Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
ಶನಿ, ರಾಹು, ಕೇತು ಬಿಟ್ಟರೆ ನಿಧಾನಕ್ಕೆ ರಾಶಿ ಬದಲಾವಣೆ ಮಾಡುವ ಗ್ರಹವೆಂದರೆ ಅದು ಗುರು. ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು 12 ತಿಂಗಳು ತೆಗೆದುಕೊಳ್ಳುತ್ತದೆ, ಇದೀಗ ಗುರು ಮೇಷ ರಾಶಿಯಲ್ಲಿದೆ. ಮೇ 1ರಂದು ವೃಷಭ ರಾಶಿಗೆ ಸಂಚರಿಸಲಿದೆ. ಗುರು ವೃಷಭ ರಾಶಿಗೆ ಸಂಚರಿಸಿದಾಗ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಹಣಕಾಸು ಹೆಚ್ಚಲಿದೆ
ಗುರು ನಿಮ್ಮ 2ನೇ ಹಾಗೂ 11ನೇ ಮನೆಯ ಅಧಿಪತಿ, ಅದು ಮೇ 1ರಿಂದ 4ನೇ ಮನೆಯಲ್ಲಿ ಇರಲಿದೆ. ಗುರು ಮೂರನೇ ಮನೆಯಲ್ಲಿ ಇದ್ದಾಗ ನಿಮಗೆ ತುಂಬಾ ಉತ್ತಮವಾಗಿರಲಿದೆ. ಗುರು ನಿಮಗೆ ಆರ್ಥಿಕ ಸ್ಥಿರತೆ ನೀಡಲಿದೆ. ಅಲ್ಲದೆ ಉಳಿದ ವಿಷಯಗಳಲ್ಲಿ ವೃಷಭ ರಾಶಿಯಲ್ಲಿ ಗುರುವಿನ ಈ ಸಂಚಾರವು ನಿಮಗೆ ಮಧ್ಯಮ ಫಲದಾಯಕವಾಗಿರುತ್ತದೆ.
ಮನೆ ರಿಪೇರಿ ಮಾಡಬಹುದು
ನೀವು ತುಂಬಾ ಸಮಯದಿಂದ ಮನೆ ರಿಪೇರಿ ಮಾಡಲು ಯೋಚಿಸುತ್ತಿದ್ದರೆ ಈ ಸಮಯದಲ್ಲಿ ಮನೆಯನ್ನು ಸುಂದರಗೊಳಿಸುತ್ತೀರಿ. ಮನೆಯನ್ನು ನೀವು ಇಷ್ಟಪಟ್ಟಂತೆ ಅಲಂಕರಿಸಲು ಸಾಧ್ಯವಾಗುವುದು.
ಆಸ್ತಿ ವ್ಯವಹಾರ ಲಾಭ ತರಲಿದೆ
ನೀವು ಪೂರ್ವಜರ ಆಸ್ತಿಯನ್ನು ಪಡೆಯುವಿರಿ, ಇನ್ನು ರಿಯಲ್ ಎಸ್ಟೇಟ್ ಮಾಡುವುವವರು ಉತ್ತಮ ಲಾಭ ಗಳಿಸುತ್ತಾತೆ. ಇನ್ನು ಆಸ್ತಿ ಮಾರಾಟ ಮಾಡುವುದಾದರೆ ಕೂಡ ಈ ಗುರು ಸಂಚಾರ ನಿಮಗೆ ಫಲಪ್ರದವಾಗಿದೆ. ಹೀಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ. ಈ ಅವಧಿಯಲ್ಲಿ ಹಣ ಚೆನ್ನಾಗಿರುವುದರಿಂದ ನೀವು ಐಷಾರಾಮಿ ವಸ್ತುಗಖನ್ನು ಖರೀದಿಸುವಿರಿ.
ವೃತ್ತಿ ಜೀವನದಲ್ಲಿ ಜಾಗ್ರತೆ
ನೀವು ಈ ಅವಧಿಯಲ್ಲಿ ನಿಮ್ಮ ವೃತ್ತಿ ಬದುಕಿನತ್ತ ತುಂಬಾನೇ ಗಮನಹರಿಸಬೇಕು. ಕೆಲಸದಲ್ಲಿ ಯಾವುದೇ ತಪ್ಪುಗಳಾಗದಂತೆ ಜಾಗ್ರತೆವಹಿಸಿ. ಇಲ್ಲದಿದ್ದರೆ ನೀವು ಕೆಲಸದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹನ್ನೆರಡನೇ ಮನೆಯ ಮೇಲೆ ಗುರುವಿನ ಅಂಶದಿಂದಾಗಿ, ಖರ್ಚುಗಳು ಕೂಡ ಹೆಚ್ಚಿರಲಿದೆ. ಹಣವಿದೆ ಎಂದು ಹೆಚ್ಚು ಖರ್ಚು ಮಾಡಬೇಡಿ, ಉಳಿದಾಯದ ಕಡೆಗೆ ಗಮನಹರಿಸಿ.
ವೈದಿಕ ಶಾಸ್ತ್ರದಲ್ಲಿ ಜಾತಕದ ನಾಲ್ಕನೇ ಮನೆಯನ್ನು ಮನೆ, ವಾಹನ, ತಾಯಿ, ಆಸ್ತಿ ಸಂತೋಷ ಇವುಗಳ ಮನೆಯೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ಅವಧಿಯಲ್ಲಿ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಗುರು 4ನೇ ಮನೆಯಲ್ಲಿ ಇರುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಧರ್ಮ, ತತ್ವಶಾಸ್ತ್ರ, ಜ್ಞಾನ ಮತ್ತು ಮಕ್ಕಳಿಗೆ ಸಂಬಂಧಿಸಿದ ಸಂತೋಷವನ್ನು ಪಡೆಯಲು ಸಾಧ್ಯವಾಗುವುದು.
ಗುರು 4ನೇ ಮನೆಯಲ್ಲಿ ಇದ್ದಾಗ
ಜಾತಕದ ನಾಲ್ಕನೇ ಮನೆಯಲ್ಲಿ ಇದ್ದಾಗ ವ್ಯಕ್ತಿಯು ಆರ್ಥಿಕ ಸ್ಥಿರತೆ ಪಡೆಯುತ್ತಾನೆ.
ನಿಮ್ಮ ಗುರಿ ಮುಟ್ಟಲು ಸಾದ್ಯವಾಗುವುದು, ನೀವು ತುಂಬಾ ಯಶಸ್ವಿಯಾಗುತ್ತೀರಿ
ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ಸಂಪತ್ತು, ಸಮೃದ್ಧಿ , ವಾಹನ ಸೌಕರ್ಯ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications