಯೆ ಎದುರಿಸುತ್ತಿದೆ ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

ಲಿಬಿಯಾ

ಲಿಬಿಯಾ

ಲಿಬಿಯಾದಲ್ಲಿ ಹಲವಾರು ವರ್ಷಗಳಿಂದ ನಾಗರಿಕ ಯುದ್ಧವು ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿ ಇಲ್ಲಿ ಮಹಿಳೆಯರ ಬಗ್ಗೆ ಅನಾಸಕ್ತಿ ತೋರಲಾಗುತ್ತಿದೆ ಮತ್ತು ಅವರನ್ನು ಕಡೆಗಣಿಸಲಾಗಿದೆ. ಇದರಿಂದಾಗಿ ಇಂದು ಲಿಬಿಯಾದಲ್ಲಿ ಪುರುಷರ ಸಂಖ್ಯೆಯು ಮಹಿಳೆಯರಿಗಿಂತ ಹೆಚ್ಚಾಗಿದೆ. ಇದರಿಂದ ಪುರುಷರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ.

ಫಿಲಿಫೈನ್ಸ್

ಫಿಲಿಫೈನ್ಸ್

ಫಿಲಿಫೈನ್ಸ್ ಎನ್ನುವುದು ಒಂದು ಸುಂದರ ರಾಷ್ಟ್ರವಾಗಿದ್ದರೂ ಇಲ್ಲಿ ಹೆಣ್ಣು ಹಾಗೂ ಗಂಡಿನ ಅನುಪಾತದಲ್ಲಿ ತೀರ ವ್ಯತ್ಯಾಸವಿದೆ. ಇಲ್ಲಿ ಮಹಿಳೆಯರಿಗೆ ಯಾವುದೇ ಉದ್ಯೋಗವು ಸಿಗದೆ ಇರುವ ಕಾರಣದಿಂದಾಗಿ ಅವರು ಬೇರೆ ರಾಷ್ಟ್ರಕ್ಕೆ ವಲಸೆ ಹೋಗಿ ಅಲ್ಲಿ ನೆಲೆಸುತ್ತಾರೆ.

Most Read: ಬಡತನದ ಬೇಗೆ ತಾಳರಾದರೆ ತನ್ನ ವೃಷಣಗಳನ್ನೇ ಮಾರಾಟಕ್ಕಿಟ್ಟ ಭೂಪ!

ಐಸ್ ಲ್ಯಾಂಡ್

ಐಸ್ ಲ್ಯಾಂಡ್

ಅಂಕಿಅಂಶಗಳ ಪ್ರಕಾರ ಐಸ್ ಲ್ಯಾಂಡ್ ನಲ್ಲಿ ಸರಾಸರಿಯಾಗಿ ಪ್ರತೀ ನೂರು ಮಹಿಳೆಯರಿಗೆ 104 ಪುರುಷರು ಮಾತ್ರ ಇದ್ದಾರೆ. ಇಲ್ಲಿನ ಸರ್ಕಾರವೇ ವಿದೇಶಿ ಮಹಿಳೆಯರು ತಮ್ಮ ಪುರುಷರನ್ನು ಮದುವೆಯಾಗಬಹುದು ಎಂದು ಘೋಷಿಸಿರುವುದಾಗಿ ವರದಿಗಳು ಹೇಳಿವೆ. ಆದರೆ ಇದು ಕೇವಲ ಗಾಳಿ ಸುದ್ದಿ ಎಂದು ಬಳಿಕ ತಿಳಿದುಬಂದಿದೆ.

ನಾರ್ವೆ

ನಾರ್ವೆ

ವರದಿಗಳು ಹೇಳುವಂತೆ ನಾರ್ವೆಯಲ್ಲಿ 12 ಸಾವಿರ ಪುರುಷರು ಅಲ್ಲಿನ ಮಹಿಳೆಯರ ಜನಸಂಖ್ಯೆಗಿಂತ ಹೆಚ್ಚಾಗಿದ್ದಾರೆ. ಈ ಲಿಂಗಾನುಪಾತವನ್ನು ತಗ್ಗಿಸುವುದು ಹೇಗೆ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ.

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ

ಸಂಪೂರ್ಣವಾಗಿ ತಾಲಿಬಾನಿಗಳ ಹತೋಟಿಗೆ ಬರುವ ಮೊದಲು ಅಫ್ಘಾನಿಸ್ತಾನ ಶಾಂತಿಪ್ರಿಯ ದೇಶವಾಗಿತ್ತು. ತಾಲಿಬಾನಿಗಳು ಈ ದೇಶಕ್ಕೆ ಕಾಲಿರಿಸಿದ ಬಳಿಕ ಮಹಿಳೆಯರು ಆ ದೇಶ ಬಿಟ್ಟು ಬೇರೆ ದೇಶಕ್ಕೆ ಪಾಲಾಯನ ಮಾಡುತ್ತಿದ್ದಾರೆ.

Most Read: ಸಾವು ಸಮೀಪಿಸುತ್ತಿದೆ ಎಂದು ಎಚ್ಚರಿಸುವ ಅಚ್ಚರಿಯ ಚಿಹ್ನೆಗಳು!

ಭಾರತ

ಭಾರತ

ಭಾರತವು ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಇಲ್ಲಿ ಕೂಡ ಪುರುಷರ ಜನಸಂಖ್ಯೆಯು ಮಹಿಳೆಯರ ಜನಸಂಖ್ಯೆಗಿಂತ ಅಧಿಕವಾಗಿದೆ. ಹೆಣ್ಣು ಮಗುವಿನ ಬಗ್ಗೆ ತಿರಸ್ಕಾರ ಭಾವನೆ ಹಾಗೂ ಗಂಡು ಬೇಕೆಂಬ ಅತಿಯಾದ ಇಚ್ಛೆಯೇ ಇದಕ್ಕೆ ಕಾರಣವಾಗಿದೆ.

English summary

Countries Where Men Have Tough Times Finding A Women To Marry!

These are the countries where men have a tough time to find a girl for themselves. Check out the details of these countries names.
X
Desktop Bottom Promotion