Latest Updates
-
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು!
ವಾಸ್ತು ಪ್ರಕಾರ ತುಳಸಿ ಗಿಡ ಎಲ್ಲಿರಬೇಕು..! ಮನೆಯಲ್ಲಿ ಈ ತಪ್ಪು ಮಾಡಬೇಡಿ
ನಮ್ಮ ಮನೆಯ ಮುಂದೆ ಏನಿಲ್ಲಾ ಅಂದರೂ ತುಳಸಿ ಗಿಡವೊಂದು ಇದ್ದೇ ಇರುತ್ತದೆ. ಹಿಂದೂ ಪುರಾಣದಲ್ಲಿ ತುಳಿಸಿ ಗಿಡಕ್ಕೆ ಇನ್ನಿಲ್ಲದ ಮಹತ್ವವಿದೆ. ಅದು ಔಷಧಿ ಗುಣದಿಂದಲೂ ಮತ್ತು ದೈವಿಕಾ ಶಕ್ತಿಯಿಂದಲೂ ಮನೆ ಮನೆಯಲ್ಲಿ ಪೂಜಿಸಲ್ಪಡುತ್ತಿದೆ. ಮನೆಯ ಮೊದಲ ದೇವರ ಕೋಣೆ ಅಂತಲೂ ತುಳಸಿ ಕಟ್ಟೆಯನ್ನು ಕರೆಯಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವೂ ಇದೆ.
ಸಾಮಾನ್ಯವಾಗಿ ಗಿಡಮೂಲಿಕೆಗಳ ರಾಣಿ ಎಂದು ಕರೆಯಲ್ಪಡುವ ತುಳಸಿ ಸಸ್ಯವು ಅನೇಕ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಹಿಂದೂಗಳು ಇದನ್ನು ಪವಿತ್ರವೆಂದು ಪರಿಗಣಿಸುವುದರಿಂದ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಸ್ಯವನ್ನು ಶೀತಗಳು, ಜ್ವರ ಮತ್ತು ಕೆಮ್ಮು ಸೇರಿದಂತೆ ವಿವಿಧ ಕಾಲೋಚಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ವಾಸ್ತು ಪ್ರಕಾರ, ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದಲ್ಲಿ ಸಾಮರಸ್ಯ ಮತ್ತು ಸಂತೋಷವನ್ನು ತರುತ್ತದೆ ಮತ್ತು ಆರ್ಥಿಕ ಸಂಬಂಧಿತ ಸಮಸ್ಯೆಗಳನ್ನು ದೂರವಿಡುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟುಕೊಂಡರೆ ನಿಮ್ಮ ಕುಟುಂಬಕ್ಕೆ ಏನೆಲ್ಲಾ ಪ್ರಯೋಜನಗಳನ್ನು ತರಬಹುದು. ಹಾಗಾದರೆ ಯಾವ ಸ್ಥಳದಲ್ಲಿ ತುಳಸಿ ಗಿಡ ನೆಡಬೇಕು.? ತುಳಸಿ ಗಿಡ ಇಡುವ ಮುನ್ನ ನೀವು ಅನುಸರಿಸಬೇಕಾದ ವಾಸ್ತು ಸಲಹೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಆರೋಗ್ಯಕರ ಮನೆ
ಈ ಸಸ್ಯವನ್ನು ಮನೆಯಲ್ಲಿ ಇಡುವುದರಿಂದ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ತುಳಸಿ ಗಿಡವು ಗಾಳಿಯಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೀರಿಕೊಳ್ಳುತ್ತದೆ ಮತ್ತು ಪರಿಸರವನ್ನು ತಾಜಾವಾಗಿಡುವ ಆಹ್ಲಾದಕರ ಪರಿಮಳವನ್ನು ಹೊರಸೂಸುತ್ತದೆ.
ನಕಾರಾತ್ಮಕ ಶಕ್ತಿಯನ್ನು ನಿರ್ಬಂಧಿಸುತ್ತದೆ. ತುಳಸಿಯು ಆಮ್ಲಜನಕದ ಮೂಲವಾಗಿದೆ. ಗಿಡ ಚಿಕ್ಕದಾಗಿದ್ದರೂ ಅದು ಹೊರಸೂಸುವ ಆಮ್ಲಜನಕದ ಪ್ರಮಾಣ ಹೆಚ್ಚಾಗಿರುತ್ತದೆ.
