Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
2024 ವರ್ಷದ ಮೊದಲ ಹುಣ್ಣಿಮೆ ದ್ವಾದಶಗಳ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
ಈ ವರ್ಷದ ಮೊದಲು ಹುಣ್ಣಿಮೆ ಜನವರಿ 25ಕ್ಕೆ ಬಂದಿದೆ. ಈ ದಿನ ಕರ್ಕ ರಾಶಿಯಲ್ಲಿ ಹುಣ್ಣಿಮೆಯಾಗಲಿದೆ. ಕರ್ಕ ರಾಶಿಯ ಅಧಿಪತಿ ಚಂದ್ರ, ಅದೇ ರಾಶಿಯಲ್ಲಿ ಹುಣ್ಣಮೆ ಸಂಭವಿಸುತ್ತಿರುತ್ತಿರುವುದರಿಂದ ಈ ಅವಧಿಯಲ್ಲಿ ಕರ್ಕ ರಾಶಿಯವರು ತುಂಬಾನೇ ಖುಷಿಯಾಗಿರುತ್ತಾರೆ.
ವೈದಿಕಶಾಸ್ತ್ರದ ಪ್ರಕಾರ ಈ ಹುಣ್ಣಿಮೆ ಈ ರಾಶಿಯವರಿಗೆ ಮತ್ತಷ್ಟು ಖುಷಿ ನೀಡಲಿದೆ ನೋಡಿ:

ಮೇಷ ರಾಶಿ
ಈ ಅವಧಿಯಲ್ಲಿ ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ದೊರೆಯಲಿದೆ, ಅಲ್ಲದೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗುವುದು. ರೊಮ್ಯಾಂಟಿಕ್ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತೀರಿ.
ವೃಷಭ ರಾಶಿ
ನಿಮ್ಮ ಕೆಲ ವೈಯಕ್ತಿಕ ವಿಷಯಗಳು ಹೊರಬರಬಹುದು, ಮನೆಯ ವಿನ್ಯಾಸ ಬದಲಾಯಿಸಲು ಇಚ್ಚಿಸುತ್ತೀರಿ, ಮನೆ ಮತ್ತಷ್ಟು ಸುಂದರವಾಗಿ ಕಾಣಲಿದೆ.
ಮಿಥುನ ರಾಶಿ
ನೀವು ನಿಮ್ಮ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ, ನಿಮ್ಮ ಬಗ್ಗೆಯೂ ಆಲೋಚನೆ ಪಡುತ್ತೀರಿ.
ಕರ್ಕ ರಾಶಿ
ನೀವು ಖುಷಿಯಾಗಿ ಇರುವಿರಿ, ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ, ಆದರೆ ದುಬಾರಿ ಖರ್ಚು ಮಾಡಲು ಹೋಗಬೇಡಿ.
ಸಿಂಹ ರಾಶಿ
ನೀವು ನಿಮ್ಮ ಕೆಲಸ ಕಾರ್ಯಗಳತ್ತ ತುಂಬಾನೇ ಗಮನಹರಿಸುತ್ತೀರಿ. ನೀವು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತೀರಿ.
ಕನ್ಯಾ ರಾಶಿ
ನಿಮ್ಮ ಕೆಲಸ ಕಾರ್ಯದಲ್ಲಿ ತುಂಬಾನೇ ಗಮನಹರಿಸುತ್ತೀರಿ. ಯಾವುದೇ ವಿಷಯದ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಡಿ, ಎಲ್ಲವೂ ಸರಿಯಾಗಲಿದೆ.
ತುಲಾ ರಾಶಿ
ನಿಮ್ಮ ಕೆಲಸಗಳಿಗೆ ನಿಮ್ಮ ಮನೆಯವರಿಂದ ಬೆಂಬಲ ಸಿಗಲಿದೆ. ನೀವು ನಿಮ್ಮ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡಬೇಕು.
ವೃಶ್ಚಿಕ ರಾಶಿ
ಹೊಸ ವೃತ್ತಿ ಗ್ಗೆ ಗಮನಹರಿಸುತ್ತೀರಿ, ವೃತ್ತಿ ಬದುಕಿನಲ್ಲಿ ಹೊಸ ಎತ್ತರ ಹೋಗಲು ಸಾಧ್ಯವಾಗುವುದು. ನಿಮ್ಮ ಕೆಲಸಗಳಿಗೆ ಮೆಚ್ಚುಗೆ ದೊರೆಯಲಿದೆ.
ಧನು ರಾಶಿ
ನಿಮ್ಮಲ್ಲಿ ಧಾರ್ಮಿಕ ಭಾವನೆಗಳು ಹೆಚ್ಚಾಗಲಿದೆ. ನೀವು ಹೊಸ ಸಾಹಸ ತೆಗೆದುಕೊಳ್ಳಲು ಹಿಂದೇಟು ಹಾಕಬೇಡಿ, ಹೊಸ ಹೆಜ್ಜೆಯಲ್ಲಿ ಯಶಸ್ಸು ಸಿಗಲಿದೆ.
ಮಕರ ರಾಶಿ
ನೀವು ನಿಮ್ಮ ಹಣಕಾಸಿನ ಸಮಸ್ಯೆಗೆ ಕಾರಣವಾಗಿರುವ ವಿಷಯವನ್ನು ಅವಲೋಕಿಸುತ್ತೀರಿ. ನೀವು ನಿಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತೀರಿ.
ಕುಂಭ ರಾಶಿ
ನಿಮ್ಮ ರೊಮ್ಯಾಂಟಿಕ್ ಜೀವನ ಚೆನ್ನಾಗಿರಲಿದೆ. ನಿಮ್ಮ ಬಯಕೆಗಳನ್ನು ವ್ಯಕ್ತಪಡಿಸಲು ಈ ಸಮಯ ಸರಿಯಾಗಿದೆ.
ಮೀನ ರಾಶಿ
ನಿಮ್ ಜವಾಬ್ದಾರಿಗಳು ಹೆಚ್ಚಾಗಲಿದೆ. ನಿಮ್ಮ ಕೆಲಸಗಳಿಗೆ ತುಂಬಾ ಮೆಚ್ಚುಗೆ ಸಿಗಲಿದೆ. ಈ ಹುಣ್ಣಿಮೆ ನಿಮಗೆ ಖುಷಿ ನೀಡಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications