Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಹೊಸ ವರ್ಷ ಅದೃಷ್ಟ ತರಲಿ ಎಂದು ಯಾವೆಲ್ಲಾ ದೇಶಗಳಲ್ಲಿ ಏನೆಲ್ಲಾ ಆಚರಣೆಗಳಿವೆ ಗೊತ್ತಾ?
ಹೊಸ ವರ್ಷ ನಮ್ಮ ಜೀವನದಲ್ಲಿ ಹೊಸತನವನ್ನು ತುಂಬಲಿ ಎಂದು ಬಯಸುತ್ತೇವೆ, ಕಳೆದ ವರ್ಷದ ಖುಷಿ ಮತ್ತಷ್ಟು ಹೆಚ್ಚಾಗಲಿ, ಏನಾದರೂ ಕಹಿ ಘಟನೆಗಳಾದರೆ ಅದೆಲ್ಲಾ ಮರೆತು ಬದುಕು ಮತ್ತಷ್ಟು ಸುಂದರವಾಗಲಿ ಎಂದು ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಹೊಸ ವರ್ಷದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಆ ವರ್ಷ ಪೂರ್ತಿ ತುಂಬಾ ಚೆನ್ನಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ, ಇಂಥ ನಂಬಿಕೆಗಳನ್ನು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಕಾಣಬಹುದು.

ಹೊಸ ವರ್ಷ ಅದೃಷ್ಟ ತರಲಿ ಎಂದು ಯಾವ ದೇಶದಲ್ಲಿ ಯಾವ ರೀತಿ ಆಚರಿಸಲಾಗುವುದು ಎಂದು ನೋಡೋಣ ಬನ್ನಿ:
ಜಪಾನ್: ಜಪಾನಿನಲ್ಲಿ ಗಂಟೆಯನ್ನು 108 ಬಾರಿ ಭಾರಿಸಲಾಗುವುದು, ಹೀಗೆ 108 ಬಾರಿ ಗಂಟೆ ಭಾರಿಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲಿಯ ಧಾರ್ಮಿಕ ಸ್ಥಳಗಳಲ್ಲಿ ಈ ರೀತಿಯನ್ನು ಗಂಟೆಯನ್ನು ಭಾರಿಸುತ್ತಾರೆ.
ಸ್ಕಾಟ್‌ಲ್ಯಾಂಡ್: ಸ್ಕಾಟ್‌ಲ್ಯಾಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆಯ ನಂತರ ಯಾರು ಮೊದಲು ಆ ಮನೆಗೆ ಬರುತ್ತಾರೋ ಅವರು ಚಾಕೋಲೆಟ್, ಹಣ್ಣುಗಳು, ಹೂಗಳನ್ನು ತಂದು ಶುಭಾಶಯ ಕೋರುತ್ತಾರೆ.
ಬ್ರೆಜಿಲ್: ಬ್ರೆಜಿಲ್‌ನಲ್ಲಿ ಹೊಸ ವರ್ಷದಂದು ಬಿಳಿ ಬಟ್ಟೆಯನ್ನು ಧರಿಸಿ ಹೂಗಳನ್ನು ಸಮುದ್ರಕ್ಕೆ ಎಸೆಯುತ್ತಾರೆ, ಈ ರೀತಿ ಸಮುದ್ರ ದೇವತೆ ಯಮಂಜಾರನ್ನು ಆರಾಧಿಸುತ್ತಾರೆ. ಹೀಗೆ ಮಾಡುವುದರಿಂದ ಆ ದೇವತೆ ನಮ್ಮ ಪಾಲಿಗೆ ಅದೃಷ್ಟವನ್ನು ತರುತ್ತಾಳೆ ಎಂದು ನಂಬಲಾಗಿದೆ.
ಡೆನ್ಮಾರ್ಕ್: ಡೆನ್ಮಾರ್ಕ್‌ನಲ್ಲಿ ಆಹಾರವನ್ನು ತಂದು ಸ್ನೇಹಿತರ ಮನೆ ಬಾಗಿಲಿಗೆ ಬಡಿಯುತ್ತಾರೆ. ಇದನ್ನು ಗುಡ್‌ಲಕ್ ಆಗಿ ಭಾವಿಸಲಾಗಿದೆ.. ಇದು ಸ್ನೇಹಿತರ ನಡುವಿನ ಭಾಂಧವ್ಯವನ್ನು ಹೆಚ್ಚಿಸುತ್ತದೆ.
ಗ್ರೀಸ್: ಗ್ರೀಸ್‌ನಲ್ಲಿ ಕೇಕ್‌ನೊಳಗೆ ಕಾಯಿನ್ ಇಟ್ಟು ಕೇಕ್ ಬೇಯಿಸುತ್ತಾರೆ. ಯಾರಿಗೆ ಕೇಕ್ ಪೀಸ್‌ನಲ್ಲಿ ಕಾಯಿನ್ ಸಿಗುವುದೋ ಅವರಿಗೆ ತುಂಬಾ ಅದೃಷ್ಟದ ವರ್ಷ ಎಂದು ಭಾವಿಸಲಾಗುವುದು. ಒಂದು ಕೇಕ್‌ನಲ್ಲಿ ಒಂದು ಕಾಯಿನ್ ಇಟ್ಟಿರುತ್ತಾರೆ, ಆ ಕಾಯಿನ್ ಯಾರಿಗೆ ಸಿಗುವುದೋ ಅವರಿಗೆ ಅದೃಷ್ಟದ ವರ್ಷವಾಗಲಿದೆ ಎಂದು ನಂಬಲಾಗಿದೆ.
ಸೌತ್ ಆಫ್ರಿಕಾ: ಇಲ್ಲಿ ಹಳೆಯ ಪೀಠೋಪಕರಣಗಳನ್ನು ಹೊರಹಾಕಿ, ಹೊಸ ವಸ್ತುಗಳನ್ನು ಮನೆಗೆ ತರುತ್ತಾರೆ, ಈ ರೀತಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಮನೆಯಲ್ಲಿ ಮುರಿದ, ಒಡೆದ ವಸ್ತುಗಳನ್ನು ಇಡುವುದು ಶುಭವಲ್ಲ ಎಂಬ ನಂಬಿಕೆ ನಮ್ಮಲ್ಲಿಯೂ ಇದೆ.
ಪಿಲಿಫೈನ್ಸ್: ಪಿಲಿಫೈನ್ಸ್ ರೌಂಡ್ ಶೇಪ್ ಅದೃಷ್ಟದ ಸಂಕೇತ ಎಂದು ಭಾವಿಸುತ್ತಾರೆ, ಆದ್ದರಿಂದ ಫುಲ್ಕಾ ಡಾಟ್ ಬಟ್ಟೆಯನ್ನು ಈ ದಿನದಂದು ಧರಿಸುತ್ತಾರೆ. ರೌಂಡ್ ಡಾಟ್ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುವುದು.
ರಷ್ಯಾ: ಇಲ್ಲಿ ಈ ವರ್ಷ ಏನಾಗಬೇಕು ಎಂಬ ಬಯಕೆಯನ್ನು ಒಂದು ಪೇಪರ್‌ನಲ್ಲಿ ಬರೆದು ಅದನ್ನು ಸುಟ್ಟು ಅದರ ಬೂದಿಯನ್ನು ಸೇವಿಸುತ್ತಾರೆ. ಇದರಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುವುದು ಎಂಬ ನಂಬಿಕೆ ಇದೆ.
ಯುನೈಟೆಡ್ ಸ್ಟೇಟ್: ನ್ಯೂಯಾರ್ಕ್ ಸಿಟಿಯ ಟೈಮ್ಸ್ ಸ್ಕೈರ್‌ನಲ್ಲಿ ಬಾಲ್‌ಗಳನ್ನು ಹಾಕುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಈ ದಿನ ಇಲ್ಲಿ ಮಿಲಿಯನ್‌ಗಟ್ಟಲೆ ಜನ ಸೇರಿರುತ್ತಾರೆ.
ನಂಬಿಕೆ ಬೇರೆ, ಮೂಢನಂಬಿಕೆ ಬೇರೆ, ಮೂಢ ನಂಬಿಕೆಯಿಂದನಿತರರಿಗೆ ಹಾನಿಯಾಗುವುದು, ಆದ್ದರಿಂದ ನಂಬಿಕೆಯಿಂದ ಯಾರಿಗೂ ಹಾನಿಯಾಗಲ್ಲ, ಪ್ರತಿಯೊಂದು ದೇಶದಲ್ಲಿಯೂ, ಧರ್ಮದಲ್ಲಿಯೂ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅವರದ್ದೇ ಆದ ನಂಬಿಕೆ ಇರುತ್ತದೆ. ಜೀವನದಲ್ಲಿ ಒಳಿತು ಬರಲಿ ಎಂದು ಎಲ್ಲರೂ ಬಯಸುತ್ತಾರೆ, ಅದಾಗುವುದು ಕೂಡ ನಂಬಿಕೆಯಿಂದಲೇ... ಈ ಬರುವ ಹೊಸ ವರ್ಷ ನಿಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಸಮೃದ್ಧಿ ತರಲಿ. ಹ್ಯಾಪಿ ನ್ಯೂ ಇಯರ್...



Click it and Unblock the Notifications