ತುಳಸಿ ಸಸ್ಯಗಳು, ಅವುಗಳ ಚಿಕಿತ್ಸಕ ಗುಣಲಕ್ಷಣಗಳೊಂದಿಗೆ, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಟ್ಟರೆ ನೆಗೆಟಿವ್ ಎನರ್ಜಿ ನಾಶವಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮನೆಯಲ್ಲಿನ ದುರದೃಷ್ಟವನ್ನು ನಿವಾರಿಸಲು ಮತ್ತು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಇದು ಅತ್ಯುತ್ತಮವಾದ ಗಿಡಮೂಲಿಕೆಯಾಗಿದೆ. ತುಳಸಿ ಗಿಡವು ಮನೆಗೆ ಅದೃಷ್ಟವನ್ನು ತರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವನ್ನು ಹೊಂದುವುದು ಕುಟುಂಬದ ಆರ್ಥಿಕ ಸ್ಥಿತಿಗೆ ಅನುಕೂಲಕರವಾಗಿದೆ.
ಕುಟುಂಬ ರಕ್ಷಕ
ಮನೆಯಲ್ಲಿ ತುಳಸಿ ಗಿಡವಿದ್ದರೆ ಅದು ಖಾನ ತೃಷ್ಟಿ ಮತ್ತು ಇತರ ವಾಮಾಚಾರಗಳಿಂದ ರಕ್ಷಿಸುವುದರಿಂದ ಕುಟುಂಬದ ರಕ್ಷಣೆಗೆ ಅನುಕೂಲವಾಗುತ್ತದೆ. ಇದು ಕುಟುಂಬ ಸದಸ್ಯರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಮತ್ತು ಪರಸ್ಪರ ಪ್ರೀತಿಸಲು ಪ್ರೋತ್ಸಾಹಿಸುತ್ತದೆ.
ತುಳಸಿ ಗಿಡವನ್ನು ಮನೆಯಲ್ಲಿ ಎಲ್ಲಿ ಇಡಬೇಕು?
ತುಳಸಿ ಗಿಡವನ್ನು ಇಡಲು ಉತ್ತಮವಾದ ದಿಕ್ಕು ಪೂರ್ವ, ಮತ್ತು ಇದನ್ನು ಉತ್ತರ ಅಥವಾ ಈಶಾನ್ಯದಲ್ಲಿ ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಬಳಿ ಇಡಬಹುದು. ಇನ್ನು ಮನೆಯ ಮುಂದೆ ನೇರವಾಗಿ ದ್ವಾರ ಬಾಗಿಲ ಮುಂದೆ ಕಟ್ಟೆ ಮಾಡಲಾಗುತ್ತದೆ. ಇದು ಸಹ ವಾಸ್ತು ಪ್ರಕಾರ ಹೇಳಲಾಗಿರುವ ಪದ್ಧತಿಯಾಗಿದೆ. ಇನ್ನು ಹಲವು ಮನೆಯ ಒಳಗೂ ತುಳಸಿ ಗಿಡವನ್ನು ಬೆಳೆಸುತ್ತಾರೆ.
ತುಳಸಿ ಗಿಡವನ್ನು ಈ ಜಾಗದಲ್ಲಿ ಇಡಬೇಡಿ
ಅಗ್ನಿ ಮೂಲೆಯಲ್ಲಿ ತುಳಸಿ ಗಿಡವನ್ನು ಇಡಲೇಬಾರದಂತೆ. ಹೀಗೆ ಇಡುವುದರಿಂದ ಮನೆಗೆ ಅಶುಭವಾಗಲಿದೆ. ಜೊತೆಗೆ ಒಂದೆರಡು ವಾರದಲ್ಲಿ ತುಳಸಿ ಗಿಡವು ಒಣಗಿ ಸಾಯಲಿದೆ. ಪೊರಕೆಗಳು, ಶೂಗಳು ಮತ್ತು ಕಸದ ತೊಟ್ಟಿಗಳನ್ನು ಸಸ್ಯದ ಬಳಿ ಇಡಬಾರದು ಇದು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಗಿಡದ ಸುತ್ತಲಿನ ಪರಿಸರ ಸ್ವಚ್ಛ ಮತ್ತು ಅಚ್ಚುಕಟ್ಟಾಗಿದೆ ಎಂದು ಖಚಿತಪಡಿಸಿಕೊಳ್ಳಿ.



Click it and Unblock the Notifications