Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಾಲಯದೊಳಗೆ ಚಪ್ಪಲಿ ಹಾಕಬಾರದು ಎನ್ನುವುದಕ್ಕೆ ವೈಜ್ಞಾನಿಕ ಕಾರಣಗಳಿವು
ಹಿಂದೂ ಸಂಪ್ರದಾಯಗಳಲ್ಲಿ ಮಾತ್ರವಲ್ಲ, ಇತರ ಜಾತಿ ಧರ್ಮಗಳಲ್ಲಿಯೂ ಕೂಡ ಕೆಲವೊಂದಿಷ್ಟು ಆಚಾರ ಪದ್ಧತಿಗಳು ಇವೆ ಅವುಗಳನ್ನ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹಿಂದೂ ಆಚಾರ ಸಂಪ್ರದಾಯ ವಿಚಾರಕ್ಕೆ ಬಂದರೆ ನಾವು ಪ್ರತಿ ಒಂದು ವಿಷಯದಲ್ಲಿಯೂ ಕೂಡ ಒಂದೊಂದು ಪದ್ದತಿಯನ್ನು ನೆಚ್ಚಿಕೊಂಡು ಬಂದಿದ್ದೇವೆ.
ಅದೆಷ್ಟೋ ಬಾರಿ ಹಿರಿಯರು ಮಾಡಿರುವ ಸಂಪ್ರದಾಯಗಳನ್ನ ಪ್ರಶ್ನೆ ಮಾಡದೆ ಹಾಗೆ ಮುಂದುವರಿಸಿಕೊಂಡು ಬಂದಿದ್ದೇವೆ ಇದಕ್ಕೆ ಮುಖ್ಯ ಕಾರಣ ಹಿರಿಯರು ಯಾವುದೇ ಪದ್ಧತಿ ಮಾಡಿಟ್ಟರು ಕೂಡ ಅದರ ಹಿಂದೆ ಕೇವಲ ದೈವಿಕ ಕಾರಣ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳು ಕೂಡ ಅಡಕವಾಗಿರುತ್ತದೆ.

ದೇವಸ್ಥಾನಗಳಲ್ಲಿ ಪಾದರಕ್ಷೆ ನಿಷಿದ್ಧ!
ಪ್ರತಿ ದೇವಸ್ಥಾನ ಪ್ರವೇಶಿಸುವಾಗಲು ಪಾದರಕ್ಷೆಯನ್ನು ತೆಗೆದು ಒಳಗೆ ಪ್ರವೇಶಿಸಿ ಎನ್ನುವ ಬೋರ್ಡ್ ಇರುವುದಿಲ್ಲ. ಆದರೂ ದೇವಾಲಯ ಎನ್ನುವ ವಿಷಯಕ್ಕೆ ಬಂದರೆ ಸಹಜವಾಗಿಯೇ ಪ್ರತಿಯೊಬ್ಬ ವ್ಯಕ್ತಿ ಪಾದರಕ್ಷೆಯನ್ನು ತೆಗೆದು ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನದ ಒಳಗೆ ಪ್ರವೇಶಿಸುತ್ತಾನೆ. ಇದು ಕೇವಲ ಒಂದು ಆಚರಣೆಯಲ್ಲ ಇದರ ಹಿಂದೆ ಸಾಕಷ್ಟು ವೈಜ್ಞಾನಿಕ ಕಾರಣಗಳು ಕೂಡ ಇವೆ. ಹಾಗಾದ್ರೆ ದೇವಸ್ಥಾನಗಳಿಗೆ ಪ್ರವೇಶಿಸುವ ಮೊದಲು ನಾವು ಕಾಲಿಗೆ ಧರಿಸಿದ ಪಾದರಕ್ಷೆಯನ್ನು ಯಾಕೆ ತೆಗೆದಿಡಬೇಕು ಎನ್ನುವುದಕ್ಕೆ ಪ್ರಮುಖ ಕಾರಣಗಳನ್ನು ನೋಡೋಣ.
ನೈರ್ಮಲ್ಯದ ವಿಚಾರ!
ನಾವು ನಮ್ಮ ಕಾಲುಗಳಿಗೆ ಪಾದರಕ್ಷೆಯನ್ನ ಧರಿಸುವುದು ಯಾಕೆ? ರಸ್ತೆಯಲ್ಲಿ ಇರುವ ಕೊಳಕು, ಧೂಳು, ಕಸ ಯಾವುದು ನಮ್ಮ ಕಾಲಿಗೆ ಅಂಟುಕೊಳ್ಳಬಾರದು ಎನ್ನುವ ಕಾರಣಕ್ಕೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಪಾದರಕ್ಷೆ ಧರಿಸಿ ಹೋಗುತ್ತೇವೆ ಹಾಗೆಯೇ ಮನೆಗೆ ಪ್ರವೇಶಿಸುವುದಕ್ಕೂ ಮೊದಲು ಪಾದರಕ್ಷೆಯನ್ನು ತೆಗೆದು ಮನೆಯೊಳಗೆ ಕಾಲಿಡುತ್ತೇವೆ. ಇದು ಕೇವಲ ಒಂದು ಪದ್ಧತಿ ಅಥವಾ ಮೂಢ ಆಚರಣೆ ಅಲ್ಲ ನಾವು ಶುದ್ಧವಾಗಿರಬೇಕು ಹಾಗೂ ಹೊರಗಿನ ವೈರಸ್ ಗಳನ್ನು ಮನೆ ಒಳಗೆ ತರಬಾರದು ಎನ್ನುವ ನೈರ್ಮಲ್ಯೀಕರಣದ ಕಾರಣಕ್ಕೆ ಪಾದರಕ್ಷೆಗಳನ್ನು ಮನೆಯಿಂದ ಹೊರಗೆ ಬಿಡುತ್ತೇವೆ. ಇದರಿಂದಾಗಿ ವೈರಸ್ ಮನೆಯೊಳಗೆ ಬರದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬಹುದು.
ಈ ಕಾರಣಕ್ಕೆ ದೇವಸ್ಥಾನಕ್ಕೂ ಕೂಡ ಚಪ್ಪಲಿ ಧರಿಸಿ ಪ್ರವೇಶಿಸಬಾರದು. ನಾವು ಹೊರಗಿನ ಹೊಲಸು ಅಥವಾ ಧೂಳು ಮೆಟ್ಟಿಕೊಂಡು ಬಂದು ದೇವಾಲಯದ ಒಳಗೆ ಗಲೀಜು ಮಾಡಬಾರದು ಇದು ದೇವಸ್ಥಾನದ ಒಳಗೆ ಪಾದರಕ್ಷೆ ಹಾಕಿ ಪ್ರವೇಶಿಸಬಾರದು ಎನ್ನುವುದಕ್ಕೆ ಒಂದು ಕಾರಣವಾಗಿದೆ.
ಸಕಾರಾತ್ಮಕ ಎನರ್ಜಿ!
ದೇವಸ್ಥಾನದ ಒಳಗೆ ಸಕಾರಾತ್ಮಕ ಶಕ್ತಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಕೂಡ ಸಾಬೀತಾಗಿರುವ ವಿಚಾರ. ಹಾಗಾಗಿ ನಾವು ಪಾದರಕ್ಷೆಯನ್ನು ತೆಗೆದಿಟ್ಟು ದೇವಸ್ಥಾನಕ್ಕೆ ಪ್ರವೇಶಿಸಿದಾಗ ನಮ್ಮ ಕಾಲುಗಳ ಮೂಲಕ ದೇಹದ ಪ್ರತಿಯೊಂದು ಜೀವಕೋಶಕ್ಕೆ ದೇವಸ್ಥಾನದಲ್ಲಿ ಇರುವಂತಹ ಸಕಾರಾತ್ಮಕ ಎನರ್ಜಿ ಪ್ರವಹಿಸುತ್ತದೆ. ಇದರಿಂದ ನಮ್ಮಲ್ಲಿ ಇರುವಂತಹ ನಕಾರಾತ್ಮಕತೆ ಹೋಗಿ ಧನಾತ್ಮಕ ಅಂಶಗಳು ನಮ್ಮ ದೇಹವನ್ನು ಸೇರುತ್ತವೆ ಇದರಿಂದ ದೇಹ ಆರೋಗ್ಯಕರವಾಗಿ ಇರುವುದು ಮಾತ್ರವಲ್ಲದೆ ಮನಸ್ಸು ಕೂಡ ಆಹ್ಲಾದಕೊಳ್ಳುತ್ತದೆ.
ಮನಸ್ಸಿಗೆ ಶಾಂತಿ!
ನಾವು ಪಾದರಕ್ಷೆಗಳನ್ನ ದೇವಸ್ಥಾನದ ಹೊರಭಾಗದಲ್ಲಿ ತೆಗೆದಿಟ್ಟು ಒಳಗೆ ಪ್ರವೇಶಿಸುವುದಕ್ಕೂ ಮೊದಲು ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಂಡು ನಂತರ ದೇವಸ್ಥಾನದ ಒಳಗೆ ಹೋಗುತ್ತವೆ. ಸಾಮಾನ್ಯವಾಗಿ ದೇವಸ್ಥಾನದ ಒಳಗೆ ಹೋಗುವಾಗ ಮೆಟ್ಟಿಲುಗಳ ಮೂಲಕ ಪ್ರವೇಶಿಸಬೇಕು. ಮೆಟ್ಟಿಲು ಹತ್ತುವಾಗ ಕೈಯಿಂದ ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುವ ಪದ್ಧತಿಯು ರೂಢಿಯಲ್ಲಿದೆ ಇದರಿಂದ ನಮ್ಮ ಕಾಲು ಹಾಗೂ ಕೈಗಳು ದೇವಸ್ಥಾನದ ಮೆಟ್ಟಿಲುಗಳನ್ನು ಸ್ಪರ್ಶಿಸುತ್ತವೆ. ಇದರಿಂದ ದೇವಸ್ಥಾನದಲ್ಲಿ ಇರುವಂತಹ ಎನರ್ಜಿ ನಮ್ಮ ದೇಹಕ್ಕೆ ರವಾನೆಯಾಗುತ್ತದೆ. ಹೀಗಾಗಿ ದೇಹದ ಶಕ್ತಿ ಹೆಚ್ಚಾಗುತ್ತದೆ. ಮೆಟ್ಟಿಲುಗಳಿಗೆ ತಲೆಯನ್ನು ಸ್ಪರ್ಶಿಸಿ ನಮಸ್ಕರಿಸುವುದರಿಂದ ಸಕಾರಾತ್ಮಕತೆ ನಮ್ಮ ಮೆದುಳಿನ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಹಾಗಾಗಿ ಒಂದು ದೇವಸ್ಥಾನಕ್ಕೆ ಪಾದರಕ್ಷೆ ತೆಗೆದಿಟ್ಟು ಹೋಗುವುದರಿಂದ ನಮ್ಮ ದೇಹ ಹಾಗೂ ಮನಸ್ಸು ಎರಡಕ್ಕೂ ಕೂಡ ಅತ್ಯದ್ಭುತವಾದ ಶಕ್ತಿ ರವಾನೆಯಾಗುತ್ತದೆ ಎನ್ನಬಹುದು.
ಅಹಿಂಸಾವಾದಿ ಹಿಂದು ತತ್ವ!
ದೇವಸ್ಥಾನಕ್ಕೆ ಪಾದರಕ್ಷೆಗಳನ್ನ ತೆಗೆದು ಪ್ರವೇಶಿಸಬೇಕು ಎನ್ನುವುದಕ್ಕೆ ಇನ್ನೊಂದು ಮುಖ್ಯ ಕಾರಣವೂ ಇದೆ. ಇದು ಬಹಳ ಹಿಂದಿನಿಂದಲೂ ಆಚರಣೆಯಲ್ಲಿ ಇರುವ ಪದ್ಧತಿ. ನೂರಾರು ವರ್ಷಗಳ ಹಿಂದೆ ಪಾದರಕ್ಷೆ ಎಂದರೆ ಅದನ್ನು ಬಹುತೇಕ ಚರ್ಮದಿಂದಲೇ ತಯಾರಿಸಲಾಗುತ್ತಿತ್ತು. ಹಿಂದುಗಳು ಅಹಿಂಸವಾದಿಗಳು. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಿಯನ್ನ ಹಿಂಸೆ ಮಾಡಿ ಕೊಂದು ಅದರಿಂದ ತಯಾರಿಸಿದ ಪಾದರಕ್ಷೆಯನ್ನು ಧರಿಸಿ ದೇವಾಲಯದ ಒಳಕ್ಕೆ ಪ್ರವೇಶಿಸುವುದು ನಿಶಿದ್ಧವಾಗಿತ್ತು. ಇದು ಹಿಂದುಗಳ ಅಹಿಂಸವಾದದ ತತ್ವಕ್ಕೆ ವಿರುದ್ಧವಾಗಿತ್ತು. ಈ ಕಾರಣದಿಂದಾಗಿ ಯಾವುದೇ ಚರ್ಮದ ಚಪ್ಪಲಿ ಅಥವಾ ಪಾದರಕ್ಷೆ ಧರಿಸಿ ದೇವಾಲಯದ ಒಳಕ್ಕೆ ಪ್ರವೇಶಿಸಬಾರದು ಎನ್ನುವ ನಿಯಮವನ್ನು ಮಾಡಲಾಗಿದೆ. ಇದೇ ಕಾರಣಕ್ಕೆ ಈಗಲೂ ಕೂಡ ಈ ಒಂದು ಪದ್ಧತಿಯನ್ನು ನಾವು ಅನುಸರಿಸಿಕೊಂಡು ಬಂದಿದ್ದೇವೆ.
ದೇವಾಲಯಗಳಲ್ಲಿ ಚಪ್ಪಲಿ ತೆಗೆದು ಪ್ರವೇಶಿಸಬೇಕು ಎನ್ನುವುದು ಕೇವಲ ಮೂಢನಂಬಿಕೆ ಅಥವಾ ನಾವು ಬ್ಲೈಂಡ್ ಆಗಿ ನಂಬಿಕೊಂಡು ಬಂದಿರುವಂತಹ ಆಚರಣೆ ಅಲ್ಲ. ಇದರ ಹಿಂದೆ ಸಾಕಷ್ಟು ವೈಜ್ಞಾನಿಕ ಕಾರಣಗಳು ಕೂಡ ಇವೆ. ಇದನ್ನು ವೈದ್ಯರು ಹಾಗೂ ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಅಥವಾ ದೇವಾಲಯಗಳಿಗೆ ಹಾಗೂ ಪುಣ್ಯಕ್ಷೇತ್ರಗಳಿಗೆ ಪ್ರವೇಶಿಸುವ ಮುನ್ನ ಪಾದರಕ್ಷೆಯನ್ನು ತೆಗೆದು ಇಡಬೇಕು.
ಇದು ಕೇವಲ ಭಾರತೀಯರ ಆಚರಣೆಯಲ್ಲ!
ಅಂದ ಹಾಗೆ ಪಾದರಕ್ಷೆಯನ್ನು ತೆಗೆದು ಪುಣ್ಯಕ್ಷೇತ್ರಕ್ಕೆ ಪ್ರವೇಶಿಸುವುದು ಕೇವಲ ಭಾರತೀಯರಲ್ಲಿ ಇರುವಂತಹ ಪದ್ಧತಿಯಲ್ಲ ವಿದೇಶಗಳಲ್ಲಿಯೂ ಕೂಡ ಈ ಪದ್ಧತಿ ಚಾಲನೆಯಲ್ಲಿ ಇದೆ. ದೇವಸ್ಥಾನಗಳಿಗೆ ಮಾತ್ರವಲ್ಲದೇ ಕೆಲವು ಚರ್ಚ್ ಮಸೀದಿ ಗಳ ಪ್ರವೇಶಕ್ಕೂ ಮುನ್ನ ಚಪ್ಪಲಿ ತೆಗೆದಿಟ್ಟು ಪ್ರವೇಶಿಸಲಾಗುತ್ತದೆ. ಜಪಾನೀಸ್ ಪದ್ಧತಿಯ ಪ್ರಕಾರ ಕೇವಲ ದೇವಾಲಯಗಳಿಗೆ ಮಾತ್ರವಲ್ಲದೆ ಇತರರ ಮನೆಗೆ ಹೋಗುವುದಿದ್ದರೂ ಕೂಡ ಮನೆ ಪ್ರವೇಶಿಸುವುದಕ್ಕೂ ಮೊದಲು ಚಪ್ಪಲಿಯನ್ನು ಹೊರಗಿಟ್ಟು ಹೋಗುವ ಅಭ್ಯಾಸ ಇಂದಿಗೂ ಚಾಲ್ತಿಯಲ್ಲಿದೆ.
ಒಟ್ಟಾರೆಯಾಗಿ ನಾವು ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ನಾವು ವಾಸಿಸುವ ವಾತಾವರಣವನ್ನು ಶುಚಿಯಾಗಿ ಇಡಬೇಕು ಎನ್ನುವುದಾದರೆ ದೇವಾಲಯಗಳಿಗೆ ಚಪ್ಪಲಿ ತೆಗೆದು ಪ್ರವೇಶಿಸುವುದರಲ್ಲಿ ಯಾವುದೇ ತಪ್ಪು ಇಲ್ಲ ಹಾಗೂ ಇದು ಕೇವಲ ಗೊಡ್ಡು ಆಚರಣೆಯು ಅಲ್ಲ.



Click it and Unblock the Notifications









