Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಣಿಕಟ್ಟಿಗೆ ದಾರ ಕಟ್ಟುವುದೇಕೆ ಗೊತ್ತಾ? ಅವಿವಾಹಿತರು ಯಾವ ದಾರ ಕಟ್ಟಬೇಕು ನೋಡಿ.!
ಹಿಂದೂ ಧರ್ಮ ಪಾಲಿಸುವ ಹಲವರು ತಮ್ಮ ಕೈಗೆ ದಾರಗಳ ಕಟ್ಟಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಮಣಿಕಟ್ಟಿನ ಮೇಲೆ ಕೆಂಪು, ಹಳದಿ, ಕಪ್ಪು ಮತ್ತು ಕಿತ್ತಳೆ ಬಣ್ಣದ ದಾರವನ್ನು ಕಟ್ಟಿಕೊಂಡಿರುವುದನ್ನು ಕಂಡಿರುತ್ತೇವೆ. ಈ ಪವಿತ್ರ ದಾರವನ್ನು ಕಲಾವ ಅಥವಾ ಮೌಲಿ ಎಂದು ಕರೆಯುತ್ತಾರೆ. ಮಣಿಕಟ್ಟಿನ ಸುತ್ತ ದಾರವನ್ನು ಕಟ್ಟುವುದನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪೂಜೆ, ವ್ರತ, ನಾಮ ಅಥವಾ ಇತರ ಧಾರ್ಮಿಕ ಸಮಾರಂಭಗಳ ಆರಂಭಕ್ಕೂ ಮೊದಲು ಮಣಿಕಟ್ಟಿನ ಸುತ್ತಲೂ ದಾರವನ್ನು ಕಟ್ಟಲಾಗುತ್ತದೆ.
ಇದರ ಮಹತ್ವ ಅಪಾರವಾದದ್ದು. ಇವುಗಳನ್ನು ಕಟ್ಟಿಕೊಳ್ಳುವುದರಿಂದ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಲಕ್ಷ್ಮಿ, ಪಾರ್ವತಿ, ಸರಸ್ವತಿಯರ ಆಶೀರ್ವಾದಗಳು ಆಕರ್ಷಿತವಾಗುತ್ತವೆ ಎನ್ನಲಾಗುತ್ತದೆ. ಇದನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಉಂಟಾಗುವ ಉಪಯೋಗವೇನು? ಇದರಿಂದ ಲಾಭವಿದ್ಯಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.

ಪುರಾಣಗಳು ಏನು ಹೇಳುತ್ತವೆ
ವಿಷ್ಣುವಿನ ಅವತಾರ ಎನಿಸಿಕೊಂಡ ವಾಮನನು ಬಲಿ ರಾಜನ ಕೈಗೆ (ಮಣಿಕಟ್ಟಿನ ಮೇಲೆ) ಈ ದಾರವನ್ನು ಕಟ್ಟಿದ್ದನು ಎನ್ನಲಾಗುತ್ತದೆ. ಇದರಿಂದ ಆತ ಸಾವನ್ನೇ ಗೆಲ್ಲುವ ಶಕ್ತಿ ಪಡೆದಿದ್ದ ಎಂದು ನಂಬಲಾಗಿದೆ. ಹೀಗಾಗಿ ಮಣಿಕಟ್ಟಿಗೆ ದಾರ ಕಟ್ಟುವುದರಿಂದ ಆತ ಶಕ್ತಿಯುತನಾಗುತ್ತಾನೆ ಎಂದು ನಂಬಲಾಗಿದೆ.
ಯಾವ ಬಣ್ಣದ ದಾರ ಶ್ರೇಷ್ಠ
ಮಣಿಕಟ್ಟಿಗೆ ಯಾವ ಬಣ್ಣದ ದಾರವನ್ನು ಕಟ್ಟಬೇಕು ಎಂಬುದು ಹಲವರಿಗೆ ಗೊಂದಲವಾಗಿರುತ್ತದೆ. ಕಪ್ಪು ದಾರಕ್ಕಿಂತಲೂ ಹಳದಿ ಮತ್ತು ಕೆಂಪು ದಾರಗಳನ್ನು ಮಣಿಕಟ್ಟಿಗೆ ಕಟ್ಟಬೇಕಂತೆ. ಕಪ್ಪು ದಾರಗಳನ್ನು ಕೈ ಬದಲು ಬಲಗಾಲಿಗೆ ಕಟ್ಟುವುದು ಉತ್ತಮ ಎಂದು ತಿಳಿಸಲಾಗಿದೆ.
ಕೆಟ್ಟ ದೃಷ್ಟಿಯಿಂದ ರಕ್ಷಣೆ
ಕೈಗೆ ದಾರ ಕಟ್ಟುವುದರಿಂದಾಗಿ ಕೆಟ್ಟದೃಷ್ಟಿ ದೇಹದ ಮೇಲೆ ಬೀಳುವುದಿಲ್ಲ ಎಂದು ನಂಬಲಾಗಿದೆ. ನಮ್ಮಲ್ಲಿರುವ ನಕಾರಾತ್ಮಕತೆ ದೂರಾಗಿ ಉತ್ತಮ ಭಾವನೆ ಬೆಳೆಯುತ್ತದೆ ಎಂದು ನಂಬಲಾಗಿದೆ. ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ದುಷ್ಟ ಕಣ್ಣುಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.ಇದು ನಿಮ್ಮ ದಾರಿಯಲ್ಲಿ ಬರುವ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ.ಇದು ಮಾಟಮಂತ್ರದ ದುಷ್ಪರಿಣಾಮಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯದಲ್ಲಿ ಇದರ ಮಹತ್ವ ಏನಿದೆ
ಕೈಗೆ ದಾರ ಕಟ್ಟುವ ಕುರಿತು ಜ್ಯೋತಿಷ್ಯಶಾಸ್ತ್ರವು ವಿವರವಾಗಿ ತಿಳಿಸಿದೆ. ಇದರಲ್ಲಿ ಮಣಿಕಟ್ಟಿಗೆ ದಾರ ಕಟ್ಟುವುದು ನಮ್ಮಲ್ಲಿ ಆಧ್ಯಾತ್ಮದೆಡೆಗೆ ಸೆಳೆಯುತ್ತದೆ. ಅಲ್ಲದೆ ನಮ್ಮ ರಾಶಿ ಫಲದಲ್ಲಿರುವ ಕೆಡುಕುಗಳು ನಮ್ಮ ಮೇಲೆ ಪ್ರಭಾವ ಬೀರದಂತೆ ತಡೆಯುತ್ತವೆ. ಅಲ್ಲದೆ ನೀವು ಕಾಲಿನ ಗಾಯದಿಂದ ಬಳಲುತ್ತಿದ್ದರೆ, ಕಪ್ಪು ದಾರವನ್ನು ಧರಿಸುವುದು ಗುಣಪಡಿಸುವ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ.
ಯಾವ ಕೈಗೆ ದಾರ ಕಟ್ಟಬೇಕು?
ಮಣಿಕಟ್ಟಿಗೆ ದಾರ ಕಟ್ಟುವುದರಲ್ಲೂ ನಿಯಮಗಳಿವೆ. ಯಾರು ಬೇಕಾದರೂ ಯಾವ ದಾರವನ್ನಾದರೂ ಕಟ್ಟುವಂತಿಲ್ಲ. ಪುರಾಣಗಳ ಪ್ರಕಾರ, ಪುರುಷರು ಅದರಲ್ಲೂ ಅವಿವಾಹಿತರು ಬಲಗೈಗೆ ದಾರವನ್ನು ಕಟ್ಟಬೇಕು, ವಿವಾಹಿತ ಮಹಿಳೆಯರು ತಮ್ಮ ಎಡಗೈಗೆ ದಾರವನ್ನು ಕಟ್ಟಬೇಕು ಎಂದು ತಿಳಿಸಲಾಗಿದೆ. ಇನ್ನು ದೇವರ ಪೂರ್ತಿ ಬಳಿ ಈ ದಾರವನ್ನು ಇಟ್ಟು ಪೂಜೆ ಮಾಡಿದ ಬಳಿಕ ಕಟ್ಟಿಕೊಂಡರೆ ಒಳಿತಾಗಲಿದೆ ಎಂಬ ಮಾತೂ ಸಹ ಇದೆ. ಅಲ್ಲದೆ ಕೈಗೆ ಒಮ್ಮೆ ದಾರವನ್ನು ಕಟ್ಟಿದ ಬಳಿಕ ಮಂಗಳವಾರ ಹಾಗೂ ಶನಿವಾರದಂದು ಮಾತ್ರ ಅದನ್ನು ತೆಗೆಯುವ ಅಥವಾ ಬದಲಾಯಿಸಬೇಕು ಎಂದು ಹೇಳಲಾಗಿದೆ.
ಧಾರ್ಮಿಕ ಗ್ರಂಥಗಳ ಪ್ರಕಾರ, ಕೈಯಲ್ಲಿ ದಾರ ಕಟ್ಟುವುದರಿಂದ ಮೂರು ಮಹಾದೇವಿಗಳ ಆಶೀರ್ವಾದವನ್ನು ಪಡೆಯುತ್ತಾರೆ. ಸಂಪತ್ತು, ಜ್ಞಾನ, ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಮೂರು ದೇವತೆಗಳಾದ ಲಕ್ಷ್ಮಿ, ಸರಸ್ವತಿ ಮತ್ತು ಮಹಾಕಾಳಿಯಿಂದ ಪಡೆಯುತ್ತಾರೆ. ಈ ದಾರಗಳು ಅವರಿಗೆ ಅದೃಷ್ಟ ಒಲಿದು ತರಲಿವೆ. ಅಲ್ಲದೆ ಯಾವ ಕೆಲಸ ಮಾಡುವಾಗಲೂ ಈ ದಾರವು ಯಶಸ್ಸಿನತ್ತ ಕೊಂಡೊಯ್ಯಲಿದೆ ಎಂದು ನಂಬಲಾಗಿದೆ.



Click it and Unblock the Notifications
