For Quick Alerts
ALLOW NOTIFICATIONS  
For Daily Alerts

ಶ್ರೀಮಂತ ದೇವಾಲಯಗಳು: ಇಲ್ಲಿ ಧನ ಸಂಪತ್ತು ತುಂಬಿ ತುಳುಕುತ್ತಿದೆ!

By Super Admin
|

ಘಜನಿ ಮಹಮ್ಮದ್ ಭಾರತದ ದೇವಾಲಯಗಳನ್ನೇ ಏಕೆ ಲೂಟಿ ಮಾಡುತ್ತಿದ್ದ ಎಂಬ ಪ್ರಶ್ನೆಗೆ ನೇರವಾದ ಉತ್ತರವೆಂದರೆ ನಮ್ಮ ದೇವಾಲಯದಲ್ಲಿ ಸಂಗ್ರಹಿಸಲಾಗುತ್ತಿದ್ದ ಚಿನ್ನಕ್ಕಾಗಿಯೇ ಹೊರತು ಧರ್ಮವಿರೋಧಿ ಕಾರಣಕ್ಕಲ್ಲ. ದೇವಸ್ಥಾನದ ಹುಂಡಿಗೆ ಹಣ ಹಾಕುವುದರ ಹಿಂದಿನ ಸತ್ಯತೆ...

ದೇವಾಲಯಗಳಿಗೆ ಭಕ್ತರು ನೀಡುವ ದೇಣಿಗೆ ಸಂಗ್ರಹವಾಗುತ್ತಾ ಹೋದಂತೆ ದೇವಾಲಯಗಳೂ ಶ್ರೀಮಂತವಾಗುತ್ತಾ ಹೋಗುತ್ತವೆ. ಇದರ ಪ್ರಮಾಣ ಎಷ್ಟು ಎಂಬ ಅಂದಾಜಿದೆಯೇ? ಒಂದು ವೇಳೆ ಇಲ್ಲ ಎಂದಾದಲ್ಲಿ, ಕೆಳಗಿನ ಸ್ಲೈಡ್ ಶೋ ಮೂಲಕ ನೀಡಿರುವ ಮಾಹಿತಿಗಳು ನಿಮ್ಮನ್ನು ಅಚ್ಚರಿಯ ಕಮರಿಗೇ ತಳ್ಳಬಹುದು...

ಪದ್ಮನಾಭಸ್ವಾಮಿ ದೇವಾಲಯ-ಅಂದಾಜು ಸಂಗ್ರಹ : ಒಂದು ಲಕ್ಷ ಕೋಟಿ

ಪದ್ಮನಾಭಸ್ವಾಮಿ ದೇವಾಲಯ-ಅಂದಾಜು ಸಂಗ್ರಹ : ಒಂದು ಲಕ್ಷ ಕೋಟಿ

ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯ ಕಳೆದ ವರ್ಷ ಇಡಿಯ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆಯಿತು. ಏಕೆಂದರೆ ಇದರ ತಳಭಾಗದಲ್ಲಿರುವ ಕೋಣೆಗಳಲ್ಲಿ ಟ್ರಾವಂಕೋರ್ ಕುಟುಂಬಕ್ಕೆ ಸೇರಿದ ಅಪಾರ ಧನಕನಕಗಳು ಪತ್ತೆಯಾಗಿತ್ತು. ಈ ಕೋಣೆಗಳನ್ನು ಎಷ್ಟೋ ವರ್ಷಗಳ ಹಿಂದೆ ಮುಚ್ಚಲಾಗಿದ್ದು ಕೆಲವಾರು ತಕರಾರುಗಳಿಂದ ತೆರೆದಿರಲಿಲ್ಲ. ಕಳೆದ ವರ್ಷ ಇದಕ್ಕೆ ನ್ಯಾಯಾಲಯದ ಅನುಮತಿ ದೊರೆತ ಬಳಿಕ ಕೋಣೆಗಳನ್ನು ತೆರೆದವರಿಗೆ ಆರು ಖಜಾನೆ ಭರ್ತಿ ವಜ್ರ, ಚಿನ್ನದ ನಾಣ್ಯ ಮತ್ತು ಆಭರಣಗಳು ಪತ್ತೆಯಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪದ್ಮನಾಭಸ್ವಾಮಿ ದೇವಾಲಯ-ಅಂದಾಜು ಸಂಗ್ರಹ : ಒಂದು ಲಕ್ಷ ಕೋಟಿ

ಪದ್ಮನಾಭಸ್ವಾಮಿ ದೇವಾಲಯ-ಅಂದಾಜು ಸಂಗ್ರಹ : ಒಂದು ಲಕ್ಷ ಕೋಟಿ

ಇವು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು ಅಂದಿನಿಂದ ಯಾರೂ ಮುಟ್ಟದೇ ಇರುವ ಕಾರಣ ಇದರ ನೈಜ ಚಿನ್ನ ವಜ್ರದ ಬೆಲೆಗಿಂತಲೂ ಇದರ ಐತಿಹಾಸಿಕ ಬೆಲೆ ಅಪಾರವಾಗಿದೆ. ಹಾಗಿದ್ದೂ ಇದರ ಪ್ರಸ್ತುತ ಮಾರುಕಟ್ಟೆಯ ಬೆಲೆಯನ್ನು ಪರಿಗಣಿಸಿದರೆ ಇವು ಒಂದು ಲಕ್ಷ ಕೋಟಿ ರೂಪಾಯಿಗಳಾಗಬಹುದೆಂದು ಅಂದಾಜಿಸಿದ್ದು ಈ ಅಂದಾಜು ಈ ದೇವಾಲಯವನ್ನು ದೇಶದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ

ತಿರುಪತಿ ದೇವಾಲಯ , ಆಂಧ್ರ ಪ್ರದೇಶ - ಅಂದಾಜು ಸಂಗ್ರಹ: 900 ಕೋಟಿ

ತಿರುಪತಿ ದೇವಾಲಯ , ಆಂಧ್ರ ಪ್ರದೇಶ - ಅಂದಾಜು ಸಂಗ್ರಹ: 900 ಕೋಟಿ

ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ನೀಡಿದರೆ ತಮ್ಮ ಅಭೀಷ್ಠೆಗಳು ಈಡೇರುವುವು ಎಂಬ ನಂಬಿಕೆಯಿಂದ ಭಕ್ತರು ನೀಡುವ ಕಾಣಿಕೆಗಳಿಂದ ಈ ದೇವಾಲಯದ ತಿಜೋರಿ ಸದಾ ತುಂಬುತ್ತಲೇ ಇರುತ್ತದೆ. ಪ್ರತಿದಿನ ಈ ದೇವಾಲಯಕ್ಕೆ ಅರವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಿರುಪತಿ ದೇವಾಲಯ , ಆಂಧ್ರ ಪ್ರದೇಶ - ಅಂದಾಜು ಸಂಗ್ರಹ: 900 ಕೋಟಿ

ತಿರುಪತಿ ದೇವಾಲಯ , ಆಂಧ್ರ ಪ್ರದೇಶ - ಅಂದಾಜು ಸಂಗ್ರಹ: 900 ಕೋಟಿ

ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ಒಂದು ರೂಪಾಯಿಯಿಂದ ಹಿಡಿದು ಐವತ್ತೊಂದು ಲಕ್ಷ ರೂಪಾಯಿಗಳವರೆಗೆ ದೇಣಿಗೆ ನೀಡಿದ್ದಾರೆ. ಕೆಲವರು ಚಿನ್ನಾಭರಣಗಳನ್ನು ಹಾಕಿದರೆ ಕೆಲವರು ತಮ್ಮ ಜೀವನಕ್ಕೆ ಆಧಾರವಾದ ಸೈಕಲನ್ನೂ ದಾನ ಮಾಡಿದ್ದಾರೆ. ಗರ್ಭಗುಡಿಯಲ್ಲಿರುವ ವಿಗ್ರಹವನ್ನೇ ಸುಮಾರು ಸಾವಿರ ಕೇಜಿ ಚಿನ್ನದಿಂದ ಮಾಡಲಾಗಿದೆ. ವೆಂಕಟೇಶ್ವರ ದೇವರ ಮೂರ್ತಿಯ ಕೆಲವೊಂದು ರಹಸ್ಯಗಳು

ಶಿರ್ಡಿ ಸಾಯಿ ಬಾಬಾ, ಮಹಾರಾಷ್ಟ್ರ : ಅಂದಾಜು ಸಂಗ್ರಹ : ಸುಮಾರು 540 ಕೋಟಿ

ಶಿರ್ಡಿ ಸಾಯಿ ಬಾಬಾ, ಮಹಾರಾಷ್ಟ್ರ : ಅಂದಾಜು ಸಂಗ್ರಹ : ಸುಮಾರು 540 ಕೋಟಿ

ಪ್ರಸ್ತುತ ಮೂರನೆಯ ಸ್ಥಾನದಲಿರುವ ಈ ದೇವಾಲಯಕ್ಕೆ ವಿವಿಧ ಧರ್ಮಕ್ಕೆ ಸೇರಿದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡುವವರು ಏನಾದರೊಂದು ದಾನವನ್ನು ನೀಡುತ್ತಲೇ ಇರುವ ಕಾರಣ ಇದರ ಹುಂಡಿ ಒಂದು ಕ್ಷಣವೂ ಖಾಲಿಯಾಗಿರುವುದಿಲ್ಲ. ಹುಂಡಿಯಲ್ಲಿ ಹಣದ ಹೊರತಾಗಿ ವಜ್ರ ಮತ್ತು ಚಿನ್ನವನ್ನೂ ಜನರು ದಾನ ನೀಡುವ ಮೂಲಕ ಕೋಟ್ಯಂತರ ರೂಪಾಯಿ ಹಣ ಸಂಗ್ರಹವಾಗಿದೆ. ಅಚ್ಚರಿಯ ಕೂಪಕ್ಕೆ ತಳ್ಳುವ ಸಾಯಿ ಬಾಬಾರವರ ಪವಾಡಗಳು

ವೈಷ್ಣೋದೇವಿ ಮಂದಿರ, ಜಮ್ಮು - ಅಂದಾಜು ಸಂಗ್ರಹ : 500 ಕೋಟಿಗೂ ಹೆಚ್ಚು!

ವೈಷ್ಣೋದೇವಿ ಮಂದಿರ, ಜಮ್ಮು - ಅಂದಾಜು ಸಂಗ್ರಹ : 500 ಕೋಟಿಗೂ ಹೆಚ್ಚು!

ದುರ್ಗಮ ಪ್ರದೇಶದಲ್ಲಿದ್ದರೂ ಈ ಪವಿತ್ರ ಸ್ಥಳಕ್ಕೆ ಪ್ರತಿವರ್ಷ ಒಂದು ಕೋಟಿ ಜನರಾದರೂ ಭೇಟಿ ನೀಡುತ್ತಾರೆ. ತಿರುಪತಿಯ ನಂತರ ಅತಿ ಹೆಚ್ಚು ಜನರು ಸಂದರ್ಶಿಸುವ ಭಾರತದ ಈ ದೇವಸ್ಥಾನದಲ್ಲಿ ಭಕ್ತರು ದಾನ ನೀಡಿರುವ 1.2 ಟನ್ ಚಿನ್ನದ ಸಂಗ್ರಹವಿದೆ. ಭಕ್ತರು ನೀಡುವ ದೇಣಿಗೆಯಿಂದ ಪ್ರಸ್ತುತ ಸುಮಾರು ಐನೂರು ಕೋಟಿ ವಾರ್ಷಿಕ ಆದಾಯವನ್ನು ಪಡೆಯುತ್ತಿದೆ.

ಮುಂಬೈಯ ಸಿದ್ಧಿ ವಿನಾಯಕ ದೇವಸ್ಥಾನ: ಅಂದಾಜು ಸಂಗ್ರಹ: 125 ಕೋಟಿ ರೂ

ಮುಂಬೈಯ ಸಿದ್ಧಿ ವಿನಾಯಕ ದೇವಸ್ಥಾನ: ಅಂದಾಜು ಸಂಗ್ರಹ: 125 ಕೋಟಿ ರೂ

ಮುಂಬೈಯ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಪ್ರತಿದಿನ ಇಪ್ಪತ್ತೈದು ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಈ ಭಕ್ತರು ನೀಡುವ ದೇಣಿಗೆ ಮಂಗಳವಾರ ಮತ್ತು ಸಂಕಷ್ಟಿ ಚತುರ್ಥಿಯ ದಿನಗಳಂದು ಅತಿಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದೇವಾಲಯದ ಗುಮ್ಮಟವನ್ನು 3.75 ಕೇಜಿ ಚಿನ್ನದ ಲೇಪನದಿಂದ ಅಲಂಕರಿಸಲಾಗಿದೆ.

ಅಮೃತಸರದ ಸ್ವರ್ಣ ಮಂದಿರ : ಅಂದಾಜು ಸಂಗ್ರಹ: ಬಹಿರಂಗಪಡಿಸಲಾಗಿಲ್ಲ

ಅಮೃತಸರದ ಸ್ವರ್ಣ ಮಂದಿರ : ಅಂದಾಜು ಸಂಗ್ರಹ: ಬಹಿರಂಗಪಡಿಸಲಾಗಿಲ್ಲ

ಹೆಸರೇ ಹೇಳುವಂತೆ ಈ ಮಂದಿರವನ್ನು ನಿಜವಾದ ಸ್ವರ್ಣದಿಂದಲೇ ಅಲಂಕರಿಸಲಾಗಿದೆ. ಪಂಜಾಬ್‌ನ ಅಮೃತಸರದಲ್ಲಿರುವ ಈ ಮಂದಿರ ವಾಸ್ತವವಾಗಿ ಒಂದು ಗುರುದ್ವಾರವಾಗಿದ್ದು ಹರ್ಮಿಂದರ್ ಸಾಹಿಬ್ ಗುರುದ್ವಾರ ಎಂಬ ಮೂಲ ಹೆಸರನ್ನು ಪಡೆದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಮೃತಸರದ ಸ್ವರ್ಣ ಮಂದಿರ : ಅಂದಾಜು ಸಂಗ್ರಹ: ಬಹಿರಂಗಪಡಿಸಲಾಗಿಲ್ಲ

ಅಮೃತಸರದ ಸ್ವರ್ಣ ಮಂದಿರ : ಅಂದಾಜು ಸಂಗ್ರಹ: ಬಹಿರಂಗಪಡಿಸಲಾಗಿಲ್ಲ

ಈ ಮಂದಿರದ ಗೋಡೆ, ಬುರುಜುಗಳಿಗೆ ಚಿನ್ನದ ತಗಡುಗಳನ್ನು ಹೊದಿಸುವ ಮೂಲಕ ಪಡೆದ ಕಳೆಯಿಂದಾಗಿಯೇ ಇದಕ್ಕೆ ಸ್ವರ್ಣ ಮಂದಿರವೆಂಬ ಹೆಸರು ಸಿಕ್ಕಿದೆ. ಅತಿ ಸೂಕ್ಷ್ಮ ಕೆತ್ತನೆಯ ಮೂಲಕ ಅದ್ಭುತ ಕಲಾವಂತಿಕೆಯನ್ನು ಪ್ರದರ್ಶಿಸಲಾಗಿದ್ದು ವಿಶೇಷವಾಗಿ ಗರ್ಭಗುಡಿಯಲ್ಲಿ ಆದಿ ಗ್ರಂಥವನ್ನಿರಿಸಿರುವ ಮೇಲ್ಛಾವಣಿಯನ್ನು ಸಂಪೂರ್ಣವಾಗಿ ಚಿನ್ನದಿಂದ ಮಾಡಲಾಗಿದೆ.

ಮದುರೈನ ಮೀನಾಕ್ಷಿ ದೇವಾಲಯ : ಅಂದಾಜು ಸಂಗ್ರಹ - ಅರವತ್ತು ಕೋಟಿಗೂ ಹೆಚ್ಚು

ಮದುರೈನ ಮೀನಾಕ್ಷಿ ದೇವಾಲಯ : ಅಂದಾಜು ಸಂಗ್ರಹ - ಅರವತ್ತು ಕೋಟಿಗೂ ಹೆಚ್ಚು

ಪ್ರತಿದಿನ ಸುಮಾರು ಇಪ್ಪತ್ತರಿಂದ ಮೂವತ್ತು ಸಾವಿರ ಭಕ್ತರು ಭೇಟಿ ನೀಡುವ ಇನ್ನೊಂದು ದೇವಾಲಯವೆಂದರೆ ತಮಿಳುನಾಡಿನಲ್ಲಿರುವ ಮೀನಾಕ್ಷಿ ಮಂದಿರ. ಭಕ್ತರು ನೀಡುವ ದೇಣಿಗೆಯ ಮೂಲಕ ಈ ದೇವಸ್ಥಾನ ಪ್ರತಿವರ್ಷ ಆರು ಕೋಟಿ ರೂಪಾಯಿ ಆದಾಯ ಹೊಂದಿದೆ. ಈ ದೇವಾಲಯದಲ್ಲಿ ಮೂವತ್ತ ಮೂರು ಸಾವಿರ ವಿಗ್ರಹಗಳಿವೆ. ಶಿವನ ಅವತಾರವಾದ ಸುಂದರೇಶ್ವರನ ಪತ್ನಿ ಮೀನಾಕ್ಷಿಗಾಗಿ ಈ ದೇವಾಲಯ ಮುಡಿಪಾಗಿದ್ದು ಆವರಣದಲ್ಲಿ ಸುಮಾರು ನಲವತ್ತೈದರಿಂದ ಐವತ್ತು ಮೀಟರ್ ಎತ್ತರದ ಹದಿನಾಲ್ಕು ಹದಿನಾಲ್ಕು ಗೋಪುರಗಳಿವೆ. ಈ ದೇವಾಲಯದಲ್ಲಿ ಎರಡು ಚಿನ್ನದ ವಿಮಾನಗಳಿದ್ದು ದೇವಾಲಯದ ಸೌಂದರ್ಯವನ್ನು ವೃದ್ಧಿಸುವ ಜೊತೆಗೇ ಇದರ ಐಶ್ವರ್ಯದ ಪ್ರದರ್ಶನವನ್ನೂ ಮಾಡುತ್ತದೆ.

ಕೇರಳದ ಶಬರಿಮಲೈ ದೇವಸ್ಥಾನ : ಅಂದಾಜು ಸಂಗ್ರಹ - 105 ಕೋಟಿ ರೂ.

ಕೇರಳದ ಶಬರಿಮಲೈ ದೇವಸ್ಥಾನ : ಅಂದಾಜು ಸಂಗ್ರಹ - 105 ಕೋಟಿ ರೂ.

ಪ್ರತಿವರ್ಷ ಸುಮಾರು ನಾಲ್ಕರಿಂದ ಐದು ಕೋಟಿ ಭಕ್ತರು ಭೇಟಿ ನೀಡುವ ಈ ದೇವಸ್ಥಾನ ಭಾರತದ ಅತಿಹೆಚ್ಚು ಭಕ್ತರು ಸಂದರ್ಶಿಸುವ ಸ್ಥಳ ಎಂಬ ಹೆಗ್ಗಳಿಕೆ ಪಡೆದಿದೆ. ಇದರ ವಿಶೇಷತೆ ಏನೆಂದರೆ ಈ ದೇವಸ್ಥಾನಕ್ಕೆ ಕೇವಲ ಪುರುಷರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೇರಳದ ಶಬರಿಮಲೈ ದೇವಸ್ಥಾನ : ಅಂದಾಜು ಸಂಗ್ರಹ - 105 ಕೋಟಿ ರೂ.

ಕೇರಳದ ಶಬರಿಮಲೈ ದೇವಸ್ಥಾನ : ಅಂದಾಜು ಸಂಗ್ರಹ - 105 ಕೋಟಿ ರೂ.

ವರ್ಷಕ್ಕೊಂದು ಬಾರಿ ನಲವತ್ತೊಂದು ದಿನಗಳ ಮೇಳದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಈ ಅವಧಿಯಲ್ಲಿ ಅತಿ ಹೆಚ್ಚು ಹಣ ಸಂಗ್ರಹವಾಗುತ್ತದೆ. 2011-2012ರಲ್ಲಿ ದಾಖಲೆ 218 ಕೋಟಿ ರೂ ಸಂಗ್ರಹವಾಗಿತ್ತು. ಇದುವರೆಗೆ ಸುಮರು 230 ಕೋಟಿ ರೂ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.

ಪುರಿಯ ಜಗನ್ನಾಥ ದೇವಾಲಯ: ಅಂದಾಜು ಸಂಗ್ರಹ: 208 ಕೇಜಿ ಚಿನ್ನ ಮತ್ತು 25,711 ಎಕರೆ ಜಾಗ

ಪುರಿಯ ಜಗನ್ನಾಥ ದೇವಾಲಯ: ಅಂದಾಜು ಸಂಗ್ರಹ: 208 ಕೇಜಿ ಚಿನ್ನ ಮತ್ತು 25,711 ಎಕರೆ ಜಾಗ

2010ರಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ ಪುರಿಯ ಜಗನ್ನಾಥ ದೇವಾಲಯದ ಬ್ಯಾಂಕ್ ನ ಠೇವಣಿ 150 ಕೋಟಿ ರೂಪಾಯಿಗಳನ್ನು ತಲುಪುತ್ತವೆ. ಪ್ರತಿದಿನ ಹದಿನೈದರಿಂದ ಇಪ್ಪತ್ತು ಸಾವಿರ ರೂ ದೇಣಿಗೆ ಪಡೆಯುವ ಈ ದೇವಸ್ಥಾನಕ್ಕೆ ಪ್ರತಿದಿನ ಮೂವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಈ ಸಂಖ್ಯೆ ಹಬ್ಬ ಹರಿದಿನಗಳಲ್ಲಿ ಸುಮಾರು ಎಪ್ಪತ್ತು ಸಾವಿರಕ್ಕೇರುತ್ತದೆ. ಯೂರೋಪಿನ ಓರ್ವ ಭಕ್ತರು ಒಮ್ಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ 1.72ಕೋಟಿ ರೂ ದಾನ ನೀಡಿ ಗಮನ ಸೆಳೆದಿದ್ದಾರೆ.

ಗುಜರಾತ್‌ನ ಸೋಮನಾಥ ದೇವಾಲಯ : ಅಂದಾಜು ಸಂಗ್ರಹ: 109 ಕೇಜಿ ಚಿನ್ನ

ಗುಜರಾತ್‌ನ ಸೋಮನಾಥ ದೇವಾಲಯ : ಅಂದಾಜು ಸಂಗ್ರಹ: 109 ಕೇಜಿ ಚಿನ್ನ

ಗುಜರಾತ್ ನಲ್ಲಿರುವ ಈ ದೇವಾಲಯ ಶಿವನಿಗೆ ಮುಡುಪಾಗಿದ್ದು 109 ಕೇಜಿ ಚಿನ್ನ ಸಂಗ್ರಹವಿದೆ ಎಂದು ಪ್ರಕಟಿಸಿದೆ. ಓರ್ವ ಖ್ಯಾತ ವಜ್ರದ ವ್ಯಾಪಾರಿಯೊಬ್ಬರು ನಲವತ್ತು ಕೇಜಿ ಚಿನ್ನ ದಾನರೂಪದಲ್ಲಿ ನೀಡುವ ಮೂಲಕ ಇಂದು 109ಕೇಜಿ ತಲುಪಿದೆ. ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ದೇವಾಲಯದ ಸಂಗ್ರಹವನ್ನು ಠೇವಣಿ ಇಡುವ ಯೋಜನೆಗೆ ಬೆಂಬಲ ಸೂಚಿಸಿ ಚಿನ್ನವನ್ನು ಠೇವಣಿಯಾಗಿಸಿರುವ ಪ್ರಥಮ ದೇವಾಲಯವಾಗಿದೆ. ಅಲ್ಲದೇ ಈ ದೇವಾಲಯದ ಅಧಿಪತ್ಯದಲ್ಲಿ 1639 ಕೋಟಿ ರೂ ಮೌಲ್ಯದ ಜಾಗವೂ ಇದೆ.

ಜಮ್ಮುವಿನ ಅಮರನಾಥ ದೇವಾಲಯ : ಅಂದಾಜು ಸಂಗ್ರಹ - ಬಹಿರಂಗ ಪಡಿಸಿಲ್ಲ

ಜಮ್ಮುವಿನ ಅಮರನಾಥ ದೇವಾಲಯ : ಅಂದಾಜು ಸಂಗ್ರಹ - ಬಹಿರಂಗ ಪಡಿಸಿಲ್ಲ

ಜೀವಮಾನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಭೇಟಿ ನೀಡಲೇಬೇಕೆಂದು ಬಯಸುವ ಭಕ್ತರಿಂದಾಗಿ ಈ ದೇವಾಲಯ ಸದಾ ಜಿಗಿಗುಡುತ್ತಿರುತ್ತದೆ. 2014 ರ ಅಮರನಾಥ ಯಾತ್ರೆಯಲ್ಲಿ 2.44ಲಕ್ಷ ಜನರು ಭೇಟಿ ನೀಡಿದ್ದಾರೆ. ಒಂದು ವರದಿಯ ಪ್ರಕಾರ ಒಂದು ವೇಳೆ ಈ ಯಾತ್ರೆಯನ್ನು ಇಡಿಯ ವರ್ಷ ತೆರೆಯುವುದಾದರೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ವಾರ್ಷಿಕ 24,000 ಕೋಟಿ ರೂಪಾಯಿ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ.

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ: ಅಂದಾಜು ಸಂಗ್ರಹ :4-5 ಕೋಟಿ

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ: ಅಂದಾಜು ಸಂಗ್ರಹ :4-5 ಕೋಟಿ

ಇತಿಹಾಸದಲ್ಲಿ ಅತಿ ಹೆಚ್ಚಿನ ಬಾರಿ ಧಾಳಿಗೊಳಗಾಗಿ ಮರುನಿರ್ಮಾಣಗೊಂಡ ದೇವಾಲಯವೆಂದರೆ ಕಾಶಿಯ ವಿಶ್ವನಾಥ ದೇವಾಲಯ. ಈ ದೇವಾಲಯದ ಖ್ಯಾತಿಯಿಂದಾಗಿ ಪ್ರತಿವರ್ಷ ಮೂವತ್ತು ಲಕ್ಷ ಭಾರತೀಯ ಮತ್ತು ಎರಡು ಲಕ್ಷ ವಿದೇಶೀಯ ಭಕ್ತರು ಭೇಟಿ ನೀಡುತ್ತಾರೆ.ಈ ಭಕ್ತರು ನೀಡುವ ದೇಣಿಗೆ ವಾರ್ಷಿಕ ನಾಲ್ಕರಿಂದ ಐದು ಕೋಟಿ ರೂಪಾಯಿಗಳಾಗುತ್ತವೆ. ಈ ದೇವಾಲಯದಲ್ಲಿ ಮೂರು ಪ್ರಮುಖ ಬುರುಜುಗಳಿದ್ದು ಇದರ ಎರಡು ಬುರುಜುಗಳನ್ನು ಚಿನ್ನದ ಲೇಪನದಿಂದ ಅಲಂಕರಿಸಲಾಗಿದೆ. ಈ ಸ್ಥಿರಾಸ್ತಿಗಳ ಮೊತ್ತ ಎಷ್ಟು ಎಂಬುದನ್ನು ದೇವಾಲಯದ ಆಡಳಿತ ವೃಂದ ಬಹಿರಂಗಪಡಿಸಿಲ್ಲ.

English summary

Most Richest temples of India, that have more money than our Billionaires

Temples are a beacon of hope for devotees who visit them. With each prayer comes an offering that makes the god 'rich', and the temple richer than ever.Take a look at these Temples Property
X
Desktop Bottom Promotion