Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
ನವಗ್ರಹಗಳಲ್ಲಿ ಗುರು ಗ್ರಹವು ಪ್ರಮುಖವಾದ ಗ್ರಹ, ಇದರ ಪ್ರಭಾವ ನಮ್ಮ ದೀರ್ಘಾವಧಿ ಅಂದರೆ ಒಂದು ವರ್ಷದವರೆಗೆ ಇರುವುದರಿಂದ ಶುಕ್ರನು ನಮ್ಮ ಗ್ರಹದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಈ ಸಮಯ ತುಂಬಾ ಅಂದರೆ ತುಂಬಾನೇ ಚೆನ್ನಾಗಿರಲಿದೆ.
ಗುರು ನಿಮ್ಮ ಕರ್ಮದ 10ನೇ ಮನೆಯ ಅಧಿಪತಿ, ಅದೀಗ ನಿಮ್ಮ ನಿಮ್ಮ 3ನೇ ಮನೆಗೆ ಹೋಗಲಿದೆ. ಗುರು ವೃಷಭ ರಾಶಿಗೆ ಹೋಗುವಾಗ 3ನೇ ಮನೆಯಲ್ಲಿ ಗುರುವಿನ ಪ್ರಭಾವ ಹೇಗಿರಲಿದೆ ಎಂದು ನೋಡೋಣ ಬನ್ನಿ:

3ನೇ ಮನೆಯಲ್ಲಿ ಗುರುವಿನ ಪ್ರಭಾವ
ಮೂರನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು ನಿಮ್ಮಲ್ಲಿ ಸ್ವಲ್ಪ ಸೋಮಾರಿತನವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೆಲಸವನ್ನು ನೀವು ನಾಳೆ ಮಾಡುವ ಎಂದು ಮುಂದೂಡಬಹುದು, ಇದರಿಂದಾಗಿ ನಿಮ್ಮ ಕೆಲಸದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು. ಈ ಕಾರಣದಿಂದಾಗಿ ನೀವು ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಂತಾಗುವುದು. ಆದ್ದರಿಂದ ನೀವು ಕೆಲಸದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡದಿದ್ದರೆ ಒಳ್ಳೆಯದು. ಮಾಡಿದರೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಅಥವಾ ನಿಮ್ಮ ಪ್ರಗತಿಗೆ ತೊಂದರೆಯಾಗಬಹುದು ಆದ್ದರಿಂದ ಜಾಗ್ರತೆವಹಿಸಬೇಕು.
ಕುಟುಂಬ ಜೀವನ
ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ನಿಮಗೆ ಅವಶ್ಯಕತೆಯಿದ್ದಾದ ನೀವು ಸಹೋದರ ಸಹೋದರಿಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅಲ್ಲದೆ ಕುಟುಂಬಸ್ಥರ ಹಾಗೂ ನಿಮ್ಮ ನಡುವೆ ಸಂಬಂಧ ಚೆನ್ನಾಗಿರಲಿದೆ. ಮಕ್ಕಳ ಪ್ರಗತಿನೋಡಿ ಖುಷಿಯಾಗಲಿದೆ. ಈ ಸಮಯದಲ್ಲಿ ಕುಟುಂಬ ಜೀವನ ಚೆನ್ನಾಗಿ ನಡೆಯಲಿದೆ, ನೆಮ್ಮದಿ ಇರಲಿದೆ.
ವ್ಯಾಪಾರಸ್ಥರಿಗೆ ಹೇಗಿರಲಿದೆ?
ನೀವು ನಿಮ್ಮ ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ. ವ್ಯವಹಾರದಲ್ಲಿ ನೀವು ಮಾಡುವ ಹೊಸ ಪ್ರಯೋಗದಿಂದಾಗಿ ಉತ್ತಮ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಈ ಸಮಯ ತುಂಬಾ ಚೆನ್ನಾಗಿರಲಿದೆ. ಆದ್ದರಿಂದ ವ್ಯಾಪಾರಿಗಳು ಈ ಅವಧಿಯಲ್ಲಿ ತುಂಬಾ ಖುಷಿಯಾಗಿರುತ್ತೀರಿ.
