Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿಯ ಈ 8 ದಿನಾಂಕಗಳು ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ ದಿನಗಳಾಗಿವೆ ನೋಡಿ
ಫೆಬ್ರವರಿ ಮಾಸ ಧಾರ್ಮಿಕ ದೃಷ್ಟಿಯಿಂದ ತುಂಬಾ ಮಹತ್ವವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಅನೇಕ ಪ್ರಮುಖ ಧಾರ್ಮಿಕ ಆಚರಣೆಗಳಿವೆ. ಈ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ಧಾರ್ಮಿಕ ದೃಷ್ಟಿಯಿಂದ ತುಂಬಾ ಮಹತ್ವವಾದ ದಿನಗಳಾಗಿವೆ ನೋಡಿ:
ಫೆಬ್ರವರಿ 6
ಫೆಬ್ರವರಿ 26ರಂದು ಷಟಿಲಾ ಏಕಾದಶಿ. ಈ ದಿನದಂದು ಭಗವಾನ್ ವಿಷ್ಣುವನ್ನು ವೈಕುಂಠ ರೂಪದಲ್ಲಿ ಪೂಜಿಸಲಾಗುವುದು. ಈ ದಿನ ಎಳ್ಳುಗೆ ತುಂಬಾನೇ ಮಹತ್ವವಿದೆ. ಹಾಗೆಯೇ ಷಟಿಲಾ ಏಕಾದಶಿಯಂದು ಎಳ್ಳಣ್ಣೆ ಹಚ್ಚಿ ಸ್ನಾನ ಮಾಡುವುದು, ಎಳ್ಳಿನಿಂದ ಹವನ, ಎಳ್ಳಿನ ತರ್ಪಣ, ಎಳ್ಳು ತಿನ್ನುವುದು ಮತ್ತು ಎಳ್ಳನ್ನು ದಾನ ಮಾಡುವುದು ಹೀಗೆ ದಿನ ಎಳ್ಳುಗೆ ತುಂಬಾನೇ ಮಹತ್ವವಿದೆ.

ಫೆಬ್ರವರಿ 7
ಫೆಬ್ರವರಿ 7ರಂದು ಪ್ರದೋಷ ವ್ರತವನ್ನು ಆಚರಿಸಲಾಗುವುದು. ಪ್ರತಿ ತಿಂಗಳ ಶುಕ್ಲ ಮತ್ತು ಕೃಷ್ಣ ಪಕ್ಷದ ತ್ರಯೋದಶಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಫೆಬ್ರವರಿ ತಿಂಗಳಲ್ಲಿ, ಪ್ರದೋಷ ವ್ರತವನ್ನು 07 ಫೆಬ್ರವರಿ 2024, ಬುಧವಾರದಂದು ಆಚರಿಸಲಾಗುತ್ತದೆ. ಈ ದಿನ ಉಪವಾಸವನ್ನು ಆಚರಿಸುವುದರಿಂದ ವ್ಯಕ್ತಿ ದೀರ್ಘಾಯುಷ್ಯದ ಆಶೀರ್ವಾದ ಪಡೆಯುತ್ತಾನೆ ಎಂದು ನಂಬಲಾಗಿದೆ.
ಫೆಬ್ರವರಿ 8
ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಮಾಸಿಕ ಶಿವರಾತ್ರಿ ಉಪವಾಸವನ್ನು ಆಚರಿಸಲಾಗುವುದು. ಮಾಸಿಕ ಶಿವರಾತ್ರಿಯ ವ್ರತವನ್ನು ಆಚರಿಸುವುದರಿಂದ ಮನುಷ್ಯನು ಕಷ್ಟದ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾನೆ, ಭಕ್ತನ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆಯಿದೆ.
ಫೆಬ್ರವರಿ 9
ಮಾಘ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆಯಂದು ಮೌನ ಉಪವಾಸವನ್ನು ಆಚರಿಸಬೇಕು ಎಂದು ಹೇಳಲಾಗುವುದು. ಈ ದಿನ ನದಿ ಸ್ನಾನ ಮಾಡಿ ಪೂಜೆಯನ್ನು ಮಾಡಿ. ಮಾಘ ಮಾಸದ ಅಮಾವಾಸ್ಯೆಯಂದು ದಾನಕ್ಕೆ ಹೆಚ್ಚಿನ ಮಹತ್ವವಿದೆ.
ಫೆಬ್ರವರಿ 13
ಪ್ರತಿ ಸಂಕ್ರಾಂತಿಯು ತನ್ನದೇ ಆದ ಮಹತ್ವವನ್ನು ಹೊಂದಿದೆ, ಮಕರ ರಾಶಿಯಲ್ಲಿರುವ ಸೂರ್ಯ ಫೆಬ್ರವರಿ 13ಕ್ಕೆ ಕುಂಭ ರಾಶಿಗೆ ಪ್ರವೇಶಿಸಲಿದೆ. ಇದನ್ನು ಕುಂಭ ಸಂಕ್ರಾಂತಿ ಎಂದು ಹೇಳಲಾಗುವುದು.
ಫೆಬ್ರವರಿ 14
ವಸಂತ ಪಂಚಮಿಯ ದಿನ ಸರಸ್ವತಿಯನ್ನು ಪೂಜಿಸುತ್ತಾರೆ. ವಸಂತ ಪಂಚಮಿ ಹಬ್ಬವನ್ನು ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುವುದು. ವಸಂತ ಪಂಚಮಿಯ ದಿನದಂದು, ಶಿಕ್ಷಣದ ಅಧಿದೇವತೆಯಾದ ಸರಸ್ವತಿಯ ಆಶೀರ್ವಾದವನ್ನು ಪಡೆಯಲು ಸರಸ್ವತಿ ಪೂಜೆಯನ್ನು ಮಾಡಲಾಗುವುದು.
ಜಯ ಏಕಾದಶಿ ಫೆಬ್ರವರಿ 20
ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಜಯ ಏಕಾದಶಿ ಎಂದು ಕರೆಯಲಾಗುವುದು. ಈ ವರ್ಷ, ಜಯ ಏಕಾದಶಿಯ ಉಪವಾಸವನ್ನು ಮಂಗಳವಾರ, 20 ಫೆಬ್ರವರಿ 2024 ರಂದು ಆಚರಿಸಲಾಗುವುದು. ಜಯ ಏಕಾದಶಿಯಂದು ಉಪವಾಸ ಮಾಡಿ ಏಕಾದಶಿ ಆಚರಿಸುವುದರಿಂದ ಬ್ರಹ್ಮಹತ್ಯಾ ಪಾಪದಿಂದ ಮುಕ್ತಿ ದೊರೆಯುವುದು.
ಮಾಘ ಪೂರ್ಣಿಮೆ
ಹಿಂದೂ ಧರ್ಮದಲ್ಲಿ ಮಾಘ ಪೂರ್ಣಿಮೆಗೆ ಅಪಾರ ಮಹತ್ವವಿದೆ. ಮಾಘ ಮಾಸದಲ್ಲಿ ಇದು ಸಂಭವಿಸುವುದರಿಂದ, ಈ ಹುಣ್ಣಿಮೆಯನ್ನು ಮಾಘ ಪೂರ್ಣಿಮೆ ಎಂದು ಕರೆಯಲಾಗುವುದು. ಮಾಘ ಪೂರ್ಣಿಮೆಯಂದು ಗಂಗಾ ಸ್ನಾನ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತದೆ ಎಂದು ನಂಬಲಾಗಿದೆ.
ಫೆಬ್ರವರಿ 28
ವಿಘ್ನ ನಿವಾರಕನಾದ ಗಣಪತಿಗೆ ಈ ಉಪವಾಸವನ್ನು ಸಮರ್ಪಿಸಲಾಗಿದ್ದು, ಈ ದಿನದಂದು ಉಪವಾಸ ಮಾಡುವುದರಿಂದ ಭಕ್ತರ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಗಣಪತಿಯು ದೂರ ಮಾಡುತ್ತಾನೆ ಎಂದು ನಂಬಲಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications