Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಜುಲೈ 3ಕ್ಕೆ ಆಷಾಢ ಗುರು ಪೂರ್ಣಿಮಾ: ಈ ದಿನ ನಿಮ್ಮ ರಾಶಿ ಪ್ರಕಾರ ಹೀಗೆ ಮಾಡಿದರೆ ತುಂಬಾ ಒಳ್ಳೆಯದು
ಜುಲೈ 3ಕ್ಕೆ ಆಷಾಢ ಗುರು ಪೂರ್ಣಿಮಾ, ಈ ದಿನ ಧಾರ್ಮಿಕ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ನಮ್ಮಲ್ಲರ ಜೀವನದಲ್ಲಿ ಗುರುವಿಗೆ ತುಂಬಾನೇ ಮಹತ್ವದ ಸ್ಥಾನವಿರುತ್ತದೆ. ಬರೀ ವಿದ್ಯೆ ಕಲಿಸಿದವರಷ್ಟೇ ಗುರುವಲ್ಲ, ನಮಗೆ ಬದುಕು ಕಲಿಸಿದವರೂ ಗುರುವಾಗುತ್ತಾರೆ. ವೈದಿಕ ಶಾಸ್ತ್ರ ಪ್ರಕಾರ ಈ ದಿನ ನಿಮ್ಮ ರಾಶಿಪ್ರಕಾರ ಈ ಪರಿಹಾರ ಮಾಡಿದರೆ ತುಂಬಾ ಒಳ್ಳೆಯದು:

ಮೇಷ ರಾಶಿ
ಈ ದಿನ ನೀವು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದು ಬಡವರಿಗೆ ಹಳದಿ ವಸ್ತ್ರ ಅಥವಾ ಸಿಹಿತಿಂಡಿಗಳನ್ನು ದಾನ ಮಾಡಿ ನಂತರ ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ.
ವೃಷಭ ರಾಶಿ
ಈ ದಿನ ನೀವು ನಿಮ್ಮ ಗುರುಗಳ ಆಶೀರ್ವಾದ ಪಡೆಯಬೇಕು ಹಾಗೂ ಶ್ರೀವಿಷ್ಣುವಿನ ಪೂಜೆ ಮಾಡಿ. . ಭಗವದ್ಗೀತೆ ಅಥವಾ ಇತರ ಆಧ್ಯಾತ್ಮಿಕ ಗ್ರಂಥಗಳನ್ನು ಓದಿ. ನಿರ್ಗತಿಕರಿಗೆ ಆಹಾರವನ್ನು ದಾನ ಮಾಡಿ.
ಮಿಥುನ ರಾಶಿ
ಗುರು ಪೂರ್ಣಿಮಾ ದಿನ ನಿಮ್ಮ ಗುರುವಿಗೆ ನಮಸ್ಕರಿಸಿ, ಗುರು ಮಂತ್ರವನ್ನು ಧ್ಯಾನಿಸಿ. ಈ ದಿನ ನಿಮ್ಮ ಗುರುಗಳಿಗೆ ಉಡುಗೊರೆಯಾಗಿ ನೀಡಿ.
ಕರ್ಕ ರಾಶಿ
ಬೆಳಗ್ಗೆ ದೇವಾಲಯಕ್ಕೆ ಹೋಗಿ ಬಂದು ಗುರುವಿಗೆ ನಮಸ್ಕರಿಸಿ. ಈ ದಿನವೂ ವಿಷ್ಣು ದೇವರನ್ನು ಪೂಜಿಸಿದರೆ ನಿಮಗೆ ತುಂಬಾ ಒಳ್ಳೆಯದು. ಗುರು ಮಂತ್ರ ಪಠಿಸಿ.
ಸಿಂಹ ರಾಶಿ
ಗುರುವಿಗೆ ವಂದಿಸಿ ನಂತರ ಬಡ ಮಕ್ಕಳಿಗೆ ನಿಮ್ಮಿಂದಾಗುವ ಸಹಾಯ ಮಾಡಿ. ಈ ದಿನ ಹೊಸ ವಿಷಯ ಕಲಿಯಲು ಪ್ರಾರಂಭಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯರು ನಿಮ್ಮ ಗುರುವಿಗೆ ವಂದಿಸಿ, ರಾತ್ರಿಯ ಸಮಯದಲ್ಲಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದರೆ ಒಳ್ಳೆಯದಾಗುತ್ತದೆ.
ತುಲಾ ರಾಶಿ
ಈ ದಿನ ನೀವು ಗುರುವಿಗೆ ವಂದಿಸಿ ನಂತರ ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆ ಸಮಯ ಕಳೆದರೆ, ನೀವು ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ. ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆಯಿರಿ.
ವೃಶ್ಚಿಕ ರಾಶಿ
ಈ ದಿನ ಗುರು ಮಂತ್ರವನ್ನು ಪಠಿಸಿ, ಬಡವರಿಗೆ ಆಹಾರ ನೀಡಿ ಅಥವಾ ವಸ್ತ್ರದಾನ ಮಾಡಿ. ಗುರುಗಳ ಆಶೀರ್ವಾದ ಪಡೆದು ಅವರ ಸೇವೆ ಮಾಡಿ. ಗುರುವಿಗೆ ಪ್ರಿಯವಾದದ್ದನ್ನು ಉಡುಗೊರೆಯಾಗಿ ನೀಡಿ.
ಧನು ರಾಶಿ
ಈ ದಿನ ದೇವಾಲಯಕ್ಕೆ ಭೇಟಿ ನೀಡಿ ಬಂದು , ನಿಮಗೆ ಇಷ್ಟವಾದ ವಿಷಯವನ್ನು ಓದಿ. ಗುರುವಿನ ಧ್ಯಾನ ಮಾಡುತ್ತಾ ಬಡವರಿಗೆ ಸಹಾಯ ಮಾಡಿ.
ಮಕರ ರಾಶಿ
ಈ ದಿನ ಗುರು ಮಂತ್ರವನ್ನು ಪಠಿಸಿ, ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿಸಿ, ರಾತ್ರಿ ಚಂದ್ರನಿಗೆ ಆರ್ಘ್ಯ ಅರ್ಪಿಸಿ.
ಕುಂಭ ರಾಶಿ
ಈ ದಿನ ನೀವು ಸತ್ಯವನ್ನು ಅನುಸರಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಗುರುವಿನ ಆಶೀರ್ವಾದ ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಮೀನ ರಾಶಿ
ಈ ದಿನ ನಿಮ್ಮ ಇಷ್ಟ ದೇವರಿಗೆ ಪೂಜೆ ಮಾಡಿ, ಗುರು ಮಂತ್ರ ಪಠಿಸಿ. ಪ್ರಕೃತಿಯೊಂದಿಗೆ ಸಮಯ ಕಳೆಯಿರಿ.
ಗುರುದೋಷ ನಿವಾರಣೆಗೆ ಪರಿಹಾರಗಳು
* ಗುರು ಪೂರ್ಣಿಮೆಯ ದಿನದಂದು ಭಗವಾನ್ ವಿಷ್ಣುವನ್ನು ನಿಮ್ಮ ಗುರುವೆಂದು ಪರಿಗಣಿಸಿ ಪೂಜಿಸಬಹುದು. ಇದರಿಂದ ಜಾತಕದಲ್ಲಿ ಗುರುದೋಷ ನಿವಾರಣೆಯಾಗುತ್ತದೆ
* ಜಾತಕದಲ್ಲಿ ಗುರು ಗ್ರಹವನ್ನು ಬಲಪಡಿಸಲು ಪ್ರತಿ ಗುರುವಾರ 'ಓಂ ಬೃಹಸ್ಪತಯೇ ನಮಃ' ಮಂತ್ರವನ್ನು ಪಠಿಸಿ. ನೀವು ಅದನ್ನು ಗುರು ಪೂರ್ಣಿಮೆಯಿಂದ ಪ್ರಾರಂಭಿಸಬಹುದು.
* ಜಾತಕದಲ್ಲಿ ಗುರುದೋಷ ಕಡಿಮೆಯಾಗಲು ಮತ್ತು ಅದೃಷ್ಟವನ್ನು ತರಲು ಗುರು ಪೂರ್ಣಿಮೆಯ ಶುಭ ಸಮಯದಲ್ಲಿ ಮನೆಯಲ್ಲಿ ಗುರು ಯಂತ್ರವನ್ನು ಅರ್ಚಕರಿಂದ ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜಿಸಿ.
ವ್ಯಾಪಾರ ಅಥವಾ ವ್ಯಾಪಾರದಲ್ಲಿ ನಿರಂತರ ನಷ್ಟ ಉಂಟಾಗುತ್ತಿದ್ದರೆ ಆಷಾಢ ಗುರು ಪೂರ್ಣಿಮೆಯ ದಿನದಂದು ಅಗತ್ಯವಿರುವವರು ಅಥವಾ ಬಡವರಿಗೆ ಹಳದಿ ಬಣ್ಣದ ಧಾನ್ಯಗಳು, ಹಳದಿ ಬಟ್ಟೆಗಳು ಅಥವಾ ಹಳದಿ ಬಣ್ಣದ ಸಿಹಿತಿಂಡಿಗಳನ್ನು ದಾನ ಮಾಡಿ.
* ವಿದ್ಯಾರ್ಥಿಗಳು ಈ ದಿನದಂದು ಗೀತಾ ಪಠಣವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.



Click it and Unblock the Notifications