ಧಾರ್ಮಿಕ ಒಲವು ಹೆಚ್ಚಾಗಲಿದೆ
ಗುರು ನಿಮ್ಮ 3ನೇ ಮನೆಯಲ್ಲಿ ಇರುವುದರಿಂದ ಧಾರ್ಮಿಕ ಒಲವು ಹೆಚ್ಚಾಗಲಿದೆ. ನೀವು ದಾನ, ಧರ್ಮ, ಪುಣ್ಯ ಮತ್ತು ಒಳ್ಳೆಯ ಕೆಲಸಗಳನ್ನು ಮಾಡಲು ಇಷ್ಟಪಡುತ್ತೀರಿ.
ದೇವಸ್ಥಾನ ಅಥವಾ ತೀರ್ಥಕ್ಷೇತ್ರಕ್ಕೆ ಹೋಗುತ್ತೀರಿ. ಬಹು ಸಮಯದಿಂದ ಹೋಗ ಬಯಸುತ್ತಿದ್ದ ತೀರ್ಥ ಕ್ಷೇತ್ರಕ್ಕೆ ಹೋಗುವಿರಿ.
ಆರ್ಥಿಕ ಜೀವನ
ಆರ್ಥಿಕವಾಗಿ ಒಳ್ಳೆಯದಿದೆ, ಹಣಕ್ಕೆ ಸಂಬಂಧಿಸಿದಂತೆ ಮಾಡುವ ಪ್ರಯತ್ನದಿಂದ ಹಣವನ್ನು ಗಳಿಸಬಹುದು. ಆದರೆ ನೀವು ಸೋಮಾರಿತನ ಬಿಡಬೇಕು, ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುವುದು. ಹಣವನ್ನು ನೋಡಿಕೊಂಡು ಖರ್ಚು ಮಾಡಿ, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಹೆಚ್ಚಾಗುವುದು ಇನ್ನು ಹೂಡಿಕೆ ಮಾಡುವುದಾದರೆ ಕೂಡ ತುಂಬಾನೇ ಜಾಗ್ರತೆವಹಿಸಬೇಕು.
3ನೇ ಮನೆಯಲ್ಲಿ ಗುರುವಿನ ಪ್ರಭಾವ
ಮೂರನೇ ಮನೆಯಲ್ಲಿ ಗುರು ಇರುವುದರಿಂದ ನಿಮ್ಮಲ್ಲಿ ಧೈರ್ಯ ಹೆಚ್ಚಾಗಲಿದೆ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತೀರಿ.
ಧಾರ್ಮಿಕ ಕ್ಷೇತ್ರದ ಕಡೆಗೆ ಒಲವು ಹೆಚ್ಚಾಗಲಿದೆ
ನಿಮ್ಮ ಕೆಲಸವನ್ನು ನೀವು ಬುದ್ಧಿವಂತಿಕೆಯಿಂದ ಮಾಡಿ ಮುಗಿಸುತ್ತೀರಿ
ಈ ಅವಧಿಯಲ್ಲಿ ಸಹೋದರರ ಬೆಂಬಲ ಸಿಗಲಿದೆ, ಇದರಿಂದ ನಿಮಗೆ ಯಾವುದೇ ದೊಟ್ಟ ಸಮಸ್ಯೆಯಾಗಲ್ಲ.
ಈ ಅವಧಿಯಲ್ಲಿ ನೀವು ಸಂತೋಷ ಮತ್ತು ಸಮೃದ್ಧಯ ಜೀವನ ನಡೆಸಲು ಸಾಧ್ಯವಾಗುವುದು.
ನಿಮ್ಮ ವೈವಾಹಿಕ ಜೀವನ ಸುಖವಾಗಿರಲಿದೆ. ನಿಮ್ಮಿಬ್ಬರ ನಡುವೆ ಬಾಂಧವ್ಯ ಚೆನ್ನಾಗಿರಲಿದೆ.
ಗುರು ಹಿಮ್ಮುಖ ಚಲನೆಯಲ್ಲಿ ಇದ್ದಾಗ ಉತ್ತಮ ಪ್ರಯೋಜನ ಪಡೆಯುತ್ತೀರಿ
ಗುರು ಮೂರನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡಿದಾಗ ಅನಿರೀಕ್ಷಿತ ಪ್ರಯಾಣ ಮಾಡಬಹುದು. ಪ್ರಯಾಣದಿಂದ ಲಾಭ ಹೆಚ್ಚಾಗಲಿದೆ.
ವೈಯಕ್ತಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು.
ನಿಮ್ಮ ಒಡಹುಟ್ಟಿದವರ ಜೊತೆ ಸಂಬಂಧ ಚೆನ್ನಾಗಿರಲಿದೆ.
ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